ಸ್ವೀಟ್ ತಿನ್ನೇ ಎಂದು ಒತ್ತಾಯಿಸಿದ ವರ, ಸಿಟ್ಟಿಗೆದ್ದು ಹೊಡ್ದೇಬಿಟ್ಲು ಭಾವಿ ಹೆಂಡ್ತಿ !
ಈಗೆಲ್ಲಾ ಮದ್ವೆ ನಿಲ್ಲೋಕೆ ದೊಡ್ಡ ದೊಡ್ಡ ಕಾರಣಗಳೇನೂ ಬೇಕಿಲ್ಲ. ಸೀರೆ ಚೆನ್ನಾಗಿಲ್ಲ, ಊಟ ಚೆನ್ನಾಗಿರಲ್ಲಿಲ್ಲ ಅನ್ನೋ ಸಣ್ಣ ಪುಟ್ಟ ಕಾರಣಕ್ಕೆಲ್ಲಾ ಮದ್ವೆ ನಿಂತ್ಹೋಗುತ್ತದೆ. ಹಾಗೆಯೇ ಇಲ್ಲೊಂದೆಡೆ ಹುಡುಗ ಸ್ವೀಟ್ಸ್ ತಿನ್ನೋಕೆ ಒತ್ತಾಯಿಸಿದ ಅಂತ ಹುಡುಗಿ ಮದ್ವೇನೆ ಕ್ಯಾನ್ಸಲ್ ಮಾಡಿಸಿದ್ದಾಳೆ.
ಮದುವೆ (Marriage) ಅನ್ನೋದು ಒಂದು ಸುಂದರವಾದ ಸಂಬಂಧ. ಈ ಅನುಬಂಧ ಏಳೇಳು ಜನ್ಮದ್ದು ಅಂತಾರೆ. ಆದರೆ ಇತ್ತೀಚಿನ ದಿನಗಳಂತೂ ಏಳೇಳು ಜನ್ಮ ಬಿಟ್ಟು ಮದುವೆಯಾದ ಒಂದೇ ವರ್ಷಕ್ಕೆ ಡಿವೋರ್ಸ್ ಆಗಿರುತ್ತೆ. ಅಷ್ಟೇ ಅಲ್ಲ, ಮದುವೆ ಮಂಟಪದಲ್ಲೇ ಅದೆಷ್ಟೋ ಸಂಬಂಧಗಳು (Relationship) ಮುರಿದು ಬೀಳುತ್ತವೆ. ಹಿಂದೆಲ್ಲಾ ಹಿರಿಯರು ಮದುವೆ ಅಂದ್ರೆ ಅನುಸರಿಸಿಕೊಂಡು ಬಾಳೋದು ಅಂತಿದ್ರು. ಆದ್ರೆ ಈಗಿನ ಹುಡುಗ-ಹುಡುಗಿಯರು ಸಣ್ಣಪುಟ್ಟ ವಿಚಾರಕ್ಕೆಲ್ಲಾ ಸಿಟ್ಟಿಗೆದ್ದು ಮಂಟಪದಿಂದ ಎದ್ದು ನಡೆದುಬಿಡ್ತಾರೆ. ಹೀಗಾಗಿಯೇ ಅದೆಷ್ಟೋ ಮದುವೆಗಳು ನಿಂತು ಹೋಗಿವೆ.
ಹುಡುಗಿ ದಪ್ಪ, ಹುಡುಗನಿಗೆ ಕೂದಲ್ಲಿಲ್ಲ, ಹುಡುಗ ತಂದ ಸೀರೆ (Saree) ಚೆನ್ನಾಗಿಲ್ಲ, ಊಟ ಚೆನ್ನಾಗಿ ಮಾಡಿಸಲ್ಲಿಲ್ಲ ಹೀಗೆ ಸಣ್ಣಪುಟ್ಟ ಕಾರಣಕ್ಕೆ ಮದುವೆಯನ್ನು ಅರ್ಧಕ್ಕೇ ಮೊಟಕುಗೊಳಿಸಿದವರಿದ್ದಾರೆ. ಹಾಗೆಯೇ, ದೆಹಲಿಯಲ್ಲಿ ಸ್ವೀಟ್ಸ್ ತಿನ್ನಲು ಒತ್ತಾಯಿಸಿದ ವರನ ನಡತೆಗೆ ಬೇಸತ್ತು ವಧು (Bride) ಮದುವೆ ನಿಲ್ಲಿಸಿದ್ದಾಳೆ.
ಅಯ್ಯೋ ರಾಮ..ಕನ್ಯಾದಾನ ಶಾಸ್ತ್ರ ಮಾಡ್ದೆ ಮದುವೆಯಾದ್ಲು ಹುಡುಗಿ !
ಒತ್ತಾಯದಿಂದ ಮಿಠಾಯಿ ತಿನ್ನಿಸಿದ್ದಕ್ಕೆ ವಧುವಿಗೆ ಸಿಟ್ಟು
ವರನು ವಧುವಿಗೆ ಮಿಠಾಯಿ ತುಂಡನ್ನು ತಿನ್ನಿಸಲು ಯತ್ನಿಸುತ್ತಾನೆ. ಆದರೆ ಆಕೆಯ ನಿರಾಕರಣೆಯ ಹೊರತಾಗಿಯೂ ಅವನು ಅವಳನ್ನು ತಿನ್ನಲು ಒತ್ತಾಯಿಸುತ್ತಾನೆ. ಇದರಿಂದ ವಧು ಕೋಪಗೊಳ್ಳುತ್ತಾಳೆ ಮತ್ತು ವರನಿಗೆ ಕಪಾಳಮೋಕ್ಷ ಮಾಡುತ್ತಾಳೆ, ಇದು ಇಬ್ಬರ ನಡುವೆ ತೀವ್ರ ಜಗಳಕ್ಕೆ ಕಾರಣವಾಗುತ್ತದೆ. ನಂತರ ವಧು ಮತ್ತು ವರರು (Bridegroom) ಪರಸ್ಪರ ಕೂದಲನ್ನು ಎಳೆದುಕೊಂಡು ಪರಸ್ಪರ ತಳ್ಳುತ್ತಾರೆ. ಮದುವೆಯ ಅತಿಥಿಗಳು (Guest) ಜಗಳವಾಡುವುದನ್ನು ತಡೆಯಲು ವೇದಿಕೆಯತ್ತ ಧಾವಿಸುತ್ತಾರೆ ಆದರೆ ಅವರು ನವವಿವಾಹಿತರ ಹೊಡೆತಕ್ಕೆ ಒಳಗಾಗುತ್ತಾರೆ.
ವೈರಲ್ ವೀಡಿಯೊವನ್ನು ಇಲ್ಲಿ ನೋಡಿ:
ಮದುವೆ ಸಮಾರಂಭದಲ್ಲಿ ಪತ್ನಿ-ಪತ್ನಿಯರ ಜಗಳ ಎಂದು ವೀಡಿಯೋಗೆ ಶೀರ್ಷಿಕೆಯನ್ನು ನೀಡಲಾಗಿದೆ. ವೈರಲ್ ವೀಡಿಯೊ 62,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟಿಜನ್‌ಗಳು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಕೇಳಿದರು, 'ಇದೆಂಥಾ ವಿಚಿತ್ರ, ಇಂಥಾ ಜೋಡಿ ಜೊತೆಯಾಗಿ ಹೇಗೆ ಬದುಕಲು ಸಾಧ್ಯ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು 'ಹೀಗೆ ಬಲವಂತವಾಗಿ ಸಿಹಿ ತಿನ್ನಿಸಿದರೆ ಯಾರಾದರೂ ಹೊಡೆಯುತ್ತಾರೆ' ಎಂದು ವಧುವಿನ ಪರ ವಹಿಸಿದ್ದಾರೆ.
ಮಂಟಪ ರೆಡಿಯಾಗಿತ್ತು, ವರ ಕೂತಿದ್ದ, ವಧು ಮಾತ್ರ ಔಟ್‌ಫಿಟ್ ತರೋದನ್ನೇ ಮರೆತಿದ್ಲು !
ವರಮಾಲಾ ಸಮಾರಂಭದಲ್ಲಿ ಜೋಡಿ ಹಾರಗಳನ್ನು ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ. ಹೂವಿನ ಮಾಲೆಗಳನ್ನು ಪರಸ್ಪರ ಎಕ್ಸ್‌ಚೇಂಜ್ ಮಾಡಿಕೊಂಡ ನಂತರ ವಧು-ವರರು ಇಬ್ಬರ ಬಳಿ ಸ್ವೀಟ್ಸ್ ತಿನ್ನಿಸಲು ಕೇಳಲಾಯ್ತು. ಈ ಸಂದರ್ಭದಲ್ಲಿ ವರ, ವಧುವಿಗೆ ಒತ್ತಾಯಪೂರ್ವಕವಾಗಿ ಲಡ್ಡು ತಿನ್ನಿಸಲು ಯತ್ನಿಸಿದ್ದಕ್ಕೆ ವಧು ಸಿಟ್ಟುಗೊಂಡಿದ್ದಾಳೆ. ಆತನ ಕೂದಲನ್ನು ಎಳೆದು ಎಳೆದಾಡಿದ್ದಾಳೆ. ಪ್ರತಿಯಾಗಿ ವರ ಸಹ ಆಕೆಗೆ ಹೊಡೆದು ಎಳೆದಾಡಿ ಮಂಟಪದಲ್ಲೇ ದಂಪತಿ ರಂಪಾಟ ನಡೆಸಿದ್ದಾರೆ.