Asianet Suvarna News Asianet Suvarna News

4 ವರ್ಷದಿಂದ ಚಿಂಪಾಂಜಿ ಜೊತೆ ಅಫೇರ್, ಮಹಿಳೆ ಮೃಗಾಲಯ ಪ್ರವೇಶಕ್ಕೆ ನಿಷೇಧ!

  • ಇದು ವಿಚಿತ್ರವಾದರೂ ಸತ್ಯ, ಚಿಂಪಾಂಜಿ ಜೊತೆ ಅಫೇರ್
  • ಚಿಂಪಾಂಜಿ ಜೊತೆ ಹೊಸ ಬದುಕು ಆರಂಭಿಸಲು ಇಚ್ಚಿಸಿದ ಮಹಿಳೆ
  • ಮಹಿಳೆ ಮೃಗಾಲಯ ಪ್ರವೇಶಿಸಿದಂತೆ ನಿರ್ಬಂಧ ಹೇರಿದ ಅಧಿಕಾರಿ
  • ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ಮಹಿಳೆ
Belgian woman banned to enter Antwerp Zoo afte she claimed having an affair with chimpanzee ckm
Author
Bengaluru, First Published Aug 23, 2021, 4:19 PM IST

ಬೆಲ್ಜಿಯಂ(ಆ.23): ಪ್ರಾಣಿ ಪ್ರೀತಿ ಬಹುತೇಕರಿಗಿದೆ. ಪ್ರಾಣಿಗಳನ್ನು ಅಕ್ಕರೆಯಿಂದ, ಮಮತೆಯಿಂದ ಕಾಣುವುದು ಹೊಸದೇನಲ್ಲ. ಆದರೆ ಇಲ್ಲೊಂದು ವಿಚಿತ್ರ ಘಟನೆ ವರದಿಯಾಗಿದೆ.  ಈಕೆಗೆ ಮೃಗಾಲಯದಲ್ಲಿರುವ ಚಿಂಪಾಂಜಿ ಜೊತೆ ಆಫೇರ್ ಶುರುವಾಗಿದೆ. ತನ್ನ ಹೊಸ ಬದುಕು ಚಿಂಪಾಂಜಿ ಜೊತೆಗೆ ಎಂದು ನಿರ್ಧರಿಸಿದ್ದಳು. ಈಕೆಯ ನಡೆಗೆ ಮೃಗಾಲಯದ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಇಷ್ಟೇ ಅಲ್ಲ ಮೃಗಾಲಯ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.

ಬಾಲಿವುಡ್ ಎವರ್‌ಗ್ರೀನ್ ನಟಿ ರೇಖಾಗೆ ಸಂಜಯ್ ದತ್ ಜೊತೆ ಇತ್ತಾ ಅಫೇರ್!?

ಈ ಘಟನೆ ನಡೆದಿರುವುದು ಬೆಲ್ಜಿಯಂನಲ್ಲಿ. ಆ್ಯಂಟ್ವರ್ಪ್ ಮೃಗಾಲಯದಲ್ಲಿ ಹಲವು ಪ್ರಭೇದದ ಪ್ರಾಣಿ ಪಕ್ಷಿಗಳಿವೆ. ಈ ಮೃಗಾಲಯದಲ್ಲಿ 38 ವರ್ಷ ಚಿಂಪಾಜಿ ಜೊತೆ ಮಹಿಳೆಗೆ ಅಫೇರ್ ಶುರುವಾಗಿದೆ.  ಆ್ಯಂಟ್ವರ್ಪ್ ಮೃಗಾಲಯದಿಂದ ಸುಮಾರು 80 ಕಿ.ಮೀ ದೂರದ ನಿವಾಸಿಯಾಗಿರುವ ಈ ಮಹಿಳೆ ಕಳೆದ ನಾಲ್ಕು ವರ್ಷದಿಂದ ಚಿಂಪಾಂಜಿ ಜೊತೆ ಅಫೇರ್ ಇಟ್ಟುಕೊಂಡಿದ್ದಾಳೆ.

ಮೃಗಾಲಯದ ಅಧಿಕಾರಿಗಳು ಈ ಮಹಿಳೆಯನ್ನು ಗಮನಿಸಿದ್ದಾರೆ. ಪ್ರತಿ ವಾರ ಹಾಜರಾಗುವ ಈ ಮಹಿಳೆ 38 ವರ್ಷದ ಚಿತಾ ಅನ್ನೋ ಹೆಸರಿನ ಚಿಂಪಾಜಿ ಜೊತೆ ಹೆಚ್ಚಿನ ಸಮಯ ಕಳೆಯುತ್ತಾಳೆ. ಪ್ರವಾಸಿಗರು, ವೀಕ್ಷಕರಿಗಾಗಿ ಮುಂಭಾಗದಲ್ಲಿ ಗಾಜು ಹಾಕಲಾಗಿದೆ. ಈ ಗಾಜಿನ ಬಳಿ ಬಂದು ಕುಳಿತು ಒಳಗಿರುವ ಚಿಂಪಾಂಜಿ ಜೊತೆ ಸಂವಹನ ನಡೆಸುತ್ತಾಳೆ. 

ಈಕೆ ಗಾಜಿಗೆ ಮುತ್ತುಕೊಟ್ಟಾಗ ಅತ್ತಾ ಚಿಂಪಾಂಜಿಯೂ ಗಾಜಿಗೆ ಮುತ್ತು ನೀಡುತ್ತಿತ್ತು. ಈ ಮಹಿಳೆ ಕಳೆದ 4 ವರ್ಷದಿಂದ ಚಿಂಪಾಂಜಿ ಜೊತೆ ತನ್ನು ಪ್ರೀತಿ ಗಟ್ಟಿಯಾಗಿಸಿದ್ದಾಳೆ. ಅತ್ತ ಚಿಂಪಾಂಜಿಯೂ ಈಕೆ ಬಂದ ತಕ್ಷಣ ಗಾಜಿನ ಬಳಿ ಬಂದು ಕುಳಿತುಕೊಳ್ಳಲು ಶುರುಮಾಡಿತ್ತು. 

ಬೆಡ್‌ ಮೇಲೆ ಲವರ್ಸ್...ಮಂಚದಡಿಯಲ್ಲಿ ಅವಳ ಗಂಡ..ವಿಚಿತ್ರ ಪ್ರೇಮಕತೆ

ಇತರ ಚಿಂಪಾಂಜಿಗಳ ಜೊತೆ ಸೇರಲು ಚಿತಾ ಇಷ್ಟಪಡುತ್ತಿರಲಿಲ್ಲ. ಇತ್ತ ಈಕೆಯೂ ವಾರದಲ್ಲಿ 3 ದಿನ ಮೃಗಾಲಯದಲ್ಲೇ ಕಳೆಯಲು ಆಂರಂಭಿಸಿದಳು. ಹೀಗಾಗಿ ಮೃಗಾಲಯ ಅಧಿಕಾರಿಗಳು ಈಕೆಯನ್ನು ಕರೆದು ವಿಚಾರಣೆ ನಡೆಸಿದ್ದಾರೆ.  ಚಿತಾ ಚಿಂಪಾಂಜಿ ಜೊತೆ ಕಾಲಕಳೆಯುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಆರಂಭದಲ್ಲಿ ತಾನು ಪ್ರಾಣಿ ಪ್ರಿಯೆ ಎಂದ ಈಕೆ ಬಳಿಕ ತನಗೆ ಚಿಂಪಾಂಜಿ ಜೊತೆ ಅಫೇರ್ ಆಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇಷ್ಟೇ ಅಲ್ಲ ತನ್ನ ಜೀವನವನ್ನು ಚಿಂಪಾಂಜಿ ಜೊತೆ ಕಳೆಯಲು ಇಷ್ಟಪಡುವುದಾಗಿ ಹೇಳಿದ್ದಾಳೆ. ಈಕೆಯ ಮಾತು ಮೃಗಾಲಯ ಸಿಬ್ಬಂಧಿಗಳಿಗೆ ಅಚ್ಚರಿ ತಂದಿದೆ.

ಪ್ರಾಣಿಗಳ ಸಂರಕ್ಷಣಾ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಮಹಿಳೆಗೆ ಮೊದಲು ಎಚ್ಚರಿಕೆ ನೀಡಿದ್ದಾರೆ. ಆದರೆ ಎಚ್ಚರಿಕೆಗೆ ಕ್ಯಾರೆ ಅನ್ನದ ಮಹಿಳೆ ಮತ್ತೆ ಚಿಂಪಾಂಜಿ ಜೊತೆಗಿನ ಪ್ರೀತಿ ಮುಂದುವರಿಸಿದ್ದಾಳೆ. ಪರಿಸ್ಥಿತಿ ಗಂಭೀರತೆ ಅರಿತ ಮೃಗಾಲಯ ಅಧಿಕಾರಿಗಳು ಮಹಿಳೆಗೆ ಮೃಗಾಲಯ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.

ನಾನು ಚಿಂಪಾಂಜಿಯನ್ನು ಪ್ರೀತಿಸುತ್ತಿದ್ದೇನೆ. ಅವನು ಕೂಡ ನನ್ನನ್ನು ಇಷ್ಟಪಟ್ಟಿದ್ದಾನೆ. ಚಿಂಪಾಂಜಿ ಜೊತೆ ನನ್ನ ಪ್ರೀತಿ ಗಾಢವಾಗಿರುವುದು ತಪ್ಪೆ?. ನನ್ನ ಮೇಲೆ ನಿರ್ಬಂಧ ವಿಧಿಸಿರುವುದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ತಾನು ಕೋರ್ಟ್ ಮೆಟ್ಟಿಲು ಹತ್ತುವುದಾಗಿ ಬೆದರಿಸಿದ್ದಾಳೆ.
 

Follow Us:
Download App:
  • android
  • ios