Asianet Suvarna News Asianet Suvarna News

'ಸಿಂಗಲ್ಸ್‌ ಆಗಿದ್ರೇನು ಜೀವ್ನ ಇರಲ್ವಾ..? ಬಾಸ್‌ಗೇ ಬೆಂಡೆತ್ತಿದ ಭಲೇ ಆಸಾಮಿ..!

ಮದುವೆ, ಮಕ್ಕಳಿದ್ರೆ ಒಂದಿಷ್ಟು ಲಾಭವಿದೆ. ನಿಮಗೆ ನೀಡಿದಷ್ಟು ಫ್ರೀಡಂ, ರಜೆ ಪಾಪ ಅವಿವಾಹಿತರಿಗೆ ಸಿಗೋದಿಲ್ಲ. ಯಾರು ಇಲ್ಲ ಅಂದ್ಮೇಲೆ ರಜೆಯಾಗಿ ಅನ್ನೋರೇ ಹೆಚ್ಚು. ಈಗ ಇಂಥದ್ದೇ ಪೋಸ್ಟ್ ವೈರಲ್ ಆಗಿದೆ. 
 

Boss Asks Single Man To Cancel Off And Come Work Employee Reply Viral roo
Author
First Published Jun 30, 2023, 12:40 PM IST

ಉದ್ಯೋಗಸ್ಥರಿಗೆ ಸುಲಭವಾಗಿ ಎಂದೂ ರಜೆ ಸಿಗೋದಿಲ್ಲ. ಎಲ್ಲ ಕಂಪನಿಗಳಲ್ಲೂ ಸುಲಭವಾಗಿ ರಜೆ ನೀಡೋದಿಲ್ಲ. ತುರ್ತು ಪರಿಸ್ಥಿತಿಯಲ್ಲೂ ರಜೆ ನೀಡಲು ಮೇಲಿನ ಅಧಿಕಾರಿಗಳು ಮನಸ್ಸು ಮಾಡೋದಿಲ್ಲ. ಕಾಡಿ – ಬೇಡಿದ ಮೇಲೆ ರಜೆ ಸಿಕ್ಕರೂ ನೆಮ್ಮದಿ ಇರೋದಿಲ್ಲ. ಯಾಕೆಂದ್ರೆ ರಜೆಯಲ್ಲಿದ್ರೂ ಕಚೇರಿ ಕೆಲಸ ಮಾಡುವಂತೆ ಒತ್ತಾಯ ಮಾಡೋರಿದ್ದಾರೆ. ಮದುವೆಯಾಗಿ ಸಂಸಾರ ನಡೆಸ್ತಿರುವ ಉದ್ಯೋಗಿಗಳಿಗೆ ಸ್ವಲ್ಪ ರಿಯಾಯಿತಿ ಸಿಗುತ್ತೆ. ಅದೇ ಒಂಟಿಯಾಗಿರುವ ಉದ್ಯೋಗಿಗಳ ಪಾಡು ಹೇಳ ತೀರದು. ಮನೆಯಲ್ಲಿ ಖಾಲಿಯಿದ್ದು ಏನು ಮಾಡ್ತೀರಾ? ನಿಮಗೇನು ಮದುವೆಯಾ, ಮಕ್ಕಳಾ, ಸುಮ್ನೆ ಕೆಲಸಕ್ಕೆ ಬನ್ನಿ ಎನ್ನುವ ಬಾಸ್‌ಗಳ ಸಂಖ್ಯೆಯೇ ಹೆಚ್ಚು. 

ಅವಿವಾಹಿತ ಉದ್ಯೋಗಿ (Employee) ಗಳ ಪಡುವ ಪಾಡು ಅಷ್ಟಿಷ್ಟಲ್ಲ. ಯಾರಿಗೆ ರಜೆ (Holiday) ಸಿಕ್ಕರೂ ಅವರಿಗೆ ಸಿಗೋದು ಬಹಳ ಕಷ್ಟ. ಕೆಲ ಅವಿವಾಹಿತ (Unmarried) ಉದ್ಯೋಗಿಗಳು ಇದಕ್ಕೆ ಒಪ್ಪೋದು ಇದೆ. ವೀಕ್ ಆಫ್ ತೆಗೆದುಕೊಂಡು ಮಾಡೋದ್ ಏನಿದೆ ಅಂತಾ ಕಚೇರಿಗೆ ಬಂದು ಕೆಲಸ ಮಾಡ್ತಾರೆ. ಅವರು ಮಾಡುವ ಕೆಲಸ, ಉಳಿದ ಉದ್ಯೋಗಿಗಳನ್ನು ಸಂಕಷ್ಟಕ್ಕೆ ಸಿಲುಕಿಸೋದೂ ಇದೆ. ಅದೇನೇ ಇರಲಿ, ಈಗ ಸಾಮಾಜಿಕ ಜಾಲತಾಣದಲ್ಲಿ ಅವಿವಾಹಿತ ಉದ್ಯೋಗಿ ಹಾಗೂ ಆತನ ಬಾಸ್ ಮಧ್ಯೆ ನಡೆದ ಚಾಟಿಂಗ್ ಒಂದನ್ನು ಪೋಸ್ಟ್ ಮಾಡಲಾಗಿದೆ. ಅದ್ರಲ್ಲಿ ಬಾಸ್ ಹೇಳುವ ಮಾತಿಗೆ ಉದ್ಯೋಗಿ ಕೋಪಗೊಳ್ತಾನೆ. ರಜೆಯಲ್ಲೂ, ಕಚೇರಿಗೆ ಬರೋದು ಹೇಗೆ ಎಂದು ಪ್ರಶ್ನೆ ಮಾಡ್ತಾನೆ. ಅದಕ್ಕೆ ಬಾಸ್ ನೀಡುವ ಉತ್ತರ ಭಿನ್ನವಾಗಿದೆ. ಅದನ್ನು ನೋಡಿದ್ರೆ ಸಾಮಾನ್ಯರಿಗೆ ನಗು ಬಂದ್ರೂ, ಅನೇಕರಿಗೆ ಇದು ಕನೆಕ್ಟ್ ಆಗೋದ್ರಲ್ಲಿ ಸಂಶಯವಿಲ್ಲ. 

ಗಂಡ ಬರ್ತ್ ಡೇ ಮರೆತ್ರೆ, ಹೆಂಡತಿ ಡಿವೋರ್ಸ್.. ಭಾರತದಲ್ಲಾದ್ರೆ ಎಷ್ಟಾಗ್ತಿತ್ತೋ ಡಿವೋರ್ಸ್!

ಒಂಟಿಯಾಗಿದ್ದೀರಿ ಕೆಲಸಕ್ಕೆ ಬನ್ನಿ: ರೆಡ್ಡಿಟ್‌ನಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ಅದೀಗ ವೈರಲ್ ಆಗಿದೆ. ವೈರಲ್ ಆಗಿರುವ ಚಾಟ್‌ನಲ್ಲಿ ಬಾಸ್ - ನಾಳೆ ನೀವು 7 ಗಂಟೆಗೆ ಶಿಫ್ಟ್‌ಗೆ ಬರಬೇಕು. ಇದಕ್ಕಾಗಿ 6.15ಕ್ಕೆ ಕಚೇರಿಯಲ್ಲಿ ಹಾಜರಿರಬೇಕು. ನೀವು ಸಂದೇಶವನ್ನು ಓದಿದ್ದೀರಿ ಎಂದು ಭಾವಿಸುತ್ತೇವೆ ಎಂದು ಬರೆದಿದ್ದಾರೆ. ಅದಕ್ಕೆ ಉದ್ಯೋಗಿ, ನಾನು ನಾಳೆ ಕಚೇರಿಗೆ ಬರೋದಿಲ್ಲ. ಬ್ರೇನ್ ಅವರನ್ನು ಕೇಳಿ ಅಂತಾ ರಿಪ್ಲೇ ಮಾಡ್ತಾರೆ. ಬ್ರೇನ್ ವಿವಾಹಿತ. ಮಕ್ಕಳಿದ್ದಾರೆ. ಶಾರ್ಟ್ ನೋಟೀಸ್‌ನಲ್ಲಿ ಅವರನ್ನು ಕಚೇರಿಗೆ ಕರೆಯಲು ಸಾಧ್ಯವಿಲ್ಲ. ನೀವು ಸಿಂಗಲ್, ಯಾಕೆ ಬರೋದಿಕ್ಕೆ ಆಗಲ್ಲ ಅಂತಾ ಬಾಸ್ ವಾಪಸ್ ಸಂದೇಶ ಕಳುಹಿಸಿದ್ದಾರೆ. 

ವಾರದಲ್ಲಿ ಇದೊಂದೇ ದಿನ ನನಗೆ ವೀಕ್ ಆಫ್ ಇರೋದು. ನಾನು ಬೇರೆ ಕೆಲಸ ಫಿಕ್ಸ್ ಮಾಡಿಕೊಂಡಿದ್ದೇನೆ. ಮಧ್ಯಾಹ್ನದ ಮೇಲೆ ಆದ್ರೆ ಬರ್ತೇನೆ. ಅದ್ರ ಬಗ್ಗೆ ನಿಮಗೆ ಹೇಳ್ತೇನೆ ಎಂದು ಉದ್ಯೋಗಿ ರಿಪ್ಲೇ ಮಾಡ್ತಾನೆ. ನಂತ್ರ ಇಬ್ಬರ ಚಾಟ್ ಇನ್ನಷ್ಟು ಮುಂದುವರೆದಂತೆ ಕಾಣುತ್ತದೆ. ಬಾಸ್ ಮಾತಿನಿಂದ ಕೋಪಗೊಂಡ ಉದ್ಯೋಗಿ, ಕೊನೆಯಲ್ಲಿ ಕೆಲಸ ಬಿಡುವ ನಿರ್ಧಾರಕ್ಕೆ ಬರ್ತಾನೆ. ಅದಕ್ಕೆ ಸಂಬಂಧಿಸಿದಂತೆ ಆತ, ಬಾಸ್ ಗೆ ಸಂದೇಶವನ್ನು ರವಾನೆ ಮಾಡ್ತಾನೆ.

ಚಲುವಿನ ಚಿತ್ತಾರ ಮಾದರಿ ಪ್ರೇಮಕಥೆ: ಅಲ್ಲಿ ಹುಡ್ಗ ಹುಚ್ಚನಾದ್ರೆ, ಇಲ್ಲಿ ಹುಡುಗಿಯೇ ಹುಚ್ಚಿಯಾದ್ಲು!

ವೈರಲ್ ಪೋಸ್ಟ್ ಗೆ ಜನರಿಂದ ಸಿಗ್ತಿದೆ ಈ ಎಲ್ಲ ಪ್ರತಿಕ್ರಿಯೆ : ವೈರಲ್ ಪೋಸ್ಟ್ ನೋಡಿ ಬಳಕೆದಾರರು ಅಚ್ಚರಿಗೊಂಡಿದ್ದಾರೆ. ಸುಮಾರು 64 ಸಾವಿರ ಮಂದಿ ಈ ಪೋಸ್ಟನ್ನು ಈವರೆಗೆ ನೋಡಿದ್ದಾರೆ. ಜನರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ಇದನ್ನು ನಕಲಿ ಎಂದು ಕರೆದಿದ್ದಾರೆ. ಇನ್ನೊಬ್ಬರು, ಯಾವುದೇ ಕಾರಣಕ್ಕೂ ಕಚೇರಿಗೆ ಏಕೆ ಬರ್ತಿಲ್ಲ ಎಂಬುದನ್ನು ಬಾಸ್ ಗೆ ವಿವರವಾಗಿ ತಿಳಿಸ್ಬಾರದು ಎಂದಿದ್ದಾರೆ.  
 

Follow Us:
Download App:
  • android
  • ios