ಗಂಡ ಮಾತೇ ಆಡೋಲ್ವಾ? ಅರ್ಥ ಮಾಡಿಕೊಳ್ಳೋದು ಕಷ್ಟ ಅನಿಸ್ತಾ ಇದ್ಯಾ?

ಕೆಲವು ಪುರುಷರು ಮೂಡಿಯಾಗಿರುತ್ತಾರೆ, ಕೆಲವರು ಏನು ಮಾಡಿದರೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದೇ ಇಲ್ಲ. ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ, ತಮ್ಮನ್ನು ತಾವು ಓಪನ್‌ ಅಪ್‌ ಆಗುವುದಕ್ಕೆ ಅವರ ಪುರುಷ ಮೇಲರಿಮೆ ಅಡ್ಡಿಯಾಗಬಹುದು. ಆದರೆ, ಅವರ ಈ ಗುಣದಿಂದಾಗಿ ಸಂಬಂಧ ಬಳಲುತ್ತದೆ. ಹೀಗಾಗದಂತೆ ನೋಡಿಕೊಳ್ಳುವುದು ಉತ್ತಮ.

Some men do not open up with partner it will affects relationship sum

ಸಂಪ್ರದಾಯವಾದಿ ಮನಸ್ಸುಗಳು ಇಂದಿಗೂ ಮಹಿಳೆಯರನ್ನು ನಾಚಿಕೆಯ ಸ್ವಭಾವದವರನ್ನಾಗಿಯೇ ಪರಿಗಣಿಸುತ್ತವೆ, ನೋಡುತ್ತವೆ. ಆದರೆ, ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರು ಮೊದಲಿನಿಂದಲೂ ಮುಕ್ತವಾದ ಮನಸ್ಥಿತಿ ಹೊಂದಿರುವುದು ಕಂಡುಬರುತ್ತದೆ. ಸಾಮಾಜಿಕವಾಗಿ ಮಹಿಳೆಯರಿಗೆ ಅಷ್ಟೊಂದೆಲ್ಲ ಪ್ರಾಮುಖ್ಯತೆ ಇರದಿದ್ದರೂ ತಮ್ಮವರ ನಡುವೆ ಮಹಿಳೆಯರು ಮುಕ್ತವಾಗಿ ಒಡನಾಡುವಷ್ಟು ಪುರುಷರು ಒಡನಾಡುವುದಿಲ್ಲ. ತಮ್ಮ ಭಾವನೆಗಳನ್ನು ಮಹಿಳೆಯರಷ್ಟು ಓಪನ್‌ ಆಗಿ ಹೇಳಿಕೊಳ್ಳುವುದೂ ಇಲ್ಲ. ಪುರುಷರು ತಮ್ಮ ಭಾವನೆಗಳನ್ನು ಹೇಳಿಕೊಂಡರೆ, ಕಣ್ಣೀರು ಹಾಕಿದರೆ ಅವುಗಳನ್ನು ದೌರ್ಬಲ್ಯವೆಂಬಂತೆ ಪರಿಗಣಿಸಲಾಗುತ್ತಿತ್ತು. ತಮ್ಮ ಮನದಲ್ಲಿರುವುದನ್ನು ಹೇಳಿಕೊಳ್ಳಲು ಅವರಿಗೆ ಸ್ಟೇಟಸ್‌ ಅಡ್ಡಬರುತ್ತಿತ್ತು ಹಾಗೂ ಸಾಮಾಜಿಕವಾಗಿ ಅದಕ್ಕೆ ಬೆಂಬಲವೂ ಇರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಂತೂ ಮಹಿಳೆಯರು, ಪುರುಷರು ಎನ್ನುವ ಭೇದವೂ ಇಲ್ಲ. ಆದರೂ ಪುರುಷರು ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ. ಉತ್ತಮ ಮಾತುಕತೆಯ ಕಾರಣಕ್ಕಾಗಿಯೇ ಮಹಿಳೆಯರು ಸಂಬಂಧಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಯಾವುದೇ ಸಂಬಂಧಕ್ಕೆ ಉತ್ತಮ ಸಂವಹನ ಅತ್ಯಗತ್ಯ. ಮುಕ್ತವಾದ ಮಾತುಕತೆಯೇ ಇಲ್ಲವಾದರೆ ಸಂಬಂಧದಲ್ಲಿ ಏನೋ ಕೊರತೆಯೊಂದು ಉಳಿದುಹೋಗುತ್ತದೆ. ಭಾವನೆಗಳ ಬಗ್ಗೆ ಓಪನ್‌ ಆಗದ ಪುರುಷರು ಸಾಮಾನ್ಯವಾಗಿ ತಮ್ಮ ಸಂಬಂಧಗಳಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಅವುಗಳನ್ನು ಅರಿತುಕೊಂಡು ತಿದ್ದಿಕೊಳ್ಳುವುದು ಕ್ಷೇಮ.

•    ಸಂಗಾತಿಗೇ (Partner) ತಮ್ಮ ಮನಸ್ಥಿತಿಯ (Mentality) ಅರಿವಿಲ್ಲದಂತೆ ಮಾಡುವುದು
ಯಾರೊಂದಿಗೂ ಹೆಚ್ಚು ಒಡನಾಡದ (Lack of Interaction) ಪುರುಷರು (Male) ತಮ್ಮ ಸಂಗಾತಿಯೊಂದಿಗೂ ಅದೇ ಗ್ಯಾಪ್‌ ಉಳಿಸಿಕೊಳ್ಳುವುದು ಕ್ಷೇಮಕರವಲ್ಲ. ಇದರಿಂದ ಅವರ ಸಂಬಂಧ (Relation) ಆಪ್ತವಾಗಲು, ಆಳವಾದ ಸಾಂಗತ್ಯ ಏರ್ಪಡಲು ಸಾಧ್ಯವಾಗುವುದಿಲ್ಲ. ದೀರ್ಘಕಾಲ ಉಳಿಯುವುದಂತೂ ದೂರದ ಮಾತು. ಸಾಮಾನ್ಯವಾಗಿ ಯಾರಲ್ಲೂ ತಮ್ಮೊಳಗನ್ನು ಬಿಚ್ಚಿಡದ ಪುರುಷರು ಅಗ್ರೆಸ್ಸಿವ್‌ (Aggressive) ಆಗಿರುತ್ತಾರೆ. ಅಥವಾ ಭಯಪಡುತ್ತಾರೆ. ತಮ್ಮ ಬಗ್ಗೆ ಸಂಗಾತಿಗೆ ತಿಳಿದುಹೋದರೆ ಸಂಬಂಧಕ್ಕೆ ಮುಕ್ಕಾಗಬಹುದು ಎನ್ನುವ ಭಯವೂ ಅವರಲ್ಲಿರುತ್ತದೆ. ಆದರೆ, ಇವುಗಳಿಂದ ಹೊರಬಂದು ಪ್ರಾಮಾಣಿಕ ಪ್ರಯತ್ನ ನಡೆಸುವುದು ಉಚಿತ. ನಿಜವಾಗಿಯೂ ತಮ್ಮ ಮನಸ್ಸೇನು ಎನ್ನುವುದರ ಬಗ್ಗೆ ಸುಳಿವು ಬಿಟ್ಟುಕೊಡದೇ ಇದ್ದಾಗ ಮಾನಸಿಕ ಸಮಸ್ಯೆಗಳು (Mental Problems) ಉಂಟಾಗಬಲ್ಲವು.

Multiple Relationshipನಲ್ಲಿ ಸುಖ ಕ್ಷಣಿಕ, ಜೀವನ ಪೂರ್ತಿ ಅನುಭವಿಸೋದು ತಪ್ಪೋದೇ ಇಲ್ಲ

•    ಕೊಟ್ಟುಪಡೆಯುವ (Give-Take) ಸಂಬಂಧದ ಬಗ್ಗೆ ಅಳುಕು
ಹಲವು ಪುರುಷರಿಗೆ ಕೊಟ್ಟು ಗೊತ್ತಿರುತ್ತದೆ, ಹಾಗೆಯೇ ಕೆಲವರಿಗೆ ಪಡೆದು ಗೊತ್ತಿರುತ್ತದೆ. ಆದರೆ, ಕೊಟ್ಟುಪಡೆಯುವ ಸಂಬಂಧದ ಬಗ್ಗೆ ಭಾರೀ ಅಳುಕಿರುತ್ತದೆ. ಸಂಗಾತಿ ಸಮಸ್ಯೆಯಲ್ಲಿರುವಾಗ ಒಂದು ಭರವಸೆಯ ಅಪ್ಪುಗೆ (Hug) ನೀಡಲು ಹಿಂಜರಿಯುವ ಪುರುಷರಿದ್ದಾರೆ. ಅದು ಅವರಿಗೆ ಒಂಥರ ಅಸಹಜ ಎನಿಸುತ್ತದೆ. ಹೀಗಾಗಿ, ಭಾವನೆ (Feelings) ವ್ಯಕ್ತಪಡಿಸುವುದೇ ಇಲ್ಲ. ಪರಿಣಾಮವಾಗಿ, ಅವರ ಸಂಗಾತಿಯಲ್ಲಿ ಆತ್ಮೀಯತೆಯ ಕೊರತೆ ಉಂಟಾಗಿ ಕಿರಿಕಿರಿ ಹೆಚ್ಚಬಹುದು.  

•       ನಂಬಿಕೆಯ ಸಮಸ್ಯೆ (Trust Issue)
ಮನಬಿಚ್ಚಿ ಮಾತನಾಡದ (Not Open Up) ಪುರುಷರ ಬಗ್ಗೆ ಸಂಗಾತಿಯಲ್ಲಿ ನಂಬಿಕೆಯ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು. “ಅವರ ಸ್ವಭಾವವೇ ಹಾಗೆʼ ಎಂದು ಎಷ್ಟು ಬಾರಿ ಸಮಜಾಯಿಷಿ ಕೊಟ್ಟುಕೊಂಡರೂ ಅವರ ಬಗ್ಗೆ ಒಂದು ರೀತಿಯ ಅಪನಂಬಿಕೆ ಹೆಚ್ಚುತ್ತಲೇ ಇರುತ್ತದೆ. ಎಲ್ಲವನ್ನೂ ಬಾಯಿಬಿಟ್ಟು ಹೇಳಲಾಗದಿದ್ದರೂ ಕೆಲವನ್ನಾದರೂ ಮಾತಿನಲ್ಲಿ ವ್ಯಕ್ತಪಡಿಸುವುದು ಸಂಬಂಧದ ಹಿತದೃಷ್ಟಿಯಿಂದ ಅನಿವಾರ್ಯ.

•    ಸಂಗಾತಿಯಲ್ಲಿ ಅಸುರಕ್ಷಿತತೆ (Unsafe)
ಭಾವನೆಗಳನ್ನು ಹಂಚಿಕೊಳ್ಳದ ಪುರುಷರ ಸಾಂಗತ್ಯದಲ್ಲಿ ಸುರಕ್ಷಿತ (Safe) ಭಾವನೆ ಮೂಡದೇ ಹೋಗಬಹುದು. ಗುಟ್ಟು ಮಾಡುತ್ತಿದ್ದಾರೆ, ಏನನ್ನೋ ಮುಚ್ಚಿಡುತ್ತಿದ್ದಾರೆ ಎನ್ನುವ ಭಾವನೆಗಳೂ ಹುಟ್ಟಬಹುದು. ಇಂತಹ ಅನುಮಾನಗಳು ಸಂಬಂಧದ ಆರೋಗ್ಯಕ್ಕೆ (Health) ಒಳ್ಳೆಯದಲ್ಲ. 

Chanakya Niti : ಪುರುಷರ 'ಈ' ಗುಟ್ಟು ಮಹಿಳೆಯರ ಕಿವಿಗೆ ಬೇಗ ಬೀಳುತ್ತವೆ 

•    ದೈಹಿಕವಾಗಿ (Physically) ಮಾತ್ರ ಜತೆಗಿರುವ ಭಾವನೆ
ಎಷ್ಟೋ ಬಾರಿ ದಾಂಪತ್ಯದಲ್ಲಿ ಹೀಗಾಗುವುದು ಸಹಜ. ಪುರುಷರು ತಮ್ಮೊಂದಿಗೆ ದೈಹಿಕವಾಗಿ ಮಾತ್ರ ಜತೆಗಿದ್ದಾರೆ, ಭಾವನಾತ್ಮಕವಾಗಿ (Emotionally) ಒಂದಾಗಿಲ್ಲ ಎನ್ನುವ ಭಾವನೆ ಮಹಿಳೆಯರಲ್ಲಿ (Woman) ಮೂಡುತ್ತದೆ. ಆದರೆ, ಯಾವಾಗಲಾದರೂ ಒಮ್ಮೆ ಹಾಗಾದರೆ ನಿಭಾಯಿಸಬಹುದು. ಸದಾಕಾಲ ಅದೇ ರೀತಿ ಇದ್ದಾಗ ಸಂಬಂಧದ ಅಗತ್ಯದ ಬಗ್ಗೆ ಪ್ರಶ್ನೆ ಏಳಬಹುದು. ವಿಶೇಷ ಭಾವನೆ ಹುಟ್ಟದೇ ಇರಬಹುದು. 

Latest Videos
Follow Us:
Download App:
  • android
  • ios