ಬದುಕು ಹೇಗೆ ತಲೆಕೆಳಗಾಗುತ್ತೆ ಅಂತ ಹೇಳಲಾಗುವುದಿಲ್ಲ, ಊಹಿಸದ ರೀತಿಯಲ್ಲಿ ಬದುಕು ಬದಲಾಗಿ ಬಿಡುತ್ತದೆ. ತಾವು ಒಳ್ಳೆಯವರು ಎಂದು ನಂಬಿದವರೇ ಕತ್ತು ಕುಯ್ದು ಬಿಡುತ್ತಾರೆ. ಅಮ್ಮನಂತೆ ಆರೈಕೆ ಮಾಡುತ್ತಿದ್ದವರೆ ವಿಷಕಾರಿ ಹಾವಾಗಿ ಬದಲಾಗುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಆಘಾತಕಾರಿ ಘಟನೆ ನಡೆದಿದೆ.
ಬದುಕು ಹೇಗೆ ತಲೆಕೆಳಗಾಗುತ್ತೆ ಅಂತ ಹೇಳುವುದಕ್ಕೆ ಆಗುವುದಿಲ್ಲ, ಊಹಿಸದ ರೀತಿಯಲ್ಲಿ ಬದುಕು ಬದಲಾಗಿ ಬಿಡುತ್ತದೆ. ತಾವು ಒಳ್ಳೆಯವರು ಎಂದು ನಂಬಿದವರೇ ಕತ್ತು ಕುಯ್ದು ಬಿಡುತ್ತಾರೆ. ಅಮ್ಮನಂತೆ ಆರೈಕೆ ಮಾಡುತ್ತಿದ್ದವರೆ ನಮ್ಮ ದೌರ್ಬಲ್ಯ ತಿಳಿಯುತ್ತಿದ್ದಂತೆ ವಿಷಕಾರಿ ಹಾವಾಗಿ ಬದಲಾಗುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಆಘಾತಕಾರಿ ಘಟನೆ ನಡೆದಿದೆ. ಅವರೊಬ್ಬ ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿ. ಇತ್ತಿಚೆಗೆ ಅವರು ಶವವಾಗಿ ಪತ್ತೆಯಾಗಿದ್ದು, ವಿಚಾರ ತಿಳಿದು ಅವರ ಮನೆಗೆ ತಲುಪಿದ ಅಧಿಕಾರಿಗಳಿಗೆ ಆಘಾತ ಕಾದಿತ್ತು. ಅಲ್ಲಿ ಅವರ ಮಗಳು ಬದುಕಿದ್ದಳು ಆದರೆ ಜೀವಂತ ಶವವಾಗಿದ್ದಳು. ಆಕೆಯ ದೇಹದಲ್ಲಿ ಮಾಂಸವಿತ್ತು ಎಂಬುದಕ್ಕೂ ಯಾವುದೇ ಕುರುಹುಗಳಿಲ್ಲದೇ ಅಸ್ತಿಪಂಜರವೊಂದು ಉಸಿರಾಡುವಂತೆ ಆಕೆ ಬದುಕಿದ್ದಳು. ಇದನ್ನು ನೋಡಿ ಸ್ವತಃ ಅಧಿಕಾರಿಗಳೇ ಆಘಾತಗೊಂಡಿದ್ದಾರೆ. ಉತ್ತರ ಪ್ರದೇಶದ ಮಹೋಬಾದಲ್ಲಿ ಈ ಘಟನೆ ನಡೆದಿದೆ. ಇವರನ್ನು ನೋಡಿಕೊಳ್ಳುತ್ತಿದ್ದ ಮನೆ ಕೆಲಸದಾಕೆಯನ್ನು ಪೊಲೀಸರು ಬಂದಿಸಿದ್ದಾರೆ. ಹಾಗಿದ್ದರೆ ಆಗಿದ್ದೇನು?
ಅವರ ಹೆಸರು ಓಂ ಪ್ರಕಾಶ್ ಸಿಂಗ್ ರಾಥೋರ್ ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ಹಿರಿಯ ಕ್ಲಾರ್ಕ್ ಆಗಿದ್ದ ಅವರು ನಿವೃತ್ತಿ ಜೀವನ ನಡೆಸುತ್ತಿದ್ದು, ಇತ್ತಿಚೆಗೆ ತಮ್ಮ 70ರ ಹರೆಯದಲ್ಲಿ ಅವರು ಸಾವನ್ನಪ್ಪಿದ್ದರು. ಇವರ ಪತ್ನಿ 2016ರಲ್ಲಿ ಸಾವಿಗೀಡಾದ ನಂತರ ಇವರು ತಮ್ಮ ಮಗಳು ರಶ್ಮಿ ಜೊತೆ ಜೀವನ ಮಾಡುತ್ತಿದ್ದರು. ಆದರೆ ಈಗ ಅವರು ಶವವಾಗಿ ಪತ್ತೆಯಾಗಿದ್ದರು. ನಿವೃತ್ತ ಅಧಿಕಾರಿಯ ಸಾವಿನ ವಿಚಾರ ತಿಳಿದು ಮನೆಗೆ ಬಂದ ಸ್ಥಳೀಯರು ಹಾಗೂ ಅಧಿಕಾರಿಗಳಿಗೆ ಆಘಾತ ಕಾದಿದೆ. ಕಾರಣ ಅವರ ಮಗಳು ರಶ್ನಿ ಅವರ ಸ್ಥಿತಿ. ರಶ್ಮಿ ಊಟ ನೀರು ಸಿಗದೇ ಹಸಿವಿನಿಂದಲೇ ಬಳಲಿದಂತೆ ಕಾಣುತ್ತಿದ್ದು, ಜೀವಂತ ಶವವಾದ ಸ್ಥಿತಿಯಲ್ಲಿದ್ದರು. ಅವರ ದೇಹದಲ್ಲಿ ಆಸ್ತಿಪಂಜರ ಬಿಟ್ಟರೆ ಒಂದು ಕೇಜಿ ಮಾಂಸವೂ ಇರಲಿಲ್ಲ ಎಂಬುದು ಅಧಿಕಾರಿಗಳ ಮಾತು.
ಇದನ್ನೂ ಓದಿ: ಬದುಕಿನಲ್ಲಿ ಮಾಡಬಾರದನ್ನು ಮಾಡಿದ ಯುವತಿ: ಅಪರಿಚಿತೆಯ ಬಳಿ ಬದುಕಿನ ಡಾರ್ಕೆಸ್ಟ್ ಸೀಕ್ರೇಟ್ ಕೇಳಿದವನಿಗೆ ಶಾಕ್
ಬಹುಶಃ ಇವರ ಪತ್ನಿಯ ಸಾವಿನ ನಂತರ ಹಾಗೂ ಈ ಮನೆಯ ವಾಸ್ತವವನ್ನು ಅರಿತುಕೊಂಡ ಮನೆಕೆಲಸದಾಕೆ ಸಂಪೂರ್ಣವಾಗಿ ಮನೆಯನ್ನು ತನ್ನ ನಿಯಂತ್ರಣಕ್ಕೆ ಪಡೆದಿದ್ದಾಳೆ. ನಂತರ ಅವರಿಬ್ಬರನ್ನೂ ಹಲವು ವರ್ಷಗಳಿಂದ ಹೊರಗಿನ ಪ್ರಪಂಚದ ಸಂಪರ್ಕಕ್ಕೆ ಸಿಗದಂತೆ ಮಾಡಿದ್ದಾಳೆ. ಮನೆಯ ನೆಲ ಮಹಡಿಗೆ ಅವರನ್ನು ಸ್ಥಳಾಂತರಿಸಿದ್ದಾಳೆ. ಡಿಸೆಂಬರ್ 29ರಂದು ಓಂ ಪ್ರಕಾಶ್ ಸಿಂಗ್ ರಾಥೋರ್ ಅವರು ಸಾವನ್ನಪ್ಪಿದ ನಂತರವೇ ಅವರ ಈ ದುಸ್ಥಿತಿ ಬಾಹ್ಯ ಪ್ರಪಂಚಕ್ಕೆ ತಿಳಿದಿದೆ. ಓಂ ಪ್ರಕಾಶ್ ಅವರ ಸಾವಿನ ನಂತರ ಸ್ಥಳಕ್ಕೆ ಹೋದ ಅಧಿಕಾರಿಗಳಿಗೆ ಅಲ್ಲಿ ಅವರ ಪುತ್ರಿ ಬೆತ್ತಲೆಯಾಗಿ ಶವದಂತೆ ಮಲಗಿರುವುದು ಕಂಡು ಬಂದಿದೆ. ಆಕೆ ಸಂಪೂರ್ಣವಾಗಿ ಅನಾರೋಗ್ಯಕ್ಕೀಡಾಗಿದ್ದಳು, ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಆಕೆ ಎದ್ದು ನಡೆಯುವ ಸ್ಥಿತಿಯಲ್ಲೂ ಇರಲಿಲ್ಲ.
ಇದನ್ನೂ ಓದಿ: ಸಾವಿನಂಚಿನಲ್ಲಿದ್ದ ತಾಯಿಗೆ ಕೊನೆಕ್ಷಣದಲ್ಲಿ ಕಂಡಿದ್ದೇನು ಆಕೆ ಹೇಳಿದ್ದೇನು?: ವಿಚಿತ್ರ ಅನುಭವ ಬಿಚ್ಚಿಟ್ಟ ಮಗಳು
ಈ ಅಪ್ಪ ಮಗಳ ಮೇಲೆ ಸರಿಸುಮಾರು 5 ವರ್ಷಗಳಿಂದ ನಡೆಯುತ್ತಿದ್ದ ದೌರ್ಜನ್ಯ ಹೊರಪ್ರಪಂಚಕ್ಕೆ ತಿಳಿಯಲೇ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ಬಳಿಕ ಅವರ ಮನೆಯ ಕೆಲಸದವರು ಹಾಗೂ ಕೇರ್ ಟೇಕರ್‌ನನ್ನು ಬಂಧಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಅವರ ವಿರುದ್ಧ ದೌರ್ಜನ್ಯ ಹಾಗೂ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ವಿಚಾರ ತಿಳಿದ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ಮೊದಲು ಹಾಗೂ ನಂತರ: ವಿಚ್ಛೇದಿತನ ಟ್ಯಾಟೂ ಫೋಟೋ ಭಾರಿ ವೈರಲ್


