Asianet Suvarna News Asianet Suvarna News

74 ಕೋಟಿ ರೂ ರಿಹಾನ್ನಾ ಲೈವ್ ಶೋ ಬಳಿಕ ಶಕೀರಾಗೆ ಅಂಬಾನಿ ಆಹ್ವಾನ, ಕಾರ್ಯಕ್ರಮದ ಖರ್ಚೆಷ್ಟು?

ಅನಂತ್ ಅಂಬಾನಿ-ರಾಧಿಕಾ ಮೊದಲ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಿಂಗರ್ ರಿಹಾನ್ನ 74 ಕೋಟಿ ರೂಪಾಯಿ ಪಡೆದು ಕಾರ್ಯಕ್ರಮ ನೀಡಿದ್ದರು. ಇದೀಗ 2ನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೆ ವಾಕಾ ವಾಕಾ ಖ್ಯಾತಿಯ ಶಕೀರಾಗೆ ಆಹ್ವಾನ ನೀಡಲಾಗಿದೆ. ಈಕೆಯ ಚಾರ್ಜ್ ಎಷ್ಟು ಗೊತ್ತಾ?
 

Anant ambani Radhika 2nd pre wedding Singer Shakira likely to perform live show on Cruise Ship ckm
Author
First Published May 27, 2024, 6:38 PM IST

ಮುಂಬೈ(ಮೇ.27) ಅನಂತ್ ಅಂಬಾನಿ-ರಾಧಿಕಾ 2ನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮದ ತಯಾರಿ ಪೂರ್ಣಗೊಂಡಿದೆ. ಮೇ.29 ರಿಂದ ಜೂನ್ 1ರ ವರೆಗೆ ದಕ್ಷಿಣ ಫ್ರಾನ್ಸ್‌ನಲ್ಲಿ ನಡೆಯಲಿದೆ. ವಿಶೇಷ ಅಂದರೆ ಹಡಗಿನಲ್ಲಿ ಸಂಪೂರ್ಣ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಆಹ್ವಾನಿತ ಗಣ್ಯರು ಫ್ರಾನ್ಸ್‌ನತ್ತ ತೆರಳುತ್ತಿದ್ದಾರೆ. 2ನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲೂ ಕೂಡ ಹಲವು ವಿಶೇಷತೆಗಳಿವೆ. ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಪಾಪ್ ಸಿಂಗ್ ಲೈವ್ ಶೋ ನಡೆಸಿಕೊಡಲಿದ್ದಾರೆ.ಆದರೆ ಈ ಬಾರಿ ರಿಹಾನ್ನಾ ಬದಲು ಪಾಪ್ ಸಿಂಗ್ ಶಕೀರಾಗೆ ಆಹ್ವಾನ ನೀಡಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.  ಇದರ ಜೊತೆಗೆ ಈಕೆಗೆ ನೀಡಲಾಗುತ್ತಿರುವ ವೇತನ ಕುರಿತು ಭಾರಿ ಚರ್ಚೆಯಾಗುತ್ತಿದೆ.

ವಾಕಾ ವಾಕಾ ಹಾಗೂ ಹಿಪ್ಸ್ ಡೋಂಟ್ ಲೈ ಹಾಡಿನ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಜನಪ್ರಿಯತೆ ಹಾಗೂ ಖ್ಯಾತಿ ಗಳಿಸಿರುವ ಪಾಪ್ ಸಿಂಗ್ ಶಕೀರಾ ಇದೀಗ ಅನಂತ್ ಅಂಬಾನಿ ಹಾಗೂ ರಾಧಿಕಾ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಲೈವ್ ಶೋ ನೀಡಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. 

ಮಧ್ಯರಾತ್ರಿ 3 ಗಂಟೆಗೆ ಊಟ ಮಾಡುತ್ತಿದ್ದರು; ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್‌ ಬಗ್ಗೆ ರಾಮೇಶ್ವರಂ ಕೆಫೆ ಮಾಲೀಕರ ಮಾತು

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮೊದಲ ಪ್ರಿ ವೆಡ್ಡಿಂಗ್ ಕಾರ್ಯಕ್ರಮ, ಗುಜರಾತ್‌ನ ಜಾಮ್ನಗರದಲ್ಲಿ ಆಯೋಜಿಸಲಾಗಿತ್ತು. ಅಂತಾರಾಷ್ಟ್ರೀಯ ಸೆಲೆಬ್ರೆಟಿಗಳು, ಉದ್ಯಮಿಗಳು, ಬಾಲಿವುಡ್‌ನ ಬಹುತೇಕ ಸೆಲೆಬ್ರೆಟಿಗಳು, ಕ್ರಿಕೆಟಿಗರು, ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಹಲವು ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಪೈಕಿ ಅಂತಾರಾಷ್ಟ್ರೀಯ ಪಾಪ್ ಸಿಂಗರ್ ರಿಹಾನ್ನಾ ಲೈವ್ ಶೋ ನಡೆಸಿಕೊಟ್ಟಿದ್ದರು.

ರಿಹನ್ನಾ ಪ್ರತಿ ಲೈವ್ ಶೋ ಕಾರ್ಯಕ್ರಮಕ್ಕೆ 12 ರಿಂದ 74 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅಂಬಾನಿ ಕಾರ್ಯಕ್ರಮಕ್ಕೆ 74 ಕೋಟಿ ರೂಪಾಯಿ ಚಾರ್ಜ್ ಮಾಡಲಾಗಿದೆ  ಎಂದು ವರದಿಗಳು ಹೇಳುತ್ತಿದೆ. ಇದೀಗ 2ನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಶಕೀರಾಗೆ ಆಹ್ವಾನ ನೀಡಲಾಗಿದೆ. ಶಕೀರಾ ಪ್ರತಿ ಕಾರ್ಯಕ್ರಮಕ್ಕೆ 10 ರಿಂದ 15 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. 

ಕ್ರ್ಯೂಸ್ ಶಿಪ್‌ನಲ್ಲಿ ಸಂಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ. ಆತಿಥಿಗಳಿಗೆ ಒಪೆರಾ ಹೌಸ್ ಮನೋರಂಜನೆ ಆಯೋಜಿಸಲಾಗಿದೆ. ವಿಶೇಷ ವಾಗಿ ದಕ್ಷಿಣ ಫ್ರಾನ್ಸ್‌ನ ಅದ್ಬುತ ಮ್ಯೂಸಿಕ್ ಕಾರ್ಯಕ್ರಮ ಆಯೋಜಿಸಲಾಗಿದೆ. ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ಫ್ರಾನ್ಸ್ ತಲುಪಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗಲು ಡ್ರೆಸ್ ಕೋಡ್‌ ನಿಯಮ ಪಾಲಿಸಬೇಕು.

ಭಾವಿ ಸೊಸೆ ರಾಧಿಕಾಗೆ ದುಬೈನಲ್ಲಿ 640 ಕೋಟಿ ಮೌಲ್ಯದ ವಿಲ್ಲಾ ಉಡುಗೊರೆ ನೀಡಿದ ನೀತಾ ಅಂಬಾನಿ; ಇಲ್ಲಿವೆ ಫೋಟೋಸ್
 

Latest Videos
Follow Us:
Download App:
  • android
  • ios