ಮಾಲೀಕನ ಪ್ರೀತಿಗಾಗಿ ಕಾದಾಡುವ ಆನೆಮರಿಗಳು: ವೀಡಿಯೋ ವೈರಲ್
ಆನೆ ಮರಿಗಳೆರಡು ಮಾಲೀಕನ ಪ್ರೀತಿಗಾಗಿ ಅಸೂಯೆಯಿಂದ ಕಾದಾಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೀನ್ಯಾ: ಪ್ರೀತಿ ಒಂದು ಅದ್ಭುತ ಶಕ್ತಿ, ಅದು ಅಸಾಧ್ಯವಾದುದ್ದನ್ನು ಸಾಧ್ಯವಾಗಿಸುತ್ತದೆ. ಒಬ್ಬರ ಪ್ರೀತಿ ಬೆಂಬಲ ಜೊತೆಗಿದೆ ಎಂಬ ನಂಬಿಕೆಯೇ ಮನುಷ್ಯನನ್ನು ನಭಕ್ಕೆ ಹಾರಿಸುತ್ತದೆ. ಪ್ರೀತಿ ಎಲ್ಲಿದೆಯೋ ಅಲ್ಲೆಲ್ಲಾ ಸಣ್ಣ ಸಂಶಯ, ಅಸೂಯೆ ಇದ್ದಿದ್ದೆ. ಇದು ಕೇವಲ ಮಾನವರಲ್ಲಿ ಮಾತ್ರವಲ್ಲ, ಪ್ರಾಣಿಗಳೂ ಕೂಡ ನಾವು ತೋರುವ ಪುಟ್ಟ ಪ್ರೀತಿಗಾಗಿ ಹಂಬಲಿಸುತ್ತವೆ. ನಮ್ಮ ಸಾಮಿಪ್ಯದಲ್ಲೇ ಇರಲು ಬಯಸುವ ಅವುಗಳ ಒಡನಾಟ ನಮ್ಮ ಹೃದಯವನ್ನು ತಂಪಾಗಿಸುತ್ತವೆ. ಪ್ರೀತಿಯ ಮಳೆಗೆರೆಯಲು ಪ್ರೇರಣೆ ನೀಡುತ್ತವೆ. ಪ್ರಾಣಿಗಳು ಕೂಡ ಮನುಷ್ಯರಂತೆ ಪ್ರೀತಿಗಾಗಿ ಅಸೂಯೆ ಪಡುತ್ತವೆ ಎಂಬ ವಿಚಾರ ನಿಮಗೆ ಗೊತ್ತಾ.
ವಿಶೇಷ ಏನಿಸಿದರು ಇದು ನಿಜ ಬಾಯೊಂದು ಬರುವುದಿಲ್ಲ ಎಂಬುದನ್ನು ಬಿಟ್ಟರೆ ಈ ಪ್ರಪಂಚದ ಸಕಲ ಜೀವಿಗಳು ಕೂಡ ಒಂದು ಅದ್ಭುತವೇ ಸರಿ, ತಮ್ಮನ್ನು ಪ್ರೀತಿಸುವ ಮನುಷ್ಯ ಜೊತೆ ಸಿಕ್ಕರೆ ಅವುಗಳು ಆತನ ಪ್ರೀತಿಗಾಗಿ ಸದಾ ಹಂಬಲಿಸುತ್ತವೆ. ಬುದ್ಧಿವಂತ ಪ್ರಾಣಿ ಎನಿಸಿದ ಆನೆಗಳು ತಮ್ಮ ಪಾಲನೆ ಮಾಡುವ ಮಾಲೀಕ ಅಥವಾ ಮಾವುತನೊಂದಿಗೆ ಆಟವಾಡುತ್ತಾ ಕಾಲ ಕಳೆಯುವ ಹಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ಆನೆ ಮರಿಗಳೆರಡು ಮಾಲೀಕನ ಪ್ರೀತಿಗಾಗಿ ಅಸೂಯೆಯಿಂದ ಕಾದಾಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೊಂಡಿಲಿನಿಂದ ಪತ್ರಕರ್ತನ ಕಿವಿಹಿಂಡಿ ಮೂಗೆಳೆದ ಆನೆಮರಿ
ಈ ವೀಡಿಯೋವನ್ನು ಕೀನ್ಯಾದ (Kenya) ಶೆಲ್ಡ್ರಿಕ್ ವನ್ಯಜೀವಿ ಟ್ರಸ್ಟ್‌ನ ಇನ್ಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನೆಯ ಪಾಲಕ ಜಸ್ಟಸ್ ಎಂಬಾತ ರೊಕ್ಕಾ ಹೆಸರಿನ ಆನೆಯೊಂದನ್ನು ಮುದ್ದು ಮಾಡುತ್ತಿದ್ದಾನೆ. ಇದನ್ನು ನೋಡಿದ ಮರಿಯಾನೆ ಮಿಂವ್ಜಿ ಅಸೂಯೆಯಿಂದ ಮಾಲೀಕನ ಬಳಿ ಬಂದು ಆ ದೊಡ್ಡ ಆನೆಯನ್ನು ದೂರ ತಳ್ಳುತ್ತದೆ. ತನ್ನ ಮಾಲೀಕ ದೊಡ್ಡ ಆನೆಯನ್ನು ಪ್ರೀತಿ ಮಾಡುವುದನ್ನು ನೋಡಿದ ಪುಟ್ಟ ಆನೆ ಆ ಆನೆಯನ್ನು ದೂರ ತಳ್ಳುತ್ತಿರುವ ವೀಡಿಯೋ ನೋಡಿದ ನೆಟ್ಟಿಗರು ಪ್ರೀತಿಯ ವಿಷಯದಲ್ಲಿ ಇವುಗಳು ಎಷ್ಟೊಂದು ಪೊಸೆಸಿವ್ ಎಂದು ಕಾಮೆಂಟ್ ಮಾಡ್ತಿದ್ದಾರೆ.
ಮನೆಯಲ್ಲಿ ಅಮ್ಮನ ಪ್ರೀತಿಗಾಗಿ ಕಿರಿಯ ಹಾಗೂ ಹಿರಿಯ ಮಕ್ಕಳ ಮಧ್ಯೆ ಕಾದಾಟ ನಡೆಯುವುದನ್ನು ನೋಡಬಹುದು. ಅದೇ ರೀತಿ ಇಲ್ಲಿ ಪುಟ್ಟ ಆನೆ ದೊಡ್ಡ ಆನೆಯನ್ನು ಮಾಲೀಕ ಪ್ರೀತಿ ಮಾಡದಂತೆ ದೂರ ತಳ್ಳುತ್ತಿದೆ. ತಮ್ಮ ಮಾಲೀಕರೊಂದಿಗೆ ಈ ಆನೆಗಳು ಎಷ್ಟೊಂದು ಖುಷಿಯಿಂದ ಇವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪುಟಾಣಿ ಆನೆ ಮಿಂವ್ಜಿಯ ಅಸೂಯೆ ಸ್ಫೋಟಗೊಂಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮನೆಯಲ್ಲಿರುವ ಪುಟ್ಟ ಮಕ್ಕಳಂತೆ ಈ ಆನೆಗೂ ಎಲ್ಲರ ಗಮನ ತನ್ನತ್ತ ಬೇಕು ಹಾಗೂ ತನ್ನ ಹೊರತಾಗಿ ಯಾರೂ ಮಾಲೀಕನ ಪ್ರೀತಿ ಮಾಡಬಾರದು ಎಂದು ಬಯಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆನೆ ಮರಿಯ ತುಂಟಾಟ: ಯುವತಿಯ ಲಂಗ ಎಳೆದಾಡಿ ಆಟ
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಆನೆಮರಿ ಮಂಜ್ವಿ (Mwinzi) ಕೀನ್ಯಾದ ಕಿಮಾನಾ ಪ್ರದೇಶದಲ್ಲಿ (Kimana region) ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಅಲ್ಲಿನ ಮಸಾಯಿ ಸಮುದಾಯದ ಜನ ಆತನನ್ನು ಕೆಸರಿನಿಂದ ಮೇಲೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಅವರು ಈ ಆನೆ ಮರಿಯನ್ನು ಶೆಲ್ಡ್ರಿಕ್ ವನ್ಯಜೀವಿ ಟ್ರಸ್ಟ್‌ಗೆ (Sheldrick Wildlife Trust) ಒಪ್ಪಿಸಿದ್ದರು.