ತಿಂಗಳಿಗೆ 90 ಸಾವಿರ ದುಡಿಯುತ್ತಿದ್ದ ಐಟಿ ಯುವತಿಗೆ ಮದುವೆ ಪ್ರಪೋಸಲ್ ಬಂದಿದೆ. ಯವಕನ ಸ್ಯಾಲರಿ ತಿಂಗಳಿಗೆ 2 ಲಕ್ಷ ರೂಪಾಯಿ. ಆದರೆ ನೇರವಾಗಿ ಆತನ ಮುಂದೆ ಈ ಪ್ರಪೋಸಲ್ ತಿರಸ್ಕರಿಸಿದ್ದಾಳೆ. ಎಷ್ಟಕ್ಕು ಕಾರಣವೇನು?

ಬೆಂಗಳೂರು (ಆ.14) ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವ ಯುವತಿ ತನಗೆ ಬಂದ ಮದುವೆ ಪ್ರಪೋಸಲ್ ರಿಜೆಕ್ಟ್ ಮಾಡಿದ ಘಟನೆಯನ್ನು ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾಳೆ. ಇದೀಗ ಭಾರಿ ಚರ್ಚೆಯಾಗುತ್ತಿದೆ. ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ಪಡೆಯುತ್ತಿರುವ ಹುಡಗನ ಪ್ರಪೋಸಲನ್ನು ನೇರವಾಗಿ ತಿರಸ್ಕರಿಸಿದ್ದಾಳೆ. ತನಗಿಂತ ಡಬಲ್ ಆದಾಯ ಪಡೆಯುತ್ತಿದ್ದರೂ ಈ ಮದುವೆ ಬೇಡ ಎಂದಿದ್ದಾಳೆ. ಪ್ರಪೋಸಲ್ ರಿಜೆಕ್ಟ್ ಕುರಿತು ಯುವತಿ ವಿವರವಾಗಿ ಹೇಳಿಕೊಂಡಿದ್ದಾಳೆ.

ಯುವತಿಗೆ ಬಂತು ಮದುವೆ ಪ್ರಪೋಸಲ್

ಮ್ಯಾಟ್ರಿಮೋನಿ ಮೂಲಕ ಯುವತಿ ಫ್ರೊಫೈಲ್‌‌ಗೆ ಮದುವೆ ಪ್ರಪೋಸಲ್ ಬಂದಿತ್ತು. ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಗೆ ಹುಡುಗನ ಜೊತೆ ಮಾತನಾಡುವಂತೆ ತಾಯಿ ಸೂಚಿಸಿದ್ದರು. ಹುಡುಗನ ಕುಟುಂಬ, ಕಂಪನಿ ಕೆಲಸ ಸೇರಿದಂತೆ ಹಲವು ಮಾಹಿತಿಗಳನ್ನು ಯುವತಿ ಕುಟುಂಬ ಕಲೆ ಹಾಕಿ ಒಕೆ ಮಾಡಿತ್ತು. ಮಗಳು ಹುಡುಗನ ಜೊತೆ ಮಾತನಾಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಕುಟುಂಬ ನಿರ್ಧರಿಸಿತ್ತು. ಇದರಂತೆ ಹುಡುಗನ ಜೊತೆ ಮಾತನಾಡಲು ಯುವತಿ ಕೂಡ ಒಕೆ ಎಂದಿದ್ದಳು.

ಇಬ್ಬರು ಭೇಟಿಯಲ್ಲಿ ಬಿಗ್ ಟ್ವಿಸ್ಟ್

ಯುವತಿ ಹಾಗೂ ಹುಡುಗ ಇಬ್ಬರು ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿದ್ದಾರೆ. ಹುಡಗನಿಗೆ ತಿಂಗಳಿಗೆ 2 ಲಕ್ಷ ರೂಪಾಯಿ ವೇತನವಿತ್ತು. ಯುವತಿಗೆ ತಿಂಗಳಿಗೆ 90 ಸಾವಿರ ರೂಪಾಯಿ ವೇತನ. ಮಾತುಕತೆಯಲ್ಲಿ ಹುಡುಗ ತನ್ನ ಕುಟುಂಬ, ಪೋಷಕರು ಸೇರಿದಂತೆ ಇತರ ಮಾಹಿತಿಗಳನ್ನು ನೀಡಿದ್ದಾನೆ. ಪೋಷಕರನ್ನು ನೋಡಿಕೊಳ್ಳುತ್ತಿದ್ದೇನೆ. ಮದುವೆಯಾದ ಬಳಿಕ ನೀನು ಕೆಲಸ ಬಿಟ್ಟು ನನ್ನ ಕುಟುಂಬದ ಜವಾಬ್ದಾರಿ ನೀಡಬೇಕು ಎಂದು ಸೂಚಿಸಿದ್ದಾನೆ. ಈ ಮಾತಿನಿಂದ ಯುವತಿ ನಿರ್ಧಾರವೇ ಬದಲಾಗಿದೆ.

ಈ ಮಾತು ಹೇಳುತ್ತಿದ್ದಂತೆ ಯುವತಿ ಮದುವೆಯಾಗುವ ನಿರ್ಧಾರ ಬದಲಾಯಿಸಿದ್ದಾರೆ. 2 ಲಕ್ಷ ಅಲ್ಲಾ 2 ಕೋಟಿ ರೂಪಾಯಿ ಸಂಬಳ ಇದ್ದರೂ ಈ ಮದುವೆಗೆ ನಾನು ಒಪ್ಪಲ್ಲ ಎಂದು ನೇರವಾಗಿ ಹೇಳಿದ್ದಾಳೆ. ಯುವಕನ ಸಾಂಪ್ರದಾಯಿಕ ಹಾಗೂ ನಿಯಂತ್ರಾಣಾತ್ಮ ಮನಸ್ಥಿತಿಯನ್ನು ಯುವತಿ ವಿರೋಧಿಸಿದ್ದಾಳೆ. ನನ್ನ ಸ್ವಾವಲಂಬನೆ ಹಾಗೂ ವೃತ್ತಿ ಜೀವನದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲು ನಾನು ಬಿಡುವುದಿಲ್ಲ. ಅದನ್ನು ಯಾರ ಬಳಿ ಅಡವಿಡುವುದಿಲ್ಲ. ವೈಯುಕ್ತಿಕ ಗೌರವ, ದುಡಿದು ಸಂಪಾದಿಸುವ ನನ್ನ ಆರ್ಥಿಕ ಸ್ವಾತಂತ್ರ್ಯ ನನಗೆ ಮುಖ್ಯ ಎಂದು ಯುವಕನ ಪ್ರಪೋಸಲ್ ನಯವಾಗಿ ತಿರಸ್ಕರಿಸಿದ್ದಾಳೆ.

ಮನೆ, ಕುಟುಂಬ, ಪೋಷಕರು ಸೇರಿದಂತೆ ಸಂಪೂರ್ಣ ಕುಟುಂಬ ಜವಾಬ್ದಾರಿ ನೋಡಿಕೊಳ್ಳುವ ಹುಡುಗಿ ಬೇಕಿದ್ದರೆ ಆ ರೀತಿ ಆಸಕ್ತಿ ಇರುವ ಯುವತಿಯರನ್ನು ಮದುವೆಯಾಗಿ. ಆದರೆ ಸ್ವಾವಲಂಬಿಯಾಗಿರುವ ಹೆಣ್ಣನ್ನು ಮದುವೆಯಾಗಿ ಅವಲಂಬಿಯಾಗಿ ಮಾಡುವ ಪ್ರಯತ್ನ ಯಾಕೆ ಎಂದು ಪ್ರಶ್ನಿಸಿ ಮಾತುಕತೆ ಮುಗಿಸಿ ಹೊರನಡೆದಿದ್ದಾಳೆ. ಯುವತಿ ಮಾತುಗಳು ಇದೀಗ ಭಾರಿ ಚರ್ಚೆಯಾಗುತ್ತಿದೆ. ಹಲವರು ಯುವತಿ ಮಾತಿಗೆ ಮೆಚ್ಚುಗೆ ವ್ಯಕ್ತಪಡಸಿದ್ದಾರೆ.