Asianet Suvarna News Asianet Suvarna News

ಮಕ್ಕಳ ಪ್ರೀತಿನೇ ಹೀಗೆ..! ನಂಗೆ ಅಪ್ಪ-ಅಮ್ಮ ಬೇಡ, ಕಿಡ್ನಾಪರ್ ಅಂಕಲ್ ನೀವೇ ಬೇಕೆಂದ ಮಗು!

ಎರಡು ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿದ ವ್ಯಕ್ತಿಯೇ ನನಗೆ ಬೇಕು, ಅಪ್ಪ ಅಮ್ಮ ಬೇಡವೆಂದು ಕಣ್ಣೀರು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Children love two year kid wanted kidnapper and did not want parents sat
Author
First Published Sep 5, 2024, 7:19 PM IST | Last Updated Sep 5, 2024, 7:19 PM IST

ವೈರಲ್ ವಿಡಿಯೋ: ಮಗುವನ್ನು ತುಂಬಾ ಮುದ್ದಾಗಿ ನೋಡಿಕೊಂಡಿದ್ದಾನೆ. ಪೊಲೀಸರು ಕಿಡ್ನಾಪರ್‌ನನ್ನು ಪತ್ತೆಹಚ್ಚಿ ಮಗುವನ್ನು ತಂದೆ ತಾಯಿಗೆ ಒಪ್ಪಿಸಿದರೆ ಆ ಮಗು ಅವರ ಬಳಿ ಹೋಗಲು ಸಿದ್ಧವಿಲ್ಲ. ನನಗೆ ಅಪ್ಪ ಅಮ್ಮ ಬೇಡ, ನನಗೆ ಕಿಡ್ನಾಪರ್ ಅಂಕಲ್ ಬೇಕೆಂದು ಹಠವಿಡಿದು ಅಳುತ್ತಿರುವ ದೃಶ್ಯ ವೈರಲ್ ಆಗುತ್ತಿದೆ. ಈ ಕಂದಮ್ಮನ ಪ್ರೀತಿಯನ್ನು ಕಂಡ ಕಿಡ್ನಾಪರ್ ಕೂಡ ಕಣ್ಣೀರಿಟ್ಟಿದ್ದಾನೆ.

ಹೌದು, ಅಪ್ಪ ಅಮ್ಮನಿಂದ ಮಗುವನ್ನು ದೂರ ಮಾಡಿದರೆ ಅಳುತ್ತಾರೆ. ಆದರೆ, ಇಲ್ಲಿ ಮಗು ನಂಗೆ ಅಪ್ಪ ಅಮ್ಮನೇ ಬೇಡೆವೆನ್ನುತ್ತಿರುವ ವಿಚಿತ್ರ ಘಟನೆ ನಡೆದಿದೆ. ಎರಡು ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿದ ವ್ಯಕ್ತಿಯೇ ನನಗೆ ಬೇಕು, ಅಪ್ಪ ಅಮ್ಮ ಬೇಡವೆಂದು ಕಣ್ಣೀರು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ರಾಜಸ್ಥಾನ ರಾಜ್ಯದ ಜೈಪುರದಲ್ಲಿ ನಡೆದಿದೆ. ಮಗು ಕಿಡ್ನಾಪ್ ಮಾಡಿದ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು, ಮಗುವನ್ನು ಆತನಿಂದ ಪಡೆದು ತಂದೆ ತಾಯಿ ಮಡಿಲಿಗೆ ಸೇರಿಸುವಷ್ಟರಲ್ಲಿ ಸುಸ್ತಾಗಿ ಹೋಗಿದ್ದಾರೆ. ಆರೋಪಿಯನ್ನು ಅಪ್ಪಿಕೊಂಡ ಮಗು ನಾನು ಈತನನ್ನು ಬಿಟ್ಟು ಬರಲಾರೆ ಎಂದು ಜೋರಾಗಿ ಅಳುತ್ತಾ ಕೂಗಾಡಿದೆ. ಅಷ್ಟಕ್ಕೂ ಮಗುವನ್ನು ಕಿಡ್ನಾಪ್ ಮಾಡಿದ ವ್ಯಕ್ತಿಯ ಹಿನ್ನೆಲೆಯನ್ನು ಕೇಳಿದರೆ ನೀವು ಕೂಡ ಬೆರಗಾಗುತ್ತೀರಿ.

ಬೆಂಗಳೂರು ಏರ್‌ಪೋರ್ಟ್ ನೋಡಿ ಅಮೇರಿಕಾಕ್ಕಿಂತಲೂ ಸೂಪರ್ ಆಗಿದೆ ಎಂದ ಯುಎಸ್ ಖ್ಯಾತ ಯ್ಯೂಟೂಬರ್!

