Marriage Tips : ನಿಶ್ಚಿತಾರ್ಥಕ್ಕೆ ಮುನ್ನವೇ ಹುಡುಗಿ ಇಟ್ಟ ಡಿಮ್ಯಾಂಡ್ ಕೇಳಿ ಕಂಗಾಲಾದ ಹುಡುಗ

Know fincee's expectation  before marriage: ಪ್ರೀತಿಯನ್ನು ಎಂದೂ ಹಣದಿಂದ ಅಳೆಯಬಾರದು. ಮದುವೆ ಬಗ್ಗೆ ಕನಸು ಕಾಣುವುದು ಸಾಮಾನ್ಯ. ಹಾಗಂತ ಮದುವೆಯಾಗುವ ವ್ಯಕ್ತಿಯ ಸ್ಥಿತಿ ಹೇಗಿದೆ ಎಂಬುದನ್ನು ಅರಿತು ಬೇಡಿಕೆ ಇಡಬೇಕು. ಮದುವೆಗೂ ಮುನ್ನವೇ ದುಬಾರಿ ವಸ್ತುಗಳನ್ನು ಕೇಳುವ ಹುಡುಗಿಗೆ ವಾಸ್ತವದ ಅರಿವು ಮೂಡಿಸುವುದು ಮುಖ್ಯ.
 

Before Marriage Girl Diamond Ring

ಮದುವೆ (Marriage) ಯಾಗುವುದು ಮುಖ್ಯವಲ್ಲ, ಮದುವೆಯಾದ್ಮೇಲೆ ಇಬ್ಬರು ಒಂದಾಗಿ ಬಾಳುವುದು ಬಹಳ ಮುಖ್ಯ. ಮದುವೆಯಾಗುವ ಮೊದಲು ಜಾತಕ ನೋಡ್ತಾರೆ. ಇಬ್ಬರ ಜೋಡಿ (Couple) ಚೆನ್ನಾಗಿದ್ಯಾ ಎಂಬುದನ್ನು ನೋಡ್ತಾರೆ. ಆದ್ರೆ ಇಬ್ಬರ ಮಧ್ಯೆ ಹೊಂದಾಣಿಕೆಯಾಗ್ತಿದೆಯಾ ಎಂಬುದನ್ನು ಅನೇಕರು ನೋಡುವುದೇ ಇಲ್ಲ. ವಿವಾಹವಾದ ನಂತ್ರ ಇಬ್ಬರ ಮಧ್ಯೆ ಅನೇಕ ಕಾರಣಕ್ಕೆ ಭಿನ್ನಾಭಿಪ್ರಾಯ ಬರುತ್ತದೆ. ಇಬ್ಬರು ಬೇರೆಯಾಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಮದುವೆಗೆ ಮುನ್ನ ಹೆಚ್ಚಿನ ತಿಳುವಳಿಕೆ ಇಲ್ಲದೆ ಹೋದ್ರು ಸ್ವಲ್ಪಮಟ್ಟಿಗೆ ಒಬ್ಬರನ್ನೊಬ್ಬರು ಅರಿತಿರಬೇಕು. ಒಬ್ಬರ ಆಸೆ ಮತ್ತು ಕನಸು (Dream) ಗಳು ಇನ್ನೊಬ್ಬರಿಗೆ ತಿಳಿದಿರಬೇಕು. ಮುಖ್ಯವಾಗಿ ಇಬ್ಬರ ಆರ್ಥಿಕ ಸ್ಥಿತಿ ಗೊತ್ತಿರಬೇಕು. ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾನೆ. ಮದುವೆಯಾಗುವ ಹುಡುಗಿ ಮಾಡ್ತಿರುವ ಡಿಮ್ಯಾಂಡ್ ಆತನ ತಲೆನೋವಿ (Headache) ಗೆ ಕಾರಣವಾಗಿದೆ. ಸಂಬಂಧ ಮುಂದುವರೆಸಲೂ ಆಗದೆ, ಸಂಬಂಧ ಬಿಡಲೂ ಆಗದೆ ಆತ ಗೊಂದಲದಲ್ಲಿದ್ದಾನೆ. ಇಂದು ಆತನ ಸಮಸ್ಯೆ ಬಗ್ಗೆ ನಾವು ಹೇಳ್ತೇವೆ.

ಆತನಿಗೆ ಮದುವೆ ಫಿಕ್ಸ್ ಆಗಿದೆಯಂತೆ. ಮದುವೆಯಾಗುವ ಹುಡುಗಿಯನ್ನು ಅತಿಯಾಗಿ ಪ್ರೀತಿಸ್ತಾನಂತೆ. ಆದ್ರೆ ಎಂಗೇಜ್ಮೆಂಟ್ ಆಗುವ ಮೊದಲೇ ಹುಡುಗಿ ದೊಡ್ಡ ಡಿಮ್ಯಾಂಡ್ ಮಾಡಿದ್ದಾಳಂತೆ. ಹುಡುಗಿ ಡಿಮ್ಯಾಂಡ್ ಕೇಳಿದ ಹುಡುಗನಿಗೆ ತಲೆಬಿಸಿ ಶುರುವಾಗಿದೆ. ತಂದೆ – ತಾಯಿಗೂ ಹೇಳಲಾಗದೆ ಆತ ಸಮಸ್ಯೆ ಎದುರಿಸುತ್ತಿದ್ದಾನೆ. ನಿಶ್ಚಿತಾರ್ಥಕ್ಕೆ ಡೈಮಂಡ್ ರಿಂಗ್ ನೀಡುವಂತೆ ಆಕೆ ಕೇಳಿದ್ತಾಳಂತೆ. ಡೈಮಂಡ್ ರಿಂಗ್ ನೀಡೋದು ಕಷ್ಟ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ತಂದೆ –ತಾಯಿಗೂ ಹೇಳೋಕೆ ಆಗ್ತಿಲ್ಲ. ಆಕೆ ಆಸೆಗಳನ್ನು ಪೂರೈಸಲು ನನ್ನ ತಿಂಗಳ ಸಂಬಳವೂ ಸಾಕಾಗುವುದಿಲ್ಲ. ಇದನ್ನು ನನ್ನ ಭಾವಿ ಪತ್ನಿಗೆ ಹೇಳಿಲ್ಲ. ಡೈಮಂಡ್ ರಿಂಗ್ ನೀಡಲು ಸಾಧ್ಯವಿಲ್ಲವೆಂದು ಆಕೆಗೆ ಹೇಳಿದ್ರೆ ಆಕೆ ತುಂಬಾ ಕೋಪಗೊಳ್ಳುತ್ತಾಳೆ. ಇಡೀ ಕುಟುಂಬಕ್ಕೆ ವಿಷಯ ತಿಳಿಯಬಹುದು ಎಂಬ ಭಯ ನನಗಿದೆ. ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾನೆ ವ್ಯಕ್ತಿ.

ತಜ್ಞರ ಸಲಹೆ : ವ್ಯಕ್ತಿಯ ಈ ಸಮಸ್ಯೆ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಯಾವುದೇ ಸಂಬಂಧವನ್ನು ಮುಂದುವರೆಸಲು ದಂಪತಿ ಮಧ್ಯೆ ತಿಳುವಳಿಕೆ ಇರಬೇಕು.  ಇದು ಭಾವನಾತ್ಮಕವಾಗಿ ಹತ್ತಿರವಾಗಲು ಸಹಾಯ ಮಾಡುತ್ತದೆ. ಭಾವಿ ಪತ್ನಿಗೆ ಸಮಸ್ಯೆ ಹೇಳುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಪರಸ್ಪರ ಕುಳಿತು ಮಾತನಾಡಬೇಕು. ನಿಮ್ಮ ಪ್ರೀತಿಯನ್ನು ಅವರಿಗೆ ಅರ್ಥ ಮಾಡಿಸಿ. ಪ್ರೀತಿಗಿಂತ ವಜ್ರದ ಉಂಗುರ ಮುಖ್ಯವೇ ಎಂದು ಅವರಿಗೆ ಕೇಳಿ. ವಜ್ರದ ಉಂಗುರಕ್ಕಿಂತ ತನ್ನ ಪ್ರೀತಿ ಹೆಚ್ಚು ಎಂಬುದನ್ನು ಅವರಿಗೆ ತಿಳಿಸಿ.

ತಂಗಿಯ ಮದುವೆಯಾಗದೆ ಅಣ್ಣ ಮದುವೆಯಾಗಬಾರದಾ ?

ನಿಮ್ಮ ಪ್ರಸ್ತುತ ಸ್ಥಿತಿಯನ್ನು ಹಂಚಿಕೊಳ್ಳಿ : ವೈಯಕ್ತಿಕ ಜೀವನದಲ್ಲಿ ಯಾವ ಆರ್ಥಿಕ ಸಮಸ್ಯೆ ಇದೆ ಎಂಬುದನ್ನು ಅವರಿಗೆ ತಿಳಿಸಿ. ಹಾಗೆ ಆರ್ಥಿಕ ಪರಿಸ್ಥಿತಿ ಅರಿತು ಬೇಡಿಕೆ ಇಡುವಂತೆ ಅವರಿಗೆ ಹೇಳಿ. ನೀವು ಏನು ಹೇಳುತ್ತಿದ್ದೀರಿ ಅದನ್ನು ಅವರು ಅರ್ಥಮಾಡಿಕೊಳ್ಳಬಹುದು. ನಿಮ್ಮ ಬಲವಾದ ಭವಿಷ್ಯಕ್ಕೆ ನಿಮ್ಮ ಪ್ರಸ್ತುತ ಸ್ಥಿತಿಯನ್ನು ಹೇಳುವುದು ಮುಖ್ಯವಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಮೇಲೆ ವಜ್ರದ ಉಂಗುರವನ್ನು ನೀಡ್ತೇನೆಂದು ಅವರಿಗೆ ಭರವಸೆ ನೀಡಿ. 

ಗಂಡ ಹೀಗೆಲ್ಲಾ ಮಾಡೋದ್ರಿಂದ ಹೆಂಡ್ತಿಗೆ ಸಿಕ್ಕಾಪಟ್ಟೆ ಕೋಪ ಬರುತ್ತಂತೆ!

ಸಂಬಂಧದಲ್ಲಿ ಪ್ರೀತಿ-ಬೆಂಬಲ ಮತ್ತು ತಾಳ್ಮೆ ಬಹಳ ಅಮೂಲ್ಯವಾದುದು ಎಂದು ನಿಮ್ಮ ಭಾವಿ ಪತ್ನಿಗೆ ಮನವರಿಕೆ ಮಾಡಲು ಪ್ರಯತ್ನಿಸಿ. ಒಂದು ವೇಳೆ ಎಲ್ಲವನ್ನೂ ಮುಚ್ಚಿಟ್ಟು, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ವಜ್ರದುಂಗುರವನ್ನು ನೀವು ಈಗ ನೀಡಬಹುದು. ಆದ್ರೆ ಮುಂದೆಯೂ ಇದೇ ಸ್ಥಿತಿ ಬರಬಹುದು. ಮದುವೆಯಾದ್ಮೇಲೆ ವಾಸ್ತವ ತಿಳಿದು ನಿಮ್ಮ ಭಾವಿ ಪತ್ನಿ ಕೋಪಗೊಳ್ಳಬಹುದು. ಆರ್ಥಿಕ ಸ್ಥಿತಿ ಸರಿಯಾಗಿಲ್ಲ ಎಂಬ ಕಾರಣಕ್ಕೆ ನಿಮ್ಮನ್ನು ದೂರ ಕೂಡ ಮಾಡಬಹುದು. ಅತೃಪ್ತ ದಾಂಪತ್ಯದಲ್ಲಿ ಪ್ರೀತಿ ಸಿಗುವುದಿಲ್ಲ ಎಂಬುದು ನಿಮಗೆ ನೆನಪಿರಲಿ ಎಂದು ತಜ್ಞರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios