ತಾಯಿಯ ಪ್ರೀತಿಗೆ ಬೌಂಡರಿ ಎಂಬುದು ಇಲ್ಲ, ಅದು ಎಲ್ಲಾ ಎಲ್ಲೆಗಳನ್ನು ಮೀರಿದ ಪ್ರೀತಿ. ಮಕ್ಕಳು ಬಾಲ್ಯ ಕಳೆದು ದೊಡ್ಡವರಾಗಿ ಮದುವೆಯಾಗಿ ಅವರು ಪೋಷಕರಾಗಿ ವೃದ್ಧಾಪ್ಯಕ್ಕೆ ಕಾಲಿಟ್ಟರು ಅಮ್ಮನಿಗೆ ಅವರಿನ್ನೂ ಪುಟ್ಟ ಮಕ್ಕಳೇ.

ತಾಯಿಯ ಪ್ರೀತಿಗೆ ಬೌಂಡರಿ ಎಂಬುದು ಇಲ್ಲ, ಅದು ಎಲ್ಲಾ ಎಲ್ಲೆಗಳನ್ನು ಮೀರಿದ ಪ್ರೀತಿ. ಮಕ್ಕಳು ಬಾಲ್ಯ ಕಳೆದು ದೊಡ್ಡವರಾಗಿ ಮದುವೆಯಾಗಿ ಅವರು ಪೋಷಕರಾಗಿ ವೃದ್ಧಾಪ್ಯಕ್ಕೆ ಕಾಲಿಟ್ಟರು ಅಮ್ಮನಿಗೆ ಅವರಿನ್ನೂ ಪುಟ್ಟ ಮಕ್ಕಳೇ. ಉಸಿರಿರುವವರೆಗೆ ಆಕೆ ಮಕ್ಕಳು ತಿಂದರೂ ಉಂಡರೋ ಎಂಬುದನ್ನು ಕೇಳುವುದಕ್ಕೆ ಮರೆಯುವುದಿಲ್ಲ. ಹಾಗೆಯೇ ಇಲ್ಲೊಬ್ಬರು ವ್ಯಕ್ತಿ ತಮ್ಮ ಹಾಸಿಗೆ ಹಿಡಿದಿರುವ ತಾಯಿ ತಮಗಾಗಿ ಸ್ವೆಟರೊಂದನ್ನು ಹೊಲಿದಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಅವರ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ. ಅರುಣ್ ಭಾಗವತುಲ್ ಎಂಬುವವರು ಈ ಪೋಸ್ಟ್ ಮಾಡಿದ್ದು, ತಮ್ಮ 91 ವರ್ಷದ ಹಾಸಿಗೆ ಹಿಡಿದಿರುವ ತಾಯಿ ಮಗನಾದ ತನಗೆ ಸ್ವೆಟರ್ ಹೊಲಿದಿರುವ ವಿಚಾರವನ್ನು ಹೇಳಿಕೊಂಡಿದ್ದು, ಭಾರಿ ವೈರಲ್ ಆಗಿದೆ.

ತಮ್ಮ ವಯಸ್ಸು ಹಾಗೂ ದೈಹಿಕವಾಗಿ ಆರಾಮವಾಗಿ ಇಲ್ಲದೇ ಹೋದರು, ಆ ತಾಯಿ ಹಾಸಿಗೆಯಲ್ಲೇ ಮಲಗಿ ತಮ್ಮ ಮುದ್ದಿನ ಮಗನಿಗಾಗಿ ಸ್ವೆಟರ್ ಹೊಲೆದಿದ್ದಾರೆ. ಅವರ ಕೈಗಳು ನಿಟ್ಟಿಂಗ್ ಮಾಡಿ ಸುಸ್ತಾದಾಗ ಸುಮ್ಮನಾಗುತ್ತಿದ್ದರು. ಸ್ವಲ್ಪ ಸರಿ ಹೋದಾಗ ಮತ್ತೆ ಹೊಲಿಯುತ್ತಿದ್ದರು. ಅರುಣ್ ಭಾಗವತುಲ್ ಅವರು ತಮ್ಮ ಪೋಸ್ಟ್‌ನಲ್ಲಿ ಈ ಬಗ್ಗೆ ಉದ್ದನೇಯ ಬರಹ ಬರೆದುಕೊಂಡಿದ್ದು, ಜೊತೆಗೆ ಅಮ್ಮ ಹೊಲಿದ ಸ್ವೆಟರ್‌ ಅನ್ನು ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅವರ ಪೋಸ್ಟ್‌ನ ಸಾರಾಂಶ ಇಲ್ಲಿದೆ ನೋಡಿ.

ನನ್ನ 91 ವರ್ಷದ ಅಮ್ಮ ನನಗಾಗಿ ಈ ಸ್ವೆಟರ್‌ನ್ನು ಹೊಲಿದಿದ್ದಾರೆ. ಅವರು ಹಾಸಿಗೆಗೆ ಸೀಮಿತವಾಗಿದ್ದಾರೆ. ಆದರೆ ಅದ್ಯಾವುದು ಆಕೆಯನ್ನು ಸುಮ್ಮನೇ ಕೂರುವಂತೆ ಮಾಡಲಿಲ್ಲ, ಆಕೆ ಮಲಗಿಕೊಂಡೆ ಈ ಸ್ವೆಟರ್‌ ಅನ್ನು ಹೊಲೆದಿದ್ದಾರೆ. ಆಕೆಗೆ ಕೈಗಳು ಸುಸ್ತಾಗಿದೆ ಎನಿಸಿದಾಗ ಆಕೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಳು. ಮತ್ತೆ ಹೊಲಿಯುವುದಕ್ಕೆ ಶುರು ಮಾಡುತ್ತಿದ್ದಳು.

ಹೀಗೆ ಸ್ವೆಟರ್ ಹೊಲಿಯುವುದಕ್ಕೆ ಮೊದಲು ಆಕೆ ನನಗೆ ಮೆಸೇಜ್ ಮಾಡಿದ್ದಳು. ನಾನು ನಿನಗೊಂದು ಬಿಳಿ ಬಣ್ಣದ ಸ್ವೆಟರ್ ಹೊಲಿಯಬೇಕು ಎಂದಳು. ನಾನು ಬೇಡ ಎಂದರೂ ಆಕೆ ಕೇಳುತ್ತಿರಲಿಲ್ಲ. ಹೀಗಾಗಿ ನಾನು ನೋ ಎಂದು ಹೇಳಿಲಿಲ್ಲ, ನಾನು ಹೇಗೆ ನೋ ಎಂದು ಹೇಳಲಿ. ನಂತರ ಅವಳು ಸ್ವೆಟರ್‌ನ ಮೇಲ್ಭಾಗವನ್ನು ಮೊದಲಿಗೆ ಹೊಲಿದಳು. ನಂತರ ಕತ್ತು ಸರಿ ಇದೆಯೇ ಎಂದು ನೋಡುವಂತೆ ಹೇಳಿದಳು. ನಾನು ಸ್ವೆಟರ್‌ನ್ನು ಸ್ವಲ್ಪ ಉದ್ದ ಮಾಡುವಂತೆ ಆಕೆಗೆ ಹೇಳಿದೆ.

ಇದನ್ನೂ ಓದಿ: ಯುವತಿಯ ಡಾರ್ಕ್‌ ಸಿಕ್ರೇಟ್ ಕೇಳಿ ಸ್ವತಃ ಶಾಕ್ ಆದ ಯೂಟ್ಯೂಬರ್: ಥೂ ಇಂಥಾ ಜನನ್ನೂ ಇರ್ತಾರಾ?

ಅದರರ್ಥ ಈಗ ಹೊಲಿದಿರುವುದನ್ನು ಸಂಪೂರ್ಣವಾಗಿ ಬಿಚ್ಚಿ ಮತ್ತೆ ಹೊಲಿಯಬೇಕಿತ್ತು. ಆದರೂ ಆಕೆ ಒಂದೇ ಒಂದು ಪದ ಮರು ಮಾತಾಡದೇ ಆಕೆ ಅದನ್ನು ಬಿಚ್ಚಿ ಮತ್ತೆ ಹೊಲಿದಳು. ಆಕೆ ಮೊದಲಿಗೆ ಮುಂಭಾಗ ಹಾಗೂ ಹಿಂಭಾಗವನ್ನು ಫಿನಿಷ್ ಮಾಡಿದಳು. ನಂತರ ಫಿಟ್ಟಿಂಗ್ ಹಾಗೂ ಉದ್ದ ಸರಿ ಇದ್ಯಾ ನೋಡು ಎಂದು ಕೇಳಿದಳು. ನಾನು ಅದನ್ನು ಹಾಕಿ ನೋಡಿದೆ. ಮತ್ತು ಮುಂಭಾಗ ಮತ್ತು ಹಿಂಭಾಗದ ನಡುವೆ ಆರು ಇಂಚಿನ ಅಂತರವಿರುವುದು ಗೊತ್ತಾಯ್ತು. ಆಕೆ ಈ ಬಾರಿ ನಿಜವಾಗಿಯೂ ಶಾಕ್ ಆದಳು. ನಾನು ನಿನ್ನ ಎದೆ ಸುತ್ತಳತೆ ಕೇಳಿದೆ ನೀನು 42 ಎಂದೇ ನಾನು ಅದೇ ಅಳತೆಗೆ ಮಾಡಿದ್ದೇನೆ ಎಂದರು.

ಇದನ್ನೂ ಓದಿ: ಬಿಲಿಯನೇರ್ ಗೊತ್ತು ಮಿಲಿಯನೇರ್ ಗೊತ್ತು ಇದೇನಿದು ನಿಲಿಯನೇರ್‌: ನೀವು ನಿಲಿಯನೇರಾ ಮಿಲಿಯನೇರಾ ಚೆಕ್ ಮಾಡಿ

ನಾನು ಶಾಂತವಾಗಿ ಉತ್ತರಿಸಿದೆ ನೀನು ಎದೆ ಸುತ್ತಳತೆ ಕೇಳಿದೆ ಆದರೆ ಸೊಂಟದ ಸುತ್ತಳತೆ ಕೇಳಲಿಲ್ಲ ಎಂದು ಹೇಳಿದೆ. ಈಗ ಆಕೆ ಇಡೀ ಸ್ವೆಟರ್‌ ಅನ್ನು ಮತ್ತೆ ಬಿಚ್ಚಿ ಹೊಲಿಯಬೇಕಿತ್ತು. ಆದರೆ ಈ ಬಾರಿ ಆಕೆಗೆ ಮನಸಿರಲಿಲ್ಲ. ಆದರೆ ಆಕೆ ಕೊನೆಗೂ ಆ ಸ್ವೆಟರ್‌ ಅನ್ನು ಫಿನಿಷ್ ಮಾಡಿದಾಗ ನನಗೆ ಅರ್ಥವಾಯ್ತು ಅದು ಸ್ವಲ್ಪವೇ ಸ್ವಲ್ಪ ಚಿಕ್ಕದಾಗಿದೆ ಎಂದು. ಈ ಸಮಯ ನನಗೂ ಆಕೆಗೆ ಅದು ಹೀಗಿದೆ ಎಂದು ಹೇಳುವ ಮನಸ್ಸಾಗಲಿಲ್ಲ. ಸ್ವೆಟರ್ ಸಣ್ಣದಾಗಿರಬಹುದು. ಆದರೆ ಆಕೆಯ ಪ್ರೀತಿ ಯಾವತ್ತು ಕಡಿಮೆ ಆಗಿಲ್ಲ ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದು, 67 ಸಾವಿರಕ್ಕೂ ಹೆಚ್ಚು ಜನ ಪೋಸ್ಟ್ ಲೈಕ್ ಮಾಡಿದ್ದಾರೆ. ಅನೇಕರು ಸ್ವೆಟರ್ ಚೆನ್ನಾಗಿದೆ. ದೇವರು ಆಕೆಯನ್ನು ರಕ್ಷಣೆ ಮಾಡಲಿ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಆ ತಾಯಿ ಮಗನನ್ನು ಬೆಚ್ಚಗಿಡುವುದಕ್ಕಾಗಿ ಆಕೆಗೆ ಸಾಧ್ಯವಾಗದಿದ್ದರು ಸ್ವೆಟರ್ ಹೊಲಿದಿರುವುದು ತಾಯಿ ಪ್ರೀತಿ ಏನು ಎಂದು ತೋರಿಸುತ್ತಿದೆ.

ಇದನ್ನೂ ಓದಿ: ಕೇರ್ ಟೇಕರ್ ನಂಬಿದ ಅಪ್ಪ ಮಗಳಿಗೆ ಆಗಬಾರದು ಆಗೋಯ್ತು: ನಂಬೋದು ಯಾರನ್ನು?