MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Business
  • ಆಕಾಶ್ ಮದುವೆಗೆ ನೀರಿನಂತೆ ಖರ್ಚು ಮಾಡಿದ ಅಂಬಾನಿ ಕಿರಿಯ ಮಗನ ಮದ್ವೆ ಹೇಗಿರುತ್ತೆ?

ಆಕಾಶ್ ಮದುವೆಗೆ ನೀರಿನಂತೆ ಖರ್ಚು ಮಾಡಿದ ಅಂಬಾನಿ ಕಿರಿಯ ಮಗನ ಮದ್ವೆ ಹೇಗಿರುