Real Story : ಜ್ಯೋತಿಷಿ ಹೇಳಿದಂತೆ ವರ್ತಿಸ್ತಿದ್ದಾಳೆ ಈತನ ಪತ್ನಿ..!
ಜ್ಯೋತಿಷ್ಯ, ಭವಿಷ್ಯ ನಂಬೋದು ಬಿಡೋದು ಅವರವರಿಗೆ ಬಿಟ್ಟಿದ್ದು. ಆದ್ರೆ ಯಾವುದೂ ಅತಿಯಾಗಬಾರದು. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಎಲ್ಲವನ್ನೂ ಅದೇ ದೃಷ್ಟಿಯಲ್ಲಿ ನೋಡಿದಾಗ ಜೀವನ ಹಾಳಾಗಲು ಶುರುವಾಗುತ್ತದೆ. ಇದಕ್ಕೆ ಈತ ಉತ್ತಮ ನಿದರ್ಶನ

ಕೆಲವರು ಕಣ್ಮುಚ್ಚಿ ಜ್ಯೋತಿಷ್ಯವನ್ನು ನಂಬ್ತಾರೆ. ಅದ್ರಲ್ಲಿ ಎಷ್ಟು ಸರಿಯಿದೆ, ಎಷ್ಟು ತಪ್ಪಿದೆ ಎಂಬುದನ್ನು ಕೂಡ ವಿಶ್ಲೇಷಣೆ ಮಾಡೋದಿಲ್ಲ. ಪ್ರತಿ ದಿನ ದಿನ ಭವಿಷ್ಯ ನೋಡಿ ಅದರಂತೆ ನಡೆಯುವು ಜನರು ಅನೇಕರು. ಅತಿಯಾಗಿ ಯಾವುದನ್ನೂ ನಂಬಬಾರದು. ಇದ್ರಿಂದ ಮುಂದೆ ಸಮಸ್ಯೆ ಎದುರಾಗುತ್ತದೆ. ಅನೇಕರು ಕಷ್ಟ ಬಂದಾಗ ಜ್ಯೋತಿಷಿಗಳ ಬಳಿ ಹೋಗ್ತಾರೆ. ಅವರು ಮನಸ್ಸಿಗೆ ನೆಮ್ಮದಿ ನೀಡುವ ವಿಷ್ಯ ಹೇಳಿದ್ರೆ ಸರಿ. ಕೆಲವೊಮ್ಮೆ ಮನಸ್ಸು ಘಾಸಿಗೊಳ್ಳುವ ಸಂಗತಿ ಅವರಿಂದ ತಿಳಿಯುತ್ತದೆ. ಮುಂದೆ ಕಷ್ಟ ಬರುತ್ತದೆ ಎಂದು ಅವರು ಮುನ್ಸೂಚನೆ ನೀಡಿದ್ದರೆ, ಕಷ್ಟ ಬರದೆ ಹೋದ್ರೂ ಜ್ಯೋತಿಷ್ಯದ ಗುಂಗಿನಲ್ಲಿ ಇವರೇ ಕಷ್ಟ ತಂದುಕೊಳ್ತಾರೆ. ಈ ವ್ಯಕ್ತಿ ಕಥೆಯೂ ಅದೇ ಆಗಿದೆ. ಜ್ಯೋತಿಷಿ ಹೇಳಿದ ಮಾತುಗಳನ್ನು ನಂಬಿರುವ ವ್ಯಕ್ತಿ, ತನ್ನ ಜೀವನದಲ್ಲಿ ನಡೆಯುತ್ತಿರುವ ಪ್ರತಿಯೊಂದು ಘಟನೆಯನ್ನೂ ಅದಕ್ಕೆ ಹೋಲಿಸಿಕೊಳ್ತಿದ್ದಾನೆ. ಈ ಮೂಲಕ ಸಂಸಾರವನ್ನು ಹಾಳು ಮಾಡಿಕೊಳ್ತಿದ್ದಾನೆ. ಅಷ್ಟಕ್ಕೂ ಆತನ ಕಥೆ ಏನು ಗೊತ್ತಾ?.
ಆತನಿಗೆ ಮದುವೆಯಾಗಿ ತುಂಬಾ ವರ್ಷ ಕಳೆದಿಲ್ಲ. ಆರಂಭದ ದಿನಗಳು ತುಂಬಾ ಸುಂದರವಾಗಿದ್ದವು. ಆದ್ರೆ ದಿನ ಕಳೆದಂತೆ ಪತ್ನಿ ಕೋಪ ಕಿರಿಕಿರಿ ಎನ್ನಿಸಲು ಶುರುವಾಗಿದೆ. ಪತ್ನಿ ಕೋಪವನ್ನು ಜ್ಯೋತಿಷಿ ಹೇಳಿದ ಮಾತಿಗೆ ತಾಳೆ ಹಾಕಲು ಈತ ಶುರು ಮಾಡಿದ್ದಾನೆ.
ಮದುವೆ (Marriage) ಯಾದ ಆರಂಭದಲ್ಲಿ ಜ್ಯೋತಿಷಿ (Astrologer) ಯೊಬ್ಬರು, ನಿಮ್ಮ ಮುಂದಿನ ಜೀವನ ಚೆನ್ನಾಗಿರುವುದಿಲ್ಲ ಎಂದಿದ್ದರಂತೆ. ಪತ್ನಿ ಕೋಪ (Anger) ನಿಮ್ಮ ಸಂಸಾರವನ್ನು ನಾಶ ಮಾಡುತ್ತದೆ. ನಿಮ್ಮಿಬ್ಬರ ಮಧ್ಯೆ ಬಾಳ್ವೆ ಕಷ್ಟ. ಇದೇ ಕೋಪ ನಿಮ್ಮಿಬ್ಬರನ್ನು ದೂರ ಮಾಡುತ್ತದೆ ಎಂದಿದ್ದರಂತೆ. ಆ ಕ್ಷಣಕ್ಕೆ ಇದು ಸುಳ್ಳು (Lie) ಎಂದುಕೊಂಡಿದ್ದನಂತೆ ವ್ಯಕ್ತಿ. ಈ ವಿಷ್ಯವನ್ನು ಪತ್ನಿಗೆ ಕೂಡ ಹೇಳಿದ್ದನಂತೆ. ಆಕೆ ಇದನ್ನು ನಿರ್ಲಕ್ಷ್ಯ ಮಾಡಿದ್ದಲ್ಲದೆ ಅದೆಲ್ಲವನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಳಂತೆ. ಆದ್ರೆ ಈಗಿನ ಬೆಳವಣಿಗೆ ನೋಡಿದ್ರೆ ಜ್ಯೋತಿಷಿ ಹೇಳಿದ್ದು ಸತ್ಯವಾಗ್ತಿದೆ. ನನ್ನ ಭವಿಷ್ಯಕ್ಕೆ ಪತ್ನಿ ಕೋಪ ಮುಳುವಾಗ್ತಿದೆ. ಸಂಸಾರದಲ್ಲಿ ಸಮಸ್ಯೆ ತರಲು ನನಗೆ ಇಷ್ಟವಿಲ್ಲ. ಆದ್ರೆ ಪತ್ನಿ, ನನ್ನ ತಂದೆ – ತಾಯಿಗೂ ಹಿಂಸೆ ನೀಡ್ತಿದ್ದಾಳೆಂದು ಪತಿ ಹೇಳಿದ್ದಾನೆ.
ನೀವು ಪ್ರೀತಿಸ್ತಿರೋ ಹುಡುಗ ಒಳ್ಳೆವ್ನಾ ಅನ್ನೋದು ಕಂಡುಹಿಡಿಯೋದೇಗೆ?
ತಜ್ಞರ ಸಲಹೆ : ಜ್ಯೋತಿಷ್ಯದ ಮೇಲೆ ಅತಿಯಾದ ನಂಬಿಕೆ ಬಿಟ್ಟುಬಿಡಿ ಎಂದು ತಜ್ಞರು ವ್ಯಕ್ತಿಗೆ ಸಲಹೆ ನೀಡಿದ್ದಾರೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ಮುಂದೇನಾಗುತ್ತದೆ ಎಂಬುದನ್ನು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಅವರು ಹೇಳಿದ ಮಾತನ್ನೇ ನೀವು ನಂಬಿ ಕುಳಿತ್ರೆ ವಿಚ್ಛೇದನ ನಿಶ್ಚಿತ ಎಂದಿದ್ದಾರೆ ತಜ್ಞರು. ಜ್ಯೋತಿಷಿಗಳು ಹೇಳಿದ ಮಾತು ಹಾಗೂ ಈಗ ನಡೆಯುತ್ತಿರುವ ಘಟನೆಗೆ ಸ್ವಲ್ಪ ಹೊಂದಾಣಿಕೆಯಿರಬಹುದು. ಕೋಪ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಜ್ಯೋತಿಷಿ ಹೇಳಿದಂತೆ ಆಗುತ್ತೆ ಎನ್ನುತ್ತ ನೀವು ಬಾಯಿ ಮುಚ್ಚಿ ಕುಳಿದ್ರೆ ಇರೋದನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.
ಸಂಗಾತಿಗೆ ಪ್ರಪೋಸ್ ಪ್ಲ್ಯಾನ್ ಮಾಡಿದ್ರೆ, ಈ ತಪ್ಪುಗಳನ್ನು ಮಾಡಲೇಬೇಡಿ
ಈ ವಿಷ್ಯದಲ್ಲಿ ತಾಳ್ಮೆ ಮತ್ತು ಶಾಂತಿ ಮುಖ್ಯ ಎನ್ನುತ್ತಾರೆ ತಜ್ಞರು. ಮೊದಲು ಪತ್ನಿ ಜೊತೆ ಈ ಬಗ್ಗೆ ಮಾತನಾಡುವುದು ಮುಖ್ಯ. ಆಕೆಯ ಅಸಮಾಧಾನಕ್ಕೆ ಕಾರಣವೇನು, ಆಕೆ ಕೋಪಗೊಳ್ಳಲು ಕಾರಣವೇನು ಎಂಬುದನ್ನು ಪತ್ತೆ ಮಾಡಿ ಎಂದಿದ್ದಾರೆ ತಜ್ಞರು.
ಜ್ಯೋತಿಷಿಗಳ ಮಾತು ಕೇಳಿ ವಿಚ್ಛೇದನ ಪಡೆದ್ರೆ ನೀವು ಮೂರ್ಖರಾಗುತ್ತೀರಿ. ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಿ, ಹೆಂಡತಿಯ ಮನಸ್ಸನ್ನು ತಿಳಿಯಲು ಪ್ರಯತ್ನಿಸಿ ಎಂದಿದ್ದಾರೆ. ಪತ್ನಿಯ ವಿಶ್ವಾಸವನ್ನು ಗಳಿಸಿದರೆ, ಅವಳು ತನ್ನ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾಳೆ. ಆಗ ನಿಮ್ಮ ದಾಂಪತ್ಯ ಮತ್ತೆ ಸರಿದಾರಿಗೆ ಬರುತ್ತದೆ ಎನ್ನುತ್ತಾರೆ ತಜ್ಞರು. ಪತ್ನಿ ವರ್ತನೆಯಿಂದ ಮನೆ ವಾತಾವರಣ ಹೇಗಾಗಿದೆ ಎಂಬುದನ್ನು ಅವರಿಗೆ ಶಾಂತವಾಗಿ ವಿವರಿಸಿ ನಿಧಾನವಾಗಿ ಬದಲಾವಣೆ ತನ್ನಿ ಎಂಬುದು ತಜ್ಞರ ಸಲಹೆ.