Asianet Suvarna News Asianet Suvarna News

ಕನ್ನಡದ ಮೊದಲ ಕವಯತ್ರಿ ಅಕ್ಕ ಮಹಾದೇವಿಯ ಬಗ್ಗೆ ಅಕ್ಕರೆಯಿಂದ ಮಾತನಾಡಿದ ಕ್ವೀನ್‌ ಕಂಗನಾ!

ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಾಣಾವತ್ ಅವರು ಖಾಸಗಿ ಸಂದರ್ಶನವೊಂದರಲ್ಲಿ ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ ಬಗ್ಗೆ ಹಾಡಿ ಹೊಗಳಿದ್ದಾರೆ. ಉತ್ತರ ಭಾರತದ ಮೀರಾಬಾಯಿ ಅವರಂತೆಯೇ ಕರ್ನಾಟಕದಲ್ಲಿ ಅಕ್ಕ ಮಹಾದೇವಿ ಶಿವನ ಮೇಲೆ ತುಂಬಾ ಪ್ರೀತಿ, ಭಕ್ತಿಯನ್ನು ತೋರಿಸಿದ್ದರು ಎಂದು ಕಂಗನಾ ಹೇಳಿದ್ದಾರೆ.

MP Kangana Ranaut praised Kannada first poetess Akka Mahadevi sat
Author
First Published Sep 5, 2024, 3:47 PM IST | Last Updated Sep 5, 2024, 3:47 PM IST

ಬಾಲಿವುಡ್ ನಟಿಯಾಗಿದ್ದ ಕಂಗನಾ ರಾಣಾವತ್ ಅವರು ಹಲವು ವಿವಾದದ ಮಾತುಗಳನ್ನಾಡುತ್ತಾ ಸುದ್ದಿಯಲ್ಲಿರುತ್ತಿದ್ದವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿ ಸಂಸದೆಯಾಗಿ ಲೋಕಸಭೆಯಲ್ಲಿ ಕುಳಿತಿದ್ದಾರೆ. ಆದರೆ, ದೇಶದ ಮಹಿಳಾಮಣಿಯರ ಬಗ್ಗೆ ಅವರಿಗಿರುವ ಜ್ಞಾನಕ್ಕೆ ಎಲ್ಲರೂ ಒಮ್ಮೆ ಸೆಲ್ಯೂಟ್ ಹೊಡೆಯಲೇಬೇಕು. ಕನ್ನಡ ಬಿಟ್ಟು ಬೇರಾವ ಭಾಷೆಯ ಪಠ್ಯದಲ್ಲಿಯೂ ಮುದ್ರಣಗೊಳ್ಳದ ಕನ್ನಡದ ಮೊದಲ ಕವಯಿತ್ರಿ, ಶ್ರೇಷ್ಠ ವಚನಕಾರ್ತಿ ಅಕ್ಕಮಹಾದೇವಿ ಬಗ್ಗೆ ಹಾಡಿ ಹೊಗಳಿದ್ದಾರೆ.

ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಸಂಸದೆ ಕಂಗನಾ ರಾಣಾವತ್ ಅವರು, ನಮ್ಮ ದೇಶದಲ್ಲಿ ಮಹಿಳೆಯರ ಬಗ್ಗೆ ಮಾತನಾಡಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ. ಮೀರಾಬಾಯಿ ಅವರ ಪ್ರೀತಿಯ ತುಂಬಾ ದೊಡ್ಡದು ಎಂದು ಹೇಳುತ್ತಾರೆ. ಉತ್ತರ ಭಾರತದಲ್ಲಿ ಮೀರಾಬಾಯಿ ಅವರಂತೆಯೇ ಕರ್ನಾಟಕದಲ್ಲಿ ಅಕ್ಕ ಮಹಾದೇವಿ (ಮಹದೇವಿ ಅಕ್ಕ) ಅವರು ಶಿವನ ಮೇಲೆ ತುಂಬಾ ಪ್ರೀತಿ, ಭಕ್ತಿಯನ್ನು ತೋರಿಸುತ್ತಿದ್ದ ಬಗ್ಗೆ ಮಾತನಾಡಿದ್ದಾರೆ. ಮಹದೇವಿ ಅಕ್ಕ ಅವರು 12ನೇ ಶತಮಾನದ ಕರ್ನಾಟಕದ ಶ್ರೇಷ್ಠ ಕವಯಿತ್ರಿ ಆಗಿದ್ದಾರೆ. ಅವರು ಉತ್ತರ ಭಾರತದ ಶ್ರೇಷ್ಠ ಕವಯಿತ್ರಿ ಮೀರಾಬಾಯಿ ಅವರಂತೆ ಅಲ್ಲಿ ಸಾಹಿತ್ಯ ಕಾರ್ಯಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: ದಾಂಪತ್ಯ ಜೀವನ ಸುಖವಾಗಿ ನಡೆಯೋದು ಇದಕ್ಕಂತೆ! ಲಕ್ಷ ಲೈಕ್ಸ್‌ ಪಡೆದ ಕಂಗನಾ ಮಾತಿಗೆ ಪುರುಷರು ಗರಂ

ಅಕ್ಕಮಹದೇವಿ ಅವರು ರಾಜನೊಬ್ಬನನ್ನು ಮದುವೆ ಮಾಡಿಕೊಂಡು ಮಹಾರಾಣಿ ಆಗಿರುತ್ತಾರೆ. ಆದರೆ, ರಾಜನೊಂದಿಗೆ ಯಾವುದೇ ವೈವಾಹಿಕ ಸಂಬಂಧವನ್ನು ಬೆಳೆಸದೇ ನಾನು ಶಿವನನ್ನು ಮದುವೆ ಮಾಡಿಕೊಂಡಿದ್ದೇನೆ. ಶಿವನೇ ನನ್ನ ಗಂಡನಾಗಿದ್ದಾನೆ ಎಂದು ಹೇಳುತ್ತಾಳೆ. ಆಗ ರಾಜನ ಆಸ್ಥಾನದಲ್ಲಿ ಪಂಚಾಯಿತಿ ಕರೆದಾಗ ನಾನು ಶಿವನನ್ನು ಮದುವೆ ಮಾಡಿಕೊಂಡಿದ್ದು, ಯಾರೊಂದಿಗೂ ನಾನು ಸಂಸಾರ ಮಾಡುವುದಿಲ್ಲ ಎಂದು ಹೇಳುತ್ತಾಳೆ. ಆಗ ಪಂಚಾಯಿತಿಯಲ್ಲಿದ್ದವರು ನೀವು ಹಲವು ದಿನಗಳಿಂದ ಶಿವ ಶಿವ ಎಂದು ಹೇಳುತ್ತಿದ್ದೀರಿ. ಆದರೆ, ಇಲ್ಲಿರುವವರು ನಿಮ್ಮ ಪತಿ. ಇವರು ನಿಮಗೆ ವಸ್ತ್ರ, ಉಡುಗೆ, ಆಭರಣ, ಆಶ್ರಯ ಎಲ್ಲವನ್ನೂ ನೀಡಿದ್ದಾನೆ ಎಂದು ಹೇಳುತ್ತಾರೆ. ಆಗ ಅಕ್ಕಮಹಾದೇವಿ ಅವರು ತಮ್ಮ ಮೇಲಿದ್ದ ಎಲ್ಲ ಒಡವೆ, ವಸ್ತ್ರ ಹಾಗೂ ಎಲ್ಲವನ್ನೂ ತ್ಯಜಿಸಿ ನಿರ್ವಸ್ತ್ರರಾಗುತ್ತಾರೆ. ತನಗೆ ಶಿವ ಕೊಟ್ಟ ಕೂದಲಿನಿಂದಲೇ ನನ್ನ ದೇಹ ಮುಚ್ಚಿಕೊಳ್ಳುತ್ತೇನೆಂದು ಹೇಳಿ ಅಲ್ಲಿಂದ ಹೊರಡುತ್ತಾರೆ. ಅವರೊಬ್ಬ ಕನ್ನಡದ ಪ್ರಸಿದ್ಧ ಕವಯಿತ್ರಿ ಆಗಿದ್ದಾರೆ ಎಂದು ನಟಿ ಹಾಗೂ ಸಂಸದೆ ಕಂಗನಾ ರಾಣಾವತ್ ಮಾಹಿತಿ ನೀಡಿದ್ದಾರೆ.

ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ ಅವರ ಬಗ್ಗೆ ಕರ್ನಾಟಕದ ಕನ್ನಡ ಪಠ್ಯದಲ್ಲಿ ಬಿಟ್ಟರೆ ಬೇರಾವ ರಾಜ್ಯದ ಬೇರೆ ಭಾಷೆಗಳ ಪಠ್ಯಗಳಲ್ಲಿ ಅಕ್ಕಮಹಾದೇವಿ ಬಗ್ಗೆ ಇಷ್ಟೊಂದು ಧೀರ್ವಾದ ವಿಷಯವನ್ನು ಅಥವಾ ಪಾಠವನ್ನು ಅಳವಡಿಕೆ ಮಾಡಿಲ್ಲ. ಆದರೆ, ಭಾರತದ ಒಬ್ಬ ಸಂಸದೆಯಾಗಿ ವಿದ್ಯಾಭ್ಯಾಸದ ವೇಳೆ ಅಧ್ಯಯನ ಮಾಡಿದ ಸಾಹಿತಿಗಳು ಹಾಗೂ ಮಹಿಳಾಮಣಿಗಳ ಹೊರತಾಗಿ ಬೇರೆ ಯಾವ ರಾಜ್ಯಗಳಲ್ಲಿ ಯಾರಾರು ಪ್ರಸಿದ್ಧ ಮಹಿಳೆಯರಿದ್ದಾರೆ ಎಂಬ ಬಗ್ಗೆ ಅಧ್ಯಯನ ಮಾಡಿದ್ದಾರೆ. ಆಗ ಕರ್ನಾಟಕದ ಅಕ್ಕಮಹಾದೇವಿ ಅವರ ಬಗ್ಗೆಯೂ ಅಧ್ಯಯನ ಮಾಡಿದ್ದು, ಸಂದರ್ಶನವೊಂದರಲ್ಲಿ ಹಿಂದಿ ಕವಯಿತ್ರಿ ಮೀರಾಬಾಯಿ ಬಗ್ಗೆ ಮಾತನಾಡುವಾಗ ಅಕ್ಕಮಹಾದೇವಿ ಅವರ ಬಗ್ಗೆಯೂ ಮಾತನಾಡಿದ್ದಾರೆ.

ಇದನ್ನೂ ಓದಿ: ಪತ್ನಿ ವಿಜಯಲಕ್ಷ್ಮೀ ಊಟ ತರ್ತಾಳೆಂದು ಜೈಲೂಟ ಬಿಟ್ಟು ಕುಳಿತ ನಟ ದರ್ಶನ್!

ದೇಶದಲ್ಲಿ ರೈತರ ಕುರಿತು ನೀಡಿದ ಹೇಳಿಕೆಯಿಂದ ಬಿಜೆಪಿ ಹೈಕಮಾಂಡ್ ಕಂಗಣ್ಣಿಗೆ ಗುರಿಯಾಗಿರುವ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ, ಬಾಲಿವುಡ್ ನಟಿ ಕಂಗನಾ ರಣಾವತ್ ಈ ಹಿಂದೆಯೂ ಹಲವು ವಿವಾದಾತ್ಮಕ ಮಾತುಗಳನ್ನಾಡಿದ್ದರು. ಆದ್ದರಿಂದ ಬಿಜೆಪಿ ಪಕ್ಷದ ನೀತಿಗಳು ಹಾಗೂ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡದಂತೆ ಕಂಗನಾ ರಣಾವತ್ ಮೇಲೆ ನಿಷೇಧ ವಿಧಿಸಲಾಗಿದೆ. ಹೀಗಾಗಿ, ಇದೀಗ ದೇಶದ ಅನೇಕ ಮಹಿಳಾ ಸಾದ್ವಿನಿಯರ ಬಗ್ಗೆ ಮಾತನಾಡುತ್ತಿದ್ದಾರೆ. ಸಂಸದೆಯಾಗಿ ಯಾವ ರೀತಿಯ ತಿಳುವಳಿಕೆ ಇರಬೇಕು ಎಂಬುದನ್ನು ತಿಳಿದುಕೊಂಡು ಅಧ್ಯಯನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ವಿದ್ಯಾಭ್ಯಾಸ ಮಾಡುವಾಗ ಪಠ್ಯವೇ ಇಲ್ಲದ ಕನ್ನಡದ ವಚನಕಾರ್ತಿ ಅಕ್ಕಮಹಾದೇವಿಯ ಬಗ್ಗೆ ಅಧ್ಯಯನ ಮಾಡಿ ತಿಳಿದಿಕೊಂಡು ಮಾತನಾಡಿದ್ದು, ಇದೀಗ ನಿಮ್ಮ ಸಂಸಸೆ ಸ್ಥಾನಕ್ಕೆ ಗೌರವ ಸಿಗುತ್ತಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios