ಅಕ್ಕನ ಗಂಡನ (Husband) ಮೇಲೆ ತಂಗಿ ಕಣ್‌ ಹಾಕೋದು, ಅಣ್ಣನ ಹೆಂಡ್ತಿ ಮೇಲೆ ಮೈದುನನಿಗೆ ಪ್ರೀತಿ, ಸ್ನೇಹಿತನ ಪತ್ನಿ ಜತೆ ಗಂಡನ ಲವ್ವಿಡವ್ವಿ ಇದ್ಯಾವುದೂ ಈಗ ಶಾಕಿಂಗ್ ನ್ಯೂಸ್ ಆಗಿ ಉಳಿದಿಲ್ಲ. ಇಲ್ಲಾಗಿದ್ದು ಇದೇ. ಗಂಡ, ಹೆಂಡ್ತಿಯ (Wife) ಸ್ನೇಹಿತೆ ಜೊತೇನೆ ಸಂಬಂಧ ಇಟ್ಕೊಂಡು ಆರಾಮವಾಗಿದ್ದ. ಆದ್ರೆ ಸ್ನೇಹಿತೆಗೆ (Friend) ಮಗು ಹುಟ್ಟಿದಾಗ ಇದು ನನ್ನ ಗಂಡನಿಂದಾದ ಮಗು ಅನ್ನೋದನ್ನು ಹೆಂಡ್ತಿಯೇ ಕಂಡುಹಿಡಿದಿದ್ದಾಳೆ.

ಇವತ್ತಿನ ಸಮಾಜ (Society)ದಲ್ಲಿ ಅನೈತಿಕತೆ ಎಂಬುದು ಅಚ್ಚರಿಪಡುವ ವಿಷಯವಾಗಿ ಉಳಿದಿಲ್ಲ. ಎಲ್ಲರೂ ಇದನ್ನು ಸಾಮಾನ್ಯವಾಗಿ ಕಾಣುತ್ತಿದ್ದಾರೆ. ಮೊದಲ್ಲೆಲ್ಲಾ ಸಂಬಂಧ (Relatioship)ಗಳಿಗೆ ಅತಿ ಹೆಚ್ಚು ಮೌಲ್ಯವಿತ್ತು. ಆದರೆ ಇವತ್ತಿನ ದಿನಗಳಲ್ಲಿ ಯಾವ ಸಂಬಂಧವೂ ನಿಜವಾದ ಅರ್ಥವನ್ನು ಉಳಿಸಿಕೊಂಡಿಲ್ಲ. ತಾಯಿ, ಮಗ, ಸ್ನೇಹಿತ, ಗಂಡ ಎಲ್ಲಾ ಸಂಬಂಧಗಳಲ್ಲೂ ಸುಲಭವಾಗಿ ಮೋಸ ನಡೆಯುತ್ತದೆ. ಗಂಡನ ತಮ್ಮನನ್ನೇ ಮದುವೆಯಾಗುವುದು, ಮಾವನ ಜತೆ ಓಡಿಹೋಗುವುದು, ಶಿಕ್ಷಕನ ಜತೆ ವಿದ್ಯಾರ್ಥಿಯ ಸರಸ. ಹೀಗೆ ಎಂಥಾ ಘಟನೆಗಳು ಬೇಕಾದ್ರೂ ಇವತ್ತಿನ ಕಾಲದಲ್ಲಿ ನಡೆಯುತ್ತವೆ.

