Asianet Suvarna News Asianet Suvarna News

Personality Tips: ಒರಟಾಗಿ ಹ್ಯಾಂಡ್ ಶೇಕ್ ಮಾಡಿದ್ರೆ ನಿಮ್ಮನ್ಯಾರೂ ಇಷ್ಟ ಪಡೋಲ್ಲ!

Body Language ನಮ್ಮೊಳಗನ್ನು ಸಮರ್ಥವಾಗಿ ಬಿಂಬಿಸುತ್ತದೆ. ಹೀಗಾಗಿ, ಯಾರನ್ನಾದರೂ ಭೇಟಿಯಾದಾಗ ದೈಹಿಕ ಭಾಷೆಗೆ ಆದ್ಯತೆ ನೀಡಬೇಕು. ಮುದುಡಿ ಕುಳಿತುಕೊಳ್ಳುವುದು, ಕಣ್ಣುಗಳನ್ನು ನೋಡದೆ ಮಾತನಾಡುವ ಸಾಮಾನ್ಯ ತಪ್ಪುಗಳನ್ನು ಬಹಳಷ್ಟು ಜನ ಮಾಡುತ್ತಾರೆ. ಇವುಗಳಿಂದ ಮಾತುಕತೆ ಆಕರ್ಷಕವಾಗುವುದಿಲ್ಲ. 
 

Common body language mistakes that makes you not confident sum
Author
First Published Jun 28, 2023, 5:28 PM IST

ಮಾತನಾಡುವ ಭಾಷೆಗಿಂತ ಕೆಲವೊಮ್ಮೆ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ದೇಹ ಮಾತನಾಡುತ್ತದೆ. ಆಂಗಿಕ ಚಲನೆಗಳು ನಮ್ಮ ಮನಸ್ಥಿತಿಯನ್ನು ಬಹಳ ಚೆನ್ನಾಗಿ ಬಿಂಬಿಸುತ್ತವೆ. ನರ್ವಸ್ ಆಗುವುದು, ಅಭದ್ರತೆ ಹೊಂದಿರುವುದು, ಆತ್ಮವಿಶ್ವಾಸ ಇಲ್ಲದಿರುವಂತಹ ಹಲವಾರು ನೆಗೆಟಿವ್ ಭಾವನೆಗಳಿಂದ ಹಿಡಿದು ದೃಢ ವ್ಯಕ್ತಿತ್ವದಂತಹ ಪಾಸಿಟಿವ್ ಅಂಶಗಳವರೆಗೆ ದೇಹ ಸಮರ್ಥವಾಗಿ ಭಾವನೆಗಳನ್ನು ಹೊರಹಾಕುತ್ತದೆ. ಸಂದರ್ಶನಗಳಲ್ಲಿ ದೇಹದ ಬಗ್ಗೆಯೂ ಹೆಚ್ಚಿನ ಗಮನ ನೀಡುವುದು ಇದೇ ಕಾರಣಕ್ಕೆ. ಅತಿ ಸಣ್ಣದೊಂದು ಚಲನೆ ಕೂಡ ನಮ್ಮಲ್ಲಿರುವ ವಿಶ್ವಾಸವನ್ನು ಬಿಂಬಿಸಬಲ್ಲದು, ಹಾಗೆಯೇ, ಸಣ್ಣದೊಂದು ಭಂಗಿಯೂ ನಮ್ಮ ಕೊರತೆಯನ್ನು ಎತ್ತಿ ತೋರಿಸಬಲ್ಲದು. ಹೀಗಾಗಿ, ದೇಹದ ಭಾಷೆಗೆ ಪ್ರಾಮುಖ್ಯತೆ ಇದೆ. ಹಾಗೆ ನೋಡಿದರೆ, ನಾವು ಬಾಲ್ಯದಲ್ಲೂ ಸಾಕಷ್ಟು ದೈಹಿಕ ಚಲನವಲನ ಹೀಗಿರಬೇಕು ಎನ್ನುವುದನ್ನು ಕಲಿತುಕೊಳ್ಳುತ್ತ ಬರುತ್ತೇವೆ. ಎಷ್ಟೋ ಮನೆಯಗಳಲ್ಲಿ ಹಿರಿಯರು ಕಿರಿಯರಿಗೆ “ಕೈಕಟ್ಟಿ ನಿಲ್ಲಬೇಡಿ, ಕೈಗಳನ್ನು ಹಿಂದಕ್ಕೆ ಇಟ್ಟುಕೊಂಡು ನಡೆಯಬೇಡಿ, ಕಾಲುಗಳನ್ನು ಮೇಲೆ ಹಾಕಿಕೊಂಡು ಕೂರಬೇಡಿ, ಯಾರದ್ದಾದರೂ ಎದುರು ಕಾಲುಗಳನ್ನು ಅಡ್ಡವಾಗಿ ಇರಿಸಿಕೊಳ್ಳಬೇಡಿ, ಮಾತನಾಡುವಾಗ ಮೊಬೈಲ್ ನೋಡಬೇಡಿ’ ಇತ್ಯಾದಿ ಕಿವಿಮಾತುಗಳನ್ನು ಹೇಳುತ್ತಲೇ ಇರುತ್ತಾರೆ. ಇವೆಲ್ಲವೂ ದೈಹಿಕ ಭಾಷೆಗೆ ಸಂಬಂಧಿಸಿದ್ದಾಗಿವೆ. 

ಕೆಲವೊಮ್ಮೆ ಅರಿತೋ ಅರಿಯದೆಯೋ ಕೆಲವು ದೈಹಿಕ ಭಾಷೆಗೆ (Body Language) ಸಂಬಂಧಿಸಿದಂತೆ ಕೆಲವು ತಪ್ಪುಗಳನ್ನು (Mistakes) ಎಲ್ಲರೂ ಮಾಡುತ್ತಿರುತ್ತೇವೆ. ಅಂತಹ ತಪ್ಪುಗಳಾಗದಂತೆ ನೋಡಿಕೊಂಡರೆ ನಮ್ಮ ದೈಹಿಕ ಭಾಷೆ ಉತ್ತಮವೆನಿಸುತ್ತದೆ. ಆಗ ಎದುರಿರುವವರು ನಮ್ಮ ಬಗ್ಗೆ ಉತ್ತಮ ಅಭಿಪ್ರಾಯ ತಾಳುವಂತಾಗುತ್ತದೆ. ಹೀಗಾಗಿ, ಅಂತಹ ತಪ್ಪುಗಳಾಗದಂತೆ ನೋಡಿಕೊಳ್ಳಿ. 

Personality Tips: ನಿಮ್ಮಲ್ಲೂ ಇದೆಯೇ ಪುಟಿದೇಳಬಲ್ಲ ಗುಣ? ಕಷ್ಟಕಾಲದಲ್ಲಿ ನೀವು ಹೇಗಿರ್ತೀರಿ?

•    ಮುದುಡಿ ಕುಳಿತುಕೊಳ್ಳುವುದು (Shrinking Posture)
ಯಾರನ್ನಾದರೂ ಭೇಟಿ (Meet) ಮಾಡಿದಾಗ ಅವರು ಮುದುಡಿ ಕುಳಿತಿದ್ದರೆ ಇಂಪ್ರೆಸಿವ್ (Impressive) ಎನಿಸುವುದಿಲ್ಲ. ಇನ್ನೂ ಹೆಚ್ಚಾಗಿ, ಅವರಿಗೆ ಮಾತನಾಡುವುದು ಇಷ್ಟವೇ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಇಂತಹ ಭಾವನೆ ಎದುರಿನವರಲ್ಲಿ ಬಂದರೆ ಮಾತುಕತೆಯಲ್ಲಿ ಸ್ವಾರಸ್ಯ ಕಂಡುಬರುವುದಿಲ್ಲ. ಕೆಲವೊಮ್ಮೆ ಎಲ್ಲರೂ ಹೀಗೆ ಕುಳಿತುಕೊಳ್ಳುವುದು ಸಹಜ. ಆದರೆ, ಇದರಿಂದ ಆತ್ಮವಿಶ್ವಾಸದ (Self Confidence) ಕೊರತೆ ಇರುವಂತೆ ಕಂಡುಬರುತ್ತದೆ. ದೇಹದ ಬಗ್ಗೆ ಮುಜುಗರ ಇದ್ದಾಗಲೂ ಇಂತಹ ಭಂಗಿ ಸಾಮಾನ್ಯ. ನಮ್ಮದೇ ದೇಹದ ಬಗ್ಗೆ ಕಂಫರ್ಟ್ ಹೊಂದಿರುವುದು ಮುಖ್ಯ. ವೃತ್ತಿಪರ ವಾತಾವರಣದಲ್ಲಿ ಈ ಭಂಗಿ ಹೊಂದಾಣಿಕೆಯಾಗುವುದಿಲ್ಲ. ಕೈಕಾಲುಗಳನ್ನು ಅಡ್ಡವಾಗಿ ಇಟ್ಟುಕೊಳ್ಳುವುದು, ಕಾಲುಗಳನ್ನು ಅಲ್ಲಾಡಿಸುವುದು ಇಂಥವು ಸಲ್ಲದು.  

•    ಕಣ್ಣುಗಳನ್ನು ತಪ್ಪಿಸಿಕೊಳ್ಳುವುದು (Elusive Eye Contact)
ಕೆಲವರು ಕಣ್ಣುಗಳನ್ನು ನೋಡಿ ಮಾತನಾಡುವುದಿಲ್ಲ. ಇದು ಸಾಕಷ್ಟು ಜನರ ಸಮಸ್ಯೆ. ಹೀಗೆ ಮಾಡಿದರೆ ಎದುರು ಇರುವವರಿಗೆ ಖಂಡಿತವಾಗಿ ಇರಿಸುಮುರಿಸಾಗುತ್ತದೆ. ಕಣ್ಣುಗಳನ್ನು ದಿಟ್ಟಿಸುತ್ತ ಮಾತನಾಡುವುದು ಪರಿಣಾಮಕಾರಿ. ಇದು ಅಸುರಕ್ಷಿತ (Insecure) ಭಾವನೆಯನ್ನು ವ್ಯಕ್ತಪಡಿಸುವ ಅಂಶ. ಮಾತುಕತೆಯಲ್ಲಿ ಆಸಕ್ತಿ (Interest) ಇಲ್ಲದಿರುವಂತೆಯೂ ಭಾಸವಾಗಬಹುದು. ಹೀಗಾಗಿ, ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದು ಅಗತ್ಯ. ಮೊದಲು ಕಷ್ಟವಾದರೂ ಸರಿಯಾಗಿ ಯತ್ನಿಸಿದಾಗ ಕಣ್ಣುಗಳನ್ನು ನೋಡಿ ಮಾತನಾಡಲು ಸಾಧ್ಯವಾಗುತ್ತದೆ. ಹಾಗೆಂದು, ದೀರ್ಘಕಾಲ ಮುಜುಗರವಾಗದಂತೆ ದಿಟ್ಟಿಸಿ ನೋಡಲೂಬಾರದು.

Personality Tips: ನೀವು ಇಂಟ್ಯೂಷನ್‌ ಹೊಂದಿದ್ದೀರಾ? ನಿಮಗೂ ಹೀಗೆಲ್ಲ ಆಗುತ್ತಾ?

•    ನಯವಿಲ್ಲದ ಹ್ಯಾಂಡ್ ಶೇಕ್ (Hand Shake)
ಕೆಲವರ ಕೈಗಳು ಬೆವರಿನಿಂದ (Sweat) ಒದ್ದೆಯಾಗಿರುತ್ತವೆ. ಆಗ ಹ್ಯಾಂಡ್ ಶೇಕ್ ನೀಡುವುದು ಹಿಂಸೆ ಎನಿಸುತ್ತದೆ. ಅದನ್ನು ಅವಾಯ್ಡ್ ಮಾಡುವುದು ಸಾಧ್ಯವಿಲ್ಲ ಎಂದಾದರೆ, ಹಸ್ತವನ್ನು ಮುಷ್ಟಿ ಕಟ್ಟಿಕೊಂಡಿರಬಾರದು. ಗಾಳಿಯಾಡುವಂತೆ ಕೈಗಳನ್ನು ಮುಕ್ತವಾಗಿ ತೆರೆದುಕೊಂಡಿದ್ದರೆ ಬೆವರುವುದು ಕಡಿಮೆ. ಆಗ ಸದೃಢವಾಗಿ (Firm) ಹ್ಯಾಂಡ್ ಶೇಕ್ ಮಾಡಬಹುದು. ಕೈಗಳನ್ನು ಕುಲುಕುವಾಗ ಮುಖ ನೋಡಿ ವಿಶ್ ಮಾಡುವುದು ಅಗತ್ಯ. ಹ್ಯಾಂಡ್ ಶೇಕ್ ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಇನ್ನು, ನಿಮಗೆ ಹ್ಯಾಂಡ್ ಶೇಕ್ ಮಾಡುವ ಮನಸ್ಸಿಲ್ಲವಾದರೆ ಅತ್ಯದ್ಭುತವಾಗಿ “ನಮಸ್ತೆ’ ಮಾಡಿದರೂ ಚೆನ್ನಾಗಿರುತ್ತದೆ.  

Follow Us:
Download App:
  • android
  • ios