ಜಂತರ್ ಮಂತರ್‌ ನಲ್ಲಿ ನಡೆದ ನೀಟ್‌ ಪ್ರತಿಭಟನೆ ವೇಳೆ ಬರೀ ಪ್ರತಿಭಟನೆ ಅಲ್ಲ ಅನೇಕ ವಿಷ್ಯಗಳು ಕಾಣಸಿಕ್ಕಿವೆ. ಅಲ್ಲಿಯೇ ಪ್ರೀತಿಗೆ ಬಿದ್ದು ಮದುವೆಯಾದ ಜೋಡಿಯೊಂದು ಈಗ ಎಲ್ಲರ ಗಮನ ಸೆಳೆದಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಒಬ್ಬರ ಬದುಕು ಅನಿರೀಕ್ಷಿತ ತಿರುವು ಕಂಡಿದೆ. ವಿದ್ಯಾರ್ಥಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವತಿ ಮೇಲೆ ಪ್ರೀತಿ ಚಿಗುರಿದ್ದು, ಇಬ್ಬರೂ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಅವರಿಬ್ಬರ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪ್ರತಿಭಟನೆಗೆ ಬಂದ ಹುಡುಗಿ ಮೇಲೆ ಪ್ರೀತಿ

ವರದಿಗಳ ಪ್ರಕಾರ, ಬಿಹಾರ ಮೂಲದ ವಿದ್ಯಾರ್ಥಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಯ ಜಂತರ್ ಮಂತರ್ಗೆ ಬಂದಿದ್ದರು. ಪ್ರತಿಭಟನೆ ಸುಮಾರು 15 ದಿನಗಳ ಕಾಲ ನಡೆದಿದೆ. ವಿದ್ಯಾರ್ಥಿ ಹೇಳಿಕೆ ಪ್ರಕಾರ, ಪೊಲೀಸರ ಏಟಿಗೆ ವಿದ್ಯಾರ್ಥಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದ. ಈ ಸಂದರ್ಭದಲ್ಲಿ ಹುಡುಗಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಿದ್ದಲ್ಲದೆ, ವಿದ್ಯಾರ್ಥಿ ಆರೈಕೆ ಮಾಡಿದ್ದಾಳೆ. ಆಹಾರ ತಂದುಕೊಡುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಬೆಂಬಲ ನೀಡಿದ್ದಾಳೆ. ಇದು ಇಬ್ಬರನ್ನು ಇನ್ನಷ್ಟು ಹತ್ತಿರ ಮಾಡಿದೆ. ಆತ್ಮೀಯತೆ ಪ್ರೀತಿಗೆ ತಿರುಗಿದೆ.

ಕೊನೆಯಲ್ಲಿ ವಿದ್ಯಾರ್ಥಿನಿ ತನ್ನ ಮನಸ್ಸಿನ ಭಾವನೆ ಹಂಚಿಕೊಂಡಿದ್ದಾಳೆ. ವಿದ್ಯಾರ್ಥಿಯನ್ನು ಬಿಟ್ಟಿರೋಕೆ ಸಾಧ್ಯವಿಲ್ಲ ಅಂತ ಹುಡುಗಿ ಹೇಳಿದ್ದಾಳೆ. ಮೊದಲೇ ಪ್ರೀತಿಗೆ ಬಿದ್ದಿದ್ದ ವಿದ್ಯಾರ್ಥಿ ತಮ್ಮ ಭಾವನೆಯನ್ನೂ ಹೇಳಿಕೊಂಡಿದ್ದಾನೆ. ನಂತರ ಇಬ್ಬರೂ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಬಳಿಕ ಬಿಹಾರಕ್ಕೆ ಮರಳಿದ್ದಾರೆ .

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವರು ಇದನ್ನು ಬಾಲಿವುಡ್ ಸಿನಿಮಾಗಳಿಗೆ ಹೋಲಿಸಿ ಹಾಸ್ಯಮಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಪ್ರೊಟೆಸ್ಟ್ ನೇ ಬನಾ ದಿ ಜೋಡಿ, ಪ್ರೊಟೆಸ್ಟ್: ಏಕ್ ಪ್ರೇಮ್ ಕಥಾ, ಧರ್ಮೇಂದ್ರನೇ ಜೋಡಿ ಮಾಡಿಸಿದ್ರು ಎಂಬಂತಹ ಪ್ರತಿಕ್ರಿಯೆಗಳು ವೈರಲ್ ಆಗಿವೆ. ಇನ್ನೂ ಕೆಲವರು ಪ್ರತಿಭಟನೆಯನ್ನೂ ಗೆದ್ದರು, ಪ್ರೀತಿಯೂ ಸಿಕ್ಕಿತು ಅಂತ ಕಾಮೆಂಟ್ ಮಾಡಿದ್ದಾರೆ.

https://kannada.asianetnews.com/news-entertainment/cricketer-arshdeep-singh-introduces-samreen-kaur-as-my-person-and-here-is-everything-to-know-about-their-love-story/articleshow-shihx9k

ಬರೀ ಪ್ರತಿಭಟನೆಯಲ್ಲಿ ನೋಡಿ, ಮಾತನಾಡಿ, ಪ್ರೀತಿ ಮಾಡಿ, ಮದುವೆ ಆಗೋಕೆ ಸಾಧ್ಯವಾ? ಇವರಿಬ್ಬರಿಗೂ ಮೊದಲೇ ಪರಿಚಯ ಇತ್ತಾ? ಪ್ರತಿಭಟನೆ ಮದುವೆ ಆಗಲು ನೆಪವಾ ಎಂಬ ಪ್ರಶ್ನೆಗಳು ಈಗ ಬಳಕೆದಾರರಿಗೆ ಶುರುವಾಗಿದೆ.

View post on Instagram