Asianet Suvarna News Asianet Suvarna News

Spiritual Intimacy: ಸಂಗಾತಿ ಜತೆ ಆಧ್ಯಾತ್ಮಿಕ ಆಪ್ತತೆ ಬೇಕಾದರೆ ಹೀಗ್ಮಾಡಿ

ಸಂಬಂಧದಲ್ಲಿ ನೆಮ್ಮದಿಯಿಂದ ಇರಬೇಕು ಎಂದಾದರೆ ಸಂಗಾತಿಗಳ ನಡುವೆ ಹೊಂದಾಣಿಕೆ ಇರಬೇಕು. ಇದು ಕೇವಲ ಮೇಲ್ಮಟ್ಟದ ಹೊಂದಾಣಿಕೆ ಆಗಿರದೆ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿದ್ದರೆ ಬದುಕು ಸುಂದರ. 
 

Build spiritual intimacy with partner if peace required in family
Author
Bangalore, First Published Feb 25, 2022, 5:47 PM IST

ಸಂಬಂಧಗಳೇ (Relationship) ಹಾಗೆ. ಆರಂಭದಲ್ಲಿ ರೋಮಾಂಚನ (Thrill) ಮೂಡಿಸುತ್ತವೆ. ಕ್ರಮೇಣ ಬೇಸರ (Bore) ತರುತ್ತವೆ. ಮದುವೆಯ ಬಂಧವೂ ಇದಕ್ಕೆ ಹೊರತಲ್ಲ. ಮದುವೆಯಾಗಿ ಹೊಂದಾಣಿಕೆಯೇ ಇಲ್ಲದೆ ಆರಂಭದಲ್ಲೇ ಪ್ರತ್ಯೇಕವಾಗುವವರ ಕತೆ ಬೇರೆ. ಆದರೆ, ಮದುವೆಯಾದ ನಾಲ್ಕಾರು ವರ್ಷಗಳ ಬಳಿಕ ಪರಸ್ಪರ ಬೋರೆದ್ದು ಹೋಗುವುದಿದೆಯಲ್ಲ, ಅದು ಅಪಾಯಕಾರಿ. ಈ ಸಮಯದಲ್ಲೇ ಹೆಣ್ಣಾಗಲೀ, ಗಂಡಾಗಲೀ ಬೇರೊಂದು ಸಂಬಂಧದ ಕಡೆಗೆ ಮುಖ ಮಾಡುವ ಸಾಧ್ಯತೆ ಹೆಚ್ಚು. ಬೇರೊಬ್ಬ ಮಹಿಳೆ (Female) ಅಥವಾ ಪುರುಷ(Male)ರೆಡೆಗೆ ಆಕರ್ಷಿತರಾಗುವಂತೆ ಮಾಡುವ ಮಧ್ಯ ವಯಸ್ಸಿನ ತಲ್ಲಣಗಳನ್ನು ಎದುರಿಸುವುದು ಸುಲಭವಲ್ಲ. 

ಅಂತಿಮವಾಗಿ, ಸಂಬಂಧದಲ್ಲಿ ಅಥವಾ ಬದುಕಿನಲ್ಲಿ ಬೇಕಾದುದೇನು? ನೆಮ್ಮದಿ, ತೃಪ್ತಿ, ಸಂತಸ (Happiness) ಮಾತ್ರ. ಆದರೆ, ಅದಕ್ಕಾಗಿ ವಿವಾಹೇತರ (Extra Marital Affair) ಸಂಬಂಧದ ಕಡೆಗೆ ಮುಖ ಮಾಡುವುದರಲ್ಲಿ ಅರ್ಥವೇ ಇಲ್ಲ. ಪತಿ, ಪತ್ನಿಯೇ ಪರಸ್ಪರ ಗೌರವದಿಂದ, ಪ್ರೀತಿಯಿಂದ ಬದುಕುವುದು ಸಾಧ್ಯವಿದೆ. ಅದಕ್ಕಾಗಿ ಅವರು ದೈಹಿಕ, ಪ್ರಾಪಂಚಿಕ ಲೋಭದ ಬದುಕಿನಾಚೆಗೆ ದೃಷ್ಟಿ ಹಾಯಿಸಬೇಕು. ಅಂದರೆ, ಆಧ್ಯಾತ್ಮಿಕ (Spiritual) ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಆಗ ಮಾತ್ರ ಯಾವುದೇ ಸಂಬಂಧದಲ್ಲಿ ತೃಪ್ತಿ ದೊರೆಯುತ್ತದೆ. 

