ಮಾರುಕಟ್ಟೆ ಅಂದ್ರೆ, ಅಲ್ಲಿ ನಮಗೆ ಬೇಕಾದ ತರಕಾರಿ, ಹಣ್ಣು, ದಿನಸಿ ಹಾಗೂ ಇತರ ವಸ್ತುಗಖಯ ಸಿಗುತ್ತೆ. ಆದ್ರೆ, ಇಲ್ಲೊಂದು ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಮದುವೆಯಾಗಲು ವರ ಮಾರಾಟಕ್ಕಿದ್ದಾನೆ. ಅರೆ, ಇದೇನು ವಿಚಿತ್ರ ಅನ್ಬೇಡಿ. ಹೆಚ್ಚಿನ ಮಾಹಿತಿ ಇಲ್ಲಿದೆ.
ಮಾರುಕಟ್ಟೆಯಲ್ಲಿ ದಿನಸಿ, ಹಣ್ಣು, ತರಕಾರಿಯನ್ನು ಮಾರಾಟ ಮಾಡುವುದು ಸಾಮಾನ್ಯ. ಆದರೆ ಬಿಹಾರದ ವಿಶೇಷ ಮಾರುಕಟ್ಟೆಯಲ್ಲಿ ಹುಡುಗಿಯರು ತಮ್ಮ ವರನನ್ನು ಖರೀದಿಸಬಹುದು. ಏನು ವರನನ್ನು ಖರೀದಿಸಲು ಮಾರುಕಟ್ಟೆ ಇದ್ಯಾ ಎಂದು ಎಲ್ಲರೂ ಅಚ್ಚರಿ ಪಡಬಹುದು. ಆದರೆ ಇದು ನಿಜ. ಬಿಹಾರದಲ್ಲಿ ಈ ರೀತಿಯ ಮಾರುಕಟ್ಟೆ ಇದೆ. ಬಿಹಾರದ ಮಧುಬನಿ ಜಿಲ್ಲೆಯ ಒಂದು ಮಾರುಕಟ್ಟೆಯಿದೆ. ಅದು ಭವಿಷ್ಯದ ವಧುಗಳಿಗೆ ವರಗಳನ್ನು ಮಾರಾಟ ಮಾಡಲು ಮೀಸಲಾಗಿದೆ. ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಪಿಪಲ್ ಮರಗಳ ಅಡಿಯಲ್ಲಿ 9 ದಿನಗಳ ಅವಧಿಗೆ ಇದನ್ನು ಆಯೋಜಿಸಲಾಗಿದೆ. ಇಲ್ಲಿ ಈ ಸಂಪ್ರದಾಯ 700 ವರ್ಷಗಳಿಂದಲೂ ನಡೆದುಕೊಂಡು ಬರ್ತಿದೆ.
ವರನ ಹಿನ್ನೆಲೆ, ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ಬೆಲೆ ನಿಗದಿ
ಸ್ಥಳೀಯವಾಗಿ ಸೌರತ್ ಸಭಾ ಎಂದು ಕರೆಯಲ್ಪಡುವ ಮೈಥಿಲ್ ಬ್ರಾಹ್ಮಣ ಸಮುದಾಯದ ಜನರು ಜಿಲ್ಲೆಯಾದ್ಯಂತ ತಮ್ಮ ಹೆಣ್ಣುಮಕ್ಕಳೊಂದಿಗೆ ತಗೆ ಒಪ್ಪುವಂತ ವರಗಳನ್ನು ಆಯ್ಕೆ (Selection) ಮಾಡಲು ಮಾರುಕಟ್ಟೆಗೆ ಬರುತ್ತಾರೆ. ಸಾಂಪ್ರದಾಯಿಕ ಕಡುಗೆಂಪು ಬಣ್ಣದ ಧೋತಿ ಮತ್ತು ಕುರ್ತಾ ಅಥವಾ ಜೀನ್ಸ್ ಮತ್ತು ಶರ್ಟ್‌ಗಳನ್ನು ಧರಿಸಿ ಮಾರುಕಟ್ಟೆಯಲ್ಲಿ ಸಾವಿರಾರು ವರಗಳು (Groom) ತಮ್ಮ ಪೋಷಕರೊಂದಿಗೆ ಹಾಜರಿರುತ್ತಾರೆ.
ಅಯ್ಯೋ ಎಲ್ರೂ ಮದ್ವೆಯಾಗು ಮದ್ವೆಯಾಗು ಅಂತಾರಾ, ಒತ್ತಡ ನಿರ್ವಹಿಸೋದು ಹೇಗೆ?
ಪ್ರತಿಯೊಂದಕ್ಕೂ ಅವರ ಹಿನ್ನೆಲೆ ಮತ್ತು ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಬೆಲೆ (Price) ನಿಗದಿಪಡಿಸಲಾಗುತ್ತದೆ. ಅವರು ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ ಇತ್ಯಾದಿ ಪುರಾವೆಗಳನ್ನು ಸಹ ಕೇಳುತ್ತಾರೆ. ವಧು, ವರನನ್ನು ಆಯ್ಕೆ ಮಾಡಿದ ನಂತರ, ಮುಂದಿನ ಪ್ರಕ್ರಿಯೆಗಳಿಗಾಗಿ ಕುಟುಂಬಗಳ ನಡುವೆ ಸಂಭಾಷಣೆಯನ್ನು ಪ್ರಾರಂಭಿಸಲಾಗುತ್ತದೆ. ವರನ ಆಯ್ಕೆಯಾದ ತಕ್ಷಣ ಹುಡುಗಿಯ ಮನೆಯವರು ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತಾರೆ.
ಕರ್ನಾಟ್ ರಾಜವಂಶದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದ ಪದ್ಧತಿ
ಸ್ಥಳೀಯ ನಂಬಿಕೆಗಳ ಪ್ರಕಾರ, ಈ ಆಚರಣೆಯು ಕರ್ನಾಟ್ ರಾಜವಂಶದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ವಿಭಿನ್ನ ಗೋತ್ರಗಳ ಜನರ ನಡುವಿನ ವಿವಾಹಗಳನ್ನು ಸುಲಭಗೊಳಿಸಲು ರಾಜಾ ಹರಿ ಸಿಂಗ್ ಇದನ್ನು ಪ್ರಾರಂಭಿಸಿದರು. ಮದುವೆಗಳನ್ನು ವರದಕ್ಷಿಣೆ ರಹಿತವಾಗಿ ಮಾಡುವುದು ಇನ್ನೊಂದು ಉದ್ದೇಶವಾಗಿತ್ತು. ಆದರೆ, ಇಂದು ಈ ಮದುವೆಗಳಲ್ಲಿ ವರದಕ್ಷಿಣೆ ಕೊಡುವ ಮತ್ತು ತೆಗೆದುಕೊಳ್ಳುವ ಪರಿಪಾಠ ಬಹಳ ಪ್ರಚಲಿತದಲ್ಲಿದೆ ಎಂದು ವರದಿಗಳು ಹೇಳುತ್ತವೆ. . ಆದರೆ, ಈ ಪ್ರದೇಶದಲ್ಲಿ ಮಾತ್ರ ಕಳೆದ 700 ವರ್ಷಗಳಿಂದಲೂ ಈ ಪದ್ದತಿಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ರಷ್ಯನ್ ವರ, ಉಕ್ರೇನ್ ವಧುವಿಗೆ ಧರ್ಮಶಾಲಾದಲ್ಲಿ ವಿವಾಹ
ಪ್ರೀತಿ ಎಲ್ಲಾ ಗಡಿಗಳನ್ನು ಮೀರಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆಯು ಹೆಚ್ಚಾಗಿದ್ದರೂ, ಈ ಜೋಡಿ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಆರಿಸಿಕೊಂಡರು. ಭಾಷೆ, ಧರ್ಮ ಅಥವಾ ಸ್ಥಳವನ್ನು ಲೆಕ್ಕಿಸದೆ ತಮ್ಮ ಪ್ರೀತಿಯನ್ನು ಸಾಕಾರ ಮಾಡಿಕೊಂಡರು. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ಹೊರತಾಗಿಯೂ, ಇಸ್ರೇಲ್‌ನಲ್ಲಿರುವ ರಷ್ಯಾದ ನಿವಾಸಿ ಸರ್ಗೆಯ್ ನೊವಿಕೋವ್ ಅವರು ಧರ್ಮಶಾಲಾ ಬಳಿಯ ಹಿಮಾಚಲ ಪ್ರದೇಶದ ದಿವ್ಯ ಆಶ್ರಮ ಖರೋಟಾದಲ್ಲಿ ಉಕ್ರೇನಿಯನ್ ಗೆಳತಿ ಎಲೋನಾ ಬ್ರಮೋಕಾ ಅವರನ್ನು ವಿವಾಹವಾದರು.
ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಕೇರಳ: ವಧುವಿಗೂ ಮಸೀದಿ ಪ್ರವೇಶಕ್ಕೆ ಅವಕಾಶ
ಸೆರ್ಗೆಯ್ ನೊವಿಕೋವ್ ಮತ್ತು ಎಲೋನಾ ಬ್ರಮೋಕಾ ಎರಡು ವರ್ಷಗಳಿಂದ ಸಂಬಂಧ (Relationship)ದಲ್ಲಿದ್ದರು. ಸ್ತುತ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಹೊರತಾಗಿಯೂ, ದಂಪತಿಗಳು ಧರ್ಮಶಾಲಾದಲ್ಲಿ ಮದುವೆ (Wedding)ಯಾಗಲು ನಿರ್ಧರಿಸಿದರು. ವರದಿಯ ಪ್ರಕಾರ, ದಂಪತಿಗಳು ಸನಾತನ ಧರ್ಮ ಪದ್ಧತಿಗಳ ಪ್ರಕಾರ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಖರೋಟಾ ಗ್ರಾಮದ ದಿವ್ಯ ಆಶ್ರಮದ ರಾಧಾ ಕೃಷ್ಣ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಹಿಂದೂ ಸಂಪ್ರದಾಯದಂತೆ ಪವಿತ್ರ ಮಂತ್ರಗಳ ಪಠಣ, ಮೆರವಣಿಗೆ ಬಳಿಕ ವಿವಾಹವಾಗಿದ್ದಾರೆ. ನವ ಜೋಡಿಯ (Couple) ಕುಟುಂಬಸ್ಥರು, ಆಪ್ತರು ಹಾಗೂ ಸ್ಥಳೀಯರು ವಿಶೇಷ ಮದುವೆಗೆ ಸಾಕ್ಷಿಯಾದರು.
