Personality Tips: ನಿಮ್ಮಲ್ಲೂ ಇದೆಯೇ ಪುಟಿದೇಳಬಲ್ಲ ಗುಣ? ಕಷ್ಟಕಾಲದಲ್ಲಿ ನೀವು ಹೇಗಿರ್ತೀರಿ?
ನಿಮ್ಮಲ್ಲೂ ಎಷ್ಟೇ ಕಷ್ಟ ಎದುರಾದರೂ ಅವುಗಳಿಂದ ಎದ್ದು ಮತ್ತೆ ಹೊಸದಾದ ಜೀವನ ಕಟ್ಟಿಕೊಳ್ಳುವ ಛಾತಿ ಇದೆಯೇ? ಎಂಥದ್ದೇ ಸಮಯದಲ್ಲೂ ಸಮಚಿತ್ತದಿಂದ ವರ್ತಿಸುವುದು, ಸಮಸ್ಯೆ ಎದುರಾದಾಗ ಸ್ಥಿರವಾಗಿದ್ದು ಹೋರಾಡುವ ಮನೋಭಾ ಇದೆಯೇ? ಹಾಗಿದ್ದರೆ ನೀವು ಪುಟಿದೇಳುವ ಸ್ವಭಾವ ಹೊಂದಿದ್ದೀರಿ.
“ಕಷ್ಟ ಬಂದಾಗ ಎದೆಗುಂದದೇ ಸ್ಥಿರವಾಗಿರಬೇಕು’ ಎನ್ನುವ ಮಾತುಗಳನ್ನು ಕೇಳಿರುತ್ತೇವೆ, ನಾವೂ ಆಡಿರುತ್ತೇವೆ. ಆದರೆ, ಅದು ಹೇಗೆ ಎನ್ನುವುದಕ್ಕೆ ಮಾತ್ರ ನಮ್ಮಲ್ಲಿ ಸ್ಪಷ್ಟತೆಯಿಲ್ಲ. ನಾವೆಲ್ಲವೂ ಜೀವನದಲ್ಲಿ ಆಗಾಗ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತೇವೆ. ಅತಿಯಾದ ಸುಗಮವಾದ ಜೀವನ ಇಲ್ಲವೇ ಇಲ್ಲ. ಸಮಸ್ಯೆಗಳು ಏನಿಲ್ಲವೆಂದರೂ, ಸ್ವಯಂ ಗೊಂದಲ, ನಿರ್ಧಾರ ತೆಗೆದುಕೊಳ್ಳುವಾಗ ಕಾಡುವ ಅನಿಶ್ಚಿತತೆಗಳಾದರೂ ಕಾಡುತ್ತವೆ. ಅಂಥ ಸಂದರ್ಭದಲ್ಲಿ ಮಾನಸಿಕವಾಗಿ ಸ್ಥಿರತೆ ಹೊಂದಿರುವವರು ಧೈರ್ಯವಾಗಿ, ಧನಾತ್ಮಕ ಧೋರಣೆಯೊಂದಿಗೆ ಮುಂದೆ ಸಾಗುತ್ತಾರೆ. ಸ್ಥಿರತೆ, ತಾಳಿಕೊಳ್ಳುವ ಅಥವಾ ಪುಟಿದೇಳಬಲ್ಲ ಗುಣವು ದೈಹಿಕ ಶಕ್ತಿ ಅಥವಾ ಉತ್ತಮ ಸಂಪರ್ಕಕ್ಕಿಂತ ಮುಖ್ಯವಾದುದು. ಈ ಗುಣವನ್ನು ಯಾರೂ ನಿಮ್ಮಿಂದ ಕಸಿಯಲಾರರು. ಕಷ್ಟದ ಕಾಲದಲ್ಲಿ ಭಾರೀ ನೆರವಾಗುವ ಈ ಗುಣ ನಿಮ್ಮಲ್ಲಿದೆ ಎಂದು ಗುರುತಿಸುವುದು ಸುಲಭ. ಹೆಚ್ಚು ಪ್ರಯತ್ನ ಪಡದೇ ನಿಮ್ಮಲ್ಲಿ ಕೆಲವು ಗುಣಗಳು ಸಹಜವಾಗಿರುತ್ತವೆ, ಅವು ಕ್ಲಿಷ್ಟಕರ ಸಮಯದಲ್ಲಿ ಪುಟಿದೇಳುತ್ತವೆ. ಹೀಗಾಗಿ, ಸ್ಥಿರವಾದ ಗುಣವುಳ್ಳವರು ಹಲವು ಲಕ್ಷಣಗಳನ್ನು ನಿಖರವಾಗಿ ಹೊಂದಿರುತ್ತಾರೆ.
• ಜೀವನದ ಬಗ್ಗೆ ಧನಾತ್ಮಕತೆ (Positive)
ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ (Approach) ಹೊಂದಿರುವವರು ಕಷ್ಟಗಳ ಬಗ್ಗೆಯೂ ಸ್ಥಿರವಾದ ಮಾನಸಿಕತೆ (Mentality) ಪ್ರಕಟಿಸುತ್ತಾರೆ. ಕಷ್ಟಗಳಿಗೆ ಅವರು ಅಂಜುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಈ ಗುಣ ಉತ್ತಮ ಶಸ್ತ್ರದಂತೆ. ಸಕಾರಾತ್ಮಕತೆ ಹೊಂದಿರುವವರ ಮಾನಸಿಕ ಮತ್ತು ಭಾವನಾತ್ಮಕ (Emotional) ಸ್ಥಿತಿ ಉತ್ತಮವಾಗಿರುತ್ತದೆ.
Personality Tips: ನೀವು ಇಂಟ್ಯೂಷನ್ ಹೊಂದಿದ್ದೀರಾ? ನಿಮಗೂ ಹೀಗೆಲ್ಲ ಆಗುತ್ತಾ?
• ತಮ್ಮ ಬಗ್ಗೆ ನಂಬಿಕೆ (Trust)
ಕೆಲವರು ತಮ್ಮ ಬಗ್ಗೆ ಎಲ್ಲರಲ್ಲಿ ಕೊಚ್ಚಿಕೊಳ್ಳುತ್ತಾರೆ. ಆದರೆ, ಅವರಲ್ಲಿ ದೃಢತೆ ಇರುವ ಗ್ಯಾರೆಂಟಿ ಇರುವುದಿಲ್ಲ. ತಮ್ಮ ಬಗ್ಗೆ ನಂಬಿಕೆಯೂ ಅವರಲ್ಲಿರುವುದು ಅನುಮಾನ. ಆದರೆ, ಯಾರಲ್ಲಿ ನಿಜವಾಗಿ ತಮ್ಮ ಬಗ್ಗೆ ನಂಬಿಕೆ ಇರುತ್ತದೆಯೋ ಅವರು ಕಷ್ಟಕಾಲದಲ್ಲಿ ಸಮಚಿತ್ತದಿಂದ ಸ್ಥಿರವಾಗಿ ವರ್ತಿಸುತ್ತಾರೆ. ಹೀಗಾಗಿಯೇ, ಅವರು ಬಹುಬೇಗ ಕಷ್ಟದಿಂದ ಪುಟಿದೇಳುತ್ತಾರೆ (Resilient). ಅವರ ಆತ್ಮವಿಶ್ವಾಸದಿಂದ (Self Confidence) ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ ಹಾಗೂ ಅವರು ಧನಾತ್ಮಕ ಸಂಬಂಧಗಳನ್ನು (Relationship) ಆಕರ್ಷಿಸುತ್ತಾರೆ. ಇದರಿಂದ ಅವರ ಪುಟಿದೇಳಬಲ್ಲ ಗುಣ ಇನ್ನಷ್ಟು ಸದೃಢವಾಗುತ್ತದೆ.
• ಭಾವನೆಗಳನ್ನು (Emotions) ಹೇಗೆ ನಿಯಂತ್ರಿಸಿಕೊಳ್ಳಬೇಕು?
ಪುಟಿದೇಳುವ ಗುಣವುಳ್ಳವರಲ್ಲಿ ತಮ್ಮ ಭಾವನೆಗಳನ್ನು ಹೇಗೆ ನಿಯಂತ್ರಿಸಿಕೊಳ್ಳಬೇಕು (Control) ಎನ್ನುವುದರ ಅರಿವಿರುತ್ತದೆ. ಈ ಕುರಿತು ಅವರು ಪದೇ ಪದೆ ಪರಾಮರ್ಶೆ ಮಾಡುತ್ತಿರುತ್ತಾರೆ. ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಹಲವಾರು ವಿಧಾನಗಳನ್ನು ಅರಿತಿರುತ್ತಾರೆ. ಕೆಲವು ವಿಚಾರಗಳ ಬಗ್ಗೆ ತಮ್ಮ ಹಿಡಿತ ಇಲ್ಲದಿರುವುದನ್ನು ಒಪ್ಪಿಕೊಂಡು ಬಹುಬೇಗ ಭಾವನೆಗಳನ್ನು ಬದಲಿಸಿಕೊಳ್ಳಬಲ್ಲರು. ತಮ್ಮ ಶಕ್ತಿ ವ್ಯಯವಾಗುವ ವ್ಯರ್ಥ ಕಾರ್ಯದಲ್ಲಿ ಅವರು ತೊಡಗುವುದಿಲ್ಲ. ಸಿಟ್ಟು (Angry) ಮಾಡಿಕೊಳ್ಳುವುದರಿಂದ ಪ್ರಯೋಜನವಿಲ್ಲವೆಂದಾದರೆ ಅವರು ಸಿಟ್ಟಿನಿಂದಲೂ ದೂರವಿರುತ್ತಾರೆ.
• ಅಪರಿಚಿತರೊಂದಿಗೂ ಕಂಫರ್ಟ್ (Comfort) ಆಗಿರಬಲ್ಲರು
ಕೆಲವೊಮ್ಮೆ ಯಾವುದೋ ಕಾರ್ಯನಿಮಿತ್ತ ಅಪರಿಚಿತರನ್ನು ಭೇಟಿಯಾಗುವ ಪ್ರಸಂಗ ಬರುತ್ತದೆ. ಅಂತಹ ಸಮಯದಲ್ಲಿ ಕಿರಿಕಿರಿ ಮಾಡಿಕೊಳ್ಳದೆ, ಇರಿಸುಮುರಿಸಿಗೆ ತುತ್ತಾಗದೇ ಸಂದರ್ಭ ನಿಭಾಯಿಸುವುದು ಮುಖ್ಯ. ಹೊಸಬರ (Unknown) ಜತೆ ಕಂಫರ್ಟ್ ಆಗಿರುವ ಗುಣ ಇಲ್ಲವಾದರೆ ಸಾಕಷ್ಟು ಕಷ್ಟವಾಗುತ್ತದೆ. ಮುಕ್ತ ಮನಸ್ಸು ಮತ್ತು ಕುತೂಹಲಿಗಳಾಗಿದ್ದು ಜಗತ್ತನ್ನು ನೋಡಿದರೆ ಯಾರೂ ನಿಮಗೆ ಹೊಸಬರು ಎನಿಸುವುದಿಲ್ಲ. ಪುಟಿದೇಳಬಲ್ಲ ಜನರು ಯಾವುದೇ ಸಮಯವನ್ನಾದರೂ ನಿಭಾಯಿಸಬಲ್ಲ ನಂಬುಗೆ ಆಂತರಿಕವಾಗಿ ಇರುವುದರಿಂದ ಅವರು ಎಲ್ಲೂ ಮುಜುಗರಕ್ಕೆ ತುತ್ತಾಗುವುದಿಲ್ಲ.
Personality Tips: ಜನರನ್ನು ಆಕರ್ಷಿಸಬೇಕು ಅಂದ್ರೆ ನಿಮ್ಮ ವ್ಯಕ್ತಿತ್ವ ಹೀಗಿರಲಿ!
• ಚುರುಕು ಚಿಂತನೆ (Think Fast)
ಕಷ್ಟದ ಸಮಯದಲ್ಲಿ ಚುರುಕಾಗಿ ಯೋಚಿಸುತ್ತಾರೆ. ಪರಿಹಾರಗಳ ಬಗ್ಗೆ ಯೋಚಿಸಿ ತಕ್ಷಣ ಅದನ್ನು ಜಾರಿಗೊಳಿಸಲು ಮುಂದಾಗುತ್ತಾರೆ. ಸಮಸ್ಯೆಯ ಬಗ್ಗೆ ಚಿಂತಿಸುತ್ತ ಮಂಕಾಗುವುದು, ಭಯಪಡುವುದು (Fear), ಹಿಂಜರಿಯುವುದು ಇವರ ಜಾಯಮಾನವಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ, ಆಯ್ಕೆಗಳ ಬಗ್ಗೆ ವಿಮರ್ಶೆ ಮಾಡುವ ಮೂಲಕ ಸಮಸ್ಯೆ (Problems) ಗೆಲ್ಲುತ್ತಾರೆ.