Asianet Suvarna News Asianet Suvarna News

ವ್ಯಕ್ತಿಯ ಮರುಮದುವೆ ನಿಲ್ಸೋಕೆ ಬಂದ್ರು ನಾಲ್ವರು ಹೆಂಡ್ತೀರು, ಏಳು ಮಂದಿ ಮಕ್ಕಳು !

ಆತನಿಗೆ ಈಗಾಗ್ಲೇ ನಾಲ್ಕು ಮದ್ವೆಯಾಗಿತ್ತು. ಅಷ್ಟು ಸಾಲ್ದು ಅಂತ ಐದನೇಯವಳ್ನು ಮದ್ವೆಯಾಗಿ ಆಕೆಯ ಬಾಳು ಹಾಳು ಮಾಡೋಕೆ ಹೊರಟಿದ್ದ. ಇಷ್ಟೆಲ್ಲಾ ಆಗ್ತಿರುವಾಗ ಮೊದ್ಲ ಹೆಂಡ್ತಿಯಂದಿರು ಸುಮ್ಮನಿರ್ತಾರ. ಮಕ್ಕಳನ್ನು ಕರ್ಕೊಂಡು ಬಂದು ಮದುವೆ ಮಂಟಪದಲ್ಲೇ ರಾದ್ಧಾಂತ ಮಾಡಿದ್ರು ನೋಡಿ.

Children Along With Their Mothers Stop Fathers 5th Marriage Vin
Author
First Published Sep 1, 2022, 2:57 PM IST

ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಮದುವೆಯನ್ನು ಒಂದು ಪವಿತ್ರವಾದ ಬಂಧವೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜನರು ಸಣ್ಣಪುಟ್ಟ ಕಾರಣಕ್ಕಾಗಿ ವ್ಯಕ್ತಿಯೊಂದಿಗೆ ಜಗಳ ಮಾಡ್ಕೊಂಡು ಮರು ಮದುವೆಯಾಗೋದು ಸಾಮಾನ್ಯವಾಗಿದೆ. ಪತಿ, ಪತ್ನಿ ತೀರಿಕೊಂಡಾಗ, ಇಬ್ಬರಲ್ಲಿ ಯಾರಿಗಾದರೂ ಅಕ್ರಮ ಸಂಬಂಧವಿದ್ದಾಗ ಮರು ಮದುವೆ ಮಾಡಿಕೊಳ್ಳೋದು ಸಾಮಾನ್ಯ. ಆದ್ರೆ ಸುಖಾ ಸುಮ್ಮನೆ ಚಪಲ ಚೆನ್ನಿಗನಂತೆ ಮರು ಮದುವೆಯಾಗುವುದಿದೆಯಲ್ಲ ಅದು ತುಂಬಾ ಕೆಟ್ಟದ್ದು. ಇಲ್ಲೊಬ್ಬಾತ ಐದನೇ ಬಾರಿ ಮರು ಮದುವೆಯಾಗಲು ಹೊರಟಿದ್ದ. ಈತನಿಗೆ ಮೊದಲ ಹೆಂಡ್ತಿಯರ ಹಾಗೋ ಪತ್ನಿಯರೇ ಸೇರಿ ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ.

ಉತ್ತರ ಪ್ರದೇಶದ ಸೀತಾಪುರದಲ್ಲಿ ಮುಸ್ಲಿಂ ಯುವಕನ ಮರು ಮದುವೆಗೆ (Marriage) ಮಕ್ಕಳು ಮತ್ತು ಪತ್ನಿಯರು ಮದುವೆ ಸ್ಥಳಕ್ಕೆ ಆಗಮಿಸಿ ಅಡ್ಡಿಪಡಿಸಿದ್ರು. ಈಗಾಗಲೇ 4 ಪತ್ನಿಯರನ್ನು ಹೊಂದಿದ್ದ 55 ವರ್ಷದ ಶಫಿ ಅಹ್ಮದ್ 5ನೇ ಬಾರಿಗೆ ವಿವಾಹವಾಗಲು ಸಿದ್ಧತೆ ನಡೆಸಿದ್ದ. ಇಸ್ಲಾಂ ಧರ್ಮವು ಬಹುಪತ್ನಿತ್ವವನ್ನು ಅನುಮತಿಸುತ್ತದೆ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಪುರುಷರಿಗೆ(Men) ಗರಿಷ್ಠ ನಾಲ್ವರು ಹೆಂಡತಿಯರನ್ನು ಹೊಂದಲು ಅನುಮತಿ (Permission) ನೀಡುತ್ತದೆ. ಆದರೆ ಈತ ಯಾವುದೇ ಕಾರಣವಿಲ್ಲದೆ ನಾಲ್ವರು ಹೆಂಡತಿಯರನ್ನು ದೂರವಿಟ್ಟಿದ್ದ ಮತ್ತು ಐದನೇ ಮದುವೆಯಾಗಲು ಹೊರಟಿದ್ದ.

ಮದ್ವೆಗೆ ಬಾರದ ಕೊಲೀಗ್ಸ್‌, ಸಿಟ್ಟಿನಿಂದ ಕೆಲಸಕ್ಕೆ ರಾಜೀನಾಮೆ ನೀಡಿದ ಮಹಿಳೆ !

ರಾತ್ರೋರಾತ್ರಿ ಅಹ್ಮದ್ ಅವರ ಐದನೇ ಮದುವೆಗೆ ಅವನ ಏಳು ಮಕ್ಕಳು ಮತ್ತು ಅವರ ತಾಯಂದಿರು ಮದುವೆಯ ಸ್ಥಳಕ್ಕೆ ನುಗ್ಗಿ ಗದ್ದಲವನ್ನು ಸೃಷ್ಟಿಸಿದರು. ಮಕ್ಕಳು ತಮ್ಮ ಗುರುತನ್ನು ವಧುವಿನ ಕುಟುಂಬಕ್ಕೆ ಬಹಿರಂಗಪಡಿಸಿದಾಗ, ಜಗಳವು ವಿಕೋಪಕ್ಕೆ ತಿರುಗಿತು. ತಂದೆ ಮಾಸಿಕ ಖರ್ಚಿಗೆ ಹಣ ನೀಡುವುದನ್ನು ನಿಲ್ಲಿಸಿದ್ದು, ಅವರ ಐದನೇ ಮದುವೆ ವಿಚಾರ ತಿಳಿದು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ಮಕ್ಕಳು ಹೇಳಿದ್ದಾರೆ. ಏತನ್ಮಧ್ಯೆ, ಸ್ಥಳದಲ್ಲಿ ಜಮಾಯಿಸಿದ ಹೆಚ್ಚಿನ ಸಂಖ್ಯೆಯ ಜನರು ವರನಿಗೆ ಥಳಿಸಿದರು ಮತ್ತು ವಧು ಮತ್ತು ಸಂಬಂಧಿಕರು ಸ್ಥಳದಿಂದ ಓಡಿಹೋರು. ಮದುಮಗನ ಮಕ್ಕಳು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ನಾವು ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ. 

ಹಪ್ಪಳಕ್ಕಾಗಿ ರಣರಂಗವಾಯ್ತು ಮದುವೆ ಮನೆ: ಕೇರಳದ ವಿಡಿಯೋ ವೈರಲ್
ಭಾರತದಲ್ಲಿ ನಡೆಯುವ ಕೆಲವು ಮದುವೆಗಳು ಕೆಲವೊಮ್ಮೆ ಸಿನಿಮಾ ಕತೆಗಳನ್ನು ಮೀರಿಸುವಂತಿರುತ್ತದೆ. ಅದರಲ್ಲೂ ಪೋಷಕರೇ ಹುಡುಕಿ ನಿಶ್ಚಯಿಸಿದ ವಿವಾಹಗಳಲಂತೂ ಸಾಕಷ್ಟು ಮೆಲೊಡ್ರಾಮಾಗಳನ್ನು ನೋಡಬಹುದು. ಕೆಲವೊಂದು ಕುಟುಂಬಗಳಲ್ಲಿ ಮದುವೆ, ಪರಸ್ಪರ ಕುಟುಂಬಗಳ ಗತ್ತು ಗೈರತ್ತು ಪ್ರತಿಷ್ಠೆಯ ವಿಚಾರವೂ ಆಗಿರುವುದರಿಂದ ಸ್ವಲ್ಪ ಹೆಚ್ಚು ಕಡಿಮೆ ಆದರೂ ಅದನ್ನು ಮಹಾ ರಾಮಾಯಣವನ್ನಾಗಿಸುತ್ತಾರೆ. ಕೆಲವು ಕುಟುಂಬದವರ ಪ್ರತಿಷ್ಠೆಯ ಕಾರಣಕ್ಕೆ ಮದುವೆಗಳು ಮಂಟಪದಲ್ಲೇ ನಿಂತ ನಿದರ್ಶನಗಳಿವೆ. ಇತ್ತೀಚೆಗೆ ಕೊನೆಯ ಕ್ಷಣದಲ್ಲಿ ಮದುವೆ ಬೇಡ ಎಂದು ಹೇಳುವ ವಧುಗಳ ಸಂಖ್ಯೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಮದುವೆ ಮನೆ ರಣರಂಗವಾದ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ಒಂದು ಕಡೆ ಒಂದು ಸಣ್ಣ ಹಪ್ಪಳದ ಕಾರಣಕ್ಕೆ ಮದುವೆ ಮನೆ ರಣರಂಗವಾಗಿದೆ. 

ಖಾಲಿ ಕುಳಿತ ಯುವಕರಿಗೆ ಮದುವೆ ಮಾಡಲು ಮುಂದಾದ ಕೇರಳ ಗ್ರಾ.ಪಂ.!

ದೇವರ ನಾಡು, ಸುಶಿಕ್ಷಿತರ ಬೀಡು ಎನಿಸಿದ ಕೇರಳದಲ್ಲಿ(kerala) ಈ ನಾಚಿಕೆಗೇಡಿನ ಘಟನೆ ನಡೆದಿದೆ. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಆಯೋಜಿಸಲ್ಪಟ್ಟ ಮದುವೆಯಲ್ಲಿ ಎಕ್ಸ್ಟ್ರಾ ಹಪ್ಪಳ ಕೇಳಿದ್ದಕ್ಕೆ ಈ ಅನಾಹುತ ನಡೆದಿದೆ ಎಂದು ತಿಳಿದು ಬಂದಿದೆ. ಮದುವೆ ಸಮಾರಂಭಕ್ಕೆ ಊಟದ ವ್ಯವಸ್ಥೆಯನ್ನು ಕೆಟರಿಂಗ್ ಸಂಸ್ಥೆಗೆ ಟೆಂಡರ್ ನೀಡಲಾಗಿತ್ತು. ಕೆಟರಿಂಗ್ ಟೆಂಡರ್ ಪಡೆದ ಸಂಸ್ಥೆಯ ಸಿಬ್ಬಂದಿ ಮದುವೆಗೆ ಬಂದ ಅತಿಥಿಗಳು ಇನ್ನೊಂದು ಹಪ್ಪಳ ಕೇಳಿದ್ದಕ್ಕೆ ಇಲ್ಲ ಎಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಆರಂಭವಾದ ಮಾತಿನ ಚಕಮಕಿ ಮದುವೆ ಮನೆಯನ್ನೇ ರಣರಂಗವಾಗಿಸಿದೆ.

ಮಾತಿನ ಚಕಮಕಿ ಸ್ವಲ್ಪದರಲ್ಲೇ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಟ ನಡೆದಿದೆ. ಮೊದಲಿಗೆ ಪರಸ್ಪರ ಕೈಯಲ್ಲಿ ಹೊಡೆದಾಡಿಕೊಂಡ ಅತಿಥಿಗಳು(Guest) ನಂತರ ಶೂಗಳು (Shoe)ಮತ್ತು ಚಪ್ಪಲಿಗಳಿಂದ ಹಿಡಿದು ಕುರ್ಚಿಗಳು ಮತ್ತು ಆಹಾರದ ಪಾತ್ರೆಗಳವರೆಗೆ(Vessel)  ಎಲ್ಲಾ ರೀತಿಯ ವಸ್ತುಗಳನ್ನು ಪರಸ್ಪರ ಎಸೆದಾಡಿಕೊಂಡಿದ್ದಾರೆ. ಈ ಘಟನೆಯನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್‌ನಲ್ಲಿ ಚಿತ್ರಿಕರಿಸಿಕೊಂಡಿದ್ದಾರೆ. 

Follow Us:
Download App:
  • android
  • ios