Asianet Suvarna News Asianet Suvarna News

ರಾಧಿಕಾ ಜೊತೆ ಅನಂತ್ ಅಂಬಾನಿ ನಿಶ್ಚಿತಾರ್ಥ, ರಾಜಸ್ಥಾನದ ದೇವಸ್ಥಾನದಲ್ಲಿ ಮದುವೆ!

ಉದ್ಯಮ ಕ್ಷೇತ್ರದ ದಿಗ್ಗಜ ಮುಕೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ ಇಂದು ನೆರವೇರಿದೆ. ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಎಂಗೇಜ್‌ಮೆಂಟ್ ನಡೆದಿದೆ. ಗುಜರಾತಿ ಸಂಪ್ರದಾಯ ಪ್ರಕಾರ ನಡೆದ ಈ ನಿಶ್ಚಿತಾರ್ಥ ಹಲವು ವಿಶೇಷತೆಗೆ ಸಾಕ್ಷಿಯಾಗಿದೆ.

Anant Ambani and Radhika Merchant got engaged  With Gujarati Hindu traditions at antilia Residence Mumbai ckm
Author
First Published Jan 19, 2023, 8:19 PM IST

ಮುಂಬೈ(ಜ.19): ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಮುಕೇಶ್ ಅಂಬಾನಿ ಮನೆಯಲ್ಲಿ ಸಂಭ್ರಮದ ವಾತಾವರಣ. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ ಇಂದು ನೆರವೇರಿದೆ. ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಅನಂತ್ ಎಂಗೇಜ್‌ಮೆಂಟ್ ನಡೆದಿದೆ. ಮುಕೇಶ್ ಅಂಬಾನಿ ಆ್ಯಂಟಿಲಿಯಾ ನಿವಾಸದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿದೆ. ಕುಟುಂಬ ಸದಸ್ಯರು, ಸ್ನೇಹಿತರು, ಆಪ್ತರ ಸಮ್ಮುಖದಲ್ಲಿ ಗುಜರಾತಿ ಸಂಪ್ರದಾಯದ ಪ್ರಕಾರ ಉಂಗುರ ಬದಲಾಯಿಸಿಕೊಂಡಿದ್ದಾರೆ. 

ಗುಜರಾತಿ ಹಿಂದೂ ಕುಟುಂಬದ ಸಂಪ್ರದಾಯದ ಪ್ರಕಾರ ಗೋಲ್ ಧನ ಮತ್ತು ಚುನರಿ ವಿಧಿಯಂತಹ ಸಂಪ್ರದಾಯಗಳನ್ನು ಅನುಸರಿಸಿ,  ಎರಡು ಕುಟುಂಬಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು. ಗೋಲ್ ಧನ ಎಂಬುದರ ಅಕ್ಷರಶಃ ಅರ್ಥ ಬೆಲ್ಲ ಮತ್ತು ಕೊತ್ತಂಬರಿ ಬೀಜಗಳು. ಅಂದ ಹಾಗೆ ಗುಜರಾತಿ ಸಂಪ್ರದಾಯದಲ್ಲಿ ಇದು ಮದುವೆಯ ಮುಂಚಿನ ಸಮಾರಂಭವಾಗಿದೆ. ವರನ ಸ್ಥಳದಲ್ಲಿ ಈ ವಸ್ತುಗಳನ್ನು ವಿತರಿಸಲಾಗುತ್ತದೆ. ವಧುವಿನ ಕುಟುಂಬವು ವರನ ನಿವಾಸಕ್ಕೆ ಉಡುಗೊರೆಗಳು ಮತ್ತು ಸಿಹಿತಿಂಡಿಗಳೊಂದಿಗೆ ಆಗಮಿಸುತ್ತಾರೆ. ಬಳಿಕ ಅನಂತ್ ಅಂಬಾನಿ ಹಾಗೂ ರಾಧಿಕಾ ಉಂಗುರ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡರು.   

ಆಕಾಶ್ ಮದುವೆಗೆ ನೀರಿನಂತೆ ಖರ್ಚು ಮಾಡಿದ ಅಂಬಾನಿ ಕಿರಿಯ ಮಗನ ಮದ್ವೆ ಹೇಗಿರುತ್ತೆ?

ನಿಶ್ಚಿತಾರ್ಥದ ಬಳಿಕ ವಿಶೇಷ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅನಂತ್ ತಾಯಿ ನೀತಾ ಅಂಬಾನಿ ನೇತೃತ್ವದಲ್ಲಿ ಅಂಬಾನಿ ಕುಟುಂಬದ ಸದಸ್ಯರ ನೃತ್ಯ ಪ್ರದರ್ಶನ ಎಲ್ಲರನ್ನೂ ಬೆರಗುಗೊಳಿಸಿತು. ಹಲವು ನೃತ್ಯಗಳು ಮೇಳೈಸಿತು. ಈ ಮೂಲಕ ಅದ್ದೂರಿಯಾಗಿ ಅನಂತ್ ಅಂಬಾನಿ ನಿಶ್ಚಿತಾರ್ಥ ನೇರವೇರಿದೆ. 

Anant Ambani and Radhika Merchant got engaged  With Gujarati Hindu traditions at antilia Residence Mumbai ckm

ನಿಶ್ಚಿತಾರ್ಥಕ್ಕೂ ಮೊದಲು ಹಲವು ಸಂಪ್ರದಾಯಗಳನ್ನು ಪಾಲಿಸಲಾಯಿತು. ಸಂಜೆಯ ಕಾರ್ಯಕ್ರಮಗಳಿಗೆ ರಾಧಿಕಾ ಮತ್ತು ಅವರ ಕುಟುಂಬ ಸದಸ್ಯರನ್ನು ಆಹ್ವಾನಿಸಲು ಅನಂತ್ ಸಹೋದರಿ ಇಶಾ ನೇತೃತ್ವದಲ್ಲಿ ಸದಸ್ಯರು ರಾಧಿಕಾ ಮನೆಗೆ ತೆರಳಿದ್ದರು. ಬಳಿಕ ರಾಧಿಕಾ ಸೇರಿ ಅವರ ಕುಟುಂಬಸ್ಥರನ್ನು ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.  ಮರ್ಚೆಂಟ್ ಕುಟುಂಬವನ್ನು ಆರತಿ ಮತ್ತು ಮಂತ್ರ ಪಠಣದ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು. 

ಅನಂತ್ ಮತ್ತು ರಾಧಿಕಾ ಕೆಲವು ವರ್ಷಗಳಿಂದ ಪರಸ್ಪರ ಪರಿಚಿತರು.  ನೀತಾ ಮತ್ತು ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಿಂದ ತಮ್ಮ ಅಧ್ಯಯನ ಮಾಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಜಿಯೋ  ಮತ್ತು ರಿಲಯನ್ಸ್ ರೀಟೇಲ್ ವೆಂಚರ್ಸ್  ಮಂಡಳಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯಕ್ಕೆ ರಿಲಯನ್ಸ್ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿದ್ದಾರೆ. ಶೈಲಾ ಮತ್ತು ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಪದವೀಧರರಾಗಿದ್ದಾರೆ., ಎನ್ಕೋರ್ ಹೆಲ್ತ್ಕೇರ್ ಮಂಡಳಿಯಲ್ಲಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಂಬಾನಿ ಭಾವಿ ಸೊಸೆ ಕೈಯಲ್ಲಿ ಮದರಂಗಿ ರಂಗು; ಫೋಟೋಗಳು ವೈರಲ್‌

ನಿಶ್ಚಿತಾರ್ಥ ಸಮಾರಂಭ ಮುಂದೆ ಅವರ ಮದುವೆ ಕಾರ್ಯಕ್ರಮದ ಆರಂಭದ ಹಂತವಾಗಿದೆ. ರಾಧಿಕಾ ಮತ್ತು ಅನಂತ್ ಅವರಿಗೆ ಎರಡೂ ಕುಟುಂಬಗಳು ಎಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂದಿನಿಂದ ಅಂಬಾನಿ ಕುಟುಂಬದಲ್ಲಿ ಸಾಲು ಸಾಲು ಕಾರ್ಯಕ್ರಮಗಳು ನಡೆಯಲಿದೆ. ರಾಜಸ್ಥಾನದ ನಾಥದ್ವಾರದಲ್ಲಿ ಇರುವ ಶ್ರೀನಾಥಜೀ ದೇವಸ್ಥಾನದಲ್ಲಿ ಮದುವೆ ನಡೆಯಲಿದೆ. 

Anant Ambani and Radhika Merchant got engaged  With Gujarati Hindu traditions at antilia Residence Mumbai ckm

Follow Us:
Download App:
  • android
  • ios