ಬೆಂಗಳೂರು haunted places, ಮನೆ ನೆಲಸಮ ಆಗಿದೆ, ಯಾರೂ ಇಲ್ಲ… ಆದ್ರೂ ರಾತ್ರಿ ಪಿಯಾನೋ ನಾದ ಕೇಳಿಸುತ್ತಿದೆ ಅಂತ ಹೇಳೋ ಈ Bangalore ಭಯಾನಕ ಬಂಗಲೆ ರಹಸ್ಯ — ಇದು ನಿಜವಾ, ಅಥವಾ ಭಯ ಹುಟ್ಟಿಸಿದ ಕಥೆಯಾ ನೋಡಿ.
ಬೆಂಗಳೂರು ಅಂದ್ರೆ ಟೆಕ್ ಸಿಟಿ, ಐಟಿ ಕಂಪನಿಗಳು, ಕಾಫಿ — ಇವೇ ನೆನಪಿಗೆ ಬರುತ್ತವೆ. ಆದರೆ ಈ ನಗರದೊಳಗೆ ಇಷ್ಟು ಭಯಾನಕ ಕಥೆಯೂ ಅಡಗಿದೆ ಅನ್ನೋದನ್ನ ಬಹುತೇಕ ಜನರಿಗೆ ಗೊತ್ತೇ ಇಲ್ಲ
ನಗರದ ಒಂದು ಶಾಂತ ಪ್ರದೇಶದಲ್ಲಿ ಇದ್ದ ಒಂದು ಹಳೆಯ ಬಂಗಲೆ. ಹೊರಗಿಂದ ನೋಡಿದ್ರೆ ಸಾಮಾನ್ಯ ಮನೆ ಅನ್ನಿಸ್ತಿತ್ತು. ಆದರೆ ಒಳಗೆ ನಡೆದ ಘಟನೆಗಳು ಅದನ್ನು “ಭೂತ ಬಂಗಲೆ” ಆಗಿ ಮಾಡಿಬಿಟ್ಟವು. ಈ ಮನೆಯಲ್ಲಿದ್ದವರು ಇಬ್ಬರು ಅಕ್ಕ-ತಂಗಿಯರು. ತಮ್ಮದೇ ಜಗತ್ತಿನಲ್ಲಿ ಶಾಂತವಾಗಿ ಬದುಕುತ್ತಿದ್ದವರು. ಅವರಲ್ಲಿ ಒಬ್ಬಳು ಪಿಯಾನೋ ಶಿಕ್ಷಕಿ. ಪ್ರತಿದಿನ ಸಂಜೆ ಆ ಮನೆಯೊಳಗೆ ಮೃದುವಾದ ಪಿಯಾನೋ ನಾದ ಕೇಳಿಸುತ್ತಿತ್ತು. ಆ ಸುತ್ತಮುತ್ತಲಿನ ಜನರಿಗೆ ಅದು ಪರಿಚಿತವಾದ ಧ್ವನಿಯಾಗಿತ್ತು.
ಆದ್ರೆ ಒಂದು ದಿನ… ಆ ಧ್ವನಿ ಅಚಾನಕ್ ನಿಂತುಹೋಯ್ತು.
2002ರಲ್ಲಿ, ಆ ಮನೆಯೊಳಗೆ ನಡೆದ ಒಂದು ಕ್ರೂರ ಘಟನೆ ಎಲ್ಲವನ್ನೂ ಬದಲಿಸಿತು. ಪಿಯಾನೋ ಶಿಕ್ಷಕಿಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಆ ರಾತ್ರಿ ಏನಾಯ್ತು, ಯಾರು ಮಾಡಿದರು — ಇವುಗಳ ಉತ್ತರಗಳು ಇಂದಿಗೂ ಸ್ಪಷ್ಟವಾಗಿಲ್ಲ.
ಈ ಘಟನೆಗೆ ಸಾಕ್ಷಿಯಾಗಿದ್ದ ಅಕ್ಕ, ಭಯದಿಂದ ಆ ಮನೆ ಬಿಟ್ಟು ಹೊರಟಳು. ಅದಾದಮೇಲೆ ಆ ಮನೆ ಸಂಪೂರ್ಣವಾಗಿ ಖಾಲಿಯಾಗಿಬಿಟ್ಟಿತು…
ಆದ್ರೆ ಕಥೆ ಅಲ್ಲಿ ಮುಗಿಯಲಿಲ್ಲ
ಹತ್ತಿರದವರು ಹೇಳೋದು ಏನೆಂದರೆ, ರಾತ್ರಿ ಆಗುತ್ತಿದ್ದಂತೆ ಆ ಖಾಲಿ ಮನೆಯಿಂದ ವಿಚಿತ್ರ ಶಬ್ದಗಳು ಕೇಳಿಸುತಿದ್ದವು. ಯಾರೂ ಇಲ್ಲದ ಮನೆ ಒಳಗಿಂದ ಪಿಯಾನೋ ನಾದ ಬರುತ್ತಿತ್ತು ಅಂತ ಹಲವರು ಹೇಳ್ತಾರೆ. ಕೆಲವರು ಆ ಮನೆಯ ಬಳಿ ಹೋದಾಗ “ಯಾರೋ ನೋಡ್ತಿದ್ದಾರೆ” ಅನ್ನೋ ಭಾವನೆ ಬರುತ್ತೆ ಅಂತ ಹೇಳಿದ್ದಾರೆ. ಇನ್ನೂ ಕೆಲವರು ಕಿಟಕಿಯಲ್ಲಿ ಯಾರೋ ನೆರಳು ಕಾಣಿಸಿದೆ ಅಂತ ಹೇಳಿಕೊಂಡಿದ್ದಾರೆ. ರಾತ್ರಿ ಸಮಯದಲ್ಲಿ ಆ ಮನೆಯ ಸುತ್ತ ಹೋಗೋಕೆ ಜನ ಹೆದರುತ್ತಿದ್ದರು. “ಒಮ್ಮೆ ಹೋದ್ರೆ ಏನೋ ಅಸಹಜ ಅನ್ನಿಸುತ್ತದೆ” ಅಂತ ಕೆಲವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಈ ಘಟನೆ ನಡೆದದ್ದು ಸೇಂಟ್ ಮಾರ್ಕ್ಸ್ ರಸ್ತೆಯ ಸ್ವಲ್ಪ ದೂರದಲ್ಲಿ ಇದ್ದ ಟೆರ್ರಾ ವೆರಾ ಮ್ಯಾನ್ಷನ್ ಅಲ್ಲಿ.
ಇನ್ನೂ ವಿಚಿತ್ರ ಏನೆಂದರೆ — ಕೆಲ ವರ್ಷಗಳ ನಂತರ ಆ ಬಂಗಲೆಯನ್ನು ನೆಲಸಮ ಮಾಡಲಾಗಿದೆ. ಮನೆ ಇಲ್ಲ, ಗೋಡೆಗಳಿಲ್ಲ… ಆದರೂ ಜನರು ಹೇಳೋದು ಏನೆಂದರೆ ಆ ಜಾಗದ ವಾತಾವರಣ ಇನ್ನೂ ಬದಲಾಗಿಲ್ಲ .
ಕೆಲವರು ಇಂದಿಗೂ ಅಲ್ಲಿ ಹೋದಾಗ ವಿಚಿತ್ರ ಅನುಭವವಾಗುತ್ತದೆ ಅಂತ ಹೇಳುತ್ತಾರೆ. ಕೆಲವರಿಗೆ ಅಸ್ಪಷ್ಟ ಶಬ್ದಗಳು ಕೇಳಿದಂತೆ ಅನಿಸುತ್ತದೆ. ಯಾರೋ ಹತ್ತಿರದಲ್ಲೇ ಇದ್ದಾರೆ ಅನ್ನೋ ಭಾವನೆ ಬರುತ್ತದೆ.
ಇದು ನಿಜವಾ? ಅಥವಾ ಜನರ ಭಯದಿಂದ ಹುಟ್ಟಿದ ಕಥೆಯಾ?
ಇದು ಯಾರಿಗೂ ಸ್ಪಷ್ಟವಾಗಿಲ್ಲ…
ಆದ್ರೆ ಒಂದು ಪ್ರಶ್ನೆ ಮಾತ್ರ ಇನ್ನೂ ಉತ್ತರ ಸಿಗದೇ ಉಳಿದಿದೆ, ಯಾರೂ ಇಲ್ಲದ ಜಾಗದಲ್ಲಿ… ಇಂದಿಗೂ ಆ ಪಿಯಾನೋ ನಾದ ಕೇಳಿಸೋದು ಹೇಗೆ?
