ಅಂದುಕೊಂಡಂತೆ ಆಗಲಿಲ್ಲ.. ಲಾಕ್ ಡೌನ್‌ನಲ್ಲಿ ಸೆಕ್ಸ್ ಬಿಟ್ಟು ಹಸ್ತಮೈಥುನಕ್ಕಿಳಿದರು!
* ಕೊರೋನಾ ಲಾಕ್ ಡೌನ್ ಕಾಲದಲ್ಲಿ ಜನರ ಲೈಂಗಿಕ ಜೀವನ ಹೇಗಿತ್ತು?
* ಮಾಧ್ಯಮಗಳ ಊಹೆ ತಪ್ಪು ಮಾಡಿದ ನಾಗರಿಕರು
* ಸೆಕ್ಸ್ ಗಿಂತ ಹಸ್ತಮೈಥುನಕ್ಕೆ ಆದ್ಯತೆ ನೀಡಿದ್ರು
ಕೆನಡಾ(ಆ. 31) ಕೊರೋನಾ ಎನ್ನುವ ಹೆಮ್ಮಾರಿ ಜಗತ್ತಗೆ ಅಂಟಿಕೊಂಡು ಎರಡು ವರ್ಷದ ಹತ್ತಿರಕ್ಕೆ ಬಂದಿದೆ. ಮಾರ್ಚ್ 2020 ಲಾಕ್ ಡೌನ್ ಘೋಷಣೆಯಾಯಿತು. ಇದೊಂದಿಗೆ ಜೋಡಿಗಳು ಮನೆಯಲ್ಲಿಯೇ ಬಂಧಿಯಾದರು. ಇದರ ಪರಿಣಾಮ ಒಂಭತ್ತು ತಿಂಗಳ ನಂತರ ಗೊತ್ತಾಲಿದೆ! ಎಂಬ ಮಾತುಗಳು ಕೇಳಿಬಂದಿದ್ದವು.
ಮಕ್ಕಳ ಜನನ ಸಂಖ್ಯೆ ಏರಿಕೆಯಾಗಲಿದೆ..ಎಲ್ಲಾ ಲಾಕ್ ಡೌನ್ ಎಫೆಕ್ಟ್ ಎಂದು ಭಾವಿಸಲಾಗಿತ್ತು. ಆದರೆ ಪರಿಣಾಮ ಮಾತ್ರ ಭಿನ್ನವಾಗಿತ್ತು. ಸಂಗಾತಿ ಜತೆ ಸಮಯ ಹಂಚಿಕೊಂಡಿದ್ದಕ್ಕಿಂತ 'ಸ್ವಯಂ ಕೃಷಿ' ಗೆ ಒತ್ತು ನೀಡಿದ್ದಾರೆ ಎನ್ನುವುದು ಈಗ ಗೊತ್ತಾಗಿದೆ.
ಮಹಿಳೆಯರ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿ ಕೆನಡಾದಲ್ಲಿ ನಡೆದ ಸಂಶೋಧನೆ ಅನೇಕ ಅಂಶಗಳನ್ನು ತೆರೆದಿರಿಸಿದೆ. ಡಾ ಲೋರಿ ಬ್ರೋಟೋ ಒಂದೊಂದೆ ಅಂಶಗಳನ್ನು ತೆರೆದಿಡುತ್ತ ಹೋಗುತ್ತಾರೆ. ಲೈಂಗಿಕ ಸಂಬಂಧಗಳಲ್ಲಿ ಆದ ಬದಲಾವಣೆಯನ್ನು ಹೇಳುತ್ತಾರೆ.
ಗೆಳತಿಯೊಂದಿಗೆ ಸುಖ ಪಡುವ ಆಸೆ.. ಕಾಂಡೋಮ್ ಸಿಕ್ಕಿಲ್ಲ ಎಂದು ಗಮ್ ಹಚ್ಚಿಕೊಂಡು ಪ್ರಾಣ ಬಿಟ್ಟ
ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಪ್ರಾಧ್ಯಾಪಕ ಮತ್ತು ಪ್ರಾಂತೀಯ ಮಹಿಳಾ ಆರೋಗ್ಯ ಸಂಶೋಧನಾ ಸಂಸ್ಥೆಯನ್ನು ಮುನ್ನಡೆಸುತ್ತಿರುವ ವೈದಗ್ಯೆ ಟೈಮ್ ಪ್ಯಾಟರ್ನ್ ನನ್ನು ತೆರೆದಿಡುತ್ತದೆ. ಸಾಂಕ್ರಾಮಿಕ ರೋಗ ಲೈಂಗಿಕ ಜೀವನದ ಮೇಲೆ ಯಾವ ಪರಿಣಾಮ ಬೀರಿತು ಎನ್ನುವುದನ್ನು ಹೇಳಿದ್ದಾರೆ.
ನಾವು ಕೆನಡಾದ ಪ್ರತಿ ಪ್ರಾಂತ್ಯ ಮತ್ತು ಪ್ರದೇಶದಿಂದ 1,019 ಕೆನಡಾದ ಜನರನ್ನು ಆಯ್ಕೆ ಮಾಡಿಕೊಂಡಿದ್ದೆವು. 19 ರಿಂದ 81 ರ ನಡುವಿನ ವಯಸ್ಸಿನವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಸರಾಸರಿ ವಯಸ್ಸನ್ನು 30 ವರ್ಷಕ್ಕೆ ಸೀಮಿತ ಮಾಡಲಾಗಿತ್ತು.
ಸಂಗಾತಿಯೊಂದಿಗೆ ಇದ್ದಾಗಲೇ ಲಂವಾಗಿ ಮುರಿದ ಶಿಶ್ನ
ಇದರ ಫಲಿತಾಂಶ ಮಾತ್ರ ವಿಚಿತ್ರವಾಗಿತ್ತು. 70 ಪ್ರತಿಶತವನ್ನು ಬಿಳಿ ಎಂದು ಗುರುತಿಸಲಾಗಿದ್ದರೆ, ಉಳಿದ 30 ಪ್ರತಿಶತದಷ್ಟು ವೈವಿಧ್ಯಮಯ ಜನರ ಆಯ್ಕೆ ಮಾಡಿಕೊಳ್ಳಾಗಿತ್ತು. ಇದರಲ್ಲಿ 37 ಪ್ರತಿಶತದಷ್ಟು ಜನ ತಮ್ಮ ಸಂಗಾತಿಯೊಂದಿಗೆ ವಾಸ ಮಾಡುತ್ತಿದ್ದರು.
ಲಾಕ್ ಡೌನ್ ಆರಂಭದಲ್ಲಿ ಸಂಗಾತಿಗಳು ಪರಸ್ಪರ ಲೈಂಗಿಕ ಸಂಬಂಧದಲ್ಲಿ ಅತಿ ಹೆಚ್ಚು ಸಾರಿ ಪಾಲ್ಗೊಂಡಿದ್ದರು. ಆದರೆ ತಿಂಗಳುಗಳ ನಂತರ ಇದರ ಮಟ್ಟ ಇಳಿಕೆಯಾಯಿತು. ಆದರೆ ಸಂಗಾತಿಯೊಂದಿಗೆ ಇರದ ಜನರ ಮೇಲೆ ಲಾಕ್ ಡೌನ್ ಯಾವುದೇ ಪರಿಣಾಮ ಬೀರಲಿಲ್ಲ. ಸಂಗಾತಿಗಳ ನಡುವಿನ ಅತಿ ಹೆಚ್ಚಿನ ಸೆಕ್ಸ್ ಸೆಕ್ಷುವಲಕ್ ವೈಲೆನ್ಸ್ ಗೆ ಎಡೆ ಮಾಡಿಕೊಟ್ಟಿತು. ಮಹಿಳೆಯರು ತಮ್ಮ ಸಂಗಾತಿಯಿಂದ ದೂರ ಉಳಿಯಲೇ ಬಯಸಿದರು.
ಸಂಶೋಧನೆ ಇನ್ನೊಂದು ಅಂಶವನ್ನು ತೆರೆದಿಟ್ಟಿತು. ಲಾಕ್ ಡೌನ್ ಒತ್ತಡದ ಪರಿಣಾಮ ಸೋಲೋ ಸೆಕ್ಷುವಲ್ ಆಕ್ಟಿವಿಟಿ ಹೆಚ್ಚಾಯಿತು. ಸಂಗಾತಿಯೊಂದಿಗೆ ವಾಸಿಸುತ್ತಿದ್ದವರು ಹಸ್ತಮೈಥುನದಲ್ಲಿ ತೊಡಗಿಕೊಂಡರು. ನಂತರ ಜನರ ನಡುವಿನ ಲೈಂಗಿಕ ಕಾಮನೆಗಳು ಕಡಿಮೆಯಾದವು.
ಗುಪ್ತಾಂಗದ ಕೂದಲು ಅವನಿಗೆ ಇಷ್ಟ ಇಲ್ಲ ಏನು ಮಾಡಲಿ?
ಲಾಕ್ ಡೌನ್ ನಿಧಾನಕ್ಕೆ ತೆರವಾದರೂ ಜನರ ಲೈಂಗಿಕ ವಾಂಛೆ ಕಡಿಮೆಯಾಯಿತೇ ವಿನಾ ಜಾಸ್ತಿಯಾಗಲಿಲ್ಲ. ಆದರೆ ನಿಧಾನಕ್ಕೆ ಒಬ್ಬರೇ ಸಂಗಾತಿಯೊಂದಿಗೆ ವಾಸ ಮಾಡುತ್ತಿದ್ದವರ ಲೈಂಗಿಕ ಚಟುವಟಿಕೆ ಹೆಚ್ಚಾಯಿತು. ಬೇಸಿಗೆಯಲ್ಲಿ ಮತ್ತೆ ಕಡಿಮೆಯಾಯಿತು.
ಹೆಚ್ಚಾದ ಲೈಂಗಿಕ ಶಿಕ್ಷಣ: ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿರುವ ವಿಚಾರಗಳು ಲೈಂಗಿಕ ಶಿಕ್ಷಣವನ್ನು ಪ್ರಭಾವಶಾಲಿಯಾಗಿ ನೀಡಿದವು. ಈ ಸಂದರ್ಭದಲ್ಲಿ ಜನ ಲೈಂಗಿಕ ವಿಷಯಗಳ ಬಗ್ಗೆ ಸರ್ಚ್ ಮಾಡಿ ತಿಳಿದುಕೊಂಡರು. ಸೆಕ್ಸ್ ಬಗ್ಗೆ ಇದ್ದ ಅನೇಕ ಸುಳ್ಳು ಕಲ್ಪನೆಗಳನ್ನು ತೆಗೆದುಹಾಕುವಲ್ಲಿ ಲಾಕ್ ಡೌನ್ ಯಶಸ್ವಿಯಾಯಿತು .