ಸಂಗಾತಿಯನ್ನು ಖುಷಿ ಪಡಿಸಲು ಸಿಂಪಲ್ ಟಿಪ್ಸ್

ಆಧ್ಯಾತ್ಮಿಕ ಆಪ್ತತೆ (Intimacy) ಹೊಂದಿರುವ ಸಂಗಾತಿಗಳು (Couple) ಪರಸ್ಪರ ಸಕಾರಾತ್ಮಕ ಪ್ರಭಾವ ಹೊಂದಿರುತ್ತಾರೆ. ದೃಢವಾದ ಬಂಧ ಹೊಂದಿರುತ್ತಾರೆ. ಅಂಥದ್ದೊಂದು ತೃಪ್ತಿಕರವಾದ ಸಂಬಂಧ ಹೊಂದಿರಲು ನೀವು ಮುಕ್ತ ಹಾಗೂ ಪ್ರಾಮಾಣಿಕವಾಗಿರಬೇಕು ಅಷ್ಟೆ. ಇಬ್ಬರೂ ಆಧ್ಯಾತ್ಮಿಕವಾಗಿ ಕನೆಕ್ಟ್ (Connect) ಆದಾಗ ಇಬ್ಬರಲ್ಲೂ ಒಂದೇ ರೀತಿಯ ಧನಾತ್ಮಕ ಮನಸ್ಥಿತಿ ಮೂಡುತ್ತದೆ. ಜೀವನಪೂರ್ತಿ ಸಂಗಾತಿಯೊಂದಿಗೆ ಆಪ್ತವಾಗಿ ನೆಮ್ಮದಿಯಿಂದ ಇರುವ ಆಸೆ ಹೊಂದಿರುವವರು ನೀವಾಗಿದ್ದರೆ ನಾಲ್ಕು ಮಾರ್ಗಗಳ ಮೂಲಕ ಆಧ್ಯಾತ್ಮಿಕವಾಗಿ ಒಂದಾಗಿ.

•    ನೀವ್ಯಾರು ಎನ್ನುವುದನ್ನು ಅರಿತುಕೊಳ್ಳಿ (Who you are)
ಆಧ್ಯಾತ್ಮಿಕವಾಗಿ ನಿಮ್ಮ ಸಂಗಾತಿಯ ಪ್ರೀತಿಪಾತ್ರರು ನೀವಾಗಿದ್ದರೆ ನೀವು ಯಾರು, ನಿಮ್ಮ ಅಂತರಂಗವೇನು ಎನ್ನುವುದನ್ನು ಮೊದಲು ಅರಿತುಕೊಳ್ಳಿ. ನಿಮ್ಮ ನಂಬಿಕೆಗಳು, ಮೌಲ್ಯಗಳನ್ನು ಗುರುತಿಸಿಕೊಳ್ಳಿ. ನಿಮಗೆ ಜೀವನದಲ್ಲಿ ಮುಖ್ಯವಾದುದೇನು, ನಿಮ್ಮ ಆಸೆ ಹಾಗೂ ಉದ್ದೇಶಗಳ ಬಗೆಗೆ ತಿಳಿದುಕೊಳ್ಳಿ.

ಲೈಂಗಿಕ ಜೀವನಕ್ಕೆ ಆಧ್ಯಾತ್ಮಿಕ ಲಾಭ ತರುವ ತಾಂತ್ರಿಕ್ ಸೆಕ್ಸ್

•    ಹಿಂದಿನ ತಪ್ಪು(Mistake)ಗಳನ್ನು ಕ್ಷಮಿಸಿಬಿಡಿ
ಸಂಗಾತಿಗಳು ಪರಸ್ಪರ ಹಿಂದಿನ ತಪ್ಪುಗಳನ್ನು ಕ್ಷಮಿಸುವುದು ದೃಢ ಸಂಬಂಧದ ಎರಡನೇ ಹೆಜ್ಜೆ. “ಆಗ ಹಾಗಾಯ್ತು, ಈಗ ಹೀಗೆ ಮಾಡಿದೆ’ ಎನ್ನುತ್ತ ದೂರುವುದರಲ್ಲಿ ಅರ್ಥವಿಲ್ಲ. ಹಿಂದಿನದನ್ನು ಮರೆತರೆ ಮಾತ್ರ ಮುಂದಿನ ಅಭಿವೃದ್ಧಿ. ಹಿಂದೆ ಏನು ಬೇಕಿದ್ದರೂ ಸಂಭವಿಸಿರಬಹುದು. ಪರಸ್ಪರ ವಿಶ್ವಾಸದ್ರೋಹವೇ ಆಗಿರಬಹುದು. ಮುಂದೆ ಸರಿಯಾಗಿರಬೇಕು ಎಂದಾದರೆ, ಹಿಂದಿನ ಕಹಿ ಇರಬಾರದು.

•    ಸಮಾನ (Common) ಉದ್ದೇಶದ ಧ್ಯೇಯ ಹೊಂದಿ
ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಬಹುದು. ಪರಸ್ಪರ ಬೆಂಬಲವಾಗಿ ನಿಲ್ಲುವ ಜತೆಗೆ, ಇಬ್ಬರಿಗೂ ಆಸಕ್ತಿ ಇರುವ ಸಮಾನ ಅಂಶಗಳ ಮೇಲೆ ಕೆಲಸ ಮಾಡಲು ಆರಂಭಿಸಬಹುದು. ಸಾಮಾನ್ಯ ಸಂಬಂಧಕ್ಕಿಂತ ಮೇಲ್ ಸ್ತರದ ಸಂಬಂಧ ನಿಮ್ಮದಾಗಬೇಕು ಎಂದಾದರೆ, ಇಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು ಅತ್ಯಂತ ಅಗತ್ಯ. ಮುಕ್ತವಾದ ಮಾತುಕತೆ, ಪ್ರಾಮಾಣಿಕವಾದ ಅನಿಸಿಕೆ, ಧೈರ್ಯ ತುಂಬುವುದು, ಇಬ್ಬರೂ ಜತೆಯಾಗಿ ಕೆಲವು ಚಟುವಟಿಕೆಗಳನ್ನು ಮಾಡುವುದು, ಧ್ಯಾನ-ಪ್ರಾಣಾಯಾಮಗಳಲ್ಲಿ ನಿರತರಾಗುವುದನ್ನು ಮಾಡಬೇಕು.

•    ಸಂಬಂಧದಲ್ಲೂ ಆಧ್ಯಾತ್ಮಿಕ ಚಿತ್ತ (Mind)
ನಿಮ್ಮ ಸಂಗಾತಿ ನಿಮಗೆ ಇಷ್ಟವಾಗದ ಅಥವಾ ಏನಾದರೂ ಅರ್ಥವಿಲ್ಲದ ಕಾರ್ಯಗಳಲ್ಲಿ ತೊಡಗಿದರೆ, ವರ್ತನೆ ಮಾಡಿದರೆ ಅದನ್ನು ಖಂಡಿಸುವುದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ. ಬದಲಿಗೆ, ಆ ಸಮಯದಲ್ಲಿ ನಿಮ್ಮ ಆಧ್ಯಾತ್ಮಿಕತೆಯನ್ನು ಬಳಸಿಕೊಂಡು ಆರಾಮದಾಯಕ ಮನಸ್ಥಿತಿಗೆ ಬನ್ನಿ. ಯಾವುದಾದರೂ ಸಮಸ್ಯೆ ಬಗೆಹರಿಸಲು ಇಬ್ಬರೂ ವಿಫಲವಾದರೆ, ನಿಮ್ಮ ಆಧ್ಯಾತ್ಮಿಕ ನಂಬುಗೆಯ ಪ್ರಕಾರ ನಡೆದುಕೊಳ್ಳಿ. ನಿಮ್ಮ ಸಂಬಂಧವನ್ನು ಮುನ್ನಡೆಸಲು ಆಧ್ಯಾತ್ಮಿಕ ಶಕ್ತಿಗೆ ಅನುವು ಮಾಡಿಕೊಡಿ. ಇಬ್ಬರೂ ಜತೆಯಾಗಿ, ಶಾಂತವಾಗಿ ನಿರ್ಧಾರಗಳನ್ನು ಕೈಗೊಳ್ಳಿ. ಒಂದೊಮ್ಮೆ ಅದು ಸರಿಯಾಗದಿದ್ದರೆ ದೂಷಿಸಿಕೊಳ್ಳಬೇಡಿ. 

Follow Us:
Download App:
  • android
  • ios