ಮಕ್ಕಳ ಸ್ವಭಾವ ಸೂಕ್ಷ್ಮವಾಗಿರುತ್ತದೆ. ಯಾವುದೇ ಭಯವಿಲ್ಲದೆ ಆಟವಾಡುವ ಮಕ್ಕಳಿಗೆ ಕೆಟ್ಟ ಅನುಭವವಾದ್ರೆ ಅದನ್ನು ಮರೆಯೋದಿಲ್ಲ. ಕೆಟ್ಟ ಅನುಭವಕ್ಕೆ ಕಾರಣವಾದ ವ್ಯಕ್ತಿಯನ್ನು ದ್ವೇಷಿಸ್ತಾರೆ. ಮಕ್ಕಳ ನಡವಳಿಕೆ ಬದಲಾದಾಗ ಪಾಲಕರು ಆತಂಕಗೊಳ್ತಾರೆ. ಆದ್ರೆ ಅದಕ್ಕೆ ಕಾರಣ ಕಂಡುಹಿಡಿಯೋದು ಸುಲಭವಲ್ಲ.
ಹೆಣ್ಮಕ್ಕಳ ಮೇಲೆ ಇತ್ತೀಚಿನ ದಿನಗಳಲ್ಲಿ ಶೋಷಣೆ ಹೆಚ್ಚಾಗ್ತಿದೆ. ಸಣ್ಣ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗ್ತಿದೆ. ಮಕ್ಕಳನ್ನು ಒಂಟಿಯಾಗಿ ಬಿಡೋದಿರಲಿ, ಆಪ್ತರ ಜೊತೆ ಬಿಡಲೂ ಪಾಲಕರು ಭಯಪಡುವಂತಾಗಿದೆ. ಸಂಬಂಧಿಕರ ಮೇಲೂ, ಸ್ವಂತ ಸಹೋದರ, ಅಪ್ಪನ ಮೇಲೂ ಅನುಮಾನಪಡುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರ ಜೊತೆ ಆಡ್ತಾ, ಖುಷಿಯಾಗಿರುತ್ತಿದ್ದ ಮಗಳು ಅಚಾನಕ್ ಬದಲಾದ್ರೆ ಅನುಮಾನ ಮೂಡೋದು ಸಹಜ. ಈ ಮಹಿಳೆಗೂ ಈಗ ಮಗಳ ಬಗ್ಗೆ ಭಯ ಶುರುವಾಗಿದೆ. ಸಹೋದರನೇ ಮಗಳ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನಾ ಎಂಬ ಸಂಶಯ ಮೂಡಿದೆ.
ಆಕೆಗೆ ಮದುವೆ (Marriage) ಯಾಗಿ ಕೆಲ ವರ್ಷ ಕಳೆದಿದೆ. ಗಂಡನ ಜೊತೆ ಸುಂದರ ಸಂಸಾರ ನಡೆಸ್ತಿದ್ದಾಳೆ ಮಹಿಳೆ. ಆಕೆಗೆ ಆರು ವರ್ಷದ ಮಗಳಿದ್ದಾಳೆ. ಗಂಡನ ಮನೆ ಹಾಗೂ ತವರು ಮನೆ ಸಂಬಂಧ (Relationship) ಕೂಡ ಚೆನ್ನಾಗಿದೆ. ಆದ್ರೆ ಕೆಲ ದಿನಗಳಿಂದ ತಾಯಿ ಮನಸ್ಸಿನಲ್ಲೊಂದು ಅನುಮಾನ, ಭಯ (Fear) ಕಾಡಲು ಶುರುವಾಗಿದೆ. ಮಹಿಳೆ ತನ್ನ ಸಹೋದರನ ಜೊತೆ ತುಂಬಾ ಆಪ್ತವಾಗಿದ್ದಾಳಂತೆ. ಇಬ್ಬರು ಎಲ್ಲ ವಿಷ್ಯವನ್ನು ಹಂಚಿಕೊಳ್ತಾರಂತೆ. ತಾಯಿಯಂತೆ ಮಗಳು ಕೂಡ ಮಾವನನ್ನು ಇಷ್ಟಪಡ್ತಿದ್ದಳಂತೆ. ಸಹೋದರ ಕೂಡ ತಂಗಿ ಮಗಳನ್ನು ಹೆಚ್ಚು ಪ್ರೀತಿ ಮಾಡ್ತಿದ್ದನಂತೆ. ಆದ್ರೆ ಕೆಲ ದಿನಗಳಿಂದ ಮಗಳ ವರ್ತನೆ ಬದಲಾಗಿದೆ ಎನ್ನುತ್ತಾಳೆ ತಾಯಿ. ಸಹೋದರನ ಹೆಸರು ಕೇಳಿದ್ರೆ ಕೋಪಗೊಳ್ತಾಳೆ. ಆತನ ಜೊತೆ ಮಾತನಾಡುವುದಿಲ್ಲ. ಆತ ಮನೆಗೆ ಬಂದ್ರೆ ಭಯದಿಂದ ಅಡಗಿಕೊಳ್ತಾಳೆ. ಮೊದಲು ಕುಣಿಯುತ್ತ ಮಾವನ ಬಳಿ ಹೋಗ್ತಿದ್ದವಳು ಈಗ ದೂರವಿರಲು ಇಷ್ಟಪಡ್ತಾಳೆ ಎನ್ನುತ್ತಾಳೆ ಮಹಿಳೆ. ಅಷ್ಟೇ ಅಲ್ಲ ಸಹೋದರ ಕೂಡ, ಮಗಳ ಗಮನ ಸೆಳೆಯುವ ಪ್ರಯತ್ನಕ್ಕೆ ಹೋಗ್ತಿಲ್ಲ ಎನ್ನುತ್ತಾಳೆ ಮಹಿಳೆ. ಮಗಳ ಜೊತೆ ಈ ಬಗ್ಗೆ ಮಾತನಾಡುವ ಪ್ರಯತ್ನ ನಡೆಸಿದ್ದೇನೆ. ಆದ್ರೆ ಮಗಳು ಯಾವುದೇ ಪ್ರಶ್ನೆಗೆ ಉತ್ತರ ನೀಡಿಲ್ಲ ಎಂಬುದು ತಾಯಿ ಚಿಂತೆ. ಇದ್ರಿಂದ ಭಯ ಹೆಚ್ಚಾಗಿದೆ. ಮಗಳ ಜೊತೆ ಏನಾದ್ರೂ ಕೆಟ್ಟದ್ದಾಗಿದೆಯಾ ಎಂಬ ಆತಂಕ ನಿದ್ರೆ ಬರದಂತೆ ಮಾಡಿದೆ ಎನ್ನುತ್ತಾಳೆ ಮಹಿಳೆ.
ತಜ್ಞರ ಸಲಹೆ : ಇದು ಸ್ವಲ್ಪ ಜಟಿಲ ಸಮಸ್ಯೆ ಹೌದು ಎನ್ನುತ್ತಾರೆ ತಜ್ಞರು. ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಬರೀ ಕೆಟ್ಟದ್ದಾಗಿರಬೇಕೆಂದೇನೂ ಇಲ್ಲ, ನಿಮ್ಮ ಮಗಳಿಗೆ ಮಾವ ಬೈದಿರಬಹುದು ಇಲ್ಲ ಹೊಡೆದಿರಬಹುದು. ಅದಕ್ಕೂ ಆಕೆ ಭಯಗೊಂಡಿರಬಹುದು. ಮೊದಲು ಆಕೆ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯಬೇಕು ಎನ್ನುತ್ತಾರೆ ತಜ್ಞರು.
ಮಾಜಿ ಗರ್ಲ್‌ಫ್ರೆಂಡ್ ಜೊತೆಗಿನ ಇಂಟಿಮೇಟ್ ಪೋಟೋ ಗಂಡ ಇನ್ನೂ ಇಟ್ಕೊಂಡಿದ್ದಾನೆ, ಏನ್ಮಾಡ್ಮಿ ?
ಮಗಳಿಗೆ ಸುರಕ್ಷಿತ ಭಾವನೆ ಒದಗಿಸಬೇಕು. ನನ್ನ ಬಳಿ ಇದ್ರೆ ನೀನು ಸುರಕ್ಷಿತ ಎಂಬುದನ್ನು ಆಕೆಗೆ ಮನವರಿಕೆ ಮಾಡಬೇಕು. ಆಕೆ ನಿಮ್ಮ ಬಳಿ ಹೇಳಲು ಹಿಂಜರಿಯುತ್ತಿದ್ದಾಳೆ ಎಂದಾದ್ರೆ ಆಕೆ ಕುಟುಂಬದಲ್ಲಿ ಮತ್ತೆ ಯಾರ ಜೊತೆ ಹೆಚ್ಚು ಆಪ್ತವಾಗಿದ್ದಾಳೆ ಎಂಬುದನ್ನು ತಿಳಿದುಕೊಂಡು ಅವರ ಜೊತೆ ಮಾತನಾಡಿ. ಅವರಿಗೆ ಸಹಾಯ ಮಾಡುವಂತೆ ಕೇಳಿ. ಅವರು, ಮಗಳ ಜೊತೆ ಮಾತನಾಡಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಹುದು ಎನ್ನುತ್ತಾರೆ ತಜ್ಞರು. ತಮ್ಮ ಮೇಲಾದ ಶೋಷಣೆಯನ್ನು ಪಾಲಕರ ಜೊತೆ ಹೇಳಲು ಅನೇಕ ಮಕ್ಕಳು ಹೆದರುತ್ತಾರೆ. ತಮ್ಮ ಆಪ್ತರ ಬಳಿ ಹೇಳಿಕೊಳ್ಳಲು ಮುಂದಾಗ್ತಾರೆ.
ದೈಹಿಕ ಸಂಪರ್ಕವೇ ಇಲ್ಲದವರನ್ನು ಕಾಡೋ ಆರೋಗ್ಯ ಸಮಸ್ಯೆಗಳಿವು!
ನಿಮ್ಮ ಹಾಗೂ ನಿಮ್ಮ ಸಹೋದರನ ಆಪ್ತತೆ ಮಗುವಿಗೆ ಇಷ್ಟವಾಗದೆ ಇರಬಹುದು. ಅನೇಕ ಮಕ್ಕಳು ತಮ್ಮ ಪಾಲಕರು ಬೇರೆಯವರ ಜೊತೆ ಆಪ್ತವಾಗಿರುವುದನ್ನು ಇಷ್ಟಪಡುವುದಿಲ್ಲ. ಇದೇ ಕಾರಣಕ್ಕೆ ಮಗು ನಿಮ್ಮ ಸಹೋದರನನ್ನು ದ್ವೇಷ ಮಾಡ್ತಿರಬಹುದು. ಮೊದಲು ಕಾರಣವೇನು ಎಂಬುದನ್ನು ತಿಳಿಯುವ ಅಗತ್ಯವಿದೆ.ಸಹೋದರನ ಮೇಲೆ ಸಂಪೂರ್ಣ ಭರವಸೆಯಿದ್ದರೆ ಆತನನ್ನೇ ನೀವು ಪ್ರಶ್ನೆ ಮಾಡಬಹುದು. ಮಗಳು ಸಹಜ ಸ್ಥಿತಿಗೆ ಬರಲು ನೆರವಾಗುವಂತೆ ಕೇಳಬಹುದು. ಇದ್ಯಾವುದೂ ಸಾಧ್ಯವಿಲ್ಲವೆಂದಾದ್ರೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ.
