Asianet Suvarna News Asianet Suvarna News

ನನ್ ಹುಡುಗಿ ಹಾಗಿರಬೇಕು, ಹೀಗಿರಬೇಕೆಂದು ಕನಸು ಕಾಣೋ ಹುಡಗರೇ ಇಲ್ ಕೇಳಿ!

ನಾನು ಮದುವೆ ಆಗೋ ಹುಡುಗಿ ಹಾಗಿರಬೇಕು, ಹೀಗಿರಬೇಕು ಅಂತೆಲ್ಲ ಕನಸು ಕಾಣ್ತಾರೆ ಹುಡುಗರು. ಆದರೆ ಕೆಲವೊಮ್ಮೆ ಗ್ರಹಚಾರ ಕೆಟ್ರೆ ಈ ನಾಲ್ಕು ರೀತಿಯ ಹುಡುಗೀರು ಜೊತೆಯಾಗಬಹುದು. ಆಮೇಲೆ ನಿಮ್‌ ಕಥೆ ದೇವ್ರಿಗೇ ಪ್ರೀತಿ.

 

Are you very romantic about Girls know These type of girls
Author
Bengaluru, First Published Jun 14, 2021, 7:16 PM IST

ಹುಡುಗೀರ ಬಗ್ಗೆ ಕನಸು ಕಾಣೋದು ಪ್ರತೀ ಹುಡುಗನ ಹಕ್ಕು. ಒಬ್ಬೊಬ್ಬರ ಕಲ್ಪನೆಯ ಹೀರೋಯಿನ್‌ ಒಂದೊಂದು ಥರ ಇರ್ತಾಳೆ. ಅವಳ ಮನಸ್ಸು ಹೀಗಿರಬೇಕು, ಅವಳ ಸ್ವಭಾವ ಹಾಗಿರಬೇಕು ಅಂತ ಕಲ್ಪಿಸಿಕೊಳ್ಳೋ ಹುಡುಗರು ಕಡಿಮೆ. ಆದರೆ ಅವಳ ಸೌಂದರ್ಯ ಹೀಗಿರಬೇಕು, ಲುಕ್‌ ಯಾವ ಹೀರೋಯಿನ್‌ಗೂ ಕಡಿಮೆ ಇರಬಾರದು, ಅವಳ ಜೊತೆಗೆ ತಾನು ರೊಮ್ಯಾಂಟಿಕ್‌ ಆಗಿ ಕಳೆಯುವ ಕ್ಷಣಗಳು ಹೀಗಿರಬೇಕು ಅಂತ ಸಿನಿಮೀಯ ಕಲ್ಪನೆಗಳಲ್ಲಿ ತೊಡಗಿ ಮೈ ಬೆಚ್ಚಗೆ ಮಾಡಿಕೊಳ್ಳುವ ಹುಡುಗರೇ ಹೆಚ್ಚು. ಅಂಥಾ ಹುಡುಗರಿಗೆ ತಾವು ಕನಸಲ್ಲಿ ಕಂಡಂಥಾ ಹುಡುಗಿ ಎದುರಿಗೆ ಬಂದರೆ ನೈಂಟಿ ಹೊಡೆದಕ್ಕಿಂತ ಹೆಚ್ಚು ಕಿಕ್ಕೇರುತ್ತೆ. ಆಮೇಲೆ ಹುಡುಗೀರ ಹಿಂದೆ ಸುತ್ತೋದು, ಅವರನ್ನು ಪಡೆದುಕೊಳ್ಳಲು ಇನ್ನಿಲ್ಲದಂತೆ ಸರ್ಕಸ್‌ ಮಾಡೋದೆಲ್ಲ ಇದ್ದಿದ್ದೇ. ಆದರೆ ಅಂಥವರು ಹುಡುಗೀರ ಬುದ್ಧಿ, ಮನಸ್ಸನ್ನು ಅರ್ಥ ಮಾಡ್ಕೊಳ್ಳೋದಕ್ಕೇ ಹೋಗಲ್ಲ. ಕೊನೆಗೊಮ್ಮೆ ಅವರ ಕನಸಿನ ಹುಡುಗಿ ನಿಜ ಮನಸಿನ ಹುಡುಗಿಯೂ ಆಗಿ ಕೈ ಹಿಡಿದಾಗ ಏರಿರೋ ಕಿಕ್ಕೆಲ್ಲ ಇಳಿದುಬಿಡುತ್ತೆ. ಇದೆಲ್ಲಾ ಗೊತ್ತಾದಾಗ ಹೊತ್ತಾಗಿರುತ್ತೆ. ಬಾಯಿ ಮುಚ್ಕೊಂಡು ಅನುಭವಿಸೋದು ಬಿಟ್ಟರೆ ಬೇರೆ ಆಪ್ಶನ್‌ ಇರಲ್ಲ. 

1. ನಿಮ್ಮೆದುರಿಗೊಂದು ಹಿಂದಿಂದ ಬೇರೊಂದು ಥರ
ಈ ಡಬಲ್‌ ಗೇಮ್‌ ಆಡೋರು ಹುಡುಗೀರಾದ್ರೂ ಅಷ್ಟೇ, ಹುಡುಗರಾದ್ರೂ ಅಷ್ಟೇ.. ಬಲೇ ಡೇಂಜರ್‌ ನನ್‌ ಮಕ್ಳು. ಅವರು ನಿಮ್ಮೆದುರು ಬಹಳ ಹಿತವಾಗಿ, ನಯ ವಿನಯದಿಂದ ಇರ್ತಾರೆ. ನಾಜೂಕಿನ, ಬಣ್ಣದ ಮಾತುಗಳನ್ನ ಆಡ್ತಾರೆ. ನಿಮ್‌ ಬಗ್ಗೆ ನಿಮ್ಗೇ ಗೊತ್ತಿರಲ್ಲ ಅನ್ನೋ ಲೆವೆಲ್‌ಗೆ ನಿಮ್ಮ ಗುಣಗಾನ ಮಾಡ್ತಾರೆ. ನೀವೂ ನನ್ನ ಹುಡುಗಿ ಬಂಗಾರ ಅಂತ ನಂಬಿ ಬಿಡ್ತೀರಿ. ಆದರೆ ಅಲ್ ನಡಿಯೋದೇ ಬೇರೆ. ಅವ್ರು ನಿಮ್ಮ ಬಗ್ಗೆ ಎದುರಿನಿಂದ ಎಷ್ಟು ಅದ್ಭುತವಾಗಿ ಮಾತಾಡ್ತಾರೋ ಹಿಂದಿನಿಂದ ಹಾಗೇ ನಿಮ್ಮನ್ನ ಗೇಲಿ ಮಾಡಬಹುದು, ನಿಮ್ಮ ಒಳ್ಳೆತನಗಳನ್ನೇ ನೆಗೆಟಿವ್‌ ಆಗಿ ಬಿಂಬಿಸಬಹುದು. ಇಂಥಾ ಸ್ವಭಾವದವರ ಈ ಡಬ್ಬಲ್ ಗೇಮ್‌ ಗೊತ್ತಾದ ಕೂಡಲೇ ಸೂಕ್ಷ್ಮ ಮನಸ್ಥಿತಿಯವರಿಗೆ ಬಹಳ ನೋವಾಗುತ್ತದೆ. ಆಗ ಸಂಬಂಧದಲ್ಲಿ ಬಿರುಕು ಹೆಚ್ಚಬಹುದು.

#GreyDivorce: ಎಷ್ಟು ದಿನ ಒಟ್ಟಿಗಿದ್ದರೇನು? ಅರಿತು ಕೊಳ್ಳದಿದ್ದರೆ ಬೇರೆ ಆಗೋದೊಂದೇ ದಾರಿ ...
 

2. ನನ್‌ಗಿಂತ ಮೇಲೆ ಯಾರಿಲ್ಲ ಅನ್ನೋರು
ಇವರು ಮಹಾ ಅಹಂಕಾರಿಗಳು. ಈ ಅಹಂಕಾರ ಇವರನ್ನು ತಲೆ ಎಲ್ಲ ಮಾತಾಡಿಸುತ್ತೆ. ಅವರಿಗೆ ತನ್ನ ಸುಪೀರಿಯಾರಿಟಿಯಲ್ಲಿ ಇತರರೆಲ್ಲ ಗೌಣವಾಗಿ ಕಾಣುತ್ತಾರೆ. ಇಂಥವರು ಮನಸ್ಸಿಗೆ ನೋವಾಗುವಂತೆ ಮಾತಾಡುತ್ತಾರೆ. ಆಗಾಗ ವ್ಯಂಗ್ಯದಿಂದ ಚುಚ್ಚುತ್ತಾರೆ. ಇಂಥವರ ಜೊತೆಗೆ ಬದುಕುವಾಗ ನಿಮ್ಮ ಆತ್ಮವಿಶ್ವಾಸ ಕಡಿಮೆ ಆಗುತ್ತೆ. ನೀವು ಒಳಗೊಳಗೇ ಕೀಳರಿಮೆಯಿಂದ ನರಳುತ್ತೀರಿ. ಕೆಲಸದಲ್ಲಿ ಹಿಂದೆ ಬೀಳುತ್ತೀರಿ. ಬದುಕೆಲ್ಲ ಇವರ ಅಹಂನಿಂದ ಪಾರಾಗೋದು ಹೇಗೆ, ವ್ಯಂಗ್ಯದಿಂದ ತಪ್ಪಿಸಿಕೊಳ್ಳೋದು ಹೇಗೆ ಅಂತ ಯೋಚಿಸೋದ್ರಲ್ಲೇ ಕಳೆದುಹೋಗುತ್ತೆ. ಇವರು ನಿಮ್ಮನ್ನು ಕೀಳಾಗಿ ನೋಡುವ ಕಾರಣ ನಿಮಗೆ ಇತರರ ಜೊತೆಗೂ ಸರಿಸಮವಾಗಿರೋದು ಕಷ್ಟ ಆಗಬಹುದು.

Are you very romantic about Girls know These type of girls

3. ತನ್ನ ಬಗ್ಗೆಯೇ ಯಾವಾಗಲೂ ಯೋಚಿಸುವವರು
ಇಂಥಾ ಸ್ವಭಾವದವರ ಬಳಿ ನಿಮ್ಮ ಯಾವ ಮಾತೂ ನಡೆಯೋದಿಲ್ಲ. ಅವರಿಗೆ ತಮ್ಮ ಬಗ್ಗೆ ತಾವು ಎಷ್ಟು ಹೇಳಿದರೂ ಮುಗಿಯೋದಿಲ್ಲ. ಸದಾ ಇತರರ ಗಮನ ತನ್ನ ಮೇಲೇ ಇರಬೇಕು ಅಂತ ಬಯಸುತ್ತಾರೆ. ಹೆಚ್ಚು ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಒದ್ದಾಡುತ್ತಿರುತ್ತಾರೆ. ಇಂಥಾ ಸ್ವಭಾವದವರಲ್ಲಿ ನಿಮ್ಮ ನೋವಿಗೆ, ನಲವಿಗೆ ಸ್ಪಂದನೆ ಇರೋದಿಲ್ಲ. ಬರೀ ತಮ್ಮ ಪ್ರವರವನ್ನಷ್ಟೇ ಹೇಳಿ ನಿಮ್ಮ ಮಾತನ್ನು ಕೇಳಿಸಿಕೊಳ್ಳದೇ ತಮ್ಮ ಕೆಲಸದಲ್ಲಿ ಮುಳುಗುತ್ತಾರೆ. ಇಂಥವರು ಜೊತೆಗಾರರಾದರೆ ಪರ್ಮನೆಂಟ್‌ ತಲೆನೋವು ಗ್ಯಾರೆಂಟಿ. 

ಗರ್ಭಿಣಿ ಮಹಿಳೆಯರಿಗೆ ಚಿತ್ರ, ವಿಚಿತ್ರ ಬಯಕೆಗಳು ಯಾಕಾಗುತ್ತವೆ? ...
 

4. ಬಾಯಿ ತೆಗೆದರೆ ಸುಳ್ಳು ಹೇಳುವವರು
ಪ್ರೀತಿ, ಮದುವೆ ಅಂದ ಮೇಲೆ ಹುಡುಗ ಹುಡುಗಿ ನಡುವೆ ಪ್ರಾಮಾಣಿಕತೆ ಇರಬೇಕು. ಇವರ ನಡುವೆ ಸುಳ್ಳುಗಳು, ಅಪ್ರಾಮಾಣಿಕತೆ ಬಂದರೆ ವಂಚನೆಯಾಗುತ್ತೆ. ಸುಳ್ಳು ಹೇಳುವ ಸ್ವಭಾವ ಒಂದು ಹಂತದವರೆಗೆ ಹೇಗೋ ತಡೆದುಕೊಳ್ಳಬಹುದು, ಆದರೆ ಎಷ್ಟೋ ಸಲ ಇದರಿಂದ ನೀವು ಫಚೀತಿ ಪಡುವ ಹಾಗಾಗಬಹುದು. ಇದರ ಜೊತೆಗೆ ಅತಿಯಾಗಿ ಖಾಸಗಿತನ ಕಾಪಾಡಿಕೊಳ್ಳುವವರು, ಸದಾ ಪ್ರತಿಯೊಂದು ನಡೆಯನ್ನೂ ಗುಟ್ಟಾಗಿ ರಹಸ್ಯವಾಗಿಟ್ಟು, ಸಂಗಾತಿ ಜೊತೆಗೂ ಹಂಚಿಕೊಳ್ಳದವರು ಸಿಕ್ಕರೂ ಲೈಫು ಬರ್ಬಾದ್‌. ಸೋ, ಇಂಥಾ ಸ್ವಭಾವಗಳನ್ನು ಮೊದಲೇ ಗಮನಿಸಿ, ನಿಮ್ಮ ಬದುಕಿನ ದಾರಿ ನೋಡಿಕೊಳ್ಳಿ. 

ಸಂಗಾತಿ ನಿಮ್ಮನ್ನು ನಿಯಂತ್ರಿಸುತ್ತಿದ್ದಾರೆ ಅನ್ನೋದಕ್ಕೆ ಈ 7 ವರ್ತನೆಗಳು ಸಾಕು! ...
 

Follow Us:
Download App:
  • android
  • ios