Asianet Suvarna News Asianet Suvarna News
breaking news image

ಇಲ್ಲಿ ಮದುವೆಗೆ ಮೊದಲು ಅಳಿಯನ ಜೊತೆ ಅತ್ತೆ ಸೆಕ್ಸ್‌ ಮಾಡಲೇಬೇಕು! ಇದೆಂಥಾ ವಿಚಿತ್ರ ರೂಢಿ!

ಬಯಂಕೋಲೆ ಬುಡಕಟ್ಟು ಜನರಲ್ಲಿ ಇರುವ ಒಂದು ವಿಚಿತ್ರ ರೂಢಿ ಬಗ್ಗೆ ಕೇಳಿದರೆ ನೀವು ದಂಗಾಗುತ್ತೀರಿ. ಇಲ್ಲಿ ವಧುವಿನ ಆಂಟಿ (ಚಿಕ್ಕಮ್ಮ ಅಥವಾ ಸೋದರತ್ತೆ) ಅಳಿಯನ ಜೊತೆ ಮಲಗಿ ಸೆಕ್ಸ್‌ ಮಾಡಿ ಆತನ ಸಾಮರ್ಥ್ಯವನ್ನು ಪರೀಕ್ಷಿಸಬೇಕು!

birde usnts must have intimacy with groom before getting married in this tribe community bni
Author
First Published May 4, 2024, 1:09 PM IST

ಜಗತ್ತಿನ ಹಲವು ಕಡೆಗಳಲ್ಲಿ ಮದುವೆಗೆ ಸಂಬಂಧಿಸಿ ವಿಚಿತ್ರ ರೂಢಿಗಳಿರುತ್ತವೆ. ಬುಡಕಟ್ಟು ಸಮುದಾಯಗಳಲ್ಲಂತೂ ಇನ್ನೂ ವಿಚಿತ್ರವಾದ ಆಚರಣೆಗಳಿವೆ. ಉಗಾಂಡ ದೇಶದ ಬಯಂಕೋಲೆ ಬುಡಕಟ್ಟು ಜನರಲ್ಲಿ ಇರುವ ಒಂದು ವಿಚಿತ್ರ ರೂಢಿ ಬಗ್ಗೆ ಕೇಳಿದರೆ ನೀವು ದಂಗಾಗುತ್ತೀರಿ. ಇಲ್ಲಿ ವಧುವಿನ ಆಂಟಿ (ಚಿಕ್ಕಮ್ಮ ಅಥವಾ ಸೋದರತ್ತೆ) ಅಳಿಯನ ಜೊತೆ ಮಲಗಿ ಸೆಕ್ಸ್‌ ಮಾಡಿ ಆತನ ಸಾಮರ್ಥ್ಯವನ್ನು ಪರೀಕ್ಷಿಸಬೇಕು! ಇದು ನಿಜ. ಈ ಬಯಂಕೋಲೆ ಬುಡಕಟ್ಟು ಜನಾಂಗದಲ್ಲಿ ಮದುವೆಗೆ, ಅದಕ್ಕಿಂತ ಮಿಗಿಲಾಗಿ ವರನ ಲೈಂಗಿಕ ಸಾಮರ್ಥ್ಯದ- ವರ್ಜಿನಿಟಿಯ ಬಗೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. 

ಈ ಉಗಾಂಡಾದ ಸಂಪ್ರದಾಯದ ಪ್ರಕಾರ, ಹುಡುಗಿ ಎಂಟು ಅಥವಾ ಒಂಬತ್ತು ವರ್ಷಕ್ಕೆ ಬಂದಾಗ, ಕುಟುಂಬ ಜೀವನಕ್ಕಾಗಿ ಅವಳನ್ನು ಮದುವೆ ಮಾಡಿಕೊಡುವುದು ಅವಳ ಚಿಕ್ಕಮ್ಮ ಅಥವಾ ಅತ್ತೆಯ ಕರ್ತವ್ಯ. ಈ ಸಂಸ್ಕೃತಿಯಲ್ಲಿ ಕನ್ಯತ್ವವನ್ನು ಹೆಚ್ಚು ಗೌರವಿಸಲಾಗುತ್ತದೆ. ಆದ್ದರಿಂದ ಹುಡುಗಿಯರು ವಿವಾಹಪೂರ್ವ ಸೆಕ್ಸ್‌ನಿಂದ ದೂರವಿರಬೇಕು. ಹುಡುಗಿ ಮದುವೆಗೂ ಮುನ್ನ ಗೆಳೆಯನನ್ನು ಅಥವಾ ಭಾವೀ ವರನನ್ನು ಕೂಡುವಂತಿಲ್ಲ. ಆದರೆ, ವರನ ಸಾಮರ್ಥ್ಯ ಪರೀಕ್ಷೆ ಹೇಗೆ? ಅದಕ್ಕೇ ಅಂಟಿ ಬೇಕು. 

ಬಯಂಕೋಲೆ ಬುಡಕಟ್ಟಿನವರು ತೆಳ್ಳನೆಯ ಮೈಕಟ್ಟು ಅನಾಕರ್ಷಕವೆಂದು ಪರಿಗಣಿಸುತ್ತಾರೆ. ಅವರಲ್ಲಿ ಸ್ವಲ್ಪ ಮಟ್ಟಿಗೆ ಕೊಬ್ಬು ಇದ್ದರೆ ಆಕರ್ಷಕ ಅಥವಾ ಸರಳವಾಗಿ ಮಾದಕ. ಆದ್ದರಿಂದ ಹುಡುಗಿಯರು ಎಂಟು ಮತ್ತು ಒಂಬತ್ತು ವರ್ಷಕ್ಕೆ ಬಂದಾಗ, ಅವರನ್ನು ದಪ್ಪವಾಗಿಸುವ ಪ್ರಕ್ರಿಯೆ ನಡೆಯುತ್ತದೆ. ಹುಡುಗಿಯರ ತೂಕ ಹೆಚ್ಚಾಗುವುದನ್ನು ವೇಗಗೊಳಿಸಲು ಕೆಲವು ಕ್ರಿಯೆಗಳನ್ನು ಮಾಡಲಾಗುತ್ತದೆ. ಅದರ ಮೂಲಕ ಅವರು ಗಂಡಸನ್ನು ಆಕರ್ಷಿಸಬಹುದು. ಗಂಡಸರಿಗೂ ಇಲ್ಲಿ ದಪ್ಪದ ಆಕರ್ಷಣೆ. 

ಬಯಂಕೋಲೆ ಮದುವೆಯು "ಕುಹಿಂಗಿರಾ" ಎಂದು ಕರೆಯಲ್ಪಡುವ ಇನ್ನೊಂದು ಆಚರಣೆಯನ್ನು ಹೊಂದಿದೆ. ಅಲ್ಲಿ ವಧುವಿನ ಸಂಬಂಧಿಕರು ಮತ್ತು ಸ್ನೇಹಿತರು ಅವಳ ಗಂಡನ ಮನೆಗೆ ಹಸುಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಒಯ್ದು ಉಡುಗೊರೆಯಾಗಿ ನೀಡುತ್ತಾರೆ. ಮದುವೆಯ ದಿನದಂದು ವಧುವಿನ ಮನೆಯಲ್ಲಿ ಒಂದು ಔತಣವನ್ನು ಏರ್ಪಡಿಸಲಾಗುತ್ತದೆ. ಅಲ್ಲಿ ತಂದೆಯು ಗೂಳಿಯನ್ನು ವಧಿಸಿ ವರನ ಮನೆಯಲ್ಲಿ ನಡೆಯುವ ಮದುವೆಯಲ್ಲಿ ಅಡುಗೆ ಮಾಡಿ ಸೇವಿಸುವ ಒಂದು ಹಬ್ಬವಿದೆ.

ಭಾರತದ ಈ ರಾಜ್ಯದಲ್ಲಿ ಮಹಿಳೆಯರದ್ದೇ ಕಾರುಬಾರು: ಮದ್ವೆ ನಂತರ ಗಂಡನೇ ಹೋಗ್ಬೇಕು ಹೆಣ್ಣಿನ ಮನೆಗೆ..!

ಆದರೆ ಮೊದಲು, ವಧುವಿನ ಚಿಕ್ಕಮ್ಮನಿಂದ ಮಾಡಬೇಕಾದ ಪರೀಕ್ಷೆಗಳನ್ನು ಒಳಗೊಂಡಿರುವ ಒಂದು ಸಮಾರಂಭವಿರುತ್ತದೆ. ಇದು ವಧುವಿನ ಆಂಟಿ ವರನೊಂದಿಗೆ ಸೆಕ್ಸ್‌ ಹೊಂದುವ ಮೂಲಕ ವರನ ಲೈಂಗಿಕ ಸಾಮರ್ಥ್ಯವನ್ನು ಪರೀಕ್ಷಿಸುವುದು. ವರ ಗಂಡಸು ಹೌದು ಎಂದು ಖಚಿತಪಡಿಸಿಕೊಳ್ಳುವ ವಿಧಾನ ಇದು. ಈ ಆಚರಣೆಯಂದು ಒಂದಿಡೀ ರಾತ್ರಿ ವರ ಆಂಟಿಯೊಂದಿಗೆ ಕಳೆಯುತ್ತಾನೆ. ಅಲ್ಲಿ ಆಕೆ ಅವನ ಲೈಂಗಿಕ ಸಾಮರ್ಥ್ಯವನ್ನು ಪರೀಕ್ಷಿಸುತ್ತಾಳೆ; ಶೈಲಿ ಅಥವಾ ಭಂಗಿಗಳು ಗೊತ್ತಿಲ್ಲದಿದ್ದರೆ ಕಲಿಸಿಕೊಡುತ್ತಾಳೆ! ಆ ಮೂಲಕ ವರನನ್ನು ಲೈಂಗಿಕವಾಗಿ ಸಮರ್ಥನನ್ನಾಗಿ ಸೊಸೆಗೆ ಗಿಫ್ಟ್‌ ಆಗಿ ನೀಡುತ್ತಾಳೆ. 

ಇದೇ ಕೆಲಸವನ್ನ ಆಕೆ ವಧುವಿಗೂ ಮಾಡುತ್ತಾಳೆ. ಅಂದರೆ ಸೆಕ್ಸ್‌ ಬಗ್ಗೆ ಸೊಸೆಗೆ ತಿಳಿಯದೆ ಇದ್ದ ವಿಷಯಗಳನ್ನ ಆಕೆ ಹೇಳಿಕೊಡುತ್ತಾಳೆ. ವರನ ಲೈಂಗಿಕತೆಯ ವಿವರಗಳನ್ನು ಮೊದಲೇ ಆಕೆಗೆ ತಿಳಿಸಿ ವಧುವನ್ನು ಅದಕ್ಕೆ ಪೂರಕವಾಗಿ ಸಜ್ಜು ಮಾಡುತ್ತಾಳೆ. ಈ ಆಂಟಿಯ ದೃಢೀಕರಣದ ನಂತರವೇ ಮದುವೆ ನಡೆಯುತ್ತದೆ. ಆಕೆ ಊಹೂಂ ಎಂದರೆ, ಆಕೆಯನ್ನು ಸಂತೃಪ್ತಿಪಡಿಸಲು ವರ ವಿಫಲನಾದರೆ, ಮದುವೆ ಕ್ಯಾನ್ಸಲ್!‌ 

ಈ ಆಂಟಿ ಇನ್ನೂ ಒಂದು ಕೆಲಸ ಮಾಡುತ್ತಾಳೆ. ಅದೇನೆಂದರೆ, ಮದುವೆಯ ನಂತರದ ಪ್ರಥಮ ರಾತ್ರಿಯಂದು ವಧು- ವರರ ಶೋಭನದ ಕೋಣೆಗೆ ಸಮೀಪದಲ್ಲಿದ್ದು, ಅವರಿಗೆ ಮಾರ್ಗದರ್ಶನ ಮಾಡುವುದು. ಆಕೆ ಅವರ ಕ್ರಿಯೆಗಳನ್ನು ಕದ್ದು ನೋಡಬಹುದು ಅಥವಾ ಕೇಳಿಸಿಕೊಳ್ಳಬಹುದು. ಎಂಥಾ ವಿಚಿತ್ರ ರೂಢಿ ಅಲ್ಲವೇ!

ಆಡೋ ವಯಸ್ಸಿನ ಮಕ್ಕಳಿಗೆ ಸೆಕ್ಸ್ ತರಬೇತಿ ನೀಡೋದು ಈ ಜನಾಂಗದ ಸಂಪ್ರದಾಯ

Latest Videos
Follow Us:
Download App:
  • android
  • ios