ಶಾರೀರಿಕ ಸಂಬಂಧ ಇಬ್ಬರ ಒಪ್ಪಿಗೆ ಮೇಲೆ ನಡೆಯಬೇಕು. ಹಾಗೆ ಲೈಂಗಿಕ ಆರೋಗ್ಯಕ್ಕೆ ಕಾಂಡೋಮ್ ಅತ್ಯಗತ್ಯ. ಆದ್ರೆ ಗರ್ಲ್ ಫ್ರೆಂಡ್ ಒಪ್ಪಿಗೆ ಪಡೆಯದೆ ಕಾಂಡೋಮ್ ತೆಗೆದು ಸಂಬಂಧ ಬೆಳೆಸಿದ್ರೆ ಅದು ಅಪರಾಧ.
ಯಾವುದೇ ಸಂಬಂಧ (Relationship) ದಲ್ಲಿ ಮೋಸ (Cheating) ವಾದ್ರೂ ಅದನ್ನು ಸಹಿಸಿಕೊಳ್ಳುವುದು ಕಷ್ಟ. ಅದ್ರಲ್ಲೂ ಪ್ರೀತಿ (Love) ವಿಷ್ಯ ಬಂದಾಗ ಸಂಗಾತಿಯಿಂದ ಮೋಸ ಹೋದವರು ಅದ್ರಿಂದ ಹೊರಗೆ ಬರಲು ಸಾಕಷ್ಟು ಕಷ್ಟಪಡ್ತಾರೆ. ಅವರಿಂದ ದೂರವಾಗಿ ಹೊಸ ಬದುಕು ಕಂಡುಕೊಳ್ಳಲು ಅನೇಕ ಸಮಯ ಹಿಡಿಯುತ್ತದೆ. ವ್ಯಕ್ತಿಯೊಬ್ಬ ಪದೇ ಪದೇ ನಂಬಿಕೆ ದ್ರೋಹ ಮಾಡಿದ್ರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎನ್ನುತ್ತಾಳೆ ಈ ಮಹಿಳೆ. ಬ್ರಿಟನ್ (Britain) ಮೂಲದ ಮಹಿಳೆ ಡೇಟಿಂಗ್ ಅಪ್ಲಿಕೇಷನ್ ಮೂಲಕ ಪರಿಚಿತನಾದ ವ್ಯಕ್ತಿಯನ್ನು ಸಂಪೂರ್ಣವಾಗಿ ನಂಬಿ ಈಗ ಕಣ್ಣೀರು ಹಾಕ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಆಕೆ ತನ್ನ ನೋವನ್ನು ಹಂಚಿಕೊಂಡಿದ್ದಾಳೆ.
ಡೇಟಿಂಗ್ ಆಪ್ ನಲ್ಲಿ ಸಿಕ್ಕ ವ್ಯಕ್ತಿ : ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಮಹಿಳೆ ಹಾಗೂ ಟಾಮ್ ಇಬ್ಬರು ಪರಿಚಿತರಾಗಿದ್ದರು. ಟಾಮ್ ಎತ್ತರವಾಗಿದ್ದು. ತುಂಬಾ ಸುಂದರವಾಗಿದ್ದ. ಹಾಗೆ ಹಾಸ್ಯ ಸ್ವಭಾವದವನಾಗಿದ್ದ. ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಮಹಿಳೆ ಪ್ರೊಫೈಲ್ ಗೆ ಅನೇಕರು ಮ್ಯಾಚ್ ಆಗ್ತಿದ್ದರಂತೆ. ಆದ್ರೆ ಆಕೆ ಟಾಮ್ ಇಷ್ಟಪಟ್ಟಿದ್ದಳಂತೆ. ಟಾಮ್ ಕೂಡ ಮಹಿಳೆಯನ್ನು ಇಷ್ಟಪಡ್ತಿದ್ದನಂತೆ. ಸದಾ ಆಕೆ ಸೇವೆಗೆ ಸಿದ್ಧನಾಗಿರ್ತಿದ್ದ ಟಾಮ್, ರಾತ್ರಿ – ಹಗಲು ಎನ್ನದೆ ಮೆಸ್ಸೇಜ್ ಮಾಡ್ತಿದ್ದನಂತೆ.
ಟಾಮ್ ಗಿಂತ ಮೊದಲಾಗಿತ್ತು ಒಂದು ಬ್ರೇಕ್ ಅಪ್ : ಟಾಮ್ ಸಿಗುವ ಮೊದಲು ಮಹಿಳೆಗೆ ಬಾಯ್ ಫ್ರೆಂಡ್ ಇದ್ದನಂತೆ. ಕೆಲ ದಿನಗಳ ಹಿಂದಷ್ಟೇ ಆತನ ಜೊತೆ ಬ್ರೇಕ್ ಅಪ್ ಆಗಿತ್ತಂತೆ. ಆ ನೋವಿನಲ್ಲಿದ್ದ ಮಹಿಳೆಗೆ ಟಾಮ್ ಬಹಳ ನೆರವಾಗಿದ್ದನಂತೆ. ಆಕೆ ನೋವನ್ನು ಮರೆಸಿ, ಖುಷಿಯಾಗಿರುವಂತೆ ಮಾಡಿದ್ದನಂತೆ.
ಇದನ್ನೂ ಓದಿ: International Kissing Day: ಚುಂಬಕ ಶಕ್ತಿ ಅನ್ನೋದು ಸುಮ್ಮನೆಯಲ್ಲ!
ಟಾಮ್ ಜೊತೆ ಮೊದಲ ಭೇಟಿ : ಟಾಮ್ ಮೊದಲ ಬಾರಿ ಭೇಟಿಯಾದಾಗ ನನಗೆ ತುಂಬಾ ಖುಷಿಯಾಗಿತ್ತು ಎನ್ನುತ್ತಾಳೆ ಮಹಿಳೆ. ಆತ ತನ್ನ ಆಲೋಚನೆಗಳನ್ನು ಹೇಳಿಕೊಂಡಿದ್ದ. ಆತನ ಮನಸ್ಥಿತಿ ನನ್ನನ್ನು ಆಕರ್ಷಿಸಿತ್ತು ಎನ್ನುತ್ತಾಳೆ ಮಹಿಳೆ.
ಮೊದಲ ಬಾರಿ ಶಾರೀರಿಕ ಸಂಬಂಧ: ಟಾಮ್ ಸೇರಿದಂತೆ ಅನೇಕ ಸ್ನೇಹಿತರು ಸೇರಿ ಮಹಿಳೆ ಮನೆಯಲ್ಲಿ ಪಾರ್ಟಿ ಮಾಡಿದ್ದರಂತೆ. ಪಾರ್ಟಿ ಮುಗಿದ್ಮೇಲೆ ಎಲ್ಲರೂ ಹೋಗಿದ್ದರಂತೆ. ಆದ್ರೆ ಟಾಮ್ ಮಾತ್ರ ಅಲ್ಲೇ ಇದ್ದ. ಟಾಮ್ ಗೆ ಮತ್ತಷ್ಟು ಹತ್ತಿರವಾದ ಮಹಿಳೆ ಕಾಂಡೋಮ್ ನೀಡಿದ್ದಳಂತೆ. ಆದ್ರೆ ಟಾಮ್ ಕಾಂಡೋಮ್ ಬಳಸದೆ ಶಾರೀರಿಕ ಸಂಬಂಧ ಬೆಳೆಸಿರುವುದು ಆಕೆಗೆ ಗೊತ್ತಾದ್ರೂ ಮೊದಲ ಬಾರಿ ಮೂಡ್ ಹಾಳು ಮಾಡಿಕೊಳ್ಳೋದು ಬೇಡ ಎನ್ನುವ ಕಾರಣಕ್ಕೆ ಸುಮ್ಮನೆ ಮಲಗಿದ್ದಳಂತೆ.
ಕಾಂಡೋಮ್ ಬಳಸದೆ ಸೆಕ್ಸ್: ಬರೀ ಒಮ್ಮೆ ಮಾತ್ರವಲ್ಲ, ಟಾಮ್ ಎರಡನೇ ಬಾರಿ ಕೂಡ ಇದೇ ಕೆಲಸ ಮಾಡಿದ್ದನಂತೆ. ಆಗ ಕಾಂಡೋಮ್ ಎಲ್ಲಿ ಎಂದು ಕೇಳಿದ್ದ ಮಹಿಳೆಗೆ ಇಲ್ಲೇ ಎಲ್ಲೋ ಬಿದ್ದಿರಬೇಕು ನೋಡು ಎಂಬ ಉಡಾಫೆ ಉತ್ತರ ನೀಡಿದ್ದನಂತೆ. ಆದ್ರೆ ಎಲ್ಲೂ ಸಿಗದೆ ಹೋದಾಗ ಕೋಪಗೊಂಡ ಮಹಿಳೆ ನೋಡಿ ಹಾಸ್ಯ ಮಾಡಿದ್ದನಂತೆ ಟಾಮ್. ಇದಾದ್ಮೇಲೆ ಅನೇಕ ಬಾರಿ ಟಾಮ್, ಕಾಂಡೋಮ್ ಇಲ್ಲದೆ ಲೈಂಗಿಕ ಕ್ರಿಯೆ ನಡೆಸಿದ್ದನಂತೆ. ಪ್ರತಿ ಬಾರಿ ಕೋಪ ಮಾಡಿಕೊಳ್ತಿದ್ದವಳನ್ನು ನೋಡಿ ನಗುತ್ತಿದ್ದನಂತೆ. ಬ್ರಿಟನ್ ನಲ್ಲಿ ಮಹಿಳೆ ಒಪ್ಪಿಗೆ ಇಲ್ಲದೆ ಕಾಂಡೋಮ್ ತೆಗೆದ್ರೆ ಅದು ಅಪರಾಧವಾಗುತ್ತದೆ. ಈ ವಿಷ್ಯವನ್ನು ಕೂಡ ಮಹಿಳೆ ಆತನಿಗೆ ಹೇಳಿದ್ದಳಂತೆ. ಆದ್ರೆ ಟಾಮ್ ನಿರ್ಲಕ್ಷ್ಯ ಮಾಡಿದ್ರಿಂದ ಕೋಪಗೊಂಡ ಮಹಿಳೆ ಆತನನ್ನು ಮನೆಯಿಂದ ಹೊರಗೆ ನೂಕಿದ್ದಳಂತೆ.
ಇದನ್ನೂ ಓದಿ: ಶಾದಿ ಡಾಟ್ ಕಾಮ್‌ನಲ್ಲಿ ಹುಡುಗೀರು ಹೆಚ್ಚು ಸರ್ಚ್ ಮಾಡ್ತಿರೋದು ಇಂಥಾ ಹುಡುಗರನ್ನಂತೆ !
ಇನ್ನೊಬ್ಬಳಿಂದ ಗೊತ್ತಾಯ್ತು ಸತ್ಯ : ಈ ಮಧ್ಯೆ ಈಕೆಗೆ ಇನ್ನೊಬ್ಬಳ ಪರಿಚಯವಾಗಿದೆ. ಆಕೆ ಟಾಮ್ ಗರ್ಲ್ ಫ್ರೆಂಡ್ ಅಂತೆ. ಈಗಾಗಲೇ ಒಂದು ಮಗು ಹೊಂದಿರುವ ಆಕೆ ಮತ್ತೆ ಗರ್ಭಿಣಿ. ಟಾಮ್ ನಿಂದ ದೂರವಿರುವಂತೆ ಸಲಹೆ ನೀಡಿದ ಆಕೆ, ನಿನ್ನ ಸೌಂದರ್ಯ ನೋಡಿ ಟಾಮ್ ನಿನ್ನ ಬಳಿ ಬರಲಿಲ್ಲ ಎಂಬ ಸತ್ಯವನ್ನು ಹೇಳಿದ್ದಳಂತೆ.