ಸ್ನೇಹಿತೆಯ ಜೊತೆ ಗಂಡನಿಗೆ ಅನೈತಿಕ ಸಂಬಂಧ
ವಿಕೆನ್‌ಬರ್ಗ್‌ನ ನಾಲ್ಕು ಮಕ್ಕಳ ತಾಯಿಯಾದ 28 ವರ್ಷದ ಹೇಲಿ ಕಸ್ಟರ್, ತನ್ನ ಪತಿ (Husband) ಟ್ರಾವಿಸ್ ಬೌಲಿಂಗ್ ತನ್ನ ಸ್ನೇಹಿತೆ (Friend) ಯೊಂದಿಗೇ ಸಂಬಂಧ ಇಟ್ಟುಕೊಂಡು ತನಗೆ ಮೋಸ ಮಾಡಿದ್ದಾಗಿ ಆರೋಪಿಸಿದ್ದಾಳೆ. ತನ್ನ ಆಪ್ತ ಸ್ನೇಹಿತೆ 36 ವರ್ಷದ ಮಹಿಳೆ ತನಗೆ ಮೋಸ ಮಾಡಿದ್ದಾಗಿ ದೂರಿದ್ದಾಳೆ. ಕಸ್ಟರ್ ತನ್ನ ಮಾಜಿ-ಹಬ್ಬಿ ತನ್ನ ಆರು ವರ್ಷಗಳ ಮದುವೆಯ ಸಮಯದಲ್ಲಿ ಕನಿಷ್ಠ 30 ಮಹಿಳೆಯರೊಂದಿಗೆ ಮೋಸ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾಳೆ.ಆ ಸಮಯದಲ್ಲಿ ಅವನು ಇತರ ಇಬ್ಬರು ಜನರೊಂದಿಗೆ ಇಬ್ಬರು ಮಕ್ಕಳನ್ನು ಹೊಂದಿದ್ದನು ಎಂದು ಆರೋಪಿಸಿದ್ದಾಳೆ.

Relationship Tips : ಅಪ್ಪಿತಪ್ಪಿಯೂ ಸಂಗಾತಿಗೆ ಈ ಸಂದೇಶ ಕಳಿಸ್ಬೇಡಿ

ಸ್ನೇಹಿತೆಯ ಮಗುವಿನ ಮೇಲೆ ಜನ್ಮ ಗುರುತು
ಹೇಲಿ ಕಸ್ಟರ್ ತನ್ನ ಸ್ನೇಹಿತೆ ಗರ್ಭಿಣಿಯೆಂದು ತಿಳಿದು ಖುಷಿಪಟ್ಟಳು. ಆಕೆಯ ಹೆರಿಗೆಯಾದಾಗಲೂ ಆಕೆಯನ್ನು ಭೇಟಿ ಮಾಡಲು ತೆರಳಿದಳು. ಈ ಸಂದರ್ಭದಲ್ಲಿ ಆಕೆಗೆ ನವಜಾತ ಶಿಶುವಿನ ದೇಹದಲ್ಲಿರುವ ಜನ್ಮಗುರುತನ್ನು ನೋಡಿ, ಇದು ಗಂಡನಿಂದಲೇ ಆದ ಮಗುವೆಂದು ಗೊತ್ತಾಗಿದೆ. ಗಂಡ ಹಾಗೂ ಸ್ನೇಹಿತೆಯ ಲವ್ವಿಡವ್ವಿ ಬಯಲಾಗಿದೆ ಎಂದು ತಿಳಿದುಬಂದಿದೆ. ಹೇಲಿ ಕಸ್ಟರ್ ಮಗುವಿನ ಕುತ್ತಿಗೆಯ ಮೇಲೆ ಅಪರೂಪದ ಆನುವಂಶಿಕ ಜನ್ಮಮಾರ್ಗವನ್ನು ಗಮನಿಸಿದಳು.

ನನ್ನ ಸ್ನೇಹಿತ ಗರ್ಭಿಣಿ ಎಂದು ತಿಳಿದು ನಾನು ಅವಳನ್ನು ಸಂಪರ್ಕಿಸಿದೆ. ಅವಳಿಗೆ ಸಹಾಯ ಮಾಡಬೇಕೆಂದು ನಾನು ಭಾವಿಸಿದೆ. ಹೆರಿಗೆಯ ನಂತರ ಅವಳನ್ನು ಭೇಟಿಯಾಗಲು ಹೋದೆ. ಈ ಸಂದರ್ಭದಲ್ಲಿ ಮಗುವನ್ನು ಎತ್ತಿ ಮಲಗಿಸುವ ಸಂದರ್ಭ ಮಗುವಿನ ಮೇಲೆ ಜನ್ಮ ಗುರುತನ್ನು ಗಮನಿಸಿದೆ ಎಂದು ಕಸ್ಟರ್ ಹೇಳಿದ್ದಾರೆ. ನಾನು ತಕ್ಷಣ ನನ್ನ ಪತಿಯ ಕಡೆಗೆ ನೋಡಿದೆ. ನನ್ನ ಪತಿ ಹಾಗೂ ನನ್ನ ಸ್ನೇಹಿತೆ ಏನೂ ಹೇಳಲು ಸಾಧ್ಯವಾಗದೆ ತಲೆತಗ್ಗಿಸಿ ನಿಂತಿದ್ದರು ಎಂದಿದ್ದಾರೆ. 

Relationship Tips: ಏನು ಬೇಕಾದ್ರೂ ಆಗ್ಲಿ, ಗಂಡಂದಿರು ಈ ಗುಟ್ಟು ಮಾತ್ರ ಬಿಟ್ಟುಕೊಡಲ್ಲ

ಗಂಡನೇ ಮಗುವಿನ ತಂದೆಯೆಂದು ಕಂಡುಹಿಡಿದ ಮಹಿಳೆ !
ಆರಂಭದಲ್ಲಿ ತುಂಬಾ ಆಘಾತಕ್ಕೆ ಒಳಗಾಗಿದ್ದೆ. ಯಾಕೆಂದರೆ ಅವಳು ಗರ್ಭಿಣಿಯೆಂದು ತಿಳಿದ ಬಳಿಕ ನಾನು ಅವಳ ಪ್ರತಿ ಹೆಜ್ಜೆಯಲ್ಲೂ ಇದ್ದೆ. ಆಸ್ಪತ್ರೆಯಲ್ಲಿ ಸಹ ಅವಳಿಗೆ ಧೈರ್ಯ ತುಂಬುತ್ತಿದ್ದೆ. ಆದರೆ ಆಕೆ ನನಗೇ ಮೋಸ ಮಾಡಿದಳು ಎಂದಿದ್ದಾರೆ. ಕಸ್ಟರ್ ತನ್ನ ಕಥೆಯನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ, ಅಲ್ಲಿ ಅವರ ಮೂಲ ವೀಡಿಯೊ 3.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಹೇಲಿ ಕಸ್ಟರ್ ವೀಡಿಯೋಗೆ ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ನೀವು ನಿಮ್ಮ ಗಂಡನನ್ನು ಸರಿಯಾಗಿ ನೋಡಿಕೊಂಡಿದ್ದರೆ, ಅವನು ಮೋಸ ಮಾಡುತ್ತಿರಲಿಲ್ಲ ಎಂದಿದ್ದಾರೆ. ಇನ್ನು ಕೆಲವೊಬ್ಬರು ಸ್ನೇಹಿತರಿದ್ದಾಗ ಶತ್ರುಗಳ ಯಾಕೆ ಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಆರಂಭಿಕ ಆಘಾತವು ಕಡಿಮೆಯಾದಾಗ, ಕಸ್ಟರ್ ಅವರು ತಮ್ಮ ಗಂಡನನ್ನು ಕ್ಷಮಿಸಿದರು..ಮತ್ತು ಅವರ ಸ್ನೇಹವನ್ನು ಮುಂದುವರಿಸಲು ಮತ್ತು ಮಕ್ಕಳ ಸಲುವಾಗಿ ತನ್ನ ಸ್ನೇಹಿತೆ ಜೊತೆ ಸೌಹಾರ್ದ ಸಂಬಂಧವನ್ನು ಹೊಂದಲು ನಿರ್ಧರಿಸಿದರು.