ಮಾಜಿ ಗರ್ಲ್ ಫ್ರೆಂಡ್ ಜೊತೆ ಬಾಯ್ ಫ್ರೆಂಡ್ ಕೆಲಸ ನೋಡಿ ಯುವತಿ ದಂಗು!

ಪ್ರೀತಿ ಹೆಸರಿನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಿದೆ. ಅನೇಕರು ಈ ಮೋಸದ ಹಳ್ಳಕ್ಕೆ ಬಿದ್ರೆ ಮತ್ತೆ ಕೆಲವರಿಗೆ ಅರ್ಧದಲ್ಲಿಯೇ ಎಚ್ಚರವಾಗುತ್ತದೆ. ಈ ಹುಡುಗಿ ಕೂಡ ಬಹುಬೇಗ ಜಾಗರೂಕಳಾಗಿ ಕ್ರಮಕೈಗೊಂಡಿದ್ದಾಳೆ.
 

Boyfriend Caught Circulating An Mm Of His Ex Girlfriend

ಸಂಗಾತಿ (Partner ) ಮಧ್ಯೆ ಪ್ರೀತಿ (Love) ಮಾತ್ರವಲ್ಲ ನಂಬಿಕೆ ಕೂಡ ಬಹಳ ಮುಖ್ಯ. ಅನೇಕರು ತಮ್ಮ ಸಂಗಾತಿಯನ್ನು ಕಣ್ಮುಚ್ಚಿ ನಂಬುತ್ತಾರೆ. ಇವರ ಈ ನಂಬಿಕೆ (Faith) ಯನ್ನು ಮತ್ತೊಬ್ಬ ಸಂಗಾತಿ ತಪ್ಪಾಗಿ ಬಳಕೆ ಮಾಡುವುದಿದೆ. ಅವರ ಮೋಸ ಬಹಿರಂಗವಾದಾಗ ಇಡೀ ಭೂಮಿ ನಡುಗಿದ ಅನುಭವವಾಗುತ್ತದೆ. ಹುಡುಗಿ ಕೂಡ ತನ್ನ ಬಾಯ್ ಫ್ರೆಂಡ್ (Boy Friend ) ಮಾಡಿದ ಮೋಸವನ್ನು ಹೇಳಿದ್ದಾಳೆ. ಆತ ಮಾಡಿದ ಕೆಲಸ ನೋಡಿ ನಾನು ದಂಗಾಗಿದ್ದೇನೆ. ಇನ್ಮುಂದೆ ಅವನ ಸಹವಾಸಬೇಡವೆಂದು ದೂರವಾಗಿದ್ದೇನೆ ಎಂದಿದ್ದಾಳೆ. ಅಷ್ಟಕ್ಕೂ ಆಕೆ ಜೀವನದಲ್ಲಿ ನಡೆದಿದ್ದೇನು ಎಂಬುದನ್ನು ನಾವಿಂದು ಹೇಳ್ತೇವೆ. 

ಬಾಯ್ ಫ್ರೆಂಡ್ ನಂಬಿ ಮೋಸ ಹೋದ ಯುವತಿ : ಇಬ್ಬರು ಕಾಲೇಜಿನ ಕ್ಲಾಸ್ಮೇಟ್ಸ್. ದಿನ ಕಳೆದಂತೆ ಇಬ್ಬರೂ ಹತ್ತಿರವಾಗಿದ್ದರು. ಹುಡುಗ ತುಂಬಾ ಸ್ಮಾರ್ಟ್ ಹಾಗೂ ಆಕರ್ಷಕವಾಗಿದ್ದ ಕಾರಣ ಆತನ ಹಿಂದೆ ಬೀಳ್ತಿದ್ದ ಹುಡುಗಿಯರ ಸಂಖ್ಯೆ ಹೆಚ್ಚಿತ್ತು. ಅಂಥ ಹುಡುಗ ತನನ್ನು ಇಷ್ಟಪಡ್ತಿದ್ದಾನೆಂದು ಆಕೆಗೆ ಖುಷಿಯಾಗಿತ್ತು. ಸೆಮಿಸ್ಟ್ರರ್ ಮುಗೀತಾ ಬರುತ್ತಿದ್ದಂತೆ, ಇಬ್ಬರೂ ಮತ್ತಷ್ಟು ಹತ್ತಿರವಾಗಿದ್ದರಂತೆ. ಎಗ್ಸಾಂ ಹತ್ತಿರ ಬರ್ತಿದ್ದಂತೆ ಇಬ್ಬರೂ ಓದಿನ ಕಡೆಗೆ ಹೆಚ್ಚಿನ ಗಮನ ನೀಡಿದ್ದರಂತೆ. ಇದೇ ಕಾರಣಕ್ಕೆ ಇಬ್ಬರು ಭೇಟಿಯಾಗುವುದು ಕಡಿಮೆಯಾಗಿತ್ತಂತೆ. ಎಲ್ಲೋ ಅಪರೂಪ ಎನ್ನುವಂತೆ ಆಗೋ ಈಗೋ ಭೇಟಿಯಾಗ್ತಿದ್ದರಂತೆ.

RELATIONSHIP TIPS: ಮದುವೆ ನಂತ್ರ ಬೆಡ್ ರೂಮ್ ವಿಷ್ಯ ಅಮ್ಮಂಗೆ ಹೇಳಕ್ಕೋಗಬೇಡಿ!

ಎಗ್ಸಾಂ ಮುಗಿದ ನಂತ್ರ ಎಲ್ಲರೂ ಒಂದು ದಿನ ಭೇಟಿಯಾಗುವ ಪ್ಲಾನ್ ಮಾಡಿದ್ದಾರೆ. ಒಟ್ಟಿಗೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಎಲ್ಲರ ಮೊಬೈಲ್ ಗೆ ಒಂದು ವಿಡಿಯೋ ಬಂದಿದೆ. ಅದನ್ನು ನೋಡಿದ ಎಲ್ಲರೂ ದಂಗಾಗಿದ್ದಾರೆ. ಅದಕ್ಕೆ ಈ ಹುಡುಗಿ ಕೂಡ ಹೊರತಾಗಿರಲಿಲ್ಲ. ವಿಡಿಯೋದಲ್ಲಿ ಇಬ್ಬರ ಖಾಸಗಿ ಜೀವನವನ್ನು ಸೆರೆ ಹಿಡಿಯಲಾಗಿತ್ತಂತೆ. ಆ ವಿಡಿಯೋದಲ್ಲಿ ಇದ್ದದ್ದು ಬೇರೆ ಯಾರೂ ಅಲ್ಲ ಆಕೆ ಬಾಯ್ ಫ್ರೆಂಡ್ ಮಾಜಿ ಲವ್ವರ್. ಆಕೆ ಇನ್ನೊಬ್ಬನ ಜತೆಗಿದ್ದ ವಿಡಿಯೋವನ್ನು ಡಿಲಿಟ್ ಮಾಡುವಂತೆ ಯುವತಿ ಎಲ್ಲರಿಗೂ ಹೇಳಿದ್ದಳಂತೆ. ಆಕೆ ಕೂಡ ವಿಡಿಯೋ ಡಿಲಿಟ್ ಮಾಡಿದ್ದಳಂತೆ. 

ಕಾಲೇಜಿನಲ್ಲಿ ಈ ವಿಷ್ಯ ದೊಡ್ಡ ಸುದ್ದಿಯಾಗಿತ್ತು. ವಿಡಿಯೋದಲ್ಲಿದ್ದ ಹುಡುಗಿ ಬಾತ್ ರೂಮಿನ ಕಡೆ ಓಡೋದನ್ನು ಈಕೆ ನೋಡಿದ್ದಳು. ಯಾರಿಗೆ ಆದ್ರೂ ಅದೊಂದು ಬಿಗ್ ಶಾಕ್. ಆದ್ರೆ ಹುಡುಗಿ ಈ ಬಗ್ಗೆ ದೂರು ನೀಡಲು ನಿರಾಕರಿಸಿದ್ದಳಂತೆ. ಹಾಗಾಗಿ ಕಾಲೇಜಿನ ಪ್ರಾಂಶುಪಾಲರು ಏನು ಮಾಡಲು ಸಾಧ್ಯವಾಗಿರಲಿಲ್ಲವಂತೆ.

12 ವರ್ಷಗಳ ಬಳಿಕ ಬೇರ್ಪಟ್ಟ ಪಾಪ್ ಗಾಯಕಿ ಶಕಿರಾ - ಫುಟ್ ಬಾಲ್ ಸ್ಟಾರ್ ಜೆರಾರ್ಡ್ ಪಿಕ್!

ಘಟನೆ ನಡೆದು ಕೆಲ ದಿನಗಳು ಕಳೆದ ನಂತ್ರ ಯುವತಿ ತನ್ನ ಬಾಯ್ ಫ್ರೆಂಡ್ ಜೊತೆ ಆತನ ಮನೆಗೆ ಹೋಗಿದ್ದಳಂತೆ. ಆತ ನೂಡಲ್ಸ್ ತರಲು ಹೊರಗೆ ಹೋಗಿದ್ದನಂತೆ. ಈ ವೇಳೆ ಆತನ ಫೋನ್ ಗೆ ಒಂದು ಎಸ್ ಎಂಎಸ್ ಬಂದಿದೆ. ಅದರಲ್ಲಿ ನಾವು ಮಾಡಿದ್ದು ಸರಿ ಇದೆ ಎಂದು ಬರೆಯಲಾಗಿತ್ತಂತೆ. ತಕ್ಷಣ ಹುಡುಗಿ ಮೊಬೈಲ್ ಹಿಡಿದು ಬಾತ್ ರೂಮಿಗೆ ಓಡಿದ್ದಾಳೆ. ಅಲ್ಲಿ ಎಲ್ಲ ಸಂದೇಶ ಓದಿದ್ದಾಳೆ. ಅದ್ರಲ್ಲಿ ಹುಡುಗಿಯ ಎಂಎಂಎಸ್ ಬಗ್ಗೆ ಚರ್ಚೆಯಾಗಿದೆ. ಇದನ್ನು ನೋಡಿದ ಹುಡುಗಿ ಕುಸಿದಿದ್ದಾಳೆ. ತನ್ನ ಯಾವುದಾದ್ರೂ ವಿಡಿಯೋ ಫೋನ್ ನಲ್ಲಿದ್ಯಾ ಎಂದು ಹುಡುಕಾಡಿದ್ದಾಳೆ. ನಂತ್ರ ಫೋನ್ ತಂದು ಅಲ್ಲೇ ಇಟ್ಟಿದ್ದಾಳೆ. 

ದೃಢ ನಿರ್ಧಾರ ತೆಗೆದುಕೊಂಡ ಯುವತಿ, ಹಿಂದೆ ಮುಂದೆ ನೋಡದೇ ಬ್ರೇಕ್ ಅಪ್ ಮಾಡಿಕೊಂಡಿದ್ದಾಳೆ. ಬಾಯ್ ಫ್ರೆಂಡ್ ಇಷ್ಟು ಕ್ರೂರ ವ್ಯಕ್ತಿ ಎಂಬುದು ನನಗೆ ತಿಳಿದಿರಲಿಲ್ಲ. ಆತನಿಂದ ದೂರವಾದ್ಮೇಲೆ ನಾನು ನೆಮ್ಮದಿಯಾಗಿದ್ದೇನೆ. ನನ್ನ ವಿಡಿಯೋ ಮಾಡಿದ್ದಾನೆಂಬ ಭಯ ನನಗಿತ್ತು, ಮುಂದೆ ಎಂಎಂಎಸ್ ಮಾಡುವ ಸಾಧ್ಯತೆಯಿದೆ ಎನ್ನುವ ಕಾರಣಕ್ಕೆ ನಾನು ಬೇಗ ಸಂಬಂಧದಿಂದ ಹೊರ ಬಂದೆ ಎನ್ನುತ್ತಾಳೆ ಯುವತಿ. 

Boyfriend Caught Circulating An Mm Of His Ex Girlfriend

 

Latest Videos
Follow Us:
Download App:
  • android
  • ios