ಸಂಬಂಧದಲ್ಲಿ ಹಳೆಯ ಸೆಳೆತವೇ ಮಾಯವಾಗಿದ್ಯಾ? ಈ ರೀತಿ ಕೊಂಚ ಮಸಾಲೆ ಸೇರಿಸಿ
ಕೆಲವೊಮ್ಮೆ ಸಂಬಂಧದಲ್ಲಿ ವಿವಾದಗಳು, ಜಗಳಗಳು ಅಥವಾ ವಿಷಕಾರಿ ನಡವಳಿಕೆ ಇದ್ಯಾವುದೂ ಇಲ್ಲದೇ ಇದ್ದರೂ ಸಹ ಮೊದಲಿದ್ದ ಸೆಳೆತ ಕಳೆದು ಹೋಗುತ್ತದೆ. ಹೆಚ್ಚಿನ ವಿವಾಹಿತ ದಂಪತಿಗಳು ಸ್ವಲ್ಪ ಸಮಯದ ನಂತರ ಈ ಬೇಸರವನ್ನು ಅನುಭವಿಸುತ್ತಾರೆ. ಇದಕ್ಕೆಲ್ಲ ಕಾರಣ ಏನು ಗೊತ್ತಾ?
ಈಗಷ್ಟೇ ಮದುವೆಯಾದ ದಂಪತಿಗಳ (newly married couples) ಮಧ್ಯೆ, ಪರಸ್ಪರ ಪ್ರಣಯ, ಆಕರ್ಷಣೆ ಮತ್ತು ಬಾಂಧವ್ಯ ಎಲ್ಲವೂ ಕಂಡುಬರುತ್ತದೆ, ಆದರೆ ಮದುವೆಯಾಗಿ ವರ್ಷಗಳು ಕಳೆದಂತೆ ಆ ಸೆಳೆತ, ಆಕರ್ಷಣೆ ಕಡಿಮೆಯಾಗುತ್ತಾ ಬರುತ್ತದೆ. ಸಂಬಂಧವನ್ನು ಬಲವಂತವಾಗಿ ನಡೆಸುತ್ತಿರುವಂತೆ ಅನಿಸುತ್ತದೆ. ಅನೇಕ ಕಾರಣಗಳಿಗಾಗಿ, ಸಂಬಂಧದಲ್ಲಿ ಮೊದಲಿನ ಸೆಳೆತ ಉಳಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ಅದನ್ನು ಸರಿಪಡಿಸೋದು ಹೇಗೆ? ಅನ್ನೋದರ ಬಗ್ಗೆ ತಿಳಿಯೋಣ.
ಸಂಬಂಧದಲ್ಲಿ ಸೆಳೆತ ಏಕೆ ಕಡಿಮೆಯಾಗಲು ಪ್ರಾರಂಭಿಸುತ್ತದೆ?: ಹೆಚ್ಚಿನ ದಂಪತಿಗಳು ಹೆಚ್ಚಿದ ಜವಾಬ್ದಾರಿಗಳು ಮತ್ತು ಹೊಂದಾಣಿಕೆಯಾಗದ ಕೆಲಸದ ಶೆಡ್ಯೂಲ್ ನಿಂದಾಗಿ ಪರಸ್ಪರ ಸಂಪರ್ಕವನ್ನು ಕಳೆದುಕೊಳ್ಳುತ್ತಾರೆ. ಪರಸ್ಪರ ಸಮಯ ಕಳೆಯಲು ಸಾಧ್ಯವಾಗದಿರುವುದು ಆಕರ್ಷಣೆಯ ಕೊರತೆಗೆ ಮುಖ್ಯ ಕಾರಣವಾಗಿದೆ. ಇದು ಇಂಟಿಮೆಸಿ ಮೇಲೆ ಪರಿಣಾಮ ಬೀರುತ್ತದೆ ಮತ್ತು ಲೈಂಗಿಕ ಜೀವನವು ಕ್ರಮೇಣ ಕೊನೆಗೊಳ್ಳುತ್ತದೆ.
ವಾಸ್ತವವಾಗಿ, ಪರಸ್ಪರ ಸಮಯವನ್ನು ನೀಡಲು ಸಾಧ್ಯವಾಗದಿರುವುದು ಸಹ ಈ ಸಮಸ್ಯೆಗೆ ಕಾರಣವೆಂದು ತಿಳಿದು ಬಂದಿದೆ. ಸಂಬಂಧವನ್ನು ಬಲವಾಗಿಡಲು, ದೈಹಿಕ ಅನ್ಯೋನ್ಯತೆಯನ್ನು(physical intimacy) ಕಾಪಾಡಿಕೊಳ್ಳುವುದು ಅವಶ್ಯಕ. ಇದನ್ನು ಕಾಪಾಡಿಕೊಳ್ಳಲು, ಪರಸ್ಪರ ಮಾತನಾಡುವುದರ ಹೊರತಾಗಿ, ನಿಮ್ಮ ಸಂಗಾತಿಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಲೈಂಗಿಕ ಆಸಕ್ತಿ ಹೆಚ್ಚಿಸಿ: ಸೆಕ್ಸುವಲ್ ಇಂಟಿಮೆಸಿ (sexual intimacy) ಕೊರತೆಯು ಯಾವುದೇ ಸಂಬಂಧದಲ್ಲಿ ಸೆಳೆತದ ಕೊರತೆಗೆ ಮುಖ್ಯ ಕಾರಣವಾಗಿದೆ. ಕೆಲಸದ ಸ್ಥಳ ಮತ್ತು ಮಕ್ಕಳ ಪಾಲನೆಯ ನಡುವೆ ಸಂಬಂಧದಲ್ಲಿ ಅಂತರ ಉಂಟಾಗುತ್ತದೆ. ನೈಟ್ ಡೇಟ್ ಅಥವಾ ಟ್ರಾವೆಲ್ ಪ್ಲ್ಯಾನ್ ಮಾಡುವ ಮೂಲಕ ದೈಹಿಕ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಬಹುದು. ಇದಲ್ಲದೆ, ವಿಭಿನ್ನ ಲೈಂಗಿಕ ಭಂಗಿಗಳು ಲೈಂಗಿಕ ಜೀವನವನ್ನು ಮತ್ತಷ್ಟು ರೋಮಾಂಚನಗೊಳಿಸುತ್ತವೆ. ಇದು ಸಂಬಂಧವನ್ನು ಆರೋಗ್ಯಕರ ಮತ್ತು ಹತ್ತಿರವಾಗಿಸುತ್ತದೆ.
ಮಾತುಕತೆ: ಬ್ಯುಸಿ ಕೆಲಸದಿಂದಾಗಿ, ದಂಪತಿಗಳಿಗೆ ಮಾತನಾಡಲು (communication) ಸಹ ಸಮಯ ಸಿಗುವುದಿಲ್ಲ. ಪರಸ್ಪರ ಮಾತುಕತೆ ನಡೆಸಲು ಮನೆ, ಕುಟುಂಬ ಮತ್ತು ಮಕ್ಕಳ ಅಗತ್ಯಗಳನ್ನು ಹೊರತುಪಡಿಸಿ ನಿಮಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಈ ಸಮಯದಲ್ಲಿ, ನಿಮ್ಮ ಬಗ್ಗೆ ಮಾತ್ರ ಮಾತನಾಡಿ ಮತ್ತು ನಿಮ್ಮಿಬ್ಬರ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಇದು ಸಹಾಯ ಮಾಡುತ್ತದೆ.
ಸಂಗಾತಿಯನ್ನು ಅಭಿನಂದಿಸಲು ಮರೆಯದಿರಿ: ದಿನವಿಡೀ ಕೆಲವು ಕೆಲಸಗಳಲ್ಲಿ ನೀವು ಎಷ್ಟು ಬ್ಯುಸಿಯಾಗಿರುತ್ತೀರಿ ಅಂದ್ರೆ, ನಿಮ್ಮ ಸಂಗಾತಿಯ ಕೆಲಸಗಳು ಮತ್ತು ಪ್ರಯತ್ನಗಳನ್ನು ಗಮನಿಸಲು ಸಾಧ್ಯವಾಗುವುದಿಲ್ಲ. ಇದು ಕ್ರಮೇಣ ಸಂಬಂಧದಲ್ಲಿ ಅಂತರಕ್ಕೆ ಕಾರಣವಾಗುತ್ತದೆ. ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಒಂಟಿತನವನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಸಂಬಂಧವನ್ನು ಮತ್ತೆ ಸಂತೋಷ ಮತ್ತು ಆರೋಗ್ಯಕರವಾಗಿಸಲು ನಿಮ್ಮ ಸಂಗಾತಿಯ ಪ್ರಯತ್ನಗಳನ್ನು ಪ್ರಶಂಸಿಸಿ ಮತ್ತು ಅವರು ಮಾಡಿದ ಪ್ರತಿಯೊಂದು ಕ್ರಿಯೆಯನ್ನು ಗಮನಿಸಿ. ಇದರಿಂದಾ ಪ್ರೀತಿ ಹೆಚ್ಚುತ್ತದೆ.
ಪ್ರತಿಯೊಂದು ಕೆಲಸದಲ್ಲೂ ಬೆಂಬಲ: ಸಣ್ಣ ವಿಷಯಗಳಿಗೆ ಸಂಗಾತಿಗೆ ಅಡ್ಡಿಪಡಿಸುವುದು ಮತ್ತು ಅದನ್ನು ಸರಿಪಡಿಸುವುದು ಕೆಲವೊಮ್ಮೆ ಸಂಬಂಧಗಳಲ್ಲಿ ಅಂತರವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯು ಯಾವುದೇ ವಿಷಯಗಳನ್ನು ಚರ್ಚಿಸಲು ಹಿಂಜರಿಯುತ್ತಾನೆ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಸಂಬಂಧಗಳ ಗಡಿಗಳನ್ನು ಮರೆಯಬೇಡಿ ಮತ್ತು ಪ್ರತಿಯೊಂದು ಕಾರ್ಯದಲ್ಲೂ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ನಿಮ್ಮ ಸಂಗಾತಿಗೆ ಬೆಂಬಲ (support them) ನೀಡೋದನ್ನು ಕಲಿಯಿರಿ.
ಜೀವನವನ್ನು ಜೊತೆಯಾಗಿ ಎಂಜಾಯ್ ಮಾಡಿ: ಯಾವಾಗಲೂ ಸಂತೋಷವಾಗಿರಿ, ನಗುತ್ತಲೇ ಇರಿ ಮತ್ತು ಜೀವನದಲ್ಲಿ ಹೊಸ ಆಕ್ಟಿವಿಟಿ ಅಳವಡಿಸಿಕೊಳ್ಳಿ. ವಿಹಾರಕ್ಕೆ ಹೋಗಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಸುತ್ತಾಡಿ. ಕೆಲವೊಮ್ಮೆ ಮಧ್ಯಾಹ್ನದ ಊಟಕ್ಕೆ, ಡೇಟ್ ನೈಟ್, ಅಡ್ವೆಂಚರಸ್ ಗೇಮ್ ಹೀಗೆ ಏನಾದರೊಂದು ಮಾಡುತ್ತಿರಿ.
ಸರ್ಪ್ರೈಸ್ ನೀಡೋದನ್ನು ಮರೆಯಬೇಡಿ: ಮಕ್ಕಳನ್ನು ಬೆಳೆಸುವ ಮಧ್ಯೆ, ದಂಪತಿಗಳು ತಮ್ಮ ಜೀವನದ ಎಲ್ಲಾ ಉದ್ದೇಶ ಮತ್ತು ಬಯಕೆಗಳನ್ನು ಮರೆತುಬಿಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಗೆ ಅತ್ಯಂತ ವಿಶೇಷವಾದ ಭಾವನೆಯನ್ನು ಮೂಡಿಸಲು ಸರ್ಪ್ರೈಸ್ ಪ್ಲ್ಯಾನ್(surprise) ಮಾಡಿ. ಅವರಿಗೆ ಉಡುಗೊರೆಯನ್ನು ಕೊಡೋದು ಅಥವಾ ಪಾರ್ಟಿಯನ್ನು ಆಯೋಜಿಸಿ ಮತ್ತು ಒಟ್ಟಿಗೆ ಸೇರಿ ಎಂಜಾಯ್ ಮಾಡೋದು, ಅವರ ಜನ್ಮದಿನ ಮತ್ತು ವಾರ್ಷಿಕೋತ್ಸವದ ದಿನಾಂಕವನ್ನು ಮರೆಯದೇ ಅದನ್ನು ಸೆಲೆಬ್ರೇಟ್ ಮಾಡೋದು. ಈ ಸಣ್ಣ ವಿಷಯಗಳು ಸಂಬಂಧದಲ್ಲಿನ ಪ್ರೀತಿಯನ್ನು ಹಾಗೇ ಉಳಿಸಿಕೊಳ್ಳುತ್ತವೆ.