ಹುಡುಗಿಯರನ್ನು ಸೆಳೆಯೋದು ಸುಲಭ ಅಲ್ಲ ಗುರು. ನನ್ನೆಲ್ಲ ಫ್ರೆಂಡ್ಸ್ ಲವ್ ಮಾಡಿ ಮದುವೆ ಕೂಡ ಆದ್ರು. ನಾನೆಷ್ಟು ಕಷ್ಟಪಟ್ಟರೂ ಒಂದು ಹುಡುಗಿ ಕಣ್ಣೆತ್ತಿ ನೋಡಲ್ಲ. ಏನ್ ಮಾಡೋದು ಅಂತಾ ಗೊಣಗುತ್ತಿರುವ ಹುಡುಗ್ರಿಗೆ ಇಲ್ಲಿದೆ ಟಿಪ್ಸ್
ಅಪರೂಪಕ್ಕೆ ಒಂದು ಹುಡುಗಿ ಇಷ್ಟವಾಗಿದ್ದಳು. ಪ್ರೀತಿ(Love)ಸ್ತಿದ್ದೇನೆ ಅಂತಾ ಹೇಳೋಕೆ ಮೂರು ತಿಂಗಳು ಹಿಡಿಯಿತು. ಹುಡುಗಿ ಅಂತೂ ಇಂತೂ ಓಕೆ ಅಂದಿದ್ದಳು. ಪ್ರೀತಿಯಲ್ಲಿ ಬಿದ್ದು ಆರು ತಿಂಗಳಾಗ್ಲಿಲ್ಲ ಆಗ್ಲೇ ಬ್ರೇಕ್ ಅಪ್ (Break Up )ಗೆ ಬಂದು ನಿಂತಿದೆ ಅಂತಾ ಸುರೇಶ್ ಸ್ನೇಹಿತರ ಮುಂದೆ ನೋವು ತೋಡಿಕೊಳ್ತಿದ್ದ. ಇದು ಸುರೇಶ್ ಸಮಸ್ಯೆ ಮಾತ್ರವಲ್ಲ. ಅನೇಕರ ಸಂಬಂಧ ವರ್ಷ ನಿಲ್ಲೋದು ಕಷ್ಟ. ಪ್ರತಿಯೊಂದು ಸಂಬಂಧ ಗಟ್ಟಿಯಾಗಿರಬೇಕೆಂದ್ರೆ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳುವುದು ಅವಶ್ಯಕ. ಅನೇಕರಿಗೆ ಪ್ರೀತಿ ಸಿಗುತ್ತದೆ.
ಆರಂಭದ ದಿನಗಳಲ್ಲಿ ಸಂತೋಷ (Happiness)ವಾಗಿರುತ್ತಾರೆ. ಇಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಲು ಶುರು ಮಾಡಿದಂತೆ, ಸಂಗಾತಿಯ ಹವ್ಯಾಸ,ಅಭ್ಯಾಸಗಳ ಬಗ್ಗೆ ತಿಳಿಯುತ್ತಿದ್ದಂತೆ ಹುಡುಗಿ ಹಿಂದೇಟು ಹಾಕಲು ಶುರು ಮಾಡುತ್ತಾಳೆ. ಸಂಬಂಧ ಮುರಿದು ಬೀಳಲು ಹುಡುಗರ ಸ್ವಭಾವ,ಹವ್ಯಾಸ ಕಾರಣವಾಗುತ್ತದೆ. ಪ್ರೇಮ ನಿವೇದನೆ ಮಾಡಲು ಮುಂದಾಗಿದ್ದರೆ ಅಥವಾ ಈಗಾಗಲೇ ಸಂಬಂಧದಲ್ಲಿದ್ದವು,ಸಂಬಂಧ ಹಳಸುವ ಮುನ್ಸೂಚನೆ ನೀಡ್ತಿದ್ದರೆ,ಸಂಗಾತಿ(Partner )ತಮ್ಮ ಯಾವ ಅಭ್ಯಾಸವನ್ನು ಇಷ್ಟಪಡ್ತಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಂತ್ರ ಅದನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಇಂದು ಹುಡುಗರ ಯಾವ ಅಭ್ಯಾಸಗಳು ಹುಡುಗಿಯರು ಇಷ್ಟಪಡುವುದಿಲ್ಲ ಮತ್ತು ಹುಡುಗಿಯನ್ನು ಮೆಚ್ಚಿಸಲು ಹುಡುಗ ಯಾವ ಅಭ್ಯಾಸಗಳನ್ನು ಬಿಡಬೇಕು ಎಂದು ತಿಳಿಯೋಣ.
ಜಗಳ-ಕೋಪ (Anger) : ಮುಂಗೋಪ. ಇದು ಮನುಷ್ಯನ ಶತ್ರು. ಹುಡುಗರ ಪ್ರೀತಿ ವಿಷ್ಯದಲ್ಲೂ ಇದು ಮಹತ್ವ ಪಡೆಯುತ್ತದೆ. ಅನೇಕ ಹುಡುಗರು ಸಾಕಷ್ಟು ಜಗಳವಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವನ ಮೂಗಿನ ಮೇಲಿರುವ ಕೋಪ ಹುಡುಗಿಗೆ ಇಷ್ಟವಾಗುವುದಿಲ್ಲ. ಸಣ್ಣಪುಟ್ಟ ವಿಷಯಗಳಿಗೂ ಸಿಟ್ಟು ಮಾಡಿಕೊಳ್ಳುವುದು, ಬೈಯುವುದು, ಮಾತು ಬಿಡುವುದು, ಹೊಡೆಯುವುದು ಅಭ್ಯಾಸವಾಗಿರುತ್ತದೆ. ಕಾಲೇಜು-ಕಚೇರಿ, ರಸ್ತೆಗಳಲ್ಲಿ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿ ಇಮೇಜ್ ಹಾಳಾಗ್ತಿರುತ್ತದೆ. ಹುಡುಗಿಯರಿಗೂ ಇದು ಇಷ್ಟವಾಗುವುದಿಲ್ಲ. ಆರಂಭದಲ್ಲಿ ಆಕರ್ಷಣೆ ಎನ್ನಿಸಿದ್ರೂ ಸಂಬಂಧ ಗಟ್ಟಿಯಾಗ್ತಿದ್ದಂತೆ ಹುಡುಗನ ಕೋಪವನ್ನು ಹುಡುಗಿಯರು ಒಪ್ಪಿಕೊಳ್ಳುವುದಿಲ್ಲ.
ಮದ್ಯಪಾನ : ಧೂಮಪಾನ ಹಾಗೂ ಮದ್ಯಪಾನ ಇತ್ತೀಚಿನ ದಿನಗಳಲ್ಲಿ ಕಾಮನ್ ಎನ್ನುವಂತಾಗಿದೆ. ಪಾರ್ಟಿಗಳಿಗೆ ಹೋಗುವ ಹುಡುಗರು ಡ್ರಿಂಕ್ಸ್ ಮಾಡ್ತಾರೆ. ಕೆಲ ಹುಡುಗಿಯರೂ ಮದ್ಯಪಾನ ಮಾಡುತ್ತಾರೆ. ಆದ್ರೆ ಹೆಚ್ಚಿನ ಹುಡುಗಿಯರಿಗೆ ತನ್ನ ಹುಡುಗ ಡ್ರಿಂಕ್ಸ್ ಮಾಡುವುದು ಇಷ್ಟವಾಗುವುದಿಲ್ಲ. ಮದ್ಯದ ನಶೆಯಲ್ಲಿ ಆತನನ್ನು ನೋಡಲು ಆಕೆ ಬಯಸುವುದಿಲ್ಲ. ತಮ್ಮ ಮುಂದೆಯೇ ಹುಡುಗ ಕುಡಿಯುವುದನ್ನು ಆಕೆ ಸಹಿಸಲಾರಳು. ಪ್ರೇಮಿ ಮದ್ಯಪಾನಿ ಎಂಬ ಕಾರಣಕ್ಕೆ ಪ್ರೀತಿ ತ್ಯಾಗ ಮಾಡಿದ ಹುಡುಗಿಯರಿದ್ದಾರೆ.
ಲವರ್‌ಗೆ ಕೊಡುವ ಒಲವಿನ ಉಡುಗೊರೆ ಹೀಗಿರಲಿ
ಪದ ಬಳಕೆ : ಮುತ್ತು ಒಡೆದರೆ ಹೋಯ್ತು,ಮಾತು ಆಡಿದರೆ ಹೋಯ್ತು ಎಂಬ ಮಾತಿದೆ. ಮಾತು ಶುದ್ಧವಾಗಿರಬೇಕು. ಮಾತಿನಿಂದ ಮನಸ್ಸು ಒಂದಾಗಬೇಕೇ ಹೊರತು ಮನಸ್ಸು ಮುರಿಯಬಾರದು. ಕೆಲವು ಹುಡುಗ ಬಾಯಿಂದ ಸದಾ ಕೆಟ್ಟ ಶಬ್ಧಗಳು ಹೊರ ಬರುತ್ತಿರುತ್ತವೆ. ಮಾತು ಮಾತಿಗೂ ಕೆಟ್ಟ ಪದ ಬಳಕೆ ಮಾಡುವವರಿದ್ದಾರೆ. ಇದು ಅವರ ಪ್ರೀತಿ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.
ಸ್ವಚ್ಛತೆ :ಬ್ಯಾಚ್ಯುಲರ್ (Bachelor ) ಕೋಣೆ ಹೇಗಿರುತ್ತೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹುಡುಗರು ಬಟ್ಟೆ,ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಕೊಳಕು ಬಟ್ಟೆ,ಚೆಲ್ಲಾಪಿಲ್ಲಿಯಾದ ರೂಮ್ ಅವರ ಸ್ವಭಾವವನ್ನು ಹೇಳಬಲ್ಲದು. ಇದು ಹುಡುಗಿಯರನ್ನು ಸೆಳೆಯುವುದಿಲ್ಲ.
ಬಾಯ್‌ಫ್ರೆಂಡ್ ಏನ್ ಗಿಫ್ಟ್ ಕೊಟ್ರೆ ಖುಷಿಯಾಗುತ್ತೆ ? ಸಾರಾ ಹೇಳಿದ್ದಿಷ್ಟು
ಅತಿಯಾದ ಪ್ರೀತಿ/ಅನುಮಾನ : ಪ್ರೀತಿಸಿದ ಹುಡುಗಿ ನನಗೆ ಮಾತ್ರ ಸೀಮಿತ ಎಂಬ ಹುಡುಗರ ಸ್ವಭಾವ ಕೂಡ ಪ್ರೀತಿ ವಂಚನೆಗೆ ಕಾರಣವಾಗುತ್ತದೆ. ಪ್ರೀತಿಸಿದ ಸಂಗಾತಿಗೆ ಸ್ವಾತಂತ್ರ ನೀಡದೆ ಆಕೆ ಮಾಡಿದ ಪ್ರತಿಯೊಂದು ಕೆಲಸಕ್ಕೆ ಕಾರಣ ಕೇಳುವ ಹುಡುಗರಿದ್ದಾರೆ. ಧರಿಸಿದ ಬಟ್ಟೆಯಿಂದ ಹಿಡಿದು ಸ್ನೇಹಿತರ ಪಟ್ಟಿಯವರೆಗೆ ಎಲ್ಲವನ್ನೂ ನಿಯಂತ್ರಿಸುವ ಹುಡುಗರಿದ್ದಾರೆ. ತನ್ನ ಹುಡುಗಿ ಬೇರೆ ಹುಡುಗರ ಜೊತೆ ಮಾತನಾಡಿದರೆ ಅನುಮಾನಿಸುವ ಹುಡುಗರಿದ್ದಾರೆ. ಮದುವೆಗೆ ಮೊದಲೇ ಇಷ್ಟು ಬಂಧಿಮಾಡುವ ಮಾಡುವ ಹುಡುಗ ಮುಂದೇನು ಮಾಡಬಲ್ಲ ಎಂಬುದನ್ನು ಊಹಿಸಿಯೇ ಹುಡುಗಿಯರು ಸಂಬಂಧಕ್ಕೆ ಎಳ್ಳುನೀರು ಬಿಡುತ್ತಾರೆ.
