ಭಿಕ್ಷುಕನನ್ನು ಪ್ರೀತಿಸಿ ಓಡಿಹೋದ 6 ಮಕ್ಕಳ ತಾಯಿ; ಪೊಲೀಸರ ಮುಂದೆ ಗೋಳಾಡುತ್ತಿರುವ ಗಂಡ!

ಗಂಡ ಹಾಗೂ 6 ಮಕ್ಕಳೊಂದಿಗೆ ಸುಂದರ ಸಂಸಾರ ಕಟ್ಟಿಕೊಂಡಿದ್ದ ಮಹಿಳೆ ಭಿಕ್ಷುಕನೊಂದಿಗೆ ಓಡಿ ಹೋಗಿರುವ ಘಟನೆ ನಡೆದಿದೆ. ಮನೆಗೆ ಭಿಕ್ಷೆ ಬರುತ್ತಿದ್ದ ವ್ಯಕ್ತಿಯೊಂದಿಗೆ ಪರಿಚಯ ಬೆಳೆದು, ಕಾಲಕ್ರಮೇಣ ಪ್ರೀತಿಯ ಬಲೆಗೆ ಬಿದ್ದ ಮಹಿಳೆ ಗಂಡ ಮತ್ತು ಮಕ್ಕಳನ್ನು ತೊರೆದು ಓಡಿ ಹೋಗಿದ್ದಾಳೆ.

Uttar Pradesh Agra woman elopes with beggar she leaves husband and their 6 kids sat

ಗಂಡ ಹಾಗೂ 6 ಮಕ್ಕಳೊಂದಿಗೆ ಸುಂದರ ಸಂಸಾರ ಕಟ್ಟಿಕೊಂಡಿದ್ದ ಮಹಿಳೆ ಪ್ರತಿನಿತ್ಯ ಮನೆಗೆ ಭಿಕ್ಷೆ ಬೇಡಲು ಬರುತ್ತಿದ್ದ ಭಿಕ್ಷುಕನೊಂದಿಗೆ ಓಡಿ ಹೋಗಿರುವ ಘಟನೆ ನಡೆದಿದೆ. ಮನೆಗೆ ಭಿಕ್ಷೆ ಬರುತ್ತಿದ್ದ ವ್ಯಕ್ತಿಯೊಂದಿಗೆ ಪರಿಚಯ ಬೆಳೆದು, ಕಾಲಕ್ರಮೇಣ ಪ್ರೀತಿಯ ಬಲೆಗೆ ಬಿದ್ದ ಮಹಿಳೆ ಗಂಡ ಮತ್ತು ಮಕ್ಕಳನ್ನು ತೊರೆದು ಓಡಿ ಹೋಗಿದ್ದಾಳೆ.

ಪ್ರತಿನಿತ್ಯ ಮನೆಗೆ ಭಿಕ್ಷೆ ಬೇಡಲು ಬರುತ್ತಿದ್ದ ವ್ಯಕ್ತಿ, ತಾಳೆ ಗರಿಗಳನ್ನು ಓದಿ ಕೆಲವೊಂದು ಭವಿಷ್ಯ ಹೇಳುವ ಕಲೆಯನ್ನೂ ಸಿದ್ಧಿಸಿಕೊಂಡಿದ್ದನು. ಆದರೆ, ಈ ಭಿಕ್ಷಕನೊಂದಿಗೆ ಹೆಚ್ಚು ಮಾತನಾಡುತ್ತಿದ್ದ 6 ಮಕ್ಕಳ ತಾಯಿ ಕಾಲಕ್ರಮೇಣ ಆತನ ಪ್ರೀತಿಯ ಬಲೆಗೆ ಬಿದ್ದು, ಗಂಡ ಹಾಗೂ 6 ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಓಡಿ ಹೋಗಿದ್ದಾಳೆ. ಇದೀಗ ಗಂಡ ತನಗೆ ಹೆಂಡತಿ ಬೇಕು ಹುಡುಕಿ ಕೊಡಿ ಎಂದು ಪೊಲೀಸರ ಮುಂದೆ ಗೋಳಾಡುತ್ತಿದ್ದಾನೆ.

ಈ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡದಿದೆ. ರಾಜು ಎಂಬಾತನ ಹೆಂಡತಿ ರಾಜೇಶ್ವರಿ (36) 6 ಮಕ್ಕಳ ತಾಯಿ ಭಿಕ್ಷುಕನೊಂದಿಗೆ ಓಡಿ ಹೋಗಿದ್ದಾಳೆ. ರಾಜು ಅವರ ಮನೆಗೆ ಪ್ರತಿನಿತ್ಯ ಭೇಟಿ ನೀಡುತ್ತಿದ್ದ ಭಿಕ್ಷುಕ ನನ್ಹೆ ಪಂಡಿತ್ ತಾಳೆಗರಿಗಳನ್ನು ಓದಲು ಕಲಿತಿದ್ದನು. ಆರಂಭದಲ್ಲಿ ಆಗಾಗ್ಗೆ ಮನೆಗೆ ಭೇಟಿ ನೀಡುತ್ತಿದ್ದನು. ನಂತರ ಇಬ್ಬರ ನಡುವೆ ಸಂವಹನ ಉತ್ತಮವಾಗಿಯೇ ಏರ್ಪಟ್ಟಿದ್ದರಿಂದ ಪ್ರತಿನಿತ್ಯ ಮನೆಯ ಬಳಿ ಬರಲು ಆರಂಭಿಸಿದ್ದಾನೆ. ಆಗ ರಾಜೇಶ್ವರಿ ಹಾಗೂ ಭಿಕ್ಷುಕನ ನಡುವಿನ ಸಂವಹನ ಸಂಬಂಧವಾಗಿ ಬೆಳೆದಿದೆ. ಇದಾದ ನಂತರ, ಇಬ್ಬರೂ ಸೇರಿಕೊಂಡು ಕುಟುಂಬ ಹಾಗೂ ಮಕ್ಕಳನ್ನು ಬಿಟ್ಟು, ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಓಡಿ ಹೋಗಿದ್ದಾರೆ ಎಂದು ದೂರು ದಾಖಲಾಗಿದೆ.

ಇದನ್ನೂ ಓದಿ: ಏಳೂವರೆ ಕೋಟಿ ಸಾಮ್ರಾಜ್ಯದ ಒಡೆಯ ಮುಂಬೈನ ಈ ಭಿಕ್ಷುಕ! ಈತನ ರೋಚಕ ಸ್ಟೋರಿ ಇಲ್ಲಿದೆ...

ಮಹಿಳೆಯ ಪತಿ ರಾಜು ಅವರು ಹರ್ಪಾಲ್‌ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜನವರಿ 3 ರಂದು ತರಕಾರಿ ಮತ್ತು ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಹೋಗುವುದಾಗಿ ಮಾರುಕಟ್ಟೆಗೆ ಹೋದ ತನ್ನ ಪತ್ನಿ ಈವರೆಗೆ ಹಿಂತಿರುಗಿಲ್ಲ. ಎಮ್ಮೆ ಮತ್ತು ಇತರೆ ಕೆಲಸದಿಂದ ಸಂಗ್ರಹಿಸಿದ 1.6 ಲಕ್ಷ ರೂ. ನಗದು, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಕುಟುಂಬ ನಡೆಸುವುದಾದರೂ ಹೇಗೆ ಎಂದು ಗಂಡ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.

ರಾಜು ಹೇಳುವ ಪ್ರಕಾರ, ಭಿಕ್ಷುಕ ನನ್ನ ಹೆಂಡತಿಯೊಂದಿಗೆ ಮಾತನಾಡುವುದನ್ನು ಅನೇಕ ಬಾರಿ ನೋಡಿದ್ದೇನೆ. ಆದರೆ, ಪರಿಸ್ಥಿತಿಯು ಈ ಮಟ್ಟಿಗೆ ಉಲ್ಬಣಗೊಳ್ಳುತ್ತದೆ ಎಂದು ಅನುಮಾನಿಸಿರಲಿಲ್ಲ. ಇದೀಗ ನನ್ಹೆ ಪಂಡಿತ್ ನನ್ನ ಹೆಂಡತಿಯನ್ನು ಕರೆದುಕೊಂಡು ಓಡಿ ಹೋಗಿದ್ದಾನೆ. ಮಾರುಕಟ್ಟೆಗೆ ಹೋಗುವುದಾಗಿ ಹೇಳಿ ಹೋದ ನನ್ನ ಹೆಂಡತಿ ಹಾಗೂ ನನ್ಹೆ ಪಂಡಿತ್ ಅವರ ಫೋನಿಗೆ ಕರೆ ಮಾಡಿ ಪರಿಶೀಲಿಸಿದಾಗ, ಅವರ ಫೋನ್ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದವು. ನಂತರ, ನಾನು ಮನೆಯಲ್ಲಿ ಹುಡುಕಿದಾಗ ನನ್ನ ಹೆಂಡತಿ ಮಾತ್ರವಲ್ಲದೆ ನಮ್ಮ ಬೆಲೆಬಾಳುವ ವಸ್ತುಗಳು ಮತ್ತು ನಗದು ಸಹ ಕಾಣೆಯಾಗಿದೆ. ಕನಿಷ್ಠ ರೂ. 1.6 ಲಕ್ಷ ನಗದು ಇಲ್ಲವಾಗಿದೆ. ನಮಗೆ 6 ಮಕ್ಕಳಿದ್ದು, ನನಗೆ ಮದುವೆಯಾಗಿ 20 ವರ್ಷಗಳಾಗಿವೆ. ಪೊಲೀಸರು ನನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕು ಮತ್ತು ನಮ್ಮ ಹಣ, ಚಿನ್ನಾಭರಣ ಹಿಂತಿರುಗಿಸಿಕೊಡಿ ಎಂದು ರಾಜು ದೂರು ನೀಡಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್‌ ಸಿಗ್ನಲ್‌ನಲ್ಲಿ ನಟಿ ಕೈಯಿಂದ ಹಣ ಕಿತ್ತುಕೊಂಡು ಓಡಿ ಹೋದ ಭಿಕ್ಷುಕ; ಕಹಿ ಅನುಭವ ಬಿಚ್ಚಿಟ್ಟ ಖ್ಯಾತ ನಟಿ!

ರಾಜು ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹರ್ಪಾಲ್‌ಪುರ ಠಾಣಾಧಿಕಾರಿ ರಾಜದೇವ್ ಮಿಶ್ರಾ ಖಚಿತಪಡಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆ ಹಾಗೂ ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios