Relationship Tips: ಏನು ಬೇಕಾದ್ರೂ ಆಗ್ಲಿ, ಗಂಡಂದಿರು ಈ ಗುಟ್ಟು ಮಾತ್ರ ಬಿಟ್ಟುಕೊಡಲ್ಲ
ದಾಂಪತ್ಯದಲ್ಲಿ ರಹಸ್ಯವಿರಬಾರದು. ಆದ್ರೆ ಅನೇಕ ಬಾರಿ ರಹಸ್ಯವೇ ಬಾಳು ಹಾಳು ಮಾಡುತ್ತದೆ. ಇದೇ ಕಾರಣಕ್ಕೆ ಕೆಲ ಪುರುಷರು ಗುಟ್ಟನ್ನು ಮುಚ್ಚಿಡುತ್ತಾರೆ. ಪತ್ನಿಗೆ ಹೇಳಿದ್ರೆ ಸಂಬಂಧ ಹಾಳಾಗುವ ಭಯ ಅವರನ್ನು ಕಾಡುತ್ತದೆ.
ಮದುವೆ (Marriage) ಸಂಬಂಧವನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಇಬ್ಬರ ಮಧ್ಯೆ ಹೊಂದಾಣಿಕೆ, ಪ್ರಾಮಾಣಿಕತೆ ಇರ್ಬೇಕು. ದಾಂಪತ್ಯ ಸಂಬಂಧಕ್ಕೆ ಇಬ್ಬರೂ ಬದ್ಧವಾಗಿರಬೇಕು. ಒಂದೇ ಸೂರಿನಡಿ ಬಹುಕಾಲ ಒಟ್ಟಿಗೆ ಬಾಳಿದರೂ ದಂಪತಿ ನಡುವೆ ಭಾವನಾತ್ಮಕ ಅಂತರ ಬರುವುದು ಮಾತ್ರವಲ್ಲದೆ ಪರಸ್ಪರ ಸಮನ್ವಯದ ಕೊರತೆಯಿಂದ ಅವರ ಸಂಬಂಧ (relationship) ಮಧ್ಯದಲ್ಲಿಯೇ ಮುರಿದು ಬೀಳುತ್ತದೆ. ಒಂದು ಸಣ್ಣ ರಹಸ್ಯ (secret) ವು ದಾಂಪತ್ಯದ ಮೇಲಿನ ನಂಬಿಕೆಯನ್ನು ಹಾಳುಮಾಡುತ್ತದೆ. ಈ ಒಂದು ಕಾರಣದಿಂದ ನಿಮ್ಮ ಪ್ರಸ್ತುತ ಜೀವನ (Life) ಮತ್ತು ಭವಿಷ್ಯ ಹಾಳಾಗುತ್ತದೆ. ಇದನ್ನು ಸುಮ್ಮನೆ ಹೇಳ್ತಿಲ್ಲ. ಕೆಲ ಪುರುಷರು ತಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ರಹಸ್ಯಗಳನ್ನು ಹೇಳಿದ್ದಾರೆ. ಅವರು ತಮ್ಮ ಸಂಬಂಧವು ಕೆಡಬಾರದು ಎಂಬ ಕಾರಣಕ್ಕೆ ಹೆಂಡತಿಯಿಂದ ಕೆಲ ಗುಟ್ಟನ್ನು ಮುಚ್ಚಿಟ್ಟಿದ್ದಾರಂತೆ. ಇಂದು ಪತ್ನಿಯಿಂದ ಪುರುಷರು ಮುಚ್ಚಿಟ್ಟ ರಹಸ್ಯ ಯಾವುದು ಎಂಬುದನ್ನು ಹೇಳ್ತೇವೆ.
ಐದು ಪುರುಷರು ತಮ್ಮ ಪತ್ನಿಗೆ ಹೇಳದ ಗುಟ್ಟು :
ವಿವಾಹಿತ ಮಹಿಳೆಯೊಂದಿಗೆ ಸಂಬಂಧ : ಮದುವೆಗೆ ಮೊದಲು ಅನೇಕರ ಜೊತೆ ಸಂಬಂಧ ಬೆಳೆಸುವುದು ಈಗಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಈ ಹಳೆ ಸಂಬಂಧ, ಮದುವೆಯನ್ನು ಹಾಳು ಮಾಡ್ಬಾರದು. ಅನೇಕ ಬಾರಿ ಪತ್ನಿಗೆ ಪತಿಯ ಮಾಜಿ ವಿಷ್ಯ ಗೊತ್ತಾದ್ರೆ ಗಲಾಟೆಯಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಕೆಲವರು ಅದನ್ನು ಮುಚ್ಚಿಡುತ್ತಾರೆ. ವ್ಯಕ್ತಿಯೊಬ್ಬ ತನ್ನ ಮಾಜಿ ಬಗ್ಗೆ ಪತ್ನಿಗೆ ಹೇಳಿಲ್ಲವಂತೆ. ಮದುವೆಯಾಗುವ ಮೊದಲು, ನಾನು ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದೆ. ದೈಹಿಕ ಸಂಬಂಧವೂ ಇತ್ತು. ಅವಳು ನಿಖರವಾಗಿ ನಾನು ಕನಸು ಕಂಡ ಮಹಿಳೆ. ಅವಳು ನೋಡಲು ಮಾದಕವಾಗಿದ್ದಳು. ಆತ್ಮವಿಶ್ವಾಸದಿಂದಿದ್ದ ಮಹಿಳೆ ನನ್ನ ಜೊತೆ ಆರಾಮವಾಗಿದ್ದಳು. ಅವಳ ಗಂಡನಿಂದ ದೂರವಾದ್ಮೇಲೆ ನಾವಿಬ್ಬರೂ ಹತ್ತಿರವಾಗಿದ್ದೆವು. ಆದರೆ ನನ್ನ ಮದುವೆ ನಿಶ್ಚಯವಾದಾಗ ನಾನು ಆಕೆಯೊಂದಿಗೆ ಸಂಬಂಧವನ್ನು ಕೊನೆಗೊಳಿಸಿದೆ. ಆದರೆ, ನಾನು ಈ ಬಗ್ಗೆ ನನ್ನ ಹೆಂಡತಿಗೆ ಹೇಳಲೇ ಇಲ್ಲ ಎನ್ನುತ್ತಾನೆ ಆತ.
ದೂರದಲ್ಲಿರುವ ಸಂಗಾತಿಯ ಮನವೊಲಿಸಲು ಹೀಗೆ ಮಾಡಿ
ನಾನು ಸಲಿಂಗಕಾಮಿ ಎಂದು ಹೆಂಡತಿಗೆ ತಿಳಿದಿಲ್ಲ : ಕೆಲ ಪುರುಷರು ಈ ವಿಷ್ಯವನ್ನೂ ಮುಚ್ಚಿಡುತ್ತಾರೆ. ವ್ಯಕ್ತಿಯೊಬ್ಬ ಸಲಿಂಗಕಾಮಿ ಎಂಬುದನ್ನು ಪತ್ನಿಗೆ ಹೇಳಿಲ್ಲವಂತೆ. ನಾನು ಮದುವೆಯಾಗಿದ್ದೇನೆ, ಆದರೆ ನನ್ನ ಹೆಂಡತಿಗೆ ನಾನು ಸಲಿಂಗಕಾಮಿ ಎಂದು ತಿಳಿದಿಲ್ಲ. ವಾಸ್ತವವಾಗಿ, ನಾನು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇನೆ ಎಎಂಬುದನ್ನು ನಾನು ಹೇಳಿಲ್ಲ ಎನ್ನುತ್ತಾನೆ ಆತ. ನನ್ನ ಸಂಗಾತಿಗೆ ಇದರ ಬಗ್ಗೆ ಏನೂ ತಿಳಿದಿಲ್ಲ. ಆದಾಗ್ಯೂ, ನನ್ನ ವಿಚಿತ್ರ ವರ್ತನೆಯಿಂದ ನನ್ನ ಹೆಂಡತಿ ಕೋಪಗೊಳ್ತಾಳೆ. ಅವಳೊಂದಿಗೆ ಹೇಗೆ ಇರ್ಬೇಕೆಂಬುದು ನನಗೆ ತಿಳಿದಿಲ್ಲ ಎನ್ನುವ ಆತ, ಪತ್ನಿಯಲ್ಲದೆ ಕೆಲ ಸಲಿಂಕಗಾಮಿಗಳ ಜೊತೆ ಸಂಬಂಧ ಹೊಂದಿದ್ದಾನಂತೆ.
ಸಂಗಾತಿ ಜೊತೆ ಮುಂಜಾನೆ ಈ ಕೆಲಸ ಮಾಡಿದ್ರೆ, ದಿನವಿಡೀ ರೊಮ್ಯಾಂಟಿಕ್ ಮೂಡ್ ನಿಮ್ಮದಾಗುತ್ತೆ
ಪತ್ನಿಗೆ ಮೋಸ : ವಿವಾಹೇತರ ಸಂಬಂಧಗಳು ಈಗ ಹೆಚ್ಚಾಗ್ತಿದೆ. ಪತ್ನಿಗೆ ಮೋಸ ಮಾಡಿ ಬೇರೆಯವರ ಜೊತೆ ಸಂಬಂಧ ಬೆಳೆಸುವ ಅನೇಕ ಪುರುಷರನ್ನು ನೋಡ್ಬಹುದು. ಈತ ಕೂಡ ವಿವಾಹೇತರ ಸಂಬಂಧ ಹೊಂದಿದ್ದಾನೆ. ನಾನು ನನ್ನ ಹೆಂಡತಿಗೆ ಮೋಸ ಮಾಡುತ್ತಿದ್ದೇನೆ. ನಾನು ಕಚೇರಿಯಲ್ಲಿ ನನ್ನೊಂದಿಗೆ ಕೆಲಸ ಮಾಡುವ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದೇನೆ. ವಯಸ್ಸಿನಲ್ಲಿ ಚಿಕ್ಕವಳಾಗಿರುವ ಆಕೆ ಜೊತೆ ಒಳ್ಳೆ ಹೊಂದಾಣಿಕೆಯಿದೆ. ನನ್ನ ಪತ್ನಿ ಬೋರಿಂಗ್ ಸ್ವಭಾವದವಳು. ನಮ್ಮಿಬ್ಬರ ಮದುವೆ ಮುರಿದು ಬೀಳಲಿ ಎಂದು ನಾನು ಬಯಸುತ್ತಿದ್ದೇನೆ. ಹಾಗಾಗಿಯೇ ಈಕೆ ಜೊತೆ ಈಗ್ಲೂ ಸಂಬಂಧ ಮುಂದುವರೆಸಿದ್ದೇನೆ ಎನ್ನುತ್ತಾನೆ ಆತ. ಈ ಬಗ್ಗೆ ಪತ್ನಿಗೆ ಸುಳ್ಳು ಹೇಳ್ತಿದ್ದೇನೆ ಎಂಬುದನ್ನೂ ಒಪ್ಪಿಕೊಂಡಿದ್ದಾನೆ.
ಮದುವೆ ನನಗಿಷ್ಟವಿಲ್ಲ : ಬೇರೆಯವರ ಒತ್ತಾಯಕ್ಕೆ ಮದುವೆಯಾಗುವ ವ್ಯಕ್ತಿಗಳು ಇದನ್ನು ಕೂಡ ಎಲ್ಲರ ಮುಂದೆ ಹೇಳುವುದಿಲ್ಲ. ಈ ವ್ಯಕ್ತಿ ಕೂಡ ಅಜ್ಜನ ಒತ್ತಾಯಕ್ಕೆ ಮದುವೆಯಾಗಿದ್ದಾನಂತೆ. ಇಟಲಿಯಲ್ಲಿರುವ ಪ್ರೇಯಸಿ ಬಿಟ್ಟು ಬಂದಿರುವ ಆತನಿಗೆ ಮದುವೆ ಸ್ವಲ್ಪವೂ ಇಷ್ಟವಿಲ್ಲವಂತೆ. ಪ್ರತಿ ದಿನ ಪತ್ನಿ ಕಾಟ ಸಹಿಸಲು ಆಗ್ತಿಲ್ಲ ಎನ್ನುತ್ತಾನೆ ಆತ.