ಸಂಬಂಧದ ಮಟ್ಟಿಗೆ ಈಗಿನ ಮಿಲೇನಿಯಲ್ಸ್ ಎದುರಿಸೋ ಕಾಮನ್ ಸಮಸ್ಯೆಗಳಿವು!

ಸಂಬಂಧಗಳು ಎಂದಿನಿಂದಲೂ ಪರೀಕ್ಷೆಗೆ ಒಳಗಾಗುತ್ತಲೇ ಬಂದಿವೆ. ಆದರೆ, ಹಿಂದಿನವರಿಗಿಂತ ಇಂದಿನ ಯುವಜನರಿಗೆ ಸಮಸ್ಯೆ ಹೆಚ್ಚು. ಏಕೆಂದರೆ, ಅವರು ಸಂಗಾತಿಯ ಸೋಷಿಯಲ್‌ ಮೀಡಿಯಾದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆಯೇ ವಿನಾ, ನಿಜವಾದ ಭಾವನೆಗಳನ್ನು ಓಪನ್‌ ಆಗಿ ವ್ಯಕ್ತಪಡಿಸುವಲ್ಲಿ ಹಿಂಜರಿಕೆ ಹೊಂದಿರುತ್ತಾರೆ. 
 

common relationship issues being faced by millenials in modern world sum

ಪ್ರತಿಯೊಂದು ಕಾಲದಲ್ಲೂ ದಾಂಪತ್ಯ ಎನ್ನುವುದು ಅಥವಾ ಯಾವುದೇ ಸಂಬಂಧ ಪರೀಕ್ಷೆಗೆ ಒಳಗಾಗುತ್ತಲೇ ಬಂದಿದೆ. ಐವತ್ತು ವರ್ಷಗಳ ಹಿಂದೆಯೂ ಕೂಡ ಜೋಡಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ, ಹೊಂದಿಕೊಂಡು ಹೋಗುವ ಮನೋಭಾವ ಹಾಗೂ ಸಾಮಾಜಿಕ ಅಡೆತಡೆಗಳಿಂದಾಗಿ ಅವರ ಸಮಸ್ಯೆ ಬೇರೆಯವರಿಗೆ ಗೊತ್ತಾಗುತ್ತಿರಲಿಲ್ಲ ಮತ್ತು ಹೆಚ್ಚು ವಿವಾದಕ್ಕೆ ತುತ್ತಾಗುತ್ತಿರಲಿಲ್ಲ. ಬೇಕಾದ ನಿರ್ಧಾರ ಕೈಗೊಳ್ಳಲು ಅಂದಿನವರಿಗೆ ಸ್ವಾತಂತ್ರ್ಯವೂ ಇರಲಿಲ್ಲ, ಸಾಧ್ಯವೂ ಇರಲಿಲ್ಲ. ಹೀಗಾಗಿ, ಹಿಂದಿನವರ ದಾಂಪತ್ಯದಲ್ಲಿ ಹೆಚ್ಚಿನ ಸಮಸ್ಯೆಗಳು ಅಲ್ಲಿಯೇ ಮುಗಿದು ಹೋಗುತ್ತಿದ್ದವು. ಆದರೆ, ಈಗ ಹಾಗಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಡಿವೋರ್ಸ್‌ ಶಬ್ದ ಕೇಳಿಬರುತ್ತದೆ. ಸಂಬಂಧದಲ್ಲಿ ಏರಿಳಿತಗಳು ಇರುವುದು ಸಹಜವಾದರೂ ಇಂದಿನವರ ಸಂಬಂಧ ಒಂದು ಹಂತ ಮೇಲೆಯೇ ಇದೆ. ಈ ಮಿಲೆನಿಯಲ್ಸ್‌ ಕಾಲದ ಯುವಜನ ಸಂಬಂಧಗಳ ವಿಚಾರದಲ್ಲಿ ಭಾರೀ ಸಮಸ್ಯೆಗಳನ್ನು ಹೊಂದಿದ್ದಾರೆ. ಸಣ್ಣಪುಟ್ಟ ವಿಚಾರಗಳೂ ಅವರಲ್ಲಿ ಭಾರೀ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕುತ್ತವೆ. ಹಿರಿಯರ ಬೋಧನೆ ಅವರಿಗೆ ಬೇಕಾಗಿಲ್ಲ, ದುಡುಕಿನ ಸ್ವಂತ ನಿರ್ಧಾರ ಕೈಗೊಂಡು ಬದುಕನ್ನು ಇನ್ನಷ್ಟು ನೋವಿಗೆ ದೂಡಿಕೊಳ್ಳುವುದು ಕಂಡುಬರುತ್ತಿದೆ. ಸಂಬಂಧದ ಮಟ್ಟಿಗೆ ಇಂದಿನವರು ಎದುರಿಸುವ ಸಾಮಾನ್ಯ ಸಮಸ್ಯೆಗಳು ಹಲವಾರು. ಅವುಗಳನ್ನು ತಾಳ್ಮೆಯಿಂದ ಅರಿತುಕೊಂಡು ಬಗೆಹರಿಸಿಕೊಂಡರೆ ಬದುಕು ಸುಂದರವಾಗುವುದರಲ್ಲಿ ಅನುಮಾನವಿಲ್ಲ. ಅಷ್ಟಕ್ಕೂ ಅವರು ಎದುರಿಸುತ್ತಿರುವ ಸಮಸ್ಯೆಗಳೇನು ನೋಡೋಣ.

•    ಸೋಷಿಯಲ್‌ ಮೀಡಿಯಾ (Social Media) ವರ್ತನೆಯ ಬಗ್ಗೆ ಭಾರೀ ವಿಮರ್ಶೆ (Over Analysis)
ಸಂಗಾತಿಯ (Partner) ಸೋಷಿಯಲ್‌ ಮೀಡಿಯಾ ವರ್ತನೆಯ ಬಗ್ಗೆ ಇಂದಿನವರು ಭಾರೀ ತಲೆಕೆಡಿಸಿಕೊಳ್ಳುತ್ತಾರೆ. ಅವರು ಸೋಷಿಯಲ್‌ ಮೀಡಿಯಾದಲ್ಲಿ ಏನು ಚೆಕ್‌ ಮಾಡಿದರು ಎನ್ನುವುದರಿಂದ ಹಿಡಿದು ಅವರ ಚಟುವಟಿಕೆಯ (Activity) ಮೇಲೆ ಅತಿಯಾಗಿ ಕಣ್ಣಿಡುತ್ತಾರೆ. ರೀಡಿಂಗ್‌ ಬಿಟ್ವೀನ್‌ ಲೈನ್ಸ್‌ ಮಾದರಿ ಅನುಸರಿಸುತ್ತಾರೆ. ಸಂಗಾತಿ ಸರಿಯಾಗಿ ರೆಸ್ಪಾಂಡ್‌ (Respond) ಮಾಡಿಲ್ಲವಾದರೆ, ಸಮಯಕ್ಕೆ ಸರಿಯಾಗಿ ಟೆಕ್ಸ್ಟ್‌ (Text) ಮಾಡಿಲ್ಲವಾದರೆ, ತಕ್ಷಣ ಕಾಲ್‌ ಸ್ವೀಕಾರ ಮಾಡಿಲ್ಲವಾದರೆ ಡೌಟ್‌ (Doubt) ಶುರುವಾಗುತ್ತದೆ. ಸೋಷಿಯಲ್‌ ಮೀಡಿಯಾದಲ್ಲಿ ಅವರ ವರ್ತನೆಯ ಆಧರಿಸಿ ಏನೇನೋ ಯೋಚನೆ ಮಾಡುತ್ತಾರೆ.

ಸಂಬಂಧದಲ್ಲಿ ಹಳೆಯ ಸೆಳೆತವೇ ಮಾಯವಾಗಿದ್ಯಾ? ಈ ರೀತಿ ಕೊಂಚ ಮಸಾಲೆ ಸೇರಿಸಿ

•    ತಾಳ್ಮೆಯಿಲ್ಲದಿರುವುದು (Lack of Patience)
ಇಂದಿನ ಯುವಜನ ಏಕಾಏಕಿ ನಿರ್ಧಾರಕ್ಕೆ ಬರುತ್ತಾರೆ. ಸಂಬಂಧಗಳ (Relationship) ವಿಚಾರದಲ್ಲಿ ತಾಳ್ಮೆ ಹೊಂದಿಲ್ಲದಿರುವುದು ಕಂಡುಬರುತ್ತದೆ. ತ್ವರಿತ ಜಡ್ಜ್‌ ಮೆಂಟ್‌, ತ್ವರಿತವಾಗಿ ಅಂತಿಮ ನಿರ್ಧಾರ ಅವರ ಧೋರಣೆ. ಸಂಬಂಧಗಳು ತಾಳ್ಮೆ (Patience) ಹಾಗೂ ನಿರಂತರತೆಯನ್ನು ಬೇಡುತ್ತವೆ ಎನ್ನುವ ಗುಟ್ಟು ಅವರಿಗೆ ಗೊತ್ತಿಲ್ಲ. ತಾಳ್ಮೆ ಇಲ್ಲದಿರುವ ಗುಣ ಸಮಸ್ಯೆಯನ್ನು (Problem) ಇನ್ನಷ್ಟು ಗಾಢವಾಗಿಸುತ್ತದೆ.

•    ಆಪ್ತತೆಯ (Intimacy) ಸಮಸ್ಯೆ
ಆಪ್ತವಾದ ಸಂಬಂಧದಲ್ಲೂ ನಂಬಿಕೆ ಇಲ್ಲದಿರುವುದು ಇಂದಿನವರ ಸಮಸ್ಯೆ. ಇದಕ್ಕೆ ಇಂದಿನ ಗಡಿಬಿಡಿಯ ಸಂಸ್ಕೃತಿಯನ್ನು ದೂಷಿಸಬಹುದು. ಅವರು ತಮ್ಮ ತಮ್ಮ ಕೆಲಸಕಾರ್ಯಗಳಲ್ಲಿ ಮುಳುಗಿದ್ದು, ತೀವ್ರವಾದ ಒತ್ತಡ (Stress), ಆತಂಕ ಎದುರಿಸುತ್ತಾರೆ. ಸಂಬಂಧದಲ್ಲಿ ಆಪ್ತತೆ ಹೊಂದಲು ಇವು ತಡೆಯೊಡ್ಡುತ್ತವೆ. ಅಲ್ಲದೆ, ತಮ್ಮ ಭಾವನೆಗಳನ್ನು ಕಾಲಕಾಲಕ್ಕೆ ಸರಿಯಾಗಿ ವ್ಯಕ್ತಪಡಿಸುವಲ್ಲೂ ಅವರು ಸೋಲುವುದು ಹೆಚ್ಚು.

•    ಸಮಯದಲ್ಲಿ ಬಿಕ್ಕಟ್ಟು (Conflicts) ಪರಿಹರಿಸಿಕೊಳ್ಳಲು ಅಸಮರ್ಥತೆ
ಏನಾದರೂ ಸಮಸ್ಯೆ ಉಂಟಾದಾಗ ಅದನ್ನು ಸೂಕ್ತ ಸಮಯದಲ್ಲಿ ಬಗೆಹರಿಸಿಕೊಳ್ಳುವ ಇಚ್ಛಾಶಕ್ತಿ ತೋರುವುದಿಲ್ಲ. ಇದರಿಂದ ಸಂಬಂಧದಲ್ಲಿ ಸಾಮರಸ್ಯ ಕಡಿಮೆಯಾಗುತ್ತದೆ. ಸಂಗಾತಿಗಳಲ್ಲಿ ಪರಸ್ಪರ ಮುನಿಸು ಹೆಚ್ಚುತ್ತದೆ. ಹೀಗಾಗಿ, ಸಂಬಂಧದಲ್ಲಿ ಸಂವಹನ ಎನ್ನುವುದು ಬಹುಮುಖ್ಯವಾದ ಅಂಶವಾಗಿದೆ.

ಸಂಬಂಧದಲ್ಲಿ ನೀವು ಬ್ರೆಡ್‌- ಕ್ರಂಬ್‌ ಆಗಿದೀರಾ? ಈ ಎಂಟು ಲಕ್ಷಣಗಳನ್ನು ಗಮನಿಸಿ!

•    ಬದ್ಧತೆಯ (Commitment) ಭಯ
ಈ ಕಾಲದ ಯುವಜನರ ಬೃಹತ್‌ ಸಮಸ್ಯೆ ಎಂದರೆ ಸಂಬಂಧಕ್ಕೆ ಬದ್ಧರಾಗಲು ಭಯ ಹೊಂದಿರುವುದು. ಬಹಳಷ್ಟು ಮಂದಿ ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಡೇಟಿಂಗ್‌ (Dating) ನಲ್ಲಿ ತೊಡಗಿರುವುದು ಕಂಡುಬರುತ್ತದೆ. ಪ್ರೀತಿ (Love) ಮೂಡಿದರೂ ಪರಸ್ಪರ ಬದ್ಧರಾಗಲು ಹಿಂಜರಿಕೆ ಹೆಚ್ಚು. ಯಾವುದೇ ಸಂಬಂಧದಲ್ಲಿ ಬದ್ಧತೆ ಇರಬೇಕಾದುದು ಅತಿ ಅಗತ್ಯ. ಇದರಿಂದ ಸಂಬಂಧ ತೀವ್ರವಾಗದೇ ಅಲ್ಲೇ ಅಸ್ಪಷ್ಟತೆಯಲ್ಲಿ ನರಳುತ್ತದೆ.  
 

Latest Videos
Follow Us:
Download App:
  • android
  • ios