ಮೊಬೈಲ್‌ನಿಂದಾಗಿಯೇ ಹಿರಿಯನ್ನು ಇಗ್ನೋರ್ ಮಾಡ್ತಿದ್ದಾರೆ ಮಕ್ಕಳು, ನಿಮಗೂ ಹೀಗನ್ಸುತ್ತಾ?

ಫೋನ್ ಇದ್ರೆ ಪ್ರಪಂಚ ಮರೆತು ಹೋಗುತ್ತೆ. ಸಮಯ ಸರಿದಿದ್ದು ತಿಳಿಯೋದಿಲ್ಲ. ಹಾಗೆ ಮನೆಯಲ್ಲಿರುವವರ ನೆನಪಿರೋದಿಲ್ಲ. ಇದು ವೃದ್ಧರಿಗೆ ದೊಡ್ಡ ಸಮಸ್ಯೆಯಾಗಿದೆ. ಅನೇಕ ಕಾರಣಕ್ಕೆ ಕೆಲಸವಿಲ್ಲದೆ ಮನೆಯಲ್ಲಿರುವ ವೃದ್ಧರನ್ನು ಮೊಬೈಲ್ ಹೆಸರಿನಲ್ಲಿ ಮಕ್ಕಳು ನಿರ್ಲಕ್ಷ್ಯ ಮಾಡ್ತಿದ್ದಾರೆ.
 

Children Are Ignoring The Elders Of The House Because Of The smartphone

ಮೊಬೈಲ್ ಸದ್ಯ ಎಲ್ಲರ ಅಚ್ಚುಮೆಚ್ಚು. ಮೊಬೈಲ್ ಇಲ್ಲದೆ ಒಂದು ಕ್ಷಣ ಇರಲು ಸಾಧ್ಯವಿಲ್ಲ ಎನ್ನುವವರಿದ್ದಾರೆ. ದಿನದಲ್ಲಿ ಒಂದು 10 ಗಂಟೆಯಾದ್ರೂ ಪದೇ ಪದೇ ಮೊಬೈಲ್ ನೋಡುವ ಜನರ ಸಂಖ್ಯೆಯೇ ಹೆಚ್ಚು. ಮನೆಯಲ್ಲಿ ನಾಲ್ಕು ಜನರಿದ್ರೆ ನಾಲ್ಕು ಜನರ ಕೈನಲ್ಲಿ ಮೊಬೈಲ್ ಇರುತ್ತದೆ. ಹಿಂದೆ ಒಟ್ಟಿಗೆ ಕುಳಿತು ಊಟ ಮಾಡ್ತಿದ್ದವರು, ಒಟ್ಟಿಗೆ ಕುಳಿತು ಮಾತನಾಡ್ತಿದ್ದವರು ಈಗ ಪರಿಚಯವಿಲ್ಲದೆ ಇರ್ತಿದ್ದಾರೆ. ಮನೆಯಲ್ಲಿ ನೀರವ ಮೌನವಿರುತ್ತದೆ. ಮೊಬೈಲ್ ನಲ್ಲಿ ಬರುವ ಜೋಕ್ ನೋಡಿ ನಗುವ ಹಾಗೂ ಮೊಬೈಲ್ ನಲ್ಲಿ ಬರುವ ಸಂದೇಶಕ್ಕೆ ಉತ್ತರ ನೀಡಲು ಜನರಿಗೆ ಸಿಕ್ಕಾಪಟ್ಟೆ ಪುರುಸೊತ್ತು ಇರುತ್ತದೆ. ಆದ್ರೆ ಮನೆಯವ ಜೊತೆ ಕುಳಿತು ಮಾತನಾಡಲು ಸಮಯವಿರುವುದಿಲ್ಲ. ಈ ಮೊಬೈಲ್ ಗೀಳು, ಮನೆಯಲ್ಲಿರುವ ವೃದ್ಧರನ್ನು ಏಕಾಂಗಿ ಮಾಡಿದೆ ಅಂದ್ರೆ ತಪ್ಪಾಗಲಾರದು. ಸಮೀಕ್ಷೆ ವರದಿಯಲ್ಲೂ ಈ ಬಗ್ಗೆ ಹೇಳಲಾಗಿದೆ. ಮೊಬೈಲ್ ನಿಂದ ಹಿರಿಯರು ದೂರವಾಗ್ತಿದ್ದಾರೆ ಎನ್ನುವ ಜೊತೆಗೆ ಇನ್ನೂ ಅನೇಕ ವಿಷ್ಯಗಳನ್ನು ಸಮೀಕ್ಷೆ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

ಇತ್ತೀಚಿನ ಸಮೀಕ್ಷೆ (Survey) ಯೊಂದರ ಪ್ರಕಾರ, ಮೊಬೈಲ್ (Mobile) ಹಾಗೂ ಇತರ ತಂತ್ರಜ್ಞಾನ (Technology) ದಿಂದಾಗಿ ಯುವ ಪೀಳಿಗೆ ಜೊತೆ ಸಂವಹನ ಕಡಿಮೆಯಾಗಿದೆ ಎಂದು ದೇಶದ ಸುಮಾರು 65 ಪ್ರತಿಶತದಷ್ಟು ಹಿರಿಯ ನಾಗರಿಕರು ಒಪ್ಪಿಕೊಂಡಿದ್ದಾರೆ. ದಿ ಲಿಬರ್ಟಿ ಇನ್ ಲೈಫ್ ಆಫ್ ಓಲ್ಡ್ ಪೀಪಲ್ 2022 ಎಂಬ ಸಮೀಕ್ಷೆಯಲ್ಲಿ ಈ ವಿಷ್ಯ ಹೊರ ಬಿದ್ದಿದೆ.  ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಚೆನ್ನೈ, ಲಕ್ನೋ, ಪಾಟ್ನಾ, ಪುಣೆ ಮತ್ತು ಅಹಮದಾಬಾದ್‌ನಲ್ಲಿ ಸಮೀಕ್ಷೆ ನಡೆದಿದೆ. ಸುಮಾರು 10,000 ಮಂದಿ ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಅವರ ದಾಖಲೆಗಳನ್ನು ವರದಿ ಮಾಡಲಾಗಿದೆ. 

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 72.5 ರಷ್ಟು ಜನರು, ತಮ್ಮ ತಲೆಮಾರಿನ ಜನರು ಕುಟುಂಬದ ಹಿರಿಯರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 51ರಷ್ಟು ಜನರು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ. ಇದರಿಂದಾಗಿ ಅವರು ತಿರುಗಾಡಲು ಮತ್ತು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಕಷ್ಟಪಡ್ತಿದ್ದಾರೆಂದು ಅಧ್ಯಯನದಲ್ಲಿ ಹೇಳಲಾಗಿದೆ. ಕೀಲು ಮತ್ತು ದೇಹದ ನೋವು ಭಾರತದಲ್ಲಿ ವಯಸ್ಸಾದವರ ಚಲನೆಯಲ್ಲಿ ಅಡಚಣೆಗೆ ದೊಡ್ಡ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಶೇಕಡಾ 58.1 ರಷ್ಟು ಜನರು ಕೀಲು ಹಾಗೂ ದೇಹದ ಇತರ ರೋಗಗಳಿಂದ ಬಳಲುತ್ತಿದ್ದಾರೆ  ಎಂದು ಅಧ್ಯಯನವು ಹೇಳಿದೆ.

ಮಕ್ಕಳಿಂದ ಫೋನನ್ನು ದೂರವಿಡುವುದು ಹೇಗೆ?

ಆಯಾಸ ಮತ್ತು ಮರೆವು ಸಮಸ್ಯೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 8.4 ರಷ್ಟು ಜನರನ್ನು ಕಾಡ್ತಿದೆ.  ಹಿರಿಯರು ಪ್ರವಾಸಕ್ಕೆ ಹೋಗುವುದನ್ನು ತಡೆಯಲು ಇನ್ನೊಂದು ಕಾರಣ ಮೂತ್ರವನ್ನು ತಡೆ ಹಿಡಿಯುವ ಸಮಸ್ಯೆ. ಮೂತ್ರವನ್ನು ಹಿದಿಡಿಟ್ಟುಕೊಳ್ಳಲು ಶೇಕಡಾ 18  ರಷ್ಟು ಜನರು ಅಸಮರ್ಥರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್‌ಒ) ಮತ್ತು ಜನಗಣತಿಯ ಮಾಹಿತಿಯು ಇನ್ನೊಂದು ವಿಷ್ಯವನ್ನು ಹೇಳಿದೆ. ಭಾರತದಲ್ಲಿ ವಯಸ್ಸಾದ ಜನಸಂಖ್ಯೆಯು ಸಾಮಾನ್ಯ ಜನಸಂಖ್ಯೆಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.  

ವಾಸ್ತವವಾಗಿ, ಮುಂಬರುವ ದಶಕದಲ್ಲಿ ಇದು ಶೇಕಡಾ 40 ಕ್ಕಿಂತ ಹೆಚ್ಚು ಬೆಳೆಯುವ ನಿರೀಕ್ಷೆಯಿದೆ. ಆದರೆ ಒಟ್ಟು ಜನಸಂಖ್ಯೆಯು ನಿರೀಕ್ಷಿತ ಶೇಕಡಾ 8.4 ರಷ್ಟು ಮಾತ್ರ ಬೆಳೆದಿದೆ. ಕುಟುಂಬದ ಕಿರಿಯ ಸದಸ್ಯರು ವೃದ್ಧರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಗತ್ಯಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯ. ಮೊಬೈಲ್, ಸಾಮಾಜಿಕ ಜಾಲತಾಣ ಹಾಗೂ ತಂತ್ರಜ್ಞಾನಕ್ಕೆ ಅಂಟಿಕೊಂಡಿರುವ ಬದಲು ಮನೆಯ ಹಿರಿಯರ ಜೊತೆ ಸಮಯ ಕಳೆಯಬೇಕು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. 

ಈ ರಾಶಿಯವರು ಸದಾ ಫೋನಿಗೆ ಅಂಟು ಕೊಂಡಿರುತ್ತಾರೆ

Latest Videos
Follow Us:
Download App:
  • android
  • ios