ಇಲ್ಲಿದೆ ನೋಡಿ ಘಟನೆಯ ಹಿನ್ನೆಲೆ: ರಾಜಸ್ಥಾನದ ನೆರೆಹೊರೆ ರಾಜ್ಯ ಉತ್ತರ ಪ್ರದೇಶದ ರಿಸರ್ವ್ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ತನುಜ್ ಚಹರ್ ಯಾವುದೋ ಪ್ರಕರಣವೊಂದರಲ್ಲಿ ಸಿಲುಕಿ ಅಮಾನತು ಆಗಿದ್ದರು. ಆಗ ಬೇಸರದಲ್ಲಿದ್ದ ತನುಜ್ ಚಹರ್ ರಾಜಸ್ಥಾನಕ್ಕೆ ತೆರಳಿದ್ದಾಗ ಅಲ್ಲಿ ಆಟವಾಡುತ್ತಿದ್ದ 8 ತಿಂಗಳ ಮಗುವನ್ನು ಕಿಡ್ನಾಪ್ ಮಾಡಿದ್ದನು. ನಂತರ ಮಗುವನ್ನು ಉತ್ತರ ಪ್ರದೇಶ ಸೇರಿದಂತೆ ವಿವಿಧಡೆ ಸಂಚಾರ ಮಾಡುತ್ತಾ ಪ್ರೀತಿಯಿಂದ ಸಾಕಿದ್ದಾನೆ. ಜೊತೆಗೆ, ತನ್ನನ್ನು ಯಾರೂ ಗುರುತಿಸದಂತೆ ಗಡ್ಡ ಬೆಳೆಸಿಕೊಂಡು ಚಹರೆಯನ್ನೇ ಬದಲಿಸಿಕೊಂಡಿದ್ದಾನೆ. ಇತ್ತ ಬಾಲಕ ಕಳೆದುಹೋದ ಬಗ್ಗೆ ಪೋಷಕರು ಫೋಟೋ ಕೊಟ್ಟು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ನಂತರ, ಪೊಲೀಸರಿಗೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ತನುಜ್ ಚಹರ್ ಮಗು ಕಿಡ್ನಾಪ್ ಮಾಡಿದ ಸುಳಿವು ಸಿಕ್ಕಿದ್ದು, ಆತನ ಬೆನ್ನು ಬಿದ್ದಿದ್ದಾರೆ. ಕೊನೆಗೆ 14 ತಿಂಗಳ ನಂತರ ಈತ ಮಗುವಿನ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನ್ನು ಅಲಿಗಢ ಪ್ರದೇಶದಲ್ಲಿ ಬಂಧಿಸಿ ಪೊಲೀಸ್ ಠಾಣೆಗೆ ಕರೆತರಲಾಗಿದೆ.

ಕನ್ನಡದ ಮೊದಲ ಕವಯತ್ರಿ ಅಕ್ಕ ಮಹಾದೇವಿಯ ಬಗ್ಗೆ ಅಕ್ಕರೆಯಿಂದ ಮಾತನಾಡಿದ ಕ್ವೀನ್‌ ಕಂಗನಾ!

ಕಿಡ್ನಾಪರ್ ಬಿಟ್ಟು ಹೋಗದ ಮಗು: ಕೇವಲ 8 ತಿಂಗಳ ಮಗುವಾಗಿದ್ದರಿಂದ 2 ವರ್ಷಗಳಾಗುವವರೆ (16 ತಿಂಗಳು) ಮಗು ಪೃಥ್ವಿ ಅಪಹರಣಕಾರನೇ ತನ್ನ ಅಪ್ಪನೆಂದು ಭಾವಿಸಿ ಆತನ ಬಳಿಯಲ್ಲೇ ಬೆಳೆದಿದೆ. ಇನ್ನು ಮಗು ಹಠ ಮಾಡಿದ್ದನ್ನೆಲ್ಲಾ ಕಿಡ್ನಾಪರ್ ತಂದುಕೊಟ್ಟಿ ಅದಕ್ಕೆ ಪ್ರೀತಿಯನ್ನು ತೋರಿಸಿ ಬೆಳೆಸಿದ್ದಾನೆ. ಇಬ್ಬರ ನಡುವೆಯೂ ಒಂದು ಬಾಂಧವ್ಯ ಬೆಳೆದುಬಿಟ್ಟಿದೆ. ಇನ್ನು ಪೊಲೀಸ್ ಠಾಣೆಗೆ ಆತನನ್ನು ಕರೆತಂದು ಮಗುವನ್ನು ತಂದೆ ತಾಯಿಗೆ ಒಪ್ಪಿಸುವಾಗ ಮಗು ಆತನನ್ನು ಬಿಟ್ಟು ತಂದೆ-ತಾಯಿಯರ ಬಳಿ ಹೋಗುವುದಿಲ್ಲ ಎಂದು ಹಠ ಮಾಡಿದೆ. ಇನ್ನು ನಾನು ಆತನನ್ನು ಬಿಟ್ಟು ಹೋಗುವುದಿಲ್ಲ ಎಂದು ರಚ್ಚೆ ಹಿಡಿದು ಅಳುತ್ತಿರುವ ದೃಶ್ಯವನ್ನು ನೋಡಿದರೆ ಎಂಥವರಿಗೂ ಕಣ್ಣೀರು ಬರುತ್ತದೆ. ಇನ್ನು ಕಳೆದ 14 ತಿಂಗಳು ಮಗುವನ್ನು ಪ್ರೀತಿಯಿಂದ ಸಾಕಿ ಅವರ ತಂದೆ ತಾಯಿಗೆ ಒಪ್ಪಿಸುವಾಗ ಅಪಹರಣಕಾರನೂ ಗೊಳೋ ಎಂದು ಕಣ್ಣೀರಿಟ್ಟಿದ್ದಾನೆ. ಆದರೂ, ಕಿಡ್ನಾಪರ್‌ನಿಂದ ಮಗುವನ್ನು ಬಲವಂತವಾಗಿ ಕಿತ್ತುಕೊಂಡ ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ.

Latest Videos
Follow Us:
Download App:
  • android
  • ios