Asianet Suvarna News Asianet Suvarna News

ಮೆಚ್ಚುಗೆ ಸೂಚಿಸುವುದು ಒಂದು ಕಲೆ! ದಾಂಪತ್ಯ ಸುಖಕ್ಕೆ ಇದು ಸೋಪಾನ

ವಿವಾಹದ ನಂತರ ಸಂಬಂಧ ಗಟ್ಟಿಯಾಗಿರಬೇಕೆಂದರೆ ಹಲವು ಅಂಶಗಳು ಗಣನೆಗೆ ಬರುತ್ತವೆ. ಸಂಗಾತಿಗೆ ಮನಸ್ಫೂರ್ತಿಯಾಗಿ ಅಭಿನಂದಿಸುವುದು ಅಥವಾ ಮೆಚ್ಚುಗೆ ತಿಳಿಸುವುದು ವೈವಾಹಿಕ ಜೀವನ ಉತ್ತಮವಾಗಿರಲು ಕಾರಣವಾಗುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Compliment are the Key for Good Relationship how to praise each other
Author
Bangalore, First Published Aug 18, 2022, 3:44 PM IST

ವಿವಾಹದ ನಂತರ ಸಂಬAಧ ಗಟ್ಟಿಯಾಗಿರಬೇಕೆಂದರೆ ಹಲವು ಅಂಶಗಳು ಗಣನೆಗೆ ಬರುತ್ತವೆ. ದೀರ್ಘಾವಧಿಯ ಈ ಸಂಬAಧ ಸಂಗಾತಿ ಹಾಗೂ ಕುಟುಂಬ ನಡುವೆಯೂ ಗಟ್ಟಿಗೊಳಿಸಿಕೊಳ್ಳಬೇಕು. ಭಾವನಾತ್ಮಕ ಬಂಧವನ್ನು ಕಾಪಾಡಿಕೊಳ್ಳಲು ಮತ್ತು ಜೋಡಿಯಾಗಿ ಒಟ್ಟಿಗೆ ವಾಸಿಸುವ ಹಂಚಿಕೊAಡು ಹೋಗುವ ಬಯಕೆ ಎಲ್ಲರಲ್ಲಿಯೂ ಇರುತ್ತದೆ. ಅಧ್ಯಯನದ ಪ್ರಕಾರ, ಸಕಾರಾತ್ಮಕ ನಡವಳಿಕೆಗಳು ಮದುವೆಯ ಯಶಸ್ಸು ಮತ್ತು ದೀರ್ಘಾವಧಿಯ ವೈವಾಹಿಕ ತೃಪ್ತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಸಂಗಾತಿಯ ನಡವಳಿಕೆಯು ದೀರ್ಘಾವಧಿಯ ಸಂಬAಧಗಳಿಗೆ ಸಹಾಯ ಮಾಡುತ್ತದೆ. ಅದಾಗ್ಯೂ, ಭಾವನೆಗಳನ್ನು ಸ್ವೀಕಾರಾರ್ಹ ಮಾತಿನ ರೂಪಕ್ಕೆ ಭಾಷಾಂತರಿಸಲು ಸಹಾಯ ಮಾಡುವ ಭಾಷೆಯ ಪ್ರಭಾವವನ್ನು ಮರೆಯಬಾರದು ಮತ್ತು ಪರಸ್ಪರ ಆಸಕ್ತಿಯನ್ನು ಹೆಚ್ಚಿಸುತ್ತದೆ. ಇದು ಸಂಬAಧವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ.

ಒಂದು ಭಾಷೆ ಆಧಾರಿತ ಅಂಶವಾಗಿರುವ ಅಭಿನಂದನೆ ಹಾಗೂ ಮೆಚ್ಚುಗೆಯು ಸಂತೋಷದ ದಾಂಪತ್ಯಕ್ಕೆ ಪ್ರಮುಖವೆಂದು ಪರಿಗಣಿಸಬಹುದು. ಸಂಗಾತಿಯೊಡನೆ ಉತ್ತಮ ಭಾವನಾತ್ಮಕ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು, ಪ್ರಯತ್ನವನ್ನು ಗೌರವಿಸುವುದು ಮತ್ತು ಅದನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಪರಸ್ಪರ ಭಾವಿಸುತ್ತಾರೆ.

ಗೌರವಿಸುವ, ಅಭಿನಂದಿಸುವುದು ಸಂತೋಷದ ಮತ್ತು ತೃಪ್ತಿಕರ ದಾಂಪತ್ಯಕ್ಕೆ ಏಕೆ ಪ್ರಮುಖವಾಗಿವೆ ಎಂಬುದನ್ನು ವಿವರಿಸುವ ಕೆಲವು ಕಾರಣಗಳಿಗೆ. ಹೀಗೆ ಮಾಡಿದಲ್ಲಿ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

1. ಫೀಲ್ ಗುಡ್ ಫ್ಯಾಕ್ಟರ್ 
ಜರ್ನಲ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವು ಡೋಪಮೈನ್ (ಸಂತೋಷದ ಹಾರ್ಮೋನ್) ಧನಾತ್ಮಕ ಪ್ರೇರಣೆಗೆ ಪ್ರತಿಕ್ರಿಯೆಯಾಗಿ ಉತ್ಪತ್ತಿಯಾಗುತ್ತದೆ ಎಂದು ತೋರಿಸಿದೆ. ಸಂಗಾತಿಯನ್ನು ಅಭಿನಂದಿಸುವುದು ಪ್ರತಿಫಲದ ಬಲವಾದ ಅರ್ಥವನ್ನು (ಧನಾತ್ಮಕ ಪ್ರೇರಣೆ) ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಡೋಪಮೈನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ, ಇದು "ಒಳ್ಳೆಯ ಭಾವನೆ', ತೃಪ್ತಿ ಮತ್ತು ಉತ್ಸಾಹದ ಭಾವನೆಗೆ ಸಂಬAಧಿಸಿದೆ.

2. ಜೀವನದ ಸವಾಲುಗಳನ್ನು ಜಯಿಸಲು ಸಹಾಯ ಮಾಡುತ್ತದೆ 
ಮೆಚ್ಚುಗೆಯು ಎಂಬುದು ಕೇವಲ ಸಂಗಾತಿಯ ಜೊತೆಗೆ ಅಷ್ಟೇ ಅಲ್ಲದೆ ಪಾಲುದಾರರು, ಸ್ನೇಹಿತರ ಜೊತೆಗೆ ಹೊಂದುವ ಮೂಲಭೂತ ಅಂಶವಾಗಿದೆ. ಸುತ್ತಮುತ್ತಲಿನ ಇತರರೊಂದಿಗೆ ಸಹಕರಿಸಲು ಮತ್ತು ಒಟ್ಟಿಗೆ ಕೆಲಸ ಮಾಡಲು ಇದು ಕೊಡುಗೆ ನೀಡುತ್ತದೆ. ಹೋರಾಟವನ್ನು ಎದುರಿಸುವಾಗ ನಾವು ಮೌಲ್ಯಯುತವಾಗಿದ್ದೇವೆ ಎಂದು ತಿಳಿದುಕೊಳ್ಳುವುದರಿಂದ ಜೀವನದಲ್ಲಿ ಅಡೆತಡೆಗಳು ಮತ್ತು ಸವಾಲುಗಳನ್ನು ಜಯಿಸಲು ಸುಲಭವಾಗುತ್ತದೆ.

Relationship Tips: ಹುಡುಗಿ ಹುಡುಗನಿಂದ ನಿಜಕ್ಕೂ ಬಯಸೋದೇನು?

3. ಸ್ವಾಭಿಮಾನ ಹೆಚ್ಚಿಸುತ್ತದೆ 
ಸಂಗಾತಿಯಿAದ ಮೆಚ್ಚುಗೆ ಸ್ವೀಕರಿಸುವುದರಿಂದ ಸ್ವಾಭಿಮಾನ ಹಾಗೂ ವಿಶ್ವಾಸವೂ ಹೆಚ್ಚಿಸುತ್ತದೆ. ಇದು ಕೆಲ ದೌರ್ಬಲ್ಯಗಳನ್ನು ಪೂರ್ಣ ನಿರ್ಣಯದೊಂದಿಗೆ ಜಯಿಸಲು ಸಹಾಯ ಮಾಡುತ್ತದೆ ಮತ್ತು ಸಂಬAಧದಲ್ಲಿ ಬಲವಾಗಿ ಬಾಂಧವ್ಯಕ್ಕೆ ಸಹಾಯ ಮಾಡುತ್ತದೆ.

4. ನಕಾರಾತ್ಮಕ ಆಲೋಚನೆ ನಿಯಂತ್ರಣ 
ಅಧ್ಯಯನದ ಪ್ರಕಾರ ನಮ್ಮ ಮಿದುಳು ಸಕಾರಾತ್ಮಕ ಘಟನೆಗಳಿಗೆ ಹೋಲಿಸಿದರೆ ನಕಾರಾತ್ಮಕ ಘಟನೆಗಳಿಗೆ ಹೆಚ್ಚು ಗಮನಹರಿಸುತ್ತೇವೆ. ಮೊದಲಿನವು ನಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ನಡವಳಿಕೆ ಮತ್ತು ಸಂಬAಧಗಳ ಮೇಲೆ ಪ್ರಬಲ ಪರಿಣಾಮ ಬೀರುತ್ತದೆ. ಮೆಚ್ಚುಗೆ ಸ್ವೀಕರಿಸುವುದು ಮಿದುಳಿನ ನ್ಯೂರಾನ್‌ಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಧನಾತ್ಮಕ ಅಂಶಗಳ ಮೇಲೆ ಹೆಚ್ಚು ಕೇಂದ್ರೀಕರಿಸಲು ಮತ್ತು ನಕಾರಾತ್ಮಕ ಆಲೋಚನೆಗಳನ್ನು ನಿಯಂತ್ರಿಸಲು ಕಾರಣವಾಗಬಹುದು.

5. ವಿಶ್ವಾಸ ಹೆಚ್ಚಿಸುತ್ತದೆ 
ಮೆಚ್ಚುಗೆ ಸ್ವೀಕರಿಸುವವರಿಗೆ ಭರವಸೆ ನೀಡುವುದು ಮಾತ್ರವಲ್ಲ, ಉತ್ತಮ ಮನೋಭಾವವನ್ನು ಬೆಳೆಸುವುದು, ಸಂಪರ್ಕಗಳನ್ನು ಗಟ್ಟಿಗೊಳಿಸುವುದು ಮತ್ತು ಸಂಬAಧದಲ್ಲಿ ನಂಬಿಕೆ ಬೆಳೆಸುವುದು. ಅದಾಗ್ಯೂ, ಮೆಚ್ಚುಗೆಗಳು ಸತ್ಯ ಮತ್ತು ನೈಜವೆಂದು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಅವು ಹಿಮ್ಮುಖವಾಗಬಹುದು.

ದಾಂಪತ್ಯದಲ್ಲಿ personal space ಎಷ್ಟಿರಬೇಕು?

ಸಂಗಾತಿ ಅಥವಾ ಯಾರಿಗಾದರೂ ಮೆಚ್ಚುಗೆ ಉತ್ತಮ ಮಾರ್ಗಗಳು
1 ಅಪರಿಚಿತರು ಅಥವಾ ಪರಿಚಿತರಿಗೆ ದೇಹಕ್ಕೆ ಸಂಬAಧಿಸಿದ ಯಾವುದೇ ಮೆಚ್ಚುಗೆಯನ್ನು ತಪ್ಪಿಸುವುದು ಒಳ್ಳೆಯದು. ಏಕೆಂದರೆ ಹೀಗೆ ಮಾಡುವುದರಿಂದ ಅವರಿಗೆ ಮುಜುಗರ ಉಂಟುಮಾಡಬಹುದು.
2. ವ್ಯಕ್ತಿಯನ್ನು ಅಭಿನಂದಿಸುವಾಗ ಅಥವಾ ಮೆಚ್ಚುಗೆ ಸೂಚಿಸುವಾಗ ಅವರ ಜನಾಂಗ ಅಥವಾ ಲಿಂಗದ ಆಧಾರದ ಮೇಲೆ ಹೇಳುವುದು ಒಳ್ಳೆಯದಲ್ಲ. ಏಕೆಂದರೆ ಇದು ಅವರಿಗೆ ಅವಮಾನದಂತೆ ಕಾಣಬಹುದು. 
3. ಸಣ್ಣ "ಧನ್ಯವಾದ" ಹೇಳಿ ಕೈ ತೊಳೆಯುವುದಕ್ಕಿಂತ ಒಂದು ಸುಂದರವಾದ ಮೆಚ್ಚುಗೆ ರೂಪದಲ್ಲಿ ಅಭಿನಂದಿಸುವುದು ಒಳ್ಳೆಯದು.
4. ಯಾರಿಗಾದರೂ ಮೆಚ್ಚುಗೆ ಅಥವಾ ಅಭಿನಂದಿಸುವಾಗ ವಿಶೇಷಣಗಳನ್ನು ಸೇರಿಸಬೇಡಿ. ಹಾಗೆ ಮಾಡಿದಲ್ಲಿ ನೀವು ಮನಸ್ಪೂರ್ತಿಯಾಗಿ ಹೇಳಿದರೂ ಕೆಲ ಸಂದರ್ಭಗಳಲ್ಲಿ ಅದು ನಕಲಿ ಎಂಬAತೆ ತೋರುತ್ತದೆ.

Follow Us:
Download App:
  • android
  • ios