Chanakya Niti: ಹೆಣ್ಣೇ, ನಿನ್ನ ಗಂಡನ ಮನಸ್ಸಿನಲ್ಲೇನಿದೆ ಅಂತ ತಿಳಿದಿರಲಿ ಅಂತಾನೆ ಚಾಣಕ್ಯ!

ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋದರೆ ಸಾಲದು, ಅಲ್ಲಿ ಗಂಡನ ಮನಸ್ಸನ್ನು ಪಾತಾಳಗರಡಿ ಹಾಕಿ ಆಗಾಗ ಶೋಧಿಸುತ್ತ ಇರಬೇಕಾಗುತ್ತದೆ. ಗಂಡಸಿನ ಮನಸ್ಸು ಬಲುಬೇಗ ಅತ್ತಿತ್ತ ಬೇಲಿ ಹಾರಲು ಹವಣಿಸುತ್ತದೆ. ಅಂಥದ್ದನ್ನು ಹೆಣ್ಣು ಥಟ್ಟನೆ ಗುರುತಿಸಬೇಕು. 

Chanakya Niti says to keep an eye on your husband in these five things bni

ಕೆಲವೊಮ್ಮೆ ಮದುವೆಯಾದ ಪುರುಷ ತನ್ನ ಪತ್ನಿಸುಂದರಿಯಾಗಿದ್ದರೂ ಅನ್ಯ ಸ್ತ್ರೀಯರ ಸಂಗಕ್ಕೆ ಹಾತೊರೆಯುವುದುಂಟು. ಇದಕ್ಕೆ ಕಾರಣ ಏನಿರಬಹುದು? ಈ ಬಗ್ಗೆ ವಿವಾಹಿತೆಯರು ಸರಿಯಾಗಿ ಗಮನ ಕೊಡಬೇಕು. ಯಾಕೆಂದರೆ ಗಂಡಸು ಬಲು ಸುಲಭವಾಗಿ ದಾಂಪತ್ಯದಿಂದ ಅತ್ತಿತ್ತ ಸರಿಯಬಹುದು. ಹೀಗಾಗಿ ಗಂಡನ ಮನಸ್ಸನ್ನು ಈ ಐದು ವಿಷಯಗಳಲ್ಲಿ ಸದಾ ಪರೀಕ್ಷಿಸುತ್ತಿರಬೇಕು ಎನ್ನುತ್ತಾನೆ ಚಾಣಕ್ಯ. ಯಾವುದು ಆ ಐದು ವಿಷಯ?

ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಧರ್ಮ, ಅರ್ಥ, ದಾಂಪತ್ಯ, ಕುಟುಂಬ, ಸಂಬಂಧಗಳು, ಸಮಾಜ, ರಾಜಕೀಯ ಮುಂತಾದ ವಿಷಯಗಳನ್ನು ವಿವೇಚಿಸಿದ್ದಾನೆ. ಕೆಲವೊಮ್ಮೆ  ಮದುವೆಯಾದ ಕೆಲವೇ ದಿನಗಳಲ್ಲಿ ಪುರುಷರು ಇತರ ಮಹಿಳೆಯರನ್ನು ಇಷ್ಟಪಟ್ಟು ಅವರೊಂದಿಗೆ ಶಾರೀರಿಕ ಸಂಬಂಧಗಳನ್ನು ಹೊಂದಲು ಮುಂದಾಗುತ್ತಾರೆ. ಇದರ ಹಿಂದೆ ಕೆಲವು ಕಾರಣಗಳಿರುತ್ತವೆ. ಈ ಬಗ್ಗೆ ಪತ್ನಿಯಾದವಳು ತಿಳಿದಿರಬೇಕಂತೆ. ಮಹಿಳೆಯ ಕುರಿತ ಪುರುಷನ ಆಕರ್ಷಣೆ ಸ್ನೇಹವನ್ನು ಮೀರಿ ಸುಳ್ಳು ಸಂಬಂಧಕ್ಕೆ ತಿರುಗಿದಾಗ ತಪ್ಪುಗಳು ಸಂಭವಿಸುತ್ತವೆ. ಹೀಗಾದರೆ ದಾಂಪತ್ಯ ಜೀವನವೂ ನಾಶವಾಗುವ ಸಾಧ್ಯತೆ ಇದೆ. 

ದೈಹಿಕ ತೃಪ್ತಿ: ವೈವಾಹಿಕ ಸಂಬಂಧದಲ್ಲಿ ದೈಹಿಕ ತೃಪ್ತಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆ ಇಬ್ಬರ ನಡುವಿನ ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ ಸಹ ವಿವಾಹೇತರ ಸಂಬಂಧಗಳತ್ತ ಹೆಜ್ಜೆಗಳು ಬೀಳಲು ಪ್ರಾರಂಭಿಸುತ್ತವೆ. ಸಮಸ್ಯೆ ಕಡಿಮೆ ಮಾಡಲು ಇಬ್ಬರೂ ಪರಸ್ಪರ ಮಾತನಾಡಿಕೊಂಡರೆ ಒಳ್ಳೆಯದು.

ಚಿಕ್ಕ ವಯಸ್ಸಿನ ಮದುವೆ: ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಪತಿ-ಪತ್ನಿಯ ನಡುವಿನ ಸಂಬಂಧಕ್ಕೆ ಹಾನಿಕಾರಕವಾಗಿದೆ. ಒಬ್ಬ ವ್ಯಕ್ತಿಯು ಚಿಕ್ಕ ವಯಸ್ಸಿನಲ್ಲಿ ತನ್ನ ವೃತ್ತಿಜೀವನದ ಬಗ್ಗೆ ತಲೆಕೆಡಿಸಿಕೊಂಡಿರುತ್ತಾರೆ. ಈ ವಯಸ್ಸಿನಲ್ಲಿ ಅರಿವು ಕೂಡ ಕಡಿಮೆ. ಈ ವಯಸ್ಸಿನಲ್ಲಿ ವೃತ್ತಿಜೀವನದ ಮೇಲೆ ಹೆಚ್ಚಿನ ಗಮನ ನೀಡುವುದನ್ನು ಬಿಟ್ಟು, ಬೇರೆ ಯಾವುದಕ್ಕೂ ಗಮನ ಕೊಡುವುದಿಲ್ಲ. ಕಾಲಾನಂತರದಲ್ಲಿ, ಜೀವನವು ಸ್ಥಿರವಾಗಿದ್ದಾಗ ಮತ್ತು ವೃತ್ತಿಜೀವನವು ಸುಲಭವಾದಾಗ, ಒಬ್ಬ ವ್ಯಕ್ತಿಯು ತನ್ನ ಆಸೆಗಳಿಗೆ ಗಮನ ಕೊಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ವಿವಾಹೇತರ ಸಂಬಂಧಗಳ ಅಪಾಯವು ಹೆಚ್ಚಾಗುತ್ತದೆ.

ನಂಬಿಕೆ: ಹೆಂಡತಿ ಇದ್ದರೂ ಕೆಲವರು ವಿವಾಹೇತರ ಸಂಬಂಧವನ್ನು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಪತಿ-ಪತ್ನಿ ಸಂಬಂಧದಲ್ಲಿ ನಂಬಿಕೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಂಬಿಕೆ ಇದ್ದರೆ, ಇಬ್ಬರೂ ಪರಸ್ಪರ ಪ್ರಾಮಾಣಿಕವಾಗಿರುತ್ತಾರೆ ಮತ್ತು ಇರಬೇಕು. ನಂಬಿಕೆ ಇಲ್ಲದ ಸಂದರ್ಭಗಳಲ್ಲಿ ಅನೈತಿಕ ಸಂಬಂಧಗಳಿಗೆ ಕಾರಣವಾಗುತ್ತದೆ.

Chanakya Niti: ಈ ಸಂದರ್ಭಗಳಲ್ಲಿ ಬಾಯಿ ಮುಚ್ಚಿಕೊಂಡಿರಿ ಅಂತಾನೆ ಚಾಣಕ್ಯ!

ಪರಸ್ಪರರ ಒಳಿತು: ವೈವಾಹಿಕ ಜೀವನದಲ್ಲಿ ಸಂಗಾತಿಯ ಮನಸ್ಸು ಅಸಮಾಧಾನ ಹೊಂದುವುದು ತುಂಬಾ ಸಾಮಾನ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಅನೇಕರು ಇತರ ಮಹಿಳೆಯರು ಅಥವಾ ಪುರುಷರನ್ನು ಬಯಸುತ್ತಾರೆ. ಇಲ್ಲಿ ಪತಿ-ಪತ್ನಿಯರಿಬ್ಬರೂ ಪರಸ್ಪರ ಒಳ್ಳೆಯದನ್ನು ನೋಡುವುದರತ್ತ ಗಮನಹರಿಸಬೇಕು. ಆಗ ಮಾತ್ರ ಆ ಪ್ರೀತಿ ಶಾಶ್ವತವಾಗಿರುತ್ತದೆ. ಇಲ್ಲ, ಪ್ರತಿಯೊಬ್ಬರ ಹಾದಿ ಅವರದು ಎಂದುಕೊಂಡರೆ ಪರಿಸ್ಥಿತಿ ವಿಭಿನ್ನವಾಗಿರುತ್ತದೆ.

ಮಗುವಿನತ್ತ ಗಮನ: ನೀವು ಪೋಷಕರಾಗುವವರೆಗೂ ಪ್ರೀತಿ ತುಂಬಿ ತುಳುಕುತ್ತಿರುತ್ತದೆ. ಮಗುವಿನ ಜನನದ ನಂತರ, ಪುರುಷರು ತಮ್ಮ ಹೆಂಡತಿಯಿಂದ ದೂರವಾಗುವುದನ್ನು ಗಮನಿಸಬಹುದು. ಇದರ ಹಿಂದಿನ ಕಾರಣವೆಂದರೆ ಹೆಂಡತಿಯು ತನ್ನ ಮಗುವಿಗೆ ಪತಿಗಿಂತ ಹೆಚ್ಚಿನ ಆದ್ಯತೆ ನೀಡಲು ಪ್ರಾರಂಭಿಸುತ್ತಾಳೆ. ಪತಿಯನ್ನು ದೂರ ಮಾಡಲು ಮುಂದಾಗದಿದ್ದರೂ, ಮಗುವೇ ಆಕೆಯ ಹೆಚ್ಚಿನ ಸಮಯವನ್ನು ತಿನ್ನುತ್ತದೆ ಆಗ ಗಂಡ ಅತೃಪ್ತನಾಗಬಹುದು.  

ಈ ಗುಣವಿದ್ದರೆ ಹಣ ಸಿಗುತ್ತೆ, ಶ್ರೀಮಂತಿಕೆ ಬರುತ್ತೆ ಎನ್ನುತ್ತಾನೆ ಚಾಣಕ್ಯ
 

Latest Videos
Follow Us:
Download App:
  • android
  • ios