Asianet Suvarna News Asianet Suvarna News

ಗೌಪ್ಯತೆ ನಿಯಮ ಮೀರಿ ಅಶ್ಲೀಲ ಚಿತ್ರ ಹಂಚಿಕೆ, ಪೋರ್ನ್‌ಹಬ್‌ ಮಾಲೀಕನ ಮೇಲೆ ಕೆನಡಾ ಕ್ರಮ!

ಕೆನಡಾದ ಮಾಂಟ್ರಿಯಲ್‌ ಮೂಲದ ಪೋರ್ನ್‌ಹಬ್‌ ವೆಬ್‌ಸೈಟ್‌ಗೆ ಸರ್ಕಾರಿ ಕ್ರಮದ ಆತಂಕ ಎದುರಾಗಿದೆ. ಗೌಪ್ಯತೆಯ ನಿಯಮಗಳನ್ನು ಮೀರಿ ವ್ಯಕ್ತಿಗಳ ಅಶ್ಲೀಲ ಚಿತ್ರವನ್ನು ಹಂಚಿದ ಆರೋಪವನ್ನ ಪೋರ್ನ್‌ಹಬ್‌ ಮಾಲೀಕರ ಮೇಲೆ ಹೊರಿಸಲಾಗಿದೆ.
 

Canada says Pornhub owner broke privacy laws by sharing explicit images san
Author
First Published Mar 2, 2024, 9:29 PM IST


ನವದೆಹಲಿ (ಮಾ.2): ಪೋರ್ನ್‌ಹಬ್‌ ಹಾಗೂ ಇತರ ವಯಸ್ಕ ವೆಬ್‌ಸೈಟ್‌ಗಳು ಕೆನಡಾ ದೇಶದ ಗೌಪ್ಯತೆ ಕಾನೂನುಗಳನ್ನು ಮೀರಿದೆ ಎಂದು ಕೆನಡಾದ ಕಾನೂನು ಜಾರಿ ಸಂಸ್ಥೆಗಳು ಗುರುವಾರ ಎಚ್ಚರಿಕೆ ನೀಡಿವೆ. ವ್ಯಕ್ತಿಗಳ ಖಾಸಗಿ ಫೋಟೋಗಳನ್ನು ಅವರ ಅನುಮತಿಯಿಲ್ಲದೆ ಇವುಗಳು ಪ್ರಕರಟವಾಗಿವೆ. ಈ ಬಗ್ಗೆ ಚಿತ್ರದಲ್ಲಿರುವ ವ್ಯಕ್ತಿಗಳ ಗಮನಕ್ಕೂ ತರದೆ ಅಥವಾ ಒಪ್ಪಂದವಿಲ್ಲದೆ ಖಾಸಗಿ ಫೋಟೋಗಳನ್ನು ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಪೋರ್ನ್‌ಹಬ್‌ ಸೇರಿದಂತೆ ಇತರ ವಯಸ್ಕ ವೆಬ್‌ಸೈಟ್‌ನ ಮಾಲೀಕರಾಗಿರುವ ಮಾಂಟ್ರಿಯಲ್‌ ಮೂಲದ ಐಲೋ ಹೋಲ್ಡಿಂಗ್ಸ್‌ ವಿರುದ್ಧ ಗೌಪ್ಯತಾ ಕಮೀಷನರ್‌ ಫಿಲಿಪ್‌ ಡುಫ್ರೆನ್ಸ್‌ ತನಿಖೆಯನ್ನೂ ಜಾರಿ ಮಾಡಿದ್ದಾರೆ. ತನ್ನ ಒಪ್ಪಿಗೆಯಿಲ್ಲದೆ, ಮಾಜಿ ಬಾಯ್‌ಫ್ರೆಂಡ್‌ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಐಲೋ ವೆಬ್‌ಸೈಟ್‌ಗಳಲ್ಲಿ ಪೋಸ್ಟ್‌ ಮಾಡಿದ್ದಾನೆ ಎಂದು ಮಹಿಳೆಯೊಬ್ಬಳು ದೂರು ನೀಡಿದ ಬೆನ್ನಲ್ಲಿಯೇ ಕೆನಡಾ ತನಿಖೆ ತೀವ್ರ ಮಾಡಿದೆ.

ಡುಫ್ರೆನ್ಸ್‌ ಹೇಳುವ ಪ್ರಕಾರ, ಖಾಸಗಿ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಅವರ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡುವ ಮುನ್ನ ಆ ಫೋಟೀ ಅಥವಾ ವಿಡಿಯೋದಲ್ಲಿರುವ ಎಲ್ಲಾ ವ್ಯಕ್ತಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು ಹಾಗೂ ಅವರ ಒಪ್ಪಿಗೆಗಳನ್ನು ಪಡೆದುಕೊಂಡಿರಬೇಕು. ಹಾಗಿದ್ದಲ್ಲಿ ಮಾತ್ರವೇ ಅವರು ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಲು ಸಾಧ್ಯವಾಗುತ್ತದೆ. ಆದರೆ, ಮಹಿಳೆಯ ವಿಚಾರದಲ್ಲಿ ವೆಬ್‌ಸೈಟ್‌ ಈ ನಿಯಮ ಮೀರಿದೆ ಎಂದು ತಿಳಿಸಲಾಗಿದೆ. Pornhub ಮತ್ತು ಇತರ Aylo ಸೈಟ್‌ಗಳಲ್ಲಿನ ಇರುವ ಕೆಟ್ಟ ಗೌಪ್ಯತಾ ರಕ್ಷಣಾ ನಿಯಮಗಳು, ದೂರುದಾರರು ಹಾಗೂ ಇಂಥದ್ದೇ ಪರಿಸ್ಥಿತಿ ಎದರಿಸಿದ ಇತರ ವ್ಯಕ್ತಿಗಳ ಸಮ್ಮತಿಯಿಲ್ಲದೆ ಹಲವು ಫೋಟೋಗಳನ್ನು ಪೋಸ್ಟ್‌ ಮಾಡಿರುವ ಕಾರಣ ಅವರ ಜೀವನದಲ್ಲಿ ಕೆಟ್ಟ ಪರಿಣಾಮಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಐಲೋಗೆ ಈ ಕುರಿತಾಗಿ ಸ್ವತಃ ಇದೇ ವ್ಯಕ್ತಿಗಳು ಮನವಿ ಮಾಡಿ ತಮ್ಮ ಕುರಿತಾದ ಕಂಟೆಂಟ್‌ಅನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಐಲೋ ಇದು ಬಹಳ ಸಮಯ ಹಿಡಿಯುತ್ತದೆ ಎಂದು ಪ್ರತಿಕ್ರಿಯಿಸಿದೆ.ಕೆನಡಾದ ಗೌಪ್ಯತೆ ನಿಯಮಗಳಿಗೆ ಐಲೋ ನಿಬಂಧನೆ ಖಾತರಿಪಡಿಸಲು ತಾನು ಹಲವಾರು ಸಲಹೆಗಳನ್ನು ನೀಡಿದ್ದೇನೆ ಎಂದು ಡುಫ್ರೆನ್ಸ್‌ ಹೇಳಿದ್ದಾರೆ, ಆದರೆ ವೆಬ್‌ಸೈಟ್‌ ಅವುಗಳಲ್ಲಿ ಯಾವುದನ್ನೂ ಒಪ್ಪಲಿಲ್ಲ ಎಂದಿದ್ದಾರೆ.

ನೀವು ಈ 3 ಪೋರ್ನ್ ವೆಬ್‌ಸೈಟ್‌ ನೋಡ್ತೀರಾ? ಹಾಗಾದ್ರೆ ಇಲ್ನೋಡಿ: ಮತ್ತಷ್ಟು ಕಠಿಣ ನಿಯಮ ಜಾರಿ!

ಮಹಿಳೆ ತನ್ನ ದೂರನ್ನು ದಾಖಲಿಸಲು ಕಾರಣವಾದ ಘಟನೆಯು 2015 ರಲ್ಲಿ ಸಂಭವಿಸಿದೆ ಮತ್ತು ಸೈಟ್‌ನಿಂದ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಲು ಕಂಪನಿಯು ಅನೇಕ ಪ್ರಯತ್ನಗಳನ್ನು ಮಾಡಿದೆ ಎಂದು ಐಲೋ ಹೇಳಿದೆ. "ನಾವು ಈಗಾಗಲೇ ಅಭ್ಯಾಸಗಳು ಮತ್ತು ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಿದ್ದೇವೆ, ಅದು ವರದಿಯಲ್ಲಿ ವಿವರಿಸಿರುವ ಕಳವಳಗಳನ್ನು ಗಣನೀಯವಾಗಿ ಪರಿಹರಿಸುತ್ತದೆ" ಎಂದು ಅದು ಇಮೇಲ್ ಹೇಳಿಕೆಯಲ್ಲಿ ತಿಳಿಸಿದೆ.ಆಪಾದಿತ ಲೈಂಗಿಕ ಕಳ್ಳಸಾಗಣೆ ಕಾರ್ಯಾಚರಣೆಗೆ ಸಂಬಂಧ ಪಟ್ಟಂತೆ ತನ್ನ ಮೇಲಿದ್ದ ತನಿಖೆಯನ್ನು ಕೊನೆ ಮಾಡಲು ಡಿಸೆಂಬರ್‌ನಲ್ಲಿ ಕಂಪನಿಯು ಅಮೆರಿಕ ಸರ್ಕಾರಕ್ಕೆ 1.8 ಮಿಲಿಯನ್‌ ಡಾಲರ್‌ ಪಾವತಿ ಮಾಡಿತ್ತು.

ಹುಡುಗರು Pornhubನಲ್ಲಿ ಅತಿ ಹೆಚ್ಚು ಹುಡುಕಿದ್ದು ಈ ನಟಿಯನ್ನು; ಸನ್ನಿ ಲಿಯೋನ್ ಮೀರಿಸಿದ ಕೈಫ್ ಬೆಡ್‌ರೂಮ್ ಹಾಟ್ ವಿಡಿಯೋ!

Follow Us:
Download App:
  • android
  • ios