* ಅಮ್ಮನ ಆಸೆ ಈಡೇರಿಸಲು ಶಾಕಿಂಗ್ ನಿರ್ಧಾರ ತೆಗೆದುಕೊಂಡ ಮಗ* ಮೃತಪಟ್ಟ ತಾಯೊ ಶವವನ್ನು ಮನೆಯಲ್ಲಿಟ್ಟು ದೇಗುಲದಲ್ಲಿ ಮದುವೆ* ಮದುವೆಯಾದ ಬಳಿಕ ಅಮ್ಮನ ಕಾಲೆಗೆ ಬಿದ್ದು ಆಶೀರ್ವಾದ ಪಡೆದ ಮಗ, ಸೊಸೆ
ಜಾರ್ಖಂಡ್(ಜು. 09): ತಾಯಿಯ ಪ್ರೀತಿಯ ಮುಂದೆ ಪ್ರತಿಯೊಬ್ಬ ವ್ಯಕ್ತಿಯೂ ಸೋಲುತ್ತಾರೆ. ಅಮ್ಮನ ಆಸೆ ಈಡೇರಿಸಲು ಜನ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕೊಯಲಾಂಚಲ್‌ನಲ್ಲಿ ಮಗನೊಬ್ಬ ತನ್ನ ತಾಯಿಯ ಕೊನೆಯ ಆಸೆಯನ್ನು ಪೂರೈಸಲು ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡು ಮದುವೆಯಾದ ಘಟನೆ ಬೆಳಕಿಗೆ ಬಂದಿದೆ. ಮದುವೆ ಕಾರ್ಯಕ್ರಮ ಮುಗಿದ ಬಳಿಕ ಮನೆಗೆ ಬಂದು ತಾಯಿಯ ಆಶೀರ್ವಾದ ಪಡೆದು ಅಂತಿಮ ವಿಧಿವಿಧಾನ ನೆರವೇರಿಸಿದ್ದಾನೆ. ತನ್ನ ಮಗನ ಮದುವೆ ತನ್ನ ಎದುರೇ ನಡೆಯಬೇಕು ಎಂಬುವುದು ತಾಯಿಯ ಇಚ್ಛೆಯಾಗಿತ್ತು. ಹೀಗಿರುವಾಗ ಅಮ್ಮನ ಆಸೆ ಈಡೇರಿಸಲು ಮಗ ಇಂತಹುದ್ದೊಂದು ಹೆಜ್ಜೆ ಇಟ್ಟಿದ್ದಾನೆ.
ಮೃತಪಟ್ಟ ತಾಯಿ, ಕೊನೆ ಆಸೆ ಈಡೇರಿಸಲು ದೇಗುಲದಲ್ಲಿ ಮದುವೆಯಾದ ಮಗ
ಧನ್ಬಾದ್ ಜಿಲ್ಲೆಯ ಕೆಂಡುವಡಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಮೆರಿನ್ ಗೋಪಾಲಿಚಕ್ ದುರ್ಗಾ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಸದ್ಯ ಈ ಮದುವೆ ಈ ಪ್ರದೇಶದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ನ್ಯೂ ಮರೀನ್ ಗೋಪಾಲಿಚಕ್ ನಿವಾಸಿ, ಬಿಸಿಸಿಎಲ್ ಉದ್ಯೋಗಿ ಬೈಜನಾಥ್ ತುರಿ ಅವರ ಪುತ್ರ ಓಂ ಕುಮಾರ್ ಅವರ ವಿವಾಹ ಜುಲೈ 10 ರಂದು ನಿಗದಿಯಾಗಿತ್ತು. ಈ ವಿವಾಹವು ಬೊಕಾರೊದ ಪೆಟಾರ್‌ವಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಉತಾಸರ ನಿವಾಸಿ ಮನೋಜ್ ತುರಿ ಅವರ ಪುತ್ರಿ ಕುಮಾರಿ ಸರೋಜ್ ಅವರೊಂದಿಗೆ ನಡೆಯಬೇಕಿತ್ತು.
ಹಿಂದೂ ದೇವರಲ್ಲಿ ನಂಬಿಕೆ ಇದ್ದರೆ ಅನ್ಯ ಧರ್ಮದ ವ್ಯಕ್ತಿ ಕೂಡ ದೇವಸ್ಥಾನ ಪ್ರವೇಶಿಸಬಹುದು!
ಮನೆಯಲ್ಲಿ ತಾಯಿಯ ಮೃತದೇಹವನ್ನು ಇಟ್ಟು ವಿವಾಹ, ಬಳಿಕ ಆಶೀರ್ವಾದ ಪಡೆದ ಮಗ ಮತ್ತು ಸೊಸೆ
ಆದರೆ, ಹಲವು ದಿನಗಳಿಂದ ಓಂ ಕುಮಾರ್ ಅವರ ತಾಯಿಯ ಆರೋಗ್ಯ ಹದಗೆಟ್ಟಿತ್ತು. ಶುಕ್ರವಾರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ನಂತರ ಅವರ ಕುಟುಂಬ ಸದಸ್ಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾಹಿತಿ ಪ್ರಕಾರ ಓಂ ತಾಯಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಬಳಿಕ ಇಡೀ ಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿತ್ತು. ಇದರ ಹೊರತಾಗಿಯೂ ಓಂ ಕುಮಾರ್ ತನ್ನ ತಾಯಿಯ ಆಸೆಗಾಗಿ ಆಕೆಯ ಮೃತ ದೇಹವನ್ನು ಮನೆಗೆ ತಂದಿದ್ದಾನೆ. ಬಳಿಕ ಈ ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದಾನೆ.
ಅಮ್ಮನ ಆಸೆ ಈಡೇರಿಸ್ತೀನಿ
ತಾಯಿ ತನ್ನ ಮಗನ ಮದುವೆಯನ್ನು ನೋಡಬೇಕೆಂದು ಬಯಸಿದ್ದರು, ಆದರೆ ಆಕೆ ಸಾವನ್ನಪ್ಪಿದ ಕಾರಣ ಇದು ಸಾಧ್ಯವಿರಲಿಲ್ಲ. ಆದರೆ ಈ ನಡುವೆಯೇ ಮಗ ತಾಯಿಯ ಮೃತದೇಹವನ್ನು ಮನೆಗೆ ತಂದು, ತಾನೇನು ಮಾಡುವವನಿದ್ದೇನೆ ಎಂದು ತಿಳಿಸಿದ್ದೇನೆ. ಆತನ ನಿರ್ಧಾರ ಕೇಳಿದವರೆಲ್ಲಾ ಬೆಚ್ಚಿಬಿದ್ದರು. ಸಾಯುವ ಮುನ್ನ ಮದುವೆಯಾಗು ಎಂದು ತಾಯಿ ಹೇಳಿದ್ದರು ಈಗ ಅಮ್ಮ ಹೇಳಿದ್ದನ್ನು ಈಡೇರಿಸುತ್ತೇನೆ ಎಂದು ಮಗ ಎಲ್ಲರ ಸಮ್ಮುಖದಲ್ಲಿ ಹೇಳಿದ್ದ.
ಅಪ್ಪ, ಬೇರೊಬ್ಬ ಮಹಿಳೆಗೆ ಕಳುಹಿಸಿದ Incriminating Email ನೋಡಿ ಶಾಕ್ ಆದ ಮಹಿಳೆ!
ಮದುವೆ ಕಂಡು ಭಾವುಕರಾದ ಜನರು
ಇತ್ತ ತಾಯಿಯ ಮೃತದೇಹವನ್ನು ಮನೆಯಲ್ಲಿಟ್ಟು ಮಗ ಮದುವೆಗೆ ಸಿದ್ಧತೆ ಆರಂಭಿಸಲಾಗಿತ್ತು. ವಧುವಿನ ಸಂಬಂಧಿಕರಿಗೆ ಕರೆ ಮಾಡಿ ಸರೋಜ ಮತ್ತು ಓಂ ಪಕ್ಕದ ಶಿವನ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ನಂತರ, ತಾಯಿಯಿಂದ ಆಶೀರ್ವಾದ ಪಡೆದ ಓಂ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಬೊಕಾರೊದ ದಾಮೋದರ್ ಘಾಟ್‌ನಲ್ಲಿ ತಮ್ಮ ತಾಯಿಯ ಅಂತಿಮ ವಿಧಿಗಳನ್ನು ನೆರವೇರಿಸಿದರು. ಈ ಮದುವೆಗೆ ಜನಸಾಗರವೇ ನೆರೆದಿತ್ತು. ಈ ಸಮಯದಲ್ಲಿ, ತಾಯಿ ಮತ್ತು ಮಗನ ಅಂತಹ ಪ್ರೀತಿಯನ್ನು ನೋಡಿ, ಜನರು ಕೂಡಾ ಭಾವುಕರಾಗಿದ್ದಾರೆ.
