* ಮದುವೆ ಸಂಭ್ರಮದ ನಡುವೆ ಒಪ್ಪಂದದ ಪೇಪರ್‌ ತಂದ ವಧು* ವಧುವಿನ ಷರತ್ತು ಕೇಳಿದ ವರನಿಗೆ ಶಾಕ್* ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಷರತ್ತಿಗೆ ನೋ ಎನ್ನುವಂತಿಲ್ಲ

ನವದೆಹಲಿ(ಜು.09): ಮದುವೆ ಸಮಾರಂಭಗಳ ವಿಶಿಷ್ಟ ಡ್ಯಾನ್ಸ್ ವಿಡಿಯೋಗಳು ಸಖತ್ ವೈರಲ್ ಆಗಿವೆ. ಕೆಲವೊಮ್ಮೆ ವರ ಬಹಳಷ್ಟು ಖುಷಿಪಟ್ಟು ಮೋಜು ಮಾಡುವುದನ್ನು ಕಾಣಬಹುದು. ಆದರೀಗ ಇದಕ್ಕೆ ತದ್ವಿರುದ್ಧ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ವಧುವಿನ ವಿಭಿನ್ನ ನಡೆ ವರ ಹಾಗೂ ಆತನ ಕುಟುಂಬಸ್ಥರಿಗೆ ಶಾಕ್‌ ಕೊಟ್ಟಿದೆ. ಹೌದು, ವಧು ತನ್ನ ಮನದಾಳದ ಮಾತುಗಳಿಗೆ ತನ್ನ ಪತಿಯ ಸಮ್ಮತಿ ಪಡೆಯಲು ಏನೆಲ್ಲಾ ಮಾಡಿದ್ದಾಳೆ ಎಂಬುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇಷ್ಟಾದರೂ ವರ ಮಹಾಶಯ ತನ್ನ ಕುಟುಂಬ ಸದಸ್ಯರು ಹಾಘೂ ಸ್ನೇಹಿತರೆದುರು ಪತ್ನಿಯ ಈ ಆಸೆಗೆ ಆಗಲ್ಲ ಎನ್ನುವಂತಿಲ್ಲ.

ಎಲ್ಲಾ ಅಮ್ಮನಿಗಾಗಿ...!, ಹೆತ್ತಾಕೆಯ ಶವ ಮನೆಯಲ್ಲಿಟ್ಟು ಅದ್ಧೂರಿಯಾಗಿ ಮದುವೆಯಾದ ಮಗ!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ವಧು, ಸರಿಯಾದ ಅವಕಾಶವನ್ನು ನೋಡಿ, ತನ್ನ ಭಾವಿ ಪತಿಗೆ ಹಾರ ಹಾಕಿದ ತಕ್ಷಣ ಒಪ್ಪಂದದ ಕಾಗದಕ್ಕೆ ಸಹಿ ಹಾಕುವಂತೆ ಒತ್ತಾಯಿಸುವುದನ್ನು ನೋಡಬಹುದು. ಹೀಗಿರುವಾಗ ವರ ಮದುವೆಗೆ ಬಂದ ಅತಿಥಿಗಳನ್ನು ಮತ್ತು ಸ್ನೇಹಿತರನ್ನು ನೋಡುತ್ತಾ ದುಃಖದದಿಂದಲೇ ಕಾಗದಕ್ಕೆ ಸಹಿ ಹಾಕುವುದನ್ನು ನೋಡಬಹುದಾಗಿದೆ. ಈ ಕಾಂಟ್ರಾಕ್ಟ್ ಪೇಪರ್‌ನಲ್ಲಿ ಬರೆದಿರುವುದನ್ನು ಕೇಳಿದರೆ, ವಧುವಿನ ಕ್ಯೂಟ್‌ನೆಸ್‌ ಎಷ್ಟು ಎಂದು ಅಂದಾಜಾಗುತ್ತದೆ. ಈ ಪತ್ರದಲ್ಲಿ ಒಟ್ಟು ಎಂಟು ಷರತ್ತುಗಳಿವೆ. ಇದರಲ್ಲಿ ಮೊದಲನೆಯದು ಒಂದು ತಿಂಗಳಲ್ಲಿ ಒಂದು ಪಿಜ್ಜಾವನ್ನು ಮಾತ್ರ ತಿನ್ನಬೇಕು. ಎರಡನೇ ಷರತ್ತು ಯಾವಾಗಲೂ ಮನೆಯ ಆಹಾರಕ್ಕೇ ಆದ್ಯತೆ ನಿಡಬೇಕು. ಪ್ರತಿದಿನ ಸೀರೆ ಉಡಲು ಬಿಡಬೇಕು. ನೀವು ತಡವಾಗಿ ಲೈಟ್ ಪಾರ್ಟಿ ಮಾಡಬಹುದು ಆದರೆ ಅದು ನನ್ನೊಂದಿಗೆ ಮಾತ್ರ. ನೀವು ಪ್ರತಿದಿನ ಜಿಮ್‌ಗೆ ಹೋಗಬೇಕು. ಭಾನುವಾರದ ಉಪಹಾರವನ್ನು ನೀವೇ ತಯಾರಿಸಬೇಕು. ಪ್ರತಿ ಪಾರ್ಟಿಯಲ್ಲೂ ಒಳ್ಳೆಯ ಫೋಟೋ ಕ್ಲಿಕ್ಕಿಸಬೇಕು. ಪ್ರತಿ 15 ದಿನಗಳ ನಂತರ ಶಾಪಿಂಗ್‌ಗೆ ಕರೆದೊಯ್ಯಬೇಕಾಗುತ್ತದೆ. ಇವೆಲ್ಲವೂ ಆ ಕಾಂಟ್ರಾಕ್ಟ್‌ ಪೇಪರ್‌ನಲ್ಲಿದೆ.

View post on Instagram

Wedding Gift Film Review: ಮದುವೆಯ ನಂತರದ ಸಂಕಷ್ಟಗಳು

ಈ ಮದುವೆಯ ಒಪ್ಪಂದವನ್ನು ನೋಡಿದ ಅಭಿಮಾನಿಗಳಿಂದ ಈಗ ವಿಡಿಯೋಗೆ ಭಾರೀ ಕಮೆಂಟ್‌ಗಳು ಹರಿದು ಬರಲಾರಂಭಿಸಿವೆ. ಒಬ್ಬ ಅಭಿಮಾನಿ ಕೆಲವು ಷರತ್ತುಗಳು ಸರಿಯಾಗಿವೆ, ಆದರೆ ಕೆಲವು ತುಂಬಾ ಕೆಟ್ಟದಾಗಿವೆ ಎಂದು ಹೇಳಿದರು. ಮತ್ತೊಂದೆಡೆ, ಒಬ್ಬ ಬಳಕೆದಾರನು ಈಗಾಗಲೇ ಸಹಿ ಮಾಡಿರುವುದು ಒಳ್ಳೆಯದು, ಇಲ್ಲದಿದ್ದರೆ ಪತಿ ನಂತರ ತನ್ನ ಮಾತುಗಳಿಂದ ತಾನೇ ಹಿಂದೆ ಸರಿಯುತ್ತಾನೆ ಎಂದು ಕಾಲೆಳೆದಿದ್ದಾರೆ. ಅದೇನೇ ಇರಲಿ ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ರಂಜಿಸುತ್ತಿದ್ದು, ಅನೇಕರು ಇದೇ ರೀತಿಯ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.