ಅಯ್ಯೋ ಎಲ್ರೂ ಮದ್ವೆಯಾಗು ಮದ್ವೆಯಾಗು ಅಂತಾರಾ, ಒತ್ತಡ ನಿರ್ವಹಿಸೋದು ಹೇಗೆ?
ನಿಮಗೆ ಮದ್ವೆ ಆಗಿರದೇ ಇದ್ರೆ, ನಿಮ್ಮ ಕುಟುಂಬ ಸದಸ್ಯರು ಯಾವಾಗ್ಲೂ ಮದುವೆ ಆಗೋ ಬಗ್ಗೆ ಹೇಳಿ ಹೇಳಿ ನಿಮ್ಮ ತಲೆ ತಿಂದಿರಬಹುದು ಅಲ್ವಾ? ನೀವು ಸಹ ಮದುವೆಯಾಗುವ ಒತ್ತಡಕ್ಕೊಳಗಾಗುತ್ತಿದ್ದೀರಾ, ಹಾಗಾದ್ರೆ ಈ ಲೇಖನ ನಿಮಗಾಗಿ. ಮದ್ವೆ ಯಾವಾಗ, ಯಾಕೆ ಆಗ್ತಿಲ್ಲಾ ಅನ್ನೋ ಬಗ್ಗೆ ಕೇಳಿ ಕೇಳಿ, ಅಥವಾ ಅಂತಹ ಪ್ರಶ್ನೆಗಳಿಗೆ ಉತ್ತರಿಸಿ ಉತ್ತರಿಸಿ ನಿಮಗೆ ಸಾಕಾಗಿದ್ರೆ, ಆಗ ಈ ಲೇಖನವು ನಿಮಗೆ ಸಹಾಯ ಮಾಡುತ್ತೆ.
ಮತ್ತೆ ಮತ್ತೆ ಅದೇ ಪ್ರಶ್ನೆ
ಫ್ರೆಂಡ್ಸ್ ರಿಯೂನಿಯನ್ ಆಗಿರಲಿ, ಸಂಬಂಧಿಕರ ಭೇಟಿಯೇ ಆಗಿರಲಿ ಅಲ್ಲೂ ನಿಮ್ಮ ಮದುವೆಗೆ (Marriage) ಸಂಬಂಧಿಸಿದ ಪ್ರಶ್ನೆಯ ಬಗ್ಗೆ ನಿಮ್ಮನ್ನು ಆಗಾಗ್ಗೆ ಕೇಳಿ ಕೇಳಿ ಇರಿಟೇಟ್ ಮಾಡ್ತಾರೆ. ನಿಮ್ಮ ದೂರದ ಸಂಬಂಧಿಕರು ಸಹ ತಮಗೆ ಪರಿಚಯವಿದ್ದ ಯಾವುದೋ ಒಬ್ಬ ಅಪರಿಚಿತ ವ್ಯಕ್ತಿಯನ್ನು ಭೇಟಿಯಾಗಲು ನಿಮಗೆ ಸಲಹೆ ನೀಡುತ್ತಾರೆ, ಇದರಿಂದ ನೀವು ಬೇಗನೆ ಮದುವೆಯಾಗಲು ಮನೆಯಲ್ಲಿ ಒತ್ತಡ ಹೆಚ್ಚಾಗುತ್ತೆ. ನಿಮಗೂ ಕೂಡ ಇದರಿಂದ ತಲೆಬಿಸಿಯಾಗೋದು ಖಂಡಿತಾ.
ಈ ರೀತಿಯ ಇರಿಟೇಶನ್ ನಿಮ್ಮ ಜೊತೆಯೂ ನಡೆಯುತ್ತಿದ್ದರೆ, ಈ ಪ್ರಶ್ನೆಯನ್ನು ಎದುರಿಸುತ್ತಿರುವ ಹುಡುಗಿ ಖಂಡಿತವಾಗಿ ನೀವೊಬ್ಬರೇ ಆಗಿರೋಲ್ಲ. ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸಮಾಜದಲ್ಲಿ, ಗರಿಷ್ಠ 27-28 ವರ್ಷಗಳವರೆಗೆ, ಮದುವೆಯಾಗಲು ಹುಡುಗಿಯರ ಮೇಲೆ ತುಂಬಾನೆ ಒತ್ತಡ (Stress) ಹೇರುತ್ತಾರೆ. ಹುಡುಗಿಯು ಮದುವೆಯಾಗುವವರೆಗೂ ಈ ಒತ್ತಡ ನಿಲ್ಲೋದಿಲ್ಲ. ನಿಮ್ಮ ಹೆಚ್ಚಿನ ಸ್ನೇಹಿತರು ಮದುವೆಯಾದಾಗ ಮತ್ತು ಅವರು 'ಹ್ಯಾಪಿ ಮ್ಯಾರೀಡ್' ವರ್ಗಕ್ಕೆ ಸೇರಿದಾಗ ಪ್ರೆಶರ್ ಇನ್ನಷ್ಟು ಹೆಚ್ಚುತ್ತೆ.
ಕೆಲವು ಹುಡುಗಿಯರು ಅಂತಹ ಪ್ರಶ್ನೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ. ಯಾಕಂದ್ರೆ ಅವರು ಸ್ಟ್ರಾಂಗ್ (Strong)ವ್ಯಕ್ತಿತ್ವದವರಾಗಿರುತ್ತಾರೆ ಮತ್ತು ನಗುವ ಮೂಲಕ ಅಥವಾ ಇತರ ಕೆಲಸ ಮಾಡುವ ಮೂಲಕ ಈ ಪ್ರಶ್ನೆಯನ್ನು ತಪ್ಪಿಸುತ್ತಾರೆ. ಆದರೆ ಮದುವೆ ಒತ್ತಡವನ್ನು ಸಹಿಸಿಕೊಳ್ಳೋದು ಸುಲಭವಲ್ಲದ ಕೆಲವು ಹುಡುಗಿಯರು ಇದ್ದಾರೆ. ಹಾಗಾಗಿ , ನಿಮ್ಮ ಮೇಲಿನ ಈ ಒತ್ತಡವನ್ನು ಕಡಿಮೆ ಮಾಡಲು ನೀವು ಈ ಪ್ರಶ್ನೆಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸೋದು ಬಹಳ ಮುಖ್ಯ. ಹಾಗಾದ್ರೆ ಅಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸೋದು ನೋಡೋಣ.
ನಿಮಗೆ ನೀವೇ ಈ ಪ್ರಶ್ನೆ(Question) ಕೇಳಿಕೊಳ್ಳಿ
ಅತ್ಯಂತ ಮುಖ್ಯ ವಿಷಯವೆಂದ್ರೆ ನಿಮ್ಮ ಜೀವನದಿಂದ ನಿಮಗೆ ಏನು ಬೇಕು ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳೋದು. ಮದುವೆಯ ಈ ಒತ್ತಡದಿಂದ ಹೊರ ಬರಲು ಇದು ಸುಲಭ ಮಾರ್ಗವಾಗಿದೆ, ಇದಕ್ಕಾಗಿ ನೀವು ಸಹ ಪ್ರಯತ್ನಿಸಬೇಕಾಗುತ್ತೆ.ನಿಮ್ಮನ್ನು ಹೊರತುಪಡಿಸಿ ಇತರ ಜನರ ಜವಾಬ್ದಾರಿ ತೆಗೆದುಕೊಳ್ಳಲು ನೀವು ಸಿದ್ಧರಿದ್ದೀರಾ? ಎಂದು ನಿಮ್ಮನ್ನು ನೀವು ಪ್ರಶ್ನಿಸಿ. ನಿಮ್ಮ ಉತ್ತರವು ಹೌದು ಎಂದಾದಲ್ಲಿ, ಏನು ಮಾಡಬೇಕೆಂದು ನಿಮಗೆ ತಿಳಿದಿದೆ.
ಅಲ್ಲದೆ ಮದುವೆಯನ್ನು ಮುಂದೂಡುವ ಮೂಲಕ ನಿಮಗೆ ನೀವೇ ಸಮಯ ನೀಡಲು ಬಯಸುವಿರಾ? ಎಂದು ಪ್ರಶ್ನಿಸಿ. ಅಂದರೆ ಬಹುಶಃ ಈ ಸಮಯದಲ್ಲಿ ನೀವು ಹೆಚ್ಚಿನ ಸ್ಟಡಿ ಮುಂದುವರಿಸಲು ಬಯಸುತ್ತೀರಾ, ಉತ್ತಮ ಉದ್ಯೋಗವನ್ನು(Job) ಬಯಸುತ್ತೀರಾ ಅಥವಾ ಆರ್ಥಿಕವಾಗಿ ಬಲವಾಗಿರಲು ಬಯಸುತ್ತೀರಾ? ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು.
ಇದಕ್ಕಾಗಿ, ನೀವು ನಿಮಗಾಗಿ ಒಂದು ಯೋಜನೆ ರೂಪಿಸೋದು ಮತ್ತು ನಂತರ ನಿಮ್ಮ ದೃಷ್ಟಿಕೋನವನ್ನು(Perception) ನಿಮ್ಮ ಮುಂದೆ ಇರುವ ವ್ಯಕ್ತಿಯ ಮುಂದೆ ಇಡೋದು ಅತ್ಯಗತ್ಯ. ಈ ರೀತಿಯಾಗಿ, ಮದುವೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನೀವು ಸರಿಯಾದ ರೀತಿಯಲ್ಲಿ ಉತ್ತರಿಸಲು ಸಾಧ್ಯವಾಗುತ್ತೆ. ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗುತ್ತೆ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಪ್ರಶ್ನೆಗಳಿಗೆ ಉತ್ತರಿಸೋದು ಸಹ ನಿಮಗೆ ಸುಲಭವಾಗುತ್ತೆ.
ಸ್ಪಷ್ಟವಾಗಿ ವಿವರಿಸಿ
ನೀವು ಮದುವೆಯಾಗುವ ಅಗತ್ಯವಿಲ್ಲ ಎಂದು ನೀವು ಭಾವಿಸಿದ ನಂತರ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಅದರ ಬಗ್ಗೆ ಬಹಿರಂಗವಾಗಿ, ಅಷ್ಟೇ ಸ್ಪಷ್ಟವಾಗಿ ಅದನ್ನು ತಿಳಿಸಿ. ಅವರ ಪ್ರಶ್ನೆಗಳಿಗೆ ನೀವು ಪೂರ್ಣ ವಿಶ್ವಾಸದಿಂದ (Confident) ಉತ್ತರಿಸುತ್ತೀರಿ ಅನ್ನೋದನ್ನು ನೆನಪಿಡಿ, ಇದರಿಂದ ಅವರಿಗೆ ವಾದಿಸಲು ಹೆಚ್ಚಿನ ಪ್ರೆಶರ್ ಇರೋದಿಲ್ಲ. ವಿವಾಹಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನುಅವರು ಸಾವಿರ ಸಲ ಕೇಳಬಹುದು. ಆಗ, ನೀವು ಸರಿಯಾದ ಪಾಯಿಂಟ್ಸ್ ಮೂಲಕ ಉತ್ತರ ಹೇಳಿದ್ರೆ, ಅವರು ಮತ್ತೆ ನಿಮ್ಮ ಬಳಿ ಮದ್ವೆ ಆಗದೇ ಇರೋದಿಕ್ಕೆ ಕಾರಣ ಕೇಳೋದಿಲ್ಲ.
ಮಾನಸಿಕ ಸ್ಥಿತಿ (Mental health)
ಅನಗತ್ಯ ಒತ್ತಡವನ್ನು ಹಾಕುವ ಮೂಲಕ, ನೀವು ಮದುವೆಗೆ ಓಕೆ ಎಂದು ಹೇಳಿದರೂ, ನೀವು ಸ್ವತಃ ಸಂತೋಷವಾಗಿರಲು ಸಾಧ್ಯವಾಗೋದಿಲ್ಲ ಎಂದು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ವಿವರಿಸಿ. ಅದಕ್ಕಾಗಿಯೇ ನೀವು ಸ್ವತಃ ಮದುವೆಗೆ ಸಿದ್ಧರಾಗುವವರೆಗೆ, ಮದುವೆಗೆ ಓಕೆ ಎಂದು ಹೇಳೋದು ಸರಿಯಲ್ಲ ಎಂಬುದು ಬಹಳ ಮುಖ್ಯ. ಯಾವುದೇ ಆರೋಗ್ಯಕರ ಸಂಬಂಧಕ್ಕಾಗಿ, ನಿಮ್ಮ ಭಾವನೆಗಳು ಮದುವೆಯಾಗಲಿರುವ ವ್ಯಕ್ತಿಯ ಭಾವನೆಗಳಿಗೆ ಹೊಂದಿಕೆಯಾಗೋದು ಮುಖ್ಯ ಅನ್ನೋದನ್ನು ಅವರಿಗೆ ತಿಳಿಸಿ.
ಆತ್ಮವಿಶ್ವಾಸದಿಂದಿರಿ (Self confidence)
ನಿಮ್ಮ ಮದುವೆ ಬಗ್ಗೆ ನೀವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರ ಬಗ್ಗೆ ಆತ್ಮವಿಶ್ವಾಸದಿಂದಿರಿ ಮತ್ತು ನಿಮ್ಮ ಉತ್ತರಕ್ಕೆ ಅಂಟಿಕೊಳ್ಳಿ. ಒತ್ತಡದಲ್ಲಿ ಒಂದು ಕಾರ್ಯವನ್ನು ಪೂರ್ಣಗೊಳಿಸೋದು ಸರಿಯಲ್ಲ ಎಂಬುದನ್ನು ನೆನಪಿಡಿ. ಇದಕ್ಕೆ ಬಲವಾದ ಇಚ್ಛಾಶಕ್ತಿಯ ಅಗತ್ಯವಿದೆ, ಆಗ ಮಾತ್ರ ಯಾವುದೇ ಸಂಬಂಧವು ಮುಂದುವರಿಯುವುದು.
ಓಡಿ ಹೋಗೋದು ಒಳ್ಳೆಯದಲ್ಲ
ಅನೇಕ ಬಾರಿ ಮದುವೆಗೆ ಸಂಬಂಧಿಸಿದ ಪ್ರಶ್ನೆಯಿಂದ ಓಡಿಹೋಗುತ್ತಾರೆ. ಅಲ್ಲದೇ, ಹುಡುಗಿಯರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ತಮ್ಮನ್ನು ದೂರವಿಡುತ್ತಾರೆ. ಇದು ಸರಿಯಲ್ಲ. ಬದಲಾಗಿ, ನೀವು ಕುಟುಂಬ ಮತ್ತು ಸ್ನೇಹಿತರ ಎಲ್ಲಾ ಸಮಾರಂಭಗಳಿಗೆ ಹಾಜರಾಗಬೇಕು ಮತ್ತು ಎಂಜಾಯ್ ಮಾಡಬೇಕು. ಈ ರೀತಿಯಾಗಿ, ನೀವು ನಿಮ್ಮ ಜೀವನದಲ್ಲಿ(Life) ಸಂತೋಷವಾಗಿದ್ದೀರಿ ಮತ್ತು ಈ ಸಮಯದಲ್ಲಿ ಮದುವೆಯಾಗಲು ಬಯಸೋದಿಲ್ಲ ಎಂದು ಅವರಿಗೆ ತಿಳಿಸಬೇಕು.
ಆಲೋಚಿಸಿ(Think) ಮುಂದುವರಿಯಿರಿ
ನೆನಪಿಡಿ, ಮದುವೆಯು ಜೀವನದ ಏಕೈಕ ಗುರಿಯಲ್ಲ. ಅಥವಾ ತ್ವರಿತವಾಗಿ ಪೂರ್ಣಗೊಳಿಸಬೇಕಾದ ಯಾವುದೇ ಅನಿವಾರ್ಯವಿಲ್ಲ. ನೀವು ಶಾಂತಿಯಿಂದ ಕುಳಿತು ಮದುವೆಯ ಬಗ್ಗೆ ಯೋಚಿಸೋದು ಉತ್ತಮ. ಮದುವೆಯನ್ನು ಯಾವಾಗಲೂ ನೀವು ಯಾರೊಂದಿಗೆ ಕಂಫರ್ಟಬಲ್ ಆಗಿರ್ತೀರೋ ಅವರೊಂದಿಗೆ ಆಗಬೇಕು. ಒಂದೆರಡು ಬಾರಿ ಬೇಟಿಯಾದವರನ್ನು ಮದುವೆಯಾಗಲು ನಿರ್ಧರಿಸೋದು ಕೆಲವೊಮ್ಮೆ ತಪ್ಪಾಗಬಹುದು.
ನೀವು ಮದುವೆಯಾಗಲು ಬಯಸುತ್ತೀರೋ ಇಲ್ಲವೋ ಎಂಬುದು ನಿಮ್ಮ ನಿರ್ಧಾರವಾಗಬೇಕು. ಈ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಬೇರೆ ಯಾರಿಗೂ ಇಲ್ಲ. ಮದುವೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಜನರು ಪದೇ ಪದೇ ಕೇಳಿದರೆ, ಅದರಿಂದ ಓಡಿ ಹೋಗುವ ಬದಲು ದೃಢವಾದ ಯೋಜನೆಯೊಂದಿಗೆ ದೈರ್ಯದಿಂದ ಎದುರಿಸೋದು ಉತ್ತಮ.