ವಧುವಿಗೆ ಸಿಂಧೂರು ಇಡುವ ಸಂಪ್ರದಾಯದ ತನಕೆ ಎಲ್ಲವೂ ಒಕೆ ಒಕೆ, ಆದರೆ ಸಿಂಧೂರ ಇಡುವಾಗ ವರನ ಕೈ ನಡುಗಿದೆ. ಛಂಗನೆ ಎದ್ದ ವಧು, ಮದವೆ ನಿಲ್ಲಿಸಿಬಿಟ್ಟಿದ್ದಾಳೆ. ಪೊಲೀಸರು ಸ್ಥಳ್ಕಕೆ ಆಗಮಿಸಿದರೂ ಮದುವೆ ಮಾತ್ರ ನಡೆಯಲೇ ಇಲ್ಲ. ಕಾರಣವೇನು? 

ಧೋಲ್‌ಪುರ್(ಮಾ.11) ತಾತ ಮುತ್ತಾನ ಕಾಲದಲ್ಲಿ ಪೋಷಕರು, ಕುಟುಂಬಸ್ಥರು ನಿಶ್ಚಯ ಮಾಡುತ್ತಿದ್ದರು, ಅಡೆ ತಡೆಗಳಿಲ್ಲದೆ ಮದುವೆ ಆಗುತ್ತಿತ್ತು. ಬಳಿಕ ಏನೇ ರಂಪಾಟವಾದರೂ ಜೊತೆಗೇ ಇರುತ್ತಿದ್ದರು. ಕಾಲ ಬದಲಾಯಿತು, ಹಡುಗ, ಹುಡುಗಿಯ ಒಪ್ಪಿಗೆ ಬಳಿಕ ಮದುವೆ, ಇಲ್ಲಿ ಪೋಷಕರ ಆಸಕ್ತಿ, ಒಪ್ಪಿಗೆಗೆ ಪ್ರಾಮುಖ್ಯತೆ ಇಲ್ಲ. ಆದರೆ ಈಗ ಎಲ್ಲರ ಒಪ್ಪಿಗೆ ಇದ್ದರೂ ಮದುವೆ ಮಾತ್ರ ಆಗುತ್ತಿಲ್ಲ. ಇದೀಗ ಮದುವೆ ಮಂಟಪದಲ್ಲೇ ಮದುವೆ ನಿಂತು ಹೋಗಿದೆ. ವಧುವಿನ ಹಣೆಗೆ ಸಿಂಧೂರ ಇಡುವ ಸಂಪ್ರದಾಯದಕ್ಕೆ ಮದುವೆ ಅಂತ್ಯಗೊಂಡಿದೆ. ಸಿಂಧೂರ ಇಡುವಾಗ ವರ ಕೈಗಳು ನಡುಗಿದೆ. ತಕ್ಷಣವೇ ಈ ಮದುವೆ ತನಗೆ ಇಷ್ಟವಿಲ್ಲ ಎಂದು ಮಂಟಪದಿಂದ ಎದ್ದು ಹೋಗಿದ್ದಾಳೆ. ಕೊನೆಗೆ ಪೊಲೀಸರು ಬಂದರೂ ಮದುವೆ ಮಾತ್ರ ಆಗಲೇ ಇಲ್ಲ.

ರಾಜಸ್ಥಾನಧ ಧೂಲ್‌ಪುರ್‌ದಲ್ಲಿ ಈ ಘಟನೆ ನಡೆದಿದೆ. ಗಿರೀಶ್ ಕುಮಾರ್ ಅವರ ಪುತ್ರಿ ದೀಪಿಕಾ ಮದುವೆ ನಿಲ್ಲಿಸಿ ಹೊರಬಂದಿದ್ದಾಳೆ. ಕಲ್ಯಾಣಿ ಗ್ರಾಮದ ಪ್ರದೀಪ್ ಮದುವೆ ಮಂಟಪದವರೆಗೆ ಬಂದು ನಿಂತು ಹೋಗಿದೆ. ದೀಪಿಕಾ ಮದುವೆ ಒಂದು ವಾರದಿಂದ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿತ್ತು. ಇದಕ್ಕೂ ಮೊದಲು ವರ ಹಾಗೂ ವಧುವಿನ ಜೊತೆಗೆ ಹಲವು ಕಾರ್ಯಕ್ರಮಗಳಿತ್ತು. ಈ ಎಲ್ಲಾ ಕಾರ್ಯಕ್ರಮ ಮುಗಿಸಿದ ಬಳಿಕ ಮದುವೆ ಶಾಸ್ತ್ರಗಳು ಆರಂಭಗೊಂಡಿತು.

ಮದುವೆಯ ಉಡುಪಿಗೆ ಹಸಿರು ನೆಕ್ಲೇಸ್ ಬೆಸ್ಟ್ ಡಿಸೈನ್ಸ್ ಇಲ್ಲಿವೆ ನೋಡಿ!

ಅದ್ಧೂರಿ ಮದುವೆಗೆ ಎಲ್ಲಾ ತಯಾರಿ ಮಾಡಲಾಗಿತ್ತು. ಶಾಸ್ತ್ರಗಳು ಆರಂಭಗೊಂಡಿದೆ. ವಧು ಹಾಗೂ ವರ ವೇದಿಕೆಯಲ್ಲಿ ಕುಳಿತಿದ್ದಾರೆ. ಇತ್ತ ಶಾಸ್ತ್ರಗಳು, ಮಂತ್ರಗಳು ಮೊಳಗಿದೆ. ವಧುವಿನ ಮುಖದಲ್ಲಿ ಎಂದಿನ ನಗು, ಉತ್ಸಾಹ ಕಾಣಲಲಿಲ್ಲ. ಇತ್ತ ಕಾರ್ಯಕ್ರಮ ಸಾಗಿತ್ತು. ತಾಳಿ ಕಟ್ಟು ಮೊದಲು ಸಿಂಧೂರ ಸಂಪ್ರದಾಯವಿತ್ತು. ಈ ಸಂಪ್ರದಾಯದಲ್ಲಿ ವರ, ವಧುವಿನ ಹಣೆಗೆ ಸಿಂಧೂರ ಇಡಬೇಕು. ಈ ಸಂಪ್ರದಾಯದ ವೇಳೆ ವರ ಸಿಂಧೂರ ತೆಗೆದು ಸುಲಭವಾಗಿ ವಧುವಿನ ಹಣೆಗೆ ಇಡಲು ಸಾಧ್ಯವಾಗಿಲ್ಲ. ಕೈಗಳು ನಡುಗಿದೆ. ಅದೆಷ್ಟೇ ಪ್ರಯತ್ನ ಪಟ್ಟರೂ ಸರಿಯಾಗಿ ಸಿಂಧೂರ ಇಡಲು ಆಗಲೇ ಇಲ್ಲ. 

ಈ ಘಟನೆ ವಧುವಿನ ಆಕ್ರೋಶ ಹೆಚ್ಚಿಸಿದೆ. ತಕ್ಷಣವೇ ಎದ್ದು ನಿಂತ ವಧು, ತನಗೆ ಈ ಮದುವೆ ಇಷ್ಟವಿಲ್ಲ. ವರನ ಕೈಗಳು ನಡುಗುತ್ತಿದೆ. ಆತನಿಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಎಂದಿದ್ದಾಳೆ. ಈಕೆಯ ಮಾತು ಕೇಳಿ ವರನ ಕುಟುಂಬ ಶಾಕ್ ಆಗಿದೆ. ವಧುವನ್ನು ನೋಡಿ ವರನ ಭಯಗೊಂಡಿದ್ದಾನೆ. ಮೊದಲ ಮದುವೆ, ಜೊತೆಗೆ ಎಸಿ ಹಾಕಿದ ಕಾರಣ ವರನಿಗೆ ಚಳಿ ಆಗಿದೆ. ಹೀಗಾಗಿ ಕೈ ನಡುಗಿದೆ ಅನ್ನೋ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಆದರೆ ವಧು ಮಾತ್ರ ಇದ್ಯಾವ ಸ್ಪಷ್ಟನೆಗೂ ಜಗ್ಗಿಲ್ಲ.

ಮದುವೆಯ ಸುದೀರ್ಘ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಮೊದಲು ಹಲವು ಭಾರಿ ಭೇಟಿಯಾಗಿದ್ದೇನೆ. ವರನಿಗೆ ಗಂಭೀರ ಆರೋಗ್ಯ ಸಮಸ್ಯೆ ಇರುವುದು ಗಮನಕ್ಕೆ ಬಂದಿತ್ತು. ಇಂದು ಸ್ಪಷ್ಟವಾಗಿದೆ. ಆರೋಗ್ಯ ವಿಚಾರ ಮುಚ್ಚಿಟ್ಟಿದ್ದಾರೆ ಎಂದು ವಧು ಆರೋಪಿಸಿದ್ದಾರೆ. ಜಗಳ ತಾರಕಕ್ಕೇರಿದೆ. ಪೊಲೀಸರು ಆಗಮಿಸಿದ್ದಾರೆ. ಏನೇ ಮಾಡಿದರೂ ವಧು ಮಾತ್ರ ಜಗ್ಗಿಲ್ಲ. ಹೀಗಾಗಿ ಮದುವೆ ರದ್ದಾಗಿದೆ.

ಕುಡಿದ ಮತ್ತಿನಲ್ಲಿ ವಧುವಿನ ಬದಲು ಸ್ನೇಹಿತನ ಕೊರಳಿಗೆ ಹಾರ ಹಾಕಿದ ವರ..!