6 ವರ್ಷ ಕಷ್ಟ ಪಟ್ಟು ಬೆಳೆಸಿದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಸುಶ್ಮಿತಾ ಗೌಡ!
ಪ್ರೀತಿಯಿಂದ ಬೆಳೆಸಿದ ಕೂದಲು ದಾನ ಮಾಡಿ ಅನೇಕರಿಗೆ ಮಾದರಿ ಆದ ಲವ್ ಮಾಕ್ಟೇಲ್ ನಟಿ ಸುಶ್ಮಿಕಾ ನಟಿ.............
ಸೋಷಿಯಲ್ ಮೀಡಿಯಾ influencer, ಲವ್ ಮಾಕ್ಟೇಲ್ 2 ನಟಿ ಸುಶ್ಮಿತಾ ಗೌಡ ಪ್ರೀತಿಯಿಂದ ಬೆಳೆಸಿದ ತಮ್ಮ ಉದ್ದವಾದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ನೂರಾರು ಜನರಿಗೆ ಮಾದರಿ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಸುಶ್ಮಿತಾ ಫೋಟೋ ಹಂಚಿಕೊಂಡು ಹೆಣ್ಣಿಗೆ ಕೂದಲು ಎಷ್ಟು ಮುಖ್ಯವಾಗುತ್ತದೆ ಇಷ್ಟು ಉದ್ದವಾದ ಕೂದಲು ಬೆಳೆಸಲು ಎಷ್ಟು ಸಮಯ ತೆಗೆದುಕೊಂಡರು ಎಂದು ಬರೆದುಕೊಂಡಿದ್ದಾರೆ.
ಸುಶ್ಮಿತಾ ಪೋಸ್ಟ್:
'ನನ್ನ ಜೀವನದಲ್ಲಿ ನನಗೆ ಅತಿ ಹೆಚ್ಚು ಅಮೂಲ್ಯವಾದದ್ದು ನನ್ನ ಕೂದಲು. ಅದು ಬೆಳೆಯುತ್ತ ನನ್ನನ್ನು ಬೆಳೆಸಿದೆ. ಜೀವನದಲ್ಲಿ ಯಾವುದು ಅಸಾಧ್ಯವಲ್ಲ ಅನ್ನುವ ನಂಬಿಕೆ ಕೊಟ್ಟಿದೆ. ಸುಂದರವಾದ ಉದ್ದ ಕೂದಲ ಇರಬೇಕು ಅನ್ನೋದು ನನ್ನ ಕನಸು. ನೀವೆಲ್ಲಾ ನೋಡುತ್ತಿರುವ ಕೂದಲನ್ನು ಬೆಳೆಸುವುದಕ್ಕೆ ನಾನು 6 ವರ್ಷ ತೆಗೆದುಕೊಂಡಿರುವೆ. ರಾತ್ರೋರಾತ್ರಿ ಏನೂ ಅಗುವುದಿಲ್ಲ ಹಾಗೆ ನನ್ನ ಕೂದಲು ಕೂಡ, ಹೆಚ್ಚಿನ ಸಮಯ ಮತ್ತು ಶ್ರದ್ಧೆ ಬೇಕಿತ್ತು. ನನ್ನ ಜೀವನದಲ್ಲಿ ದೊಡ್ಡ ತಿರುವುಗಳು ಸಿಕ್ಕಿರುವುದೇ ನನ್ನ ಕೂದಲಿನಿಂದ. ಇಂದು ಅನೇಕ ವಿಚಾರಗಳಿಗೆ ನಾನು ಗ್ರೇಟ್‌ಫುಲ್. ಈ ಗ್ರ್ಯಾಟಿಟ್ಯೂಡ್‌ಗೆ ನಾನು ನನ್ನ ಕೂದಲನ್ನು ದಾನ ಮಾಡಿರುವೆ. ನಮ್ಮ ಸುತ್ತಲಿರುವ ರಿಯಲ್ ಫೈಟರ್‌ಗಳಿಗೆ ಸಹಾಯ ಮಾಡಲು ಎಂದೂ ಎರಡು ಬಾರಿ ಯೋಚಿಸಬೇಡಿ. ಕೆಲವೊಮ್ಮೆ ಈ ರೀತಿಯ ಸಣ್ಣ ಪುಟ್ಟ ವಿಚಾರಗಳು ನಮ್ಮ ಮನಸ್ಸಿನಲ್ಲಿ ದೊಡ್ಡ ಜಾಗ ತೆಗೆದುಕೊಳ್ಳುತ್ತದೆ.' ಎಂದು ಸುಶ್ಮಿತಾ ಬರೆದುಕೊಂಡಿದ್ದಾರೆ.
ನಮ್ಮ ಭಾಗ ಯಾರೋ ಕಿತ್ಕೊಳ್ತಿದ್ದಾರೆ ಅನ್ಸುತ್ತೆ; 13 inch ಕೂದಲ ದಾನ ಮಾಡಿದ ನಟಿ!
ಐಟಿ ಕೆಲಸ ಬಿಟ್ಟು ಜೀವನಕ್ಕೆ ದಾರಿ ಹುಡುಕುವಾಗ ಸುಶ್ಮಿಕಾ ಆಯ್ಕೆ ಮಾಡಿಕೊಂಡಿದ್ದು ಕೂದಲು. ಹೌದು! ಚಿಕ್ಕ ವಯಸ್ಸಿನಿಂದಲ್ಲೂ ಅಜ್ಜಿ ಸಲಹೆ ಮಾಡಿದ ರೀತಿಯಲ್ಲಿ ಕೂದಲಿಗೆ ಎಣ್ಣೆ ಹಚ್ಚುತ್ತಿದ್ದ ಸುಶ್ಮಿತಾ ಅದೇ ಪದಾರ್ಥಗಳನ್ನು ಬಳಸಿಕೊಂಡು ಕೂದಲು ಎಣ್ಣೆ ತಯಾರಿಸಿ ಒಂದು ಕೂದಲು ಎಣ್ಣೆಯ ಬ್ರ್ಯಾಂಡ್ ಕೂಡ ಓಪನ್ ಮಾಡಿದ್ದರು. ಲಕ್ಷಾಂತರ ಜನರು ಈ ಕೂದಲು ಎಣ್ಣೆಯನ್ನು ಬಳಸಿ ದೊಡ್ಡ ಬದಲಾವಣೆ ಕಂಡಿದ್ದಾರೆ. ಇದಾದ ನಂತರ ಸುಶ್ಮಿತಾ ಸ್ಕಿನ್ ಕೇರ್ ಪ್ರಾಡೆಕ್ಟ್ ಮತ್ತು ಮೂಗುತ್ತಿ ಬ್ಯುಸಿನೆಸ್ ಆರಂಭಿಸಿದ್ದರು.
ತಿರುಪತಿಯಲ್ಲಿ ಕೂದಲು ಕೊಡೋದ್ರ ಹಿಂದಿದೆ ರೋಚಕ ಕತೆ!
ಲವ್ ಮಾಕ್ಟೇಲ್ ಸಿನಿಮಾದಲ್ಲಿ ಬ್ರೋಕರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಶ್ಮಿತಾಗೆ ಹೈಲೈಟ್ ಅವರ ಮೂಗುತ್ತಿ ಮತ್ತು ಕೂದಲು. ಸಿನಿಮಾ ನೋಡಿ ಅನೇಕರು ಅವರಿಗೆ ಮೆಸೇಜ್ ಮಾಡಿ ಕೂದಲು ಬಗ್ಗೆ ವಿಚಾರಿಸಿದ್ದಾರೆ.
ಇನ್‌ಸ್ಟಾಗ್ರಾಂ ಜೀವನ ರೂಪಿಸಿಕೊಳ್ಳಲು ಹೇಗೆ ಸಹಾಯ ಮಾಡಿದೆ, ಕೂದಲು ಎಣ್ಣೆಯ ಬ್ಯುಸಿನೆಸ್ ಶುರು ಮಾಡಿದ್ದು ಹೇಗೆ?
ನಾನು ಇಲ್ಲಿ ತನಕ ಬರುವುದಕ್ಕೆ ಕಾರಣವೇ ಸೋಷಿಯಲ್ ಮೀಡಿಯಾ. ಇದನ್ನು ಒಂದು opportunity ಅಗಿ ನೋಡಿದ್ದೀನಿ. ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅವರು ನನ್ನನ್ನು ಟರ್ಮಿನೇಟ್ ಮಾಡಿದರು. ಆಗ ಏನು ಮಾಡಬೇಕೆಂಬುವುದೇ ಗೊತ್ತಿರಲಿಲ್ಲ. ಆದರೆ ತುಂಬಾ ಜನರು ನನ್ನನ್ನು ಫಾಲೋ ಮಾಡುತ್ತಿದ್ದರು. ಅದು ನನ್ನ ಕೂದಲಿಗೋಸ್ಕರ. ತುಂಬಾ ಜನರು ಕೇಳುತ್ತಿದ್ದರು, ನನ್ನ ಹೇರ್‌ಕೇರ್ ಏನು ಅಂತ. ಈ ಬ್ಯುಸಿ ಜೀವನದಲ್ಲಿ ಎಲ್ಲರಿಗೂ ಕೇರ್ ಮಾಡುವುದಕ್ಕೆ ಕಷ್ಟ ಆಗುತ್ತದೆ. ಅದಕ್ಕೆ ನಾನೇ ಯಾಕೆ ಒಂದು ಹೇರ್‌ಕೇರ್ ಬ್ರ್ಯಾಂಡ್ ಶುರು ಮಾಡಬಾರದು, ಎಂದುಕೊಂಡು ಶುರು ಮಾಡಿದೆ. ಇದು ನಮ್ಮ ಹಿರಿಯರು ಬಳಸುತ್ತಿದ್ದ ರೆಸಿಪಿ, ನನ್ನ ತಾಯಿ ಮನೆಯಲ್ಲಿಯೇ ಮಾಡಿ ನನಗೆ ಹಾಕುತ್ತಿದ್ದರು. ಇದು ಬಿಟ್ಟು ಬೇರೆ ಯಾವುದನ್ನೂ ನಾನು ಕೂದಲ ಪೋಷಣೆಗೆ ಬಳಸುತ್ತಿರಲಿಲ್ಲ. ನಾನು ಮತ್ತು ನನ್ನ ಬೆಸ್ಟ್ ಫ್ರೆಂಡ್ ಸೇರಿಕೊಂಡು ಈ ಬ್ರ್ಯಾಂಡ್ ನೋಡಿಕೊಳ್ಳುತ್ತಿದ್ದೇವೆ.