ಡೇಟಿಂಗ್ ದುನಿಯಾದಲ್ಲೀಗ ಅಂಕಲ್, ಆಂಟಿಯರದ್ದೇ ಹವಾ!
ತರುಣ, ತರುಣಿಯರು ಮಾತ್ರ ಡೇಟಿಂಗ್ ಮಾಡ್ಬೇಕು ಅಂತೇನಿಲ್ಲ ಅಲ್ವಾ? ಅಂಕಲ್, ಆಂಟಿಯರು ಮಾಡಿದ್ರೆ ತಪ್ಪೇನು? ಹೌದು, ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ದುನಿಯಾದ ಟ್ರೆಂಡ್ ಬದಲಾಗುತ್ತಿದೆ. ಮಧ್ಯವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಡೇಟಿಂಗ್ ಮಾಡ್ತಿದ್ದಾರೆ.
ಇದು ಟ್ರೆಂಡಿಂಗ್ ದುನಿಯಾ. ಡ್ರೆಸ್‍ನಿಂದ ಹಿಡಿದು ಕಾರ್ ತನಕ ಪ್ರತಿ ವಸ್ತು,ವಿಷಯದಲ್ಲೂ ಹೊಸತನ ಹುಡುಕುತ್ತೇವೆ.ಈ ಹೊಸತನೇ ಟ್ರೆಂಡ್. ಕಾಲಕ್ಕೆ ತಕ್ಕಂತೆ ಟ್ರೆಂಡ್ ಬದಲಾಗುತ್ತಲಿರುತ್ತದೆ.ವಸ್ತುಗಳ ವಿಷಯದಲ್ಲಿ ಮಾತ್ರವಲ್ಲ, ಡೇಟಿಂಗ್ ದುನಿಯಾದಲ್ಲೂ ಜನರ ಆಸಕ್ತಿ,ಇಷ್ಟ-ಕಷ್ಟಗಳು ಬದಲಾಗುತ್ತಿರುತ್ತವೆ. ಸಾಮಾನ್ಯವಾಗಿ ಡೇಟಿಂಗ್ ಅಂದ ತಕ್ಷಣ ಕಣ್ಣಮುಂದೆ ಬರೋದು ಯೌವನದ ಹೊಸ್ತಿಲಲ್ಲಿ ನಿಂತಿರೋರು. ಲೈಫ್ ಬಗ್ಗೆ ಕಮೀಟ್ ಆಗದೆ,ವೈವಾಹಿಕ ಬದುಕಿಗಿನ್ನು ಸಿದ್ಧಗೊಳ್ಳದೆ ರೊಮ್ಯಾನ್ಸ್ ಮಾಡುವ ಮೂಡ್‍ನಲ್ಲಿರೋರು. ಹಾಗಂತ ವಯಸ್ಕರು ರೊಮ್ಯಾನ್ಸ್ ಮಾಡ್ಬಾರ್ದು ಅಂತ ನಿಯಮವೇನಾದ್ರೂ ಇದೆಯಾ? ಇಲ್ಲ ಅಲ್ವಾ, ಅದಕ್ಕೆ ಇತ್ತೀಚೆಗೆ ಡೇಟಿಂಗ್ ದುನಿಯಾದಲ್ಲಿ ಯುವಜನರಿಗಿಂತ ಮಧ್ಯವಯಸ್ಕರೇ ಜಾಸ್ತಿ ಸದ್ದು ಮಾಡುತ್ತಿದ್ದಾರಂತೆ. ಗ್ಲೇಡೆನ್ ಎಂಬ ಎಕ್ಟ್ರ ಮ್ಯಾರಿಟಲ್ ಡೇಟಿಂಗ್ ಆಪ್ 34-49 ವರ್ಷಗಳ ವಯೋಮಿತಿಯಲ್ಲಿರುವ ತನ್ನ ಬಳಕೆದಾರರ ಡೇಟಿಂಗ್ ಟ್ರೆಂಡ್ಸ್ ಹೇಗಿದೆ ಎಂಬುದನ್ನು ಪತ್ತೆ ಹಚ್ಚಲು ಇತ್ತೀಚೆಗೆ ಒಂದು ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು, ಪುಣೆ ಹಾಗೂ ಹೈದ್ರಾಬಾದ್ ನಗರಗಳ 1000 ಬಳಕೆದಾರರು ಪಾಲ್ಗೊಂಡಿದ್ದರು. ಇವರಲ್ಲಿ ಶೇ.72ರಷ್ಟು ಮಂದಿ ಕೊರೋನಾ ಲಾಕ್‍ಡೌನ್ ನಿಯಮಗಳನ್ನು ಸಡಿಲಿಸಿದ ಬಳಿಕ ತಮ್ಮ ಆನ್‍ಲೈನ್ ಡೇಟಿಂಗ್ ಸಂಗಾತಿಯನ್ನು ಭೇಟಿಯಾಗಲು ಬಯಸಿದ್ದಾರೆ. ಈ ಸಮೀಕ್ಷೆಯಲ್ಲಿ ಅಂಕಲ್, ಆಂಟಿಯರ ಡೇಟಿಂಗ್‍ಗೆ ಸಂಬಂಧಿಸಿ ಇನ್ನಷ್ಟು ಆಸಕ್ತಿಕರ ಸಂಗತಿಗಳು ಬಯಲಾಗಿವೆ ಕೂಡ.
ಸೆಲೆಬ್ರಿಟಿ ಸೆಕ್ಸ್ ಗೊಂಬೆಗಳಿಗೆ ಭಾರಿ ಬೇಡಿಕೆ!
ಸೆಕೆಂಡ್ ಚಾನ್ಸ್ ಕೊಡೋಕೆ ರೆಡಿ
ಬಹುತೇಕರ ದೃಷ್ಟಿಯಲ್ಲಿ ದಾಂಪತ್ಯ ದ್ರೋಹ ಅನ್ನೋದು ಕ್ಷಮಿಸಲಾಗದ ಪಾಪ. ಒಮ್ಮೆ ಮೋಸ ಮಾಡಿದ ವ್ಯಕ್ತಿಯನ್ನು ಮತ್ತೆ ಹತ್ತಿರ ಸೇರಿಸೋಕೆ ಹೆದರೋದು ಸಹಜ. ಕೆಲವರಂತೂ ಮೋಸಗಾರರ ಮುಖ ನೋಡಲು ಕೂಡ ಇಷ್ಟಪಡೋದಿಲ್ಲ. ಇಂಥದ್ರಲ್ಲಿ ಡೇಟಿಂಗ್‍ನಲ್ಲಿ ಆಕ್ಟಿವ್ ಆಗಿರೋ ಅಂಕಲ್‍ಗಳು ಮೋಸ ಮಾಡಿದ ಸಂಗಾತಿಗೆ ಎರಡನೇ ಚಾನ್ಸ್ ಕೊಡಲು ರೆಡಿ ಇದ್ದಾರೆ. ಸಮೀಕ್ಷೆ ವರದಿ ಪ್ರಕಾರ ಶೇ.36.9 ಜನರು ತಮ್ಮ ಸಂಗಾತಿ ಮಾಡಿದ ಮೋಸ ಮರೆತು ಕ್ಷಮಿಸೋದಾಗಿ ತಿಳಿಸಿದ್ದಾರೆ. ಶೇ.40.1 ಮಂದಿ ಮೋಸದ ಹಿಂದಿನ ಕಾರಣ ಪರಿಗಣಿಸಿ ಕ್ಷಮೆ ನೀಡೋದಾಗಿ ಹೇಳಿದ್ದಾರೆ. ಕೇವಲ ಶೇ.23ರಷ್ಟು ಜನರು ಮಾತ್ರ ಮೋಸದ ಬಳಿಕ ಸಂಬಂಧ ಕಡಿದುಕೊಳ್ಳುವ ಮಾತನಾಡಿದ್ದಾರೆ.
ಒಮ್ಮೆಗೆ ಇಬ್ಬರೊಂದಿಗೆ ಲವ್ವಿಡವ್ವಿ
ಒಮ್ಮೆಗೆ ಇಬ್ಬರೊಂದಿಗೆ ಪ್ರೀತಿ ನಿಭಾಯಿಸುವ ಕುರಿತು ಜನರು ಈಗ ಮನಸ್ಸು ಬಿಚ್ಚಿ ಮಾತನಾಡಲು ಪ್ರಾರಂಭಿಸಿದ್ದಾರೆ. ಹಿಂದೆಲ್ಲ ಈ ವಿಚಾರದಲ್ಲಿ ಸಾಕಷ್ಟು ಗೌಪ್ಯತೆ ಕಾಪಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ದಂಪತಿಗಳು ತಮ್ಮ ಸಂಬಂಧದ ಕುರಿತು ಸಾಕಷ್ಟು ಪ್ರ್ಯಾಕ್ಟಿಕಲ್ ಆಗಿ ಯೋಚಿಸುತ್ತಾರೆ. ಬಾಳ ಸಂಗಾತಿ ಜೊತೆ ಸ್ನೇಹ-ಸಲುಗೆಯಿಂದ ಇರಲು ಬಯಸುತ್ತಾರೆ. ಆದ್ರೆ ಇಂಥ ಸಂಬಂಧ ಸಾಧ್ಯವಾಗದಿದ್ದಾಗ ದಾಂಪತ್ಯ ಮುರಿದುಕೊಳ್ಳುವ ಬದಲಿಗೆ ಮನೆಯ ಹೊರಗೆ ಇಂಥ ಸಂಗಾತಿಯನ್ನು ಹುಡುಕಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಈ ಸಮೀಕ್ಷೆ ತಿಳಿಸಿದೆ. ಶೇ.48.1ರಷ್ಟು ಜನರು ಇಬ್ಬರು ವ್ಯಕ್ತಿಗಳೊಂದಿಗೆ ಒಂದೇ ಸಮಯದಲ್ಲಿ ಪ್ರೀತಿ ಮಾಡಬಲ್ಲೆವು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಶೇ.46ರಷ್ಟು ಜನರು ತಾವು ದಾಂಪತ್ಯ ಬದುಕಿನ ಹೊರಗೆ ಇನ್ನೊಂದು ಸಂಬಂಧ ಹೊಂದಿರೋದಾಗಿ ಒಪ್ಪಿಕೊಂಡಿದ್ದಾರೆ.
ತಿರಸ್ಕಾರದ ನೋವು ಬೆಂಬಿಡದೆ ಕಾಡುತ್ತಿದೆಯಾ?
ಸೀಕ್ರೇಟ್ ಕಾಪಾಡುವ ಸ್ನೇಹಿತರು
ದಾಂಪತ್ಯಕ್ಕೆ ದ್ರೋಹ ಮಾಡುತ್ತಿರುವ ವಿಷಯವನ್ನು ನಂಬಿಕೆಗೆ ಆರ್ಹವಾದ ವ್ಯಕ್ತಿ ಬಳಿ ಮಾತ್ರ ಹಂಚಿಕೊಳ್ಳಲು ಸಾಧ್ಯ. ಹೀಗಾಗಿ ಇಂಥ ಸೀಕ್ರೇಟ್ ವಿಷಯವನ್ನು ಬಹುತೇಕರು ಆತ್ಮೀಯ ಸ್ನೇಹಿತರ ಬಳಿ ಹಂಚಿಕೊಂಡಿರುತ್ತಾರೆ. ಸಮೀಕ್ಷೆಯಲ್ಲಿ ಶೇ.37.5ರಷ್ಟು ಜನರು ತಮ್ಮ ಲವ್ ಅಪೇರ್ ವಿಷಯನ್ನು ಆತ್ಮೀಯ ಸ್ನೇಹಿತರ ಬಳಿ ಹಂಚಿಕೊಳ್ಳಲು ಬಯಸೋದಾಗಿ ಹೇಳಿದ್ದಾರೆ. ಶೇ.31.3ರಷ್ಟು ಜನ ಒಡಹುಟ್ಟಿದವರ ಬಳಿ ಈ ವಿಷಯ ಹಂಚಿಕೊಳ್ಳುತ್ತಾರಂತೆ. ಇನ್ನು ಶೇ.31.2ರಷ್ಟು ಮಂದಿ ಮನಸ್ಸಿನಲ್ಲಿ ಕಾಡುತ್ತಿರುವ ಅಪರಾಧಿ ಭಾವನೆಯಿಂದ ಪಾರಾಗಲು ಈ ಗುಟ್ಟನ್ನು ಹೆತ್ತವರು ಹಾಗೂ ಸಂಗಾತಿ ಮುಂದೆ ಹೇಳಲು ಬಯಸಿದ್ದಾರೆ.