ಈ ವಿಷಯದಲ್ಲಿ ಮಕ್ಕಳನ್ನೂ ದೂಷಿಸುವಂತಿಲ್ಲ. ಏಕೆಂದರೆ ಹಕ್ಕಿಗಳಂತೆ ಕೂತಲ್ಲಿ ಕೂರದ ಅವರಿಗೆ ಲಾಕ್‌ಡೌನ್‌ ದೊಡ್ಡ ಸಮಸ್ಯೆಯೇ. ಇಂಥಾ ಟೈಮ್‌ನಲ್ಲಿ ಮಕ್ಕಳನ್ನು ಕೊಲೀಗ್ಸ್‌ ಥರ ನೋಡೋ ಪದ್ಧತಿಯನ್ನು ಕೆಲವರು ಶುರು ಮಾಡಿದ್ದಾರೆ. ‘ನಾವಿಬ್ಬರೂ ಜೊತೆಯಾಗಿ ಕೆಲಸ ಮಾಡ್ತಿದ್ದೀವಿ.

#WorkFromHome: ಆನ್‌ಲೈನ್‌ನಲ್ಲೇ ಮಂತ್ರಪಠಣ ! ಶ್ರಾದ್ಧಕರ್ಮ..!!

ಇದೀಗ ಆಫೀಸ್‌, ನಾನು ಇಂತಿಷ್ಟುಟೈಮ್‌ ಒಳಗೆ ಇಷ್ಟುಕೆಲಸ ಮುಗಿಸಬೇಕು. ನೀನೂ ಇಷ್ಟುಕೆಲಸ ಮುಗಿಸಬೇಕು’ ಅಂತ ಆಟದ ರೀತಿಯಲ್ಲೇ ವರ್ಕ್ ಫ್ರಂ ಹೋಮ್‌ ಮಾಡೋ ಪ್ರಯತ್ನ ಮಾಡ್ತಿದ್ದಾರೆ. ಮಕ್ಕಳಿಗೂ ಒಂದಿಷ್ಟುಕೆಲಸ ಕೊಟ್ಟು ಜೊತೆಗೆ ಕೂರಿಸಿದ್ದಾರೆ. ಈ ಪ್ರಯೋಗ ಹೇಳಿಕೊಳ್ಳುವಷ್ಟುಯಶಸ್ವಿಯಾಗದಿದ್ದರೂ ಒಂದು ಮಟ್ಟಿನ ಕೆಲಸದ ವಾತಾವರಣ ಸೃಷ್ಟಿಸಿದೆ ಅಂತಾರೆ ಕೆಲವು ಪೋಷಕರು.

ಮನೆಯಲ್ಲಿ ನೀವೂ ಈ ಥರ ಮಾಡ್ಬೇಕು ಅಂದರೆ ಕೆಲವು ಟಿಫ್ಸ್‌

- ಆರಂಭದಲ್ಲಿ ಮಗುವಿಗೆ ನಿಮ್ಮ ಆಫೀಸ್‌ ನ ವಾತಾವರಣ ಹೇಗಿರುತ್ತದೆ. ಅಲ್ಲಿ ನೀವು ಹೇಗಿರ್ತೀರಿ, ಮಗು ಹೇಗಿರಬೇಕು ಅನ್ನೋದನ್ನು ವಿವರಿಸಿ,

- ಮಗುವಿಗೂ ಒಂದಿಷ್ಟುಟಾಸ್ಕ್‌ ಗಳನ್ನು ಕೊಡಿ.

ಇನ್ನು ನಿಮಗೆ ವರ್ಕ್ ಫ್ರಂ ಹೋಂ ಫಿಕ್ಸ್?

- ಟಾಸ್ಕ್‌ ಕಂಪ್ಲೀಟ್‌ ಮಾಡಿದರೆ ಅರ್ಧ ಗಂಟೆ ಆಟ ಆಡುವ ಅಥವಾ ಇನ್ನಿತರ ರಿವಾರ್ಡ್‌ ಕೊಡಿ.

- ಮಗುವಿಗೂ ಆಫೀಸ್‌ ಕೆಲಸದ ಚಾಲೆಂಜ್‌ ಗಳನ್ನು ವಿವರಿಸಿ. ಈ ಚಾಲೆಂಜ್‌ ಫೇಸ್‌ ಮಾಡದಿದ್ರೆ ಏನಾಗಬಹುದು ಅಂತ ಹೇಳಿ. ಹಾಗಂತ ಹೆದರಿಸಬೇಡಿ.

- ಆಫೀಸ್‌ ನಲ್ಲಿ ಕೊಲೀಗ್ಸ್‌ ಜೊತೆಗೆ ವ್ಯವಹರಿಸುವಂತೆ ಮಗುವಿನ ಜೊತೆಗೂ ಮಾತನಾಡಿ.