ತಾಯಿಯೊಂದಿಗಿನ ಸಲುಗೆ ವ್ಯಕ್ತಿಯ ವಿವಾಹ ಜೀವನದ ಮೇಲೆ ಪರಿಣಾಮ ಬೀರಬಲ್ಲದೇ?

ತಾಯಿಯೊಂದಿಗೆ ವ್ಯಕ್ತಿ ಹೆಚ್ಚು ಸಲುಗೆಯಿಂದಿರುತ್ತಾನೋ, ಅಥವಾ ಎಮೋಶನಲಿ ದೂರವಾಗಿರುತ್ತಾನೋ, ಆಕೆಯ ಮಾತುಗಳನ್ನು ಗೌರವಿಸುತ್ತಾನೆಯೇ ಇಲ್ಲವೇ, ಆಕೆಯನ್ನು ಹೇಗೆ ನಡೆಸಿಕೊಳ್ಳುತ್ತಾನೆ ಎಂಬುದೆಲ್ಲ ಆತನ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತವೆಯೇ?   

Can a mans equation with his mother affect his marriage

ಶತಮಾನಗಳಿಂದಲೂ ಇದೊಂದು ಗಂಭೀರ ಚರ್ಚೆಯ ವಿಷಯ. ಪತಿ ಹಾಗೂ ಆತನ ತಾಯಿಯ ನಡುವಿನ ಸಂಬಂಧ ಆತನ ವೈವಾಹಿಕ ಜೀವನದ ಮೇಲೆ ಪರಿಣಾಮ ಹೊಂದಿರುತ್ತದೆಯೇ ಎಂಬುದು. ಜೀವನವನ್ನೇ ಪ್ರತಿಫಲಿಸುವ ಸಾಹಿತ್ಯ ಕೂಡಾ ಈ ವಿಷಯವನ್ನು ಹಲವು ಬಾರಿ ಬಳಸಿಕೊಂಡಿದೆ. 

ಶೇಕ್ಸ್‌ಪಿಯರ್‌ನ 'ಹ್ಯಾಮ್ಲೆಟ್', ಡಿ.ಎಚ್ ಲಾರೆನ್ಸ್‌ನ 'ಸನ್ಸ್ ಆ್ಯಂಡ್ ಲವರ್ಸ್' ಮುಂತಾದ ಕಾದಂಬರಿಗಳು ತಾಯಿ ಮಗನ ನಡುವಿನ ಸಂಬಂಧ ಮಗನ ವ್ಯಕ್ತಿತ್ವ ಬೆಳೆಸುವಲ್ಲಿ ಎಂಥ ಪಾತ್ರ ವಹಿಸುತ್ತದೆ, ಅದು ನಂತರದಲ್ಲಿ ಆತನ ಇತರ ಸಂಬಂಧಗಳ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸುವ ಪ್ರಯತ್ನ ಮಾಡಿವೆ. 

ಹೊಂದಾಣಿಕೆ ಅಸ್ತ್ರ ಬತ್ತಳಿಕೆಯಲ್ಲಿದ್ರೆ ಲೈಫ್‍ನಲ್ಲಿ ನೋ ವರಿಸ್

ಪ್ರಖ್ಯಾತ ಮನಃಶಾಸ್ತ್ರಜ್ಞ ಹಾಗೂ ನ್ಯೂರಾಲಜಿಸ್ಟ್ ಸಿಗ್ಮಂಡ್ ಫ್ರಾಯ್ಡ್ ಕೂಡಾ ಗಂಡು ಮಗ ಹಾಗೂ ತಾಯಿಯ ನಡುವಿನ ವಿಶಿಷ್ಠ ಅಟ್ಯಾಚ್‌ಮೆಂಟ್ ಅಥವಾ ಆಕರ್ಷಣೆ ವಿವರಿಸುವ ಈಡಿಪಸ್ ಕಾಂಪ್ಲೆಸ್ ಎಂಬ ವಿಷಯದ ಕುರಿತು  ಹೇಳಿದ್ದಾರೆ. ಅಂದರೆ, ತಾಯಿಯೊಂದಿಗಿನ ಮಗನ ಸಂಬಂಧ ಖಂಡಿತಾ ಯೋಚಿಸುವ ವಿಷಯವೇ, ಅದರಲ್ಲೂ ಆತನ ಗರ್ಲ್‌ಫ್ರೆಂಡ್ ಅಥವಾ ಪತ್ನಿಗೆ ಇದೊಂದು ದೊಡ್ಡ ವಿಷಯವೇ. ಈ ಕುರಿತು ತಮ್ಮ ಅನುಭವವನ್ನು ಐವರು ಭಾರತೀಯ ಪತ್ನಿಯರು ಹಂಚಿಕೊಂಡಿದ್ದಾರೆ. ಅವರೇನಂತಾರೆ ನೋಡೋಣ. 

ನನ್ನ ಪತಿ ಎಲ್ಲವನ್ನೂ ತಾಯಿಯೊಂದಿಗೆ ಚರ್ಚಿಸುತ್ತಾರೆ

'ತಾಯಿಯ ಅವಲಂಬನೆ ನನ್ನ ಪತಿಗೆ ವಿವಾಹದ ನಂತರವೂ ಮುಂದುವರಿದಿದೆ.  ಆತ ಏನೇನು ಖರೀದಿಸಿದ, ಎಷ್ಟು ಖರ್ಚು ಮಾಡಿದ, ನಾವು ಲಂಚ್‌ಗೆ ಏನು ತಿಂದೆವು ಹೀಗೆ ಎಲ್ಲವನ್ನೂ ತಾಯಿಯೊಂದಿಗೆ ಹೇಳುವುದು ನನಗೆ ವಿಚಿತ್ರವೆನಿಸುತ್ತಿತ್ತು. ಇದೇ ವಿಷಯ ನಮ್ಮಿಬ್ಬರ ನಡುವೆ ಹಲವು ಜಗಳಗಳಿಗೆ ಕಾರಣವಾಗಿದೆ. ವಿವಾಹವಾಗಿ ಏಳು ವರ್ಷವಾದರೂ ಈಗಲೂ ಇಂಥದೇ ವಿಷಯಗಳು ಜಗಳಕ್ಕೆ ಕಾರಣವಾಗುತ್ತವೆ. '

ಹೋಲಿಕೆ ನಿಲ್ಲುವುದೇ ಇಲ್ಲ

'ನಾವು ವಿವಾಹವಾಗಿ ಎಷ್ಟೇ ವರ್ಷಗಳಾಗಲೀ, ತಾಯಿಯನ್ನು ಹಾಗೂ ಪತ್ನಿಯನ್ನು ಹೋಲಿಸಿ ನೋಡುವುದು, ಆ ಬಗ್ಗೆ ಮಾತನಾಡುವುದು ನಿಲ್ಲುವುದೇ ಇಲ್ಲ. ತಾಯಿಯನ್ನು  ತಲೆ ಮೇಲೆ ಹೊತ್ತು ತಿರುಗುವ ಗಂಡಸರದೆಲ್ಲ ಇದೇ ಅಭ್ಯಾಸ. ನಾವು ವಿವಾಹವಾಗಿ 14 ವರ್ಷಗಳು ಕಳೆಯಿತು. ಈಗ ಕೂಡಾ ಆತ ಅಮ್ಮನಂತೆ ಪಕೋಡಾ ಮಾಡಲು ಯಾರಿಗೂ ಬರುವುದಿಲ್ಲ, ಅಮ್ಮ ನಿನ್ನಂತೆ ಮೇಕಪ್ ಮಾಡಿಕೊಳ್ಳದಿದ್ದರೂ ಚೆಂದ ಎಂದೆಲ್ಲ ಹೇಳುವುದನ್ನು ಬಿಡುವುದಿಲ್ಲ. ಈಗೀಗ ನಾನು ಇಂಥ ಮಾತುಗಳಿಗೆ ಪ್ರತಿಕ್ರಿಯಿಸುವುದನ್ನೇ ಬಿಟ್ಟಿದ್ದೇನೆ.'

ಆತನಿಗೆ ಕಾಮನ್ ಸೆನ್ಸ್ ಬೇಕು

'ಹೌದು, ತಾಯಿಯೊಂದಿಗಿನ ಬಾಂಧವ್ಯ ವಿವಾಹ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಆದರೆ, ಪ್ರತಿಯೊಬ್ಬರೂ ವಿಭಿನ್ನರಾಗಿರುತ್ತಾರೆ ಎಂಬುದನ್ನು ನಾವು ಮರೆಯಬಾರದು. ನಾನು ಕೂಡಾ ತಾಯಿಯೇ. ನನ್ನ ಮಗನಿಗೆ 3 ವರ್ಷಗಳ ಹಿಂದೆ ವಿವಾಹವಾಗಿದೆ. ಈಗೀಗಂತೂ ನಾನು ಮಗನ ಜೊತೆಗಿಂತ ಸೊಸೆಯ ಜೊತೆ ಮಾತನಾಡುವುದೇ ಹೆಚ್ಚು. ಏಕೆಂದರೆ ನನ್ನ ಮಗನ ಬಳಿ ಸಮಯವೇ ಇರುವುದಿಲ್ಲ. ಭಾರತೀಯ ಪುರುಷರೆಲ್ಲ ತಾಯಿಯನ್ನು ಪೂಜಿಸುತ್ತಾರೆಂಬುದು ಸುಳ್ಳು. ನನ್ನ ಮಗನಂತೂ ಹಾಗೆ ಮಾಡುವುದಿಲ್ಲ' .

ತಾಯಿಯದೂ ಪಾತ್ರವಿದೆ

'ಈ ವಿಷಯದಲ್ಲಿ ಕೇವಲ ಮಗನೊಬ್ಬನನ್ನೇ ದೂರಿ ಪ್ರಯೋಜನವಿಲ್ಲ. ತಾಯಿಯದೂ ಬಹಳ ದೊಡ್ಡ ಪಾತ್ರವಿರುತ್ತದೆ. ತಾಯಿ ಬಾಲ್ಯದಿಂದ ಮಗನನ್ನು ಏನೆಲ್ಲ ಕಲಿಸಿ ಬೆಳೆಸುತ್ತಾಳೋ ಆತ ಹಾಗೆಯೇ ಆಗುತ್ತಾನೆ. ಆಕೆ ಹೇಳಿದ್ದೆಲ್ಲ ಸತ್ಯವೆಂದುಕೊಂಡು ಬೆಳೆಯುತ್ತಾನೆ. ತಾಯಿ ಸರಿಯಾದ ವ್ಯಾಲ್ಯೂಸ್ ಕಲಿಸದಿದ್ದರೆ ಆತ ವೈವಾಹಿಕ ಜೀವನದಲ್ಲಿ ಎಡವುತ್ತಾನೆ. ಪತ್ನಿಯನ್ನು ಹೇಗೆ ನಡೆಸಿಕೊಳ್ಳಬೇಕೆಂದು ಹೇಳಿಕೊಡುವ ಜೊತೆಗೆ, ತಾಯಿಗೂ ಮಗನ ವೈವಾಹಿಕ ಜೀವನದಲ್ಲಿ ತಾನು ಮೂಗು ತೂರಿಸಬಾರದು ಎಂಬುದು ತಿಳಿದಿರಬೇಕು '.

ಗೆಳೆಯರ ರಿಯುನಿಯನ್‌ಗೆ ಅಡ್ಡಿಯಾಗದ ಲಾಕ್‌ಡೌನ್

ಇದಕ್ಕೆ ಒಂದು ಪದದ ಉತ್ತರವಿಲ್ಲ

'ಬಹಳಷ್ಟು ಪತ್ನಿಯರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ, ಇನ್ನೂ ಹಲವು ಮಹಿಳೆಯರು ತಮ್ಮ ಅತ್ತೆ ಸಪೋರ್ಟಿವ್ ಆಗಿರುವ ಕುರಿತು ಸಂತಸವನ್ನೂ ಹೊಂದಿದ್ದಾರೆ. ಹಾಗಾಗಿ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.'

Latest Videos
Follow Us:
Download App:
  • android
  • ios