Feelfree: ಶಿಶ್ನವೂ ಮುರಿದುಹೋಗಬಹುದು, ಹುಷಾರಾಗಿರಿ!
ಸಂಭೋಗ ಆನಂದ ನೀಡುವಂಥದ್ದೂ ಹೌದು, ಕೆಲವೊಮ್ಮೆ ಅದು ಇನ್ನಿಲ್ಲದ ನೋವು ಕೊಡುವಂಥದ್ದೂ ಹೌದು. ಪುರುಷರು ಶಿಶ್ನ ಮುರಿದುಕೊಂಡ ಉದಾಹರಣೆಗಳು ಸಾಕಷ್ಟಿವೆ.
ಪ್ರಶ್ನೆ: ಇತ್ತೀಚೆಗೆ ನನ್ನ ಗೆಳತಿ ನನ್ನ ಮೇಲೆ ಬಂದು ಸೆಕ್ಸ್‌ನಲ್ಲಿ ತೊಡಗಿದ್ದಳು. ಇದ್ದಕ್ಕಿದ್ದಂತೆ ಆಕೆ ಘರ್ಷಿಸುತ್ತಿದ್ದಾಗ ಶಿಶ್ನ ಮುರಿದಂತಾಯಿತು. ಜೀವ ಹೋಗುವಷ್ಟು ನೋವಾಯಿತು. ಸದ್ಯ ನಾಟಿ ಎಣ್ಣೆ ಬಳಸಿ ನೋವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದೇನೆ. ಆದರೆ ಒಂದು ವಾರವಾದರೂ ನೋವು ಹೋಗುತ್ತಲೇ ಇಲ್ಲ. ನನ್ನ ಶಿಶ್ನ ಮುರಿದೇ ಹೋಗಿರಬಹುದಾ? ಇದರಿಂದಾಗಿ ಬೇರೆ ಯಾವುದರ ಬಗೆಗೂ ಗಮನ ನೀಡುವುದಕ್ಕೆ ಆಗ್ತಾನೇ ಇಲ್ಲ. ಏನು ಮಾಡಲಿ?
ಉತ್ತರ: ನೀವು ತಕ್ಷಣವೇ ಲೈಂಗಿಕ ತಜ್ಞರನ್ನು ಕಾಣಬೇಕು. ಶಿಶ್ನದಲ್ಲಿ ಮೂಳೆಗಳು ಇರುವುದಿಲ್ಲ. ಆದರೆ ರಕ್ತನಾಳಗಳು ಇರುತ್ತವೆ. ಉದ್ರೇಕದ ಸಮಯದಲ್ಲಿ ಇವುಗಳಿಗೆ ರಕ್ತ ದುಪ್ಪಟ್ಟು ತುಂಬಿಕೊಂಡು ಶಿಶ್ನ ನಿಮಿರುತ್ತದೆ. ಇದರಿಂದ ಸಂಭೋಗ ಸಾಧ್ಯವಾಗುತ್ತದೆ. ಹೆಣ್ಣು ಕೆಳಗಿದ್ದಾಗ ಶಿಶ್ನದ ಮೇಲೆ ಹೆಚ್ಚಿನ ಪ್ರೆಶರ್ ಬೀಳುವುದಿಲ್ಲ. ಆದರೆ ಹೆಣ್ಣು ಮೇಲೆ ಹಾಗೂ ಗಂಡು ಕೆಳಗಿರುವ ಭಂಗಿಯಲ್ಲಿ ಸೆಕ್ಸ್ ನಡೆಸುವಾಗ, ಕೆಲವೊಮ್ಮೆ ಶಿಶ್ನ ಸಂಗಾತಿಯ ಯೋನಿಯಿಂದ ಸ್ಲಿಪ್ ಆಗಿ ಹೊರಬರುವ ಚಾನ್ಸ್‌ಗಳು ಇವೆ. ಆಗ ಹೆಣ್ಣಿನ ದೇಹದ ಒತ್ತಡ ಶಿಶ್ನದ ಮೇಲೆ ಜೋರಾಗಿ ಬಿದ್ದರೆ, ನಿಮ್ಮ ಲೈಂಗಿಕ ಅಂಗ ತಿರುಚಿದಂತಾಗಿ ರಕ್ತನಾಳಗಳು ಒಡೆಯಬಹುದು. ಇದನ್ನೇ ಸಾಮಾನ್ಯವಾಗಿ ಶಿಶ್ನದ ಮುರಿತ ಅನ್ನುತ್ತಾರೆ. ಇದಕ್ಕೆ ಕೂಡಲೇ ಸರಿಯಾದ ವೈದ್ಯಕೀಯ ಚಿಕಿತ್ಸೆ ಮಾಡಿಸುವುದು ಅಗತ್ಯ. ರಕ್ತನಾಳಗಳು ಒಡೆದಿದ್ದರೆ ರಕ್ತ ಹೆಪ್ಪುಗಟ್ಟಿ ಮುಂದೆ ಸಂಭೋಗ ಮಾತ್ರವಲ್ಲ ಮೂತ್ರ ಮಾಡುವುದೂ ಅಸಾಧ್ಯ ಆಗಬಹುದು.
#Feelfree: ಪುರುಷರ ಮನಸ್ಸಿಗೂ ಶಿಶ್ನಕ್ಕೂ ಏನು ಸಂಬಂಧ..?
ಪ್ರಶ್ನೆ: ನಾನು ಆರಡಿ ಮೂರಿಂಚು ಎತ್ತರವಿದ್ದೇನೆ. ಜಿಮ್‌ಗೆ ಹೋಗಿ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಂಡಿದ್ದೇನೆ. ನನ್ನ ವಯಸ್ಸು ಮೂವತ್ತು. ನನ್ನ ದೇಹ ಹಾಗೂ ಸೌಂದರ್ಯದಿಂದಾಗಿ ಹಲವಾರು ಸ್ತ್ರೀಯರು ನನ್ನತ್ತ ಆಕರ್ಷಿತರಾಗಿದ್ದಾರೆ. ಇವರೊಂಡನೆ ಹಾಸಿಗೆ ಕೂಡ ಹಂಚಿಕೊಂಡಿದ್ದೇನೆ. ಆದರೆ ಅವರೆಲ್ಲರೂ ನನ್ನ ಶಿಶ್ನವನ್ನು ನೋಡಿದ ಕೂಡಲೇ ಇಷ್ಟೇನಾ ಎಂಬ ಉದ್ಘಾರ ತೆಗೆಯುತ್ತಾರೆ. ಯಾಕೆಂದರೆ ನನ್ನ ಮದನಾಯುಧದ ಗಾತ್ರ ಮಾತ್ರ ನನ್ನ ದೇಹದ ಗಾತ್ರಕ್ಕೆ ಅನುಗುಣವಾಗಿ ಇಲ್ಲ. ಈ ಗರ್ಲ್‌ಫ್ರೆಂಡ್ಸ್ ನನ್ನ ದೇಹದ ಗಾತ್ರಕ್ಕೆ ತಕ್ಕಂತೆ ನನ್ನ ಗುಪ್ತಾಂಗವೂ ಇರಬಹುದು ಎಂದು ಅಂದಾಜಿಸಿಕೊಂಡಿದ್ದಾರೆ. ಆದರೆ ಹಾಗಿಲ್ಲದಿರುವುದನ್ನು ಕಂಡು ನಿರಾಶರಾಗುತ್ತಾರೆ ಅಂದುಕೊಂಡಿದ್ದೇನೆ. ಶಿಶ್ನದ ಗಾತ್ರ ಬೆಳೆಸಲು ಸಾದ್ಯವೇ?
#Feelfree: ನಾನು ಒಂಟಿ, ಸೆಕ್ಸ್ ಟಾಯ್ಸ್ ಬಳಸಬಹುದೇ?
ಉತ್ತರ: ಶಿಶ್ನದ ಗಾತ್ರ ಬೆಳೆಸುವುದು ಸಂಭೋಗದ ಸಮಯದಲ್ಲಿ, ಉದ್ರೇಕಗೊಂಡಾಗ ಮಾತ್ರ ಸಾಧ್ಯ. ಅಂದರೆ ಉದ್ರೇಕಗೊಂಡಾಗ ಅದು ಎಷ್ಟು ಉದ್ದವಾಗುತ್ತದೋ ಅಷ್ಟು ಮಾತ್ರವೇ ಅದರ ಗಾತ್ರ. ಹೀಗಾಗುವುದಿದೆ. ಕೆಲವೊಮ್ಮೆ ಕುಳ್ಳಗಿರುವವರ ಗುಪ್ತಾಂಗ ಹೆಚ್ಚು ಉದ್ದವಿರಬಹುದು, ಎತ್ತರವಾಗಿರುವವರ ಗುಪ್ತಾಂಗ ಉದ್ದವಾಗಿ ಇರಬೇಕೆಂದೇನೂ ಇಲ್ಲ. ಲೈಂಗಿಕ ಸುಖ ಇರುವುದು ಶಿಶ್ನದ ಗಾತ್ರದಲ್ಲಿ ಅಲ್ಲ. ಇರುವ ಶಿಶ್ನದಲ್ಲಿ ನೀವು ಎಷ್ಟು ಸುಖಪಡುತ್ತೀರಿ ಹಾಗೂ ಸಂಗಾತಿಗೆ ಹೇಗೆ ಸುಖ ನೀಡುತ್ತೀರಿ ಅನ್ನುವುದನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಸ್ತ್ರೀಯ ಲೈಂಗಿಕ ಸುಖಕ್ಕೆ ಕಾರಣವಾಗುವ ಭಗಾಂಕುರ ಅಥವಾ ಕ್ಲಿಟೋರಿಸ್ ಅನ್ನು ಘರ್ಷಿಸಲು ಶಿಶ್ನಕ್ಕೆ ಮೂರುವರೆ ಇಂಚು ಗಾತ್ರ ಸಾಕು. ಅಷ್ಟೇ ಇದ್ದರೂ ನೀವು ಆಕೆಯನ್ನು ತೃಪ್ತಿಪಡಿಸಬಲ್ಲಿರಿ. ಕೆಲವೊಮ್ಮೆ ಉದ್ದ ಶಿಶ್ನ ಸ್ತ್ರೀಯರಿಗೆ ಕಿರಿಕಿರಿ ಮಾಡುವುದೂ ಉಂಟು.
#Feelfree: ಸೆಕ್ಸ್‌ಗೆ ಮೊದಲು ಅಲ್ಲಿಗೆ ಸ್ಯಾನಿಟೈಸರ್ ಹಚ್ಕೋ ಅಂತಾಳೆ.!
ಪ್ರಶ್ನೆ: ನನಗೆ ಇತ್ತೀಚೆಗೆ ಮದುವೆಯಾಗಿದೆ. ಗಂಡ ಮತ್ತು ನಾನು ಸಾಕಷ್ಟು ಸೆಕ್ಸ್ ಸುಖ ಅನುಭವಿಸುತ್ತೇವೆ. ಆದರೆ ಕೆಲವೊಮ್ಮೆ, ರಾತ್ರಿ, ನನ್ನ ಪತಿ ನಿದ್ದೆಯಲ್ಲಿರುವಾಗ, ಅವರ ಶಿಶ್ನ ನಿಮಿರಿ ನಿಂತಿರುವುದು ಕಾಣುತ್ತದೆ. ನಾನು ಅವರಿಗೆ ಸಾಕಷ್ಟು ಸೆಕ್ಸ್ ಸುಖ ನೀಡುತ್ತಿಲ್ಲವೇ ಎಂದು ಯೋಚನೆಯಾಗುತ್ತದೆ. ಇದ್ಯಾಕೆ?
ಉತ್ತರ: ಇದು ನಿಮ್ಮ ಸಮಸ್ಯೆಯಲ್ಲ. ನಿಮ್ಮ ಪತಿಯ ಸಮಸ್ಯೆಯೂ ಅಲ್ಲ. ಗಂಡಸರಲ್ಲಿ ರಾತ್ರಿ ನಿದ್ರೆಯಲ್ಲಿ ಶಿಶ್ನ ನಾಲ್ಕಾರು ಬಾರಿ ನಿಮಿರುವುದು ಸ್ವಾಭಾವಿಕ. ಅವರಿಗೆ ಸೆಕ್ಸ್ ಬೇಕೆಂದೂ ಅದರ ಅರ್ಥವಲ್ಲ. ಅದೊಂದು ಸಹಜ ಕ್ರಿಯೆ. ಅವರು ಆರೋಗ್ಯಪೂರ್ಣವಾಗಿದ್ದಾರೆಂದೇ ಅದರ ಅರ್ಥ. ಕೆಲವೊಮ್ಮೆ ಮೂತ್ರನಾಳಗಳು ತುಂಬಿಕೊಂಡರೂ ಶಿಶ್ನ ನಿಮಿರುವುದುಂಟು. ಆತಂಕ ಬೇಡ.