ಕ್ಯಾನ್ಸರ್ ಪೀಡಿತ ಸಹಪಾಠಿಗೆ ಜೊತೆಯಾಗಲು ತಮ್ಮ ತಲೆ ಬೋಳಿಸಿಕೊಂಡ ಮಕ್ಕಳು
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪುಟ್ಟ ಬಾಲಕನೋರ್ವನನ್ನು ಆತನ ಸಹಪಾಠಿಗಳು ಬಹಳ ಆತ್ಮೀಯವಾಗಿ ಸ್ವಾಗತಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಯಿಲೆಗಳು ಮನುಷ್ಯರನ್ನು ಖಿನ್ನತೆಗೆ ದೂಡುತ್ತವೆ. ಅದರಲ್ಲೂ ಕ್ಯಾನ್ಸರ್‌ನಂತಹ ಮಹಾಮಾರಿಗೆ ಸಿಲುಕಿದ ಅನೇಕರು ಸಾವು ಬದುಕಿನ ನಡುವೆ ಹೋರಾಡುತ್ತಾ ಬಹುತೇಕ ಆತ್ಮವಿಶ್ವಾಸದ ಜೊತೆ ತಲೆ ಕೂದಲನ್ನು ಕಳೆದುಕೊಳ್ಳುತ್ತಾರೆ. ಕಿಮೋಥೆರಪಿ ಚಿಕಿತ್ಸೆಗಳು ಮನುಷ್ಯನ ಆತ್ಮವಿಶ್ವಾಸವನ್ನು ನಡುಗಿಸುವುದಲ್ಲದೇ ತಲೆಯಲ್ಲಿರುವ ಕೂದಲನ್ನೆಲ್ಲಾ ಉದುರಿಸಿ ಬಿಡುತ್ತವೆ. ಸೌಂದರ್ಯದ ಒಂದು ಭಾಗವಾಗಿರುವ ಕೂದಲು ಉದುರಿ ಹೋಗುವುದರಿಂದ ಬಹುತೇಕ ರೋಗಿಗಳು ಬೇರೆಯವರೊಂದಿಗೆ ಬೆರೆಯಲು ಬಹಳವೇ ಕಷ್ಟ ಪಡುತ್ತಾರೆ. ವಿಶ್ವದಾದ್ಯಂತ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಕ್ಯಾನ್ಸರ್ ಅನೇಕರನ್ನು ಕಾಡಿದೆ.
ಈ ನಡುವೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪುಟ್ಟ ಬಾಲಕನೋರ್ವನನ್ನು ಆತನ ಸಹಪಾಠಿಗಳು ಬಹಳ ಆತ್ಮೀಯವಾಗಿ ಸ್ವಾಗತಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ತಲೆ ಬೋಳಿಸಿಕೊಂಡಿದ್ದ ಬಾಲಕನೋರ್ವನಿಗೆ ಆತನ ಸಹಪಾಠಿಗಳು ಕೂಡ ತಾವೂ ಕೂದಲನ್ನು ಸಂಪೂರ್ಣ ತೆಗೆದು ಬೋಳಾಗುವ ಮೂಲಕ ತಮ್ಮ ಪ್ರೀತಿಯನ್ನು ತೋರಿದ್ದು, ಈ ಪ್ರೀತಿಗೆ ಬಾಲಕ ಸಂಪೂರ್ಣ ಭಾವುಕನಾಗಿದ್ದಾನೆ.
ತಮ್ಮ ತಲೆಯನ್ನು ಸಂಪೂರ್ಣ ಶೇವ್ ಮಾಡುವ ಮೂಲಕ ಆತನ ತರಗತಿಯ ಬಾಲಕರು ಆತನಿಗೆ ಸರ್‌ಫ್ರೈಸ್ ನೀಡಿದ್ದಾರೆ. ಈ ಕ್ಷಣದ ವಿಡಿಯೋವನ್ನು ಗುಡ್‌ನ್ಯೂಸ್ ಮೂವ್‌ಮೆಂಟ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದೆ. ಒಂದು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಹಪಾಠಿಗಳ ನಡೆಗೆ ಬಾಲಕ ಸಂಪೂರ್ಣ ಅಚ್ಚರಿಗೆ ಒಳಗಾಗಿದ್ದ. ಬಾಲಕ ಆಗಷ್ಟೇ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಆರಂಭಿಸಿದ್ದು, ಆತನ ಆತ್ಮವಿಶ್ವಾಸ ಕಳೆಗುಂದದಂತೆ ಕಾಯಲು ಸ್ನೇಹಿತರೆಲ್ಲರೂ ಈ ರೀತಿ ಸಂಪೂರ್ಣ ತಲೆ ಬೋಳು ಮಾಡಿ ಬೋಲ್ಡ್ ಆಗಲು ಬಯಸಿದ್ದರು.
6 ವರ್ಷ ಕಷ್ಟ ಪಟ್ಟು ಬೆಳೆಸಿದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಸುಶ್ಮಿತಾ ಗೌಡ!
ವಿಡಿಯೋದಲ್ಲಿ ಕಾಣಿಸುವಂತೆ ಬಾಲಕರು ತಲೆ ಬೋಳಿಸಿ ಕ್ಯಾನ್ಸರ್ ಪೀಡಿತ ಬಾಲಕನನ್ನು ತಬ್ಬಿಕೊಂಡಿದ್ದಾರೆ. ಬಾಲಕ ಕೂಡ ನಗು ನಗುತ್ತಾ ತನ್ನ ಗೆಳೆಯರಿಗೆ ಕೃತಜ್ಞತೆ ಸಲ್ಲಿಸಿದ್ದಾನೆ. ಸಹಪಾಠಿಗಳ ಈ ಹೃದಯಸ್ಪರ್ಶಿ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಮಕ್ಕಳ ಸುಂದರವಾದ ನಡೆ ನನ್ನಲ್ಲಿ ಭರವಸೆ ಮೂಡಿಸುತ್ತಿದೆ ಹೋರಾಟ ಮುಂದುವರೆಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಾನವೀಯತೆಯೇ ಸೌಂದರ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Health Tips: ಕ್ಯಾನ್ಸರ್‌ನಿಂದ ಸಾಯಬಾರ್ದು ಅಂದ್ರೆ ಬೇಗ ಮದುವೆಯಾಗಿ ಅಂತಾರೆ ತಜ್ಞರು
ಇತ್ತೀಚಿನ ದಿನಗಳಲ್ಲಿ ಒತ್ತಡ (Stress) ಸಾಮಾನ್ಯ ಎನ್ನುವಂತಾಗಿದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಒತ್ತಡದ ಜೀವನ ನಡೆಸ್ತಿದ್ದಾರೆ. ಈ ಒತ್ತಡ ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಒತ್ತಡದಿಂದಾಗಿ ನಿದ್ರೆ ಸರಿಯಾಗಿ ಬರೋದಿಲ್ಲ. ನಿದ್ರೆ ಸರಿಯಾಗಿ ಬಂದಿಲ್ಲವೆಂದ್ರೆ ಇಡೀ ದೇಹ ಅಸ್ತವ್ಯಸ್ತಗೊಳ್ಳುತ್ತದೆ. ಹಾಗೆ ಮತ್ತೊಂದಿಷ್ಟು ಒತ್ತಡ ಕಾಡುತ್ತದೆ. ಕಳಪೆ ಗುಣಮಟ್ಟದ ನಿದ್ರೆ (sleep) ಯಿಂದ ಒತ್ತಡ ಹೆಚ್ಚಾಗ್ತಿದ್ದರೆ ಅದು ಮುಂದೆ ಖಿನ್ನತೆ, ಕ್ಯಾನ್ಸರ್ ಮರುಕಳಿಸುವಿಕೆ ಮತ್ತು ಅಕಾಲಿಕ ಮರಣದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಒತ್ತಡದ ಮಟ್ಟ ಮತ್ತು ನಿದ್ರೆ ಎರಡನ್ನೂ ಸುಧಾರಿಸಲು ದೈಹಿಕ ಚಟುವಟಿಕೆಯು ಮುಖ್ಯವಾಗಿದೆ. ಸ್ತನ ಕ್ಯಾನ್ಸರ್ ಹೊಂದಿರುವ ಶೇಕಡಾ 60 ರಷ್ಟು ಮಹಿಳೆಯರು ಹಾಗೂ ಕ್ಯಾನ್ಸರ್ ಇಲ್ಲದ ಶೇಕಡಾ 40ರಷ್ಟು ಪುರುಷ ಹಾಗೂ ಮಹಿಳೆಯರ ಮೇಲೆ ಅಧ್ಯಯನವೊಂದನ್ನು ನಡೆಸಲಾಗಿದೆ. ಈ ಅಧ್ಯಯನದ ನಂತ್ರ ವ್ಯಾಯಾಮವು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಸುಧಾರಿಸಲು ಪರಿಣಾಮಕಾರಿಯಾಗಿದೆ ಎಂಬುದು ಬಹಿರಂಗವಾಗಿದೆ. ದೈಹಿಕ ಚಟುವಟಿಕೆಯು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಜನರು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳೂ ದೃಢಪಡಿಸಿವೆ.