ಅಣ್ಣ-ತಂಗಿ ನಡುವೆ ಸೆಕ್ಸ್ ಓಕೇನಾ? ಪಾಕ್ ವಿವಿ ಪ್ರಶ್ನೆಗೆ ಸ್ಟೂಡೆಂಟ್ಸ್ ಕಕ್ಕಾಬಿಕ್ಕಿ!
ಪಾಕಿಸ್ತಾನ ವಿಶ್ವವಿದ್ಯಾಲಯದ ಎಕ್ಸಾಂವೊಂದರಲ್ಲಿ ಕೇಳಲಾಗಿರುವ ಪ್ರಶ್ನೆಯೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪರೀಕ್ಷೆಯಲ್ಲಿ ಸಹೋದರ ಮತ್ತು ಸಹೋದರಿಯ ನಡುವಿನ ಲೈಂಗಿಕತೆಯ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಸದ್ಯ ಈ ಪ್ರಶ್ನೆ ಪತ್ರಿಕೆ ಎಲ್ಲೆಡ ವೈರಲ್ ಆಗ್ತಿದೆ.
ಇಸ್ಲಾಮಾಬಾದ್: ಎಕ್ಸಾಂನಲ್ಲಿ ಸಾಮಾನ್ಯವಾಗಿ ಪಠ್ಯದಲ್ಲಿರುವ ವಿಚಾರವಾಗಿ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಪಾಕಿಸ್ತಾನ ವಿಶ್ವವಿದ್ಯಾಲಯದ ಎಕ್ಸಾಂವೊಂದರಲ್ಲಿ ಲೈಂಗಿಕತೆಯ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಪರೀಕ್ಷೆಯಲ್ಲಿ ಸಹೋದರ ಮತ್ತು ಸಹೋದರಿಯ ನಡುವಿನ ಲೈಂಗಿಕತೆಯ ಬಗ್ಗೆ ಪ್ರಶ್ನಿಸಲಾಗಿದ್ದು, ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗ್ತಿದೆ. ಇಸ್ಲಾಮಾಬಾದ್ ಮೂಲದ COMSATS ಯುನಿವರ್ಸಿಟಿಯ ಪ್ರಶ್ನೆ ಪತ್ರಿಕೆಯಲ್ಲಿ ಈ ಎಡವಟ್ಟನ್ನು ಮಾಡಲಾಗಿದೆ. ಅನೇಕ ಚಲನಚಿತ್ರ ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಇಂಟರ್ನೆಟ್ ಅಸಭ್ಯ ವಿಷಯದ ಪ್ರಶ್ನೆಯನ್ನು ಲೇವಡಿ ಮಾಡಿದ್ದಾರೆ. ಅದಕ್ಕಾಗಿ ಉಪಕುಲಪತಿ ಮತ್ತು ಕುಲಪತಿಗಳನ್ನು ಪ್ರಶ್ನಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಹೋದರ-ಸಹೋದರಿಯ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ
ಉಪನ್ಯಾಸಕನೊಬ್ಬ (Lecturer) ಸಹೋದರ ಮತ್ತು ಸಹೋದರಿಯ ನಡುವಿನ ಅನೈತಿಕ ಸಂಬಂಧದ ಬಗ್ಗೆ ಪ್ರಬಂಧ ಬರೆಯುವಂತೆ ಪ್ರಶ್ನೆ ಕೇಳಿದ್ದಾನೆ. 300 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ ಎಂದು ಕೇಳಿರುವ ಪ್ರಶ್ನೆ ಪತ್ರಿಕೆ (Question paper) ಇದೀಗ ಫುಲ್ ವೈರಲ್ ಆಗಿದೆ. ಸಹೋದರ ಮತ್ತು ಸಹೋದರಿ ಪ್ರೀತಿ (Love) ಮಾಡಬಹುದೇ? ಅಲ್ಲದೇ ಅವರು ಲೈಂಗಿಕ ಕ್ರಿಯೆ (Sex)ಯಲ್ಲಿ ತೊಡಗಬಹುದೇ ಎನ್ನುವ ಕುರಿತು 300 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ ಎಂದು ಪ್ರಶ್ನೆ ಕೇಳಿದ್ದಾನೆ. ಈ ಪ್ರಶ್ನೆಗಳನ್ನು ನೋಡಿದ ವಿದ್ಯಾರ್ಥಿಗಳು ಶಾಕ್ ಆಗಿದ್ದಾರೆ.
ಗೆಳೆಯನನ್ನು ಬಿಟ್ಟು ತಂದೆಯ ವಯಸ್ಸಿನವನನ್ನು ಮದುವೆಯಾದ ಯುವತಿ..!
ಪ್ರೌಢಶಾಲಾ ಹಂತದಿಂದ ಸ್ನಾತಕೋತ್ತರ ಮತ್ತು ಅದಕ್ಕೂ ಮುಂದಿನ ವಿದ್ಯಾಭ್ಯಾಸದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುವ ರಚನಾ ಕಲೆಯೆಂದರೆ ಪ್ರಬಂಧ(essay) ಬರೆಯುವುದು.ಅದರಂತೆ ಶಾಲಾ-ಕಾಲೇಜುಗಳಲ್ಲಿ ಸಾಮಾನ್ಯವಾಗಿ ಸಾಮಾಜಿಕ ಪಿಡುಗುಗಳ ವಿಷಯಗಳ ಮೇಲೆ ಪ್ರಬಂಧ ಬರೆಯಲು ಶಿಕ್ಷಕರಾದವರು ಹೇಳುತ್ತಾರೆ. ಆದ್ರೆ, ಇಲ್ಲೋರ್ವ ಲೆಕ್ಚರರ್ 'ಸಹೋದರ ಹಾಗೂ ಸಹೋದರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ' ಎನ್ನುವ ಬಗ್ಗೆ ಪ್ರಬಂಧ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ (Students) ಹೇಳಿದ್ದಾನೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ಯಾಚುಲರ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ (ಬಿಇಇ) ವಿದ್ಯಾರ್ಥಿಗಳ ಕೊಶ್ಚನ್ ಪೇಪರ್‌ನಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ
ಬಳಿಕ ಈ ವಿಚಾರ ವಿವಿಯ ಹೆಚ್ಚುವರಿ ರಿಜಿಸ್ಟ್ರರ್ ನವೀದ್ ಅಹ್ಮದ್ ಖಾನ್ ಗಮನಕ್ಕೆ ಬಂದಿದ್ದು ಕೂಡಲೇ ಉಪನ್ಯಾಸಕನನ್ನು ಕರೆದು ಈ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಲೆಕ್ಚರರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹಾಗೂ ಪ್ರಶ್ನೆಯನ್ನು ಗೂಗಲ್‌ನಿಂದ ಕೃತಿಚೌರ್ಯ ಮಾಡಿರುವುದಾಗಿ ಹೇಳಿದ್ದಾನೆ. ಅಂತಿಮವಾಗಿ ಸಹೋದರ ಮತ್ತು ಸಹೋದರಿಯ ನಡುವಿನ ಅನೈತಿಕ ಸಂಬಂಧದ ಬಗ್ಗೆ ಪ್ರಬಂಧವನ್ನು ಬರೆಯಲು ಹೇಳಿದ್ದ ಉಪನ್ಯಾಸಕನನ್ನು ವಜಾಗೊಳಿಸಲಾಗಿದೆ. ಇದೀಗ ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಸೆಕ್ಸ್‌ಗಿಂತ ಮೊದಲು ಚ್ಯೂಯಿಂಗ್ ಗಮ್ ಅಗಿಯೋ ಅಭ್ಯಾಸ ಎಷ್ಟು ಒಳ್ಳೇದು ?
ಪ್ರಶ್ನೆ ನೀಡಿದ ಶಿಕ್ಷಕನನ್ನು ಪ್ರೊಫೆಸರ್ ಖೈರ್ ಉಲ್ ಬಶರ್ ಎಂದು ಗುರುತಿಸಲಾಗಿದೆ. ತನಿಖೆಯ ನಂತರ ವಿಶ್ವವಿದ್ಯಾನಿಲಯದಿಂದ ಅವರನ್ನು ವಜಾಗೊಳಿಸಲಾಯಿತು. ಬಳಿಕ ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಲಾಯಿತು ಎಂದು ತಿಳಿದುಬಂದಿದೆ. ಅಲ್ಲದೇ ಈ ರೀತಿಯ ಪ್ರಶ್ನೆ ಪ್ರತಿಕ್ರೆ ವೈರಲ್ ಆಗಿತ್ತಿದ್ದಂತೆಯೇ ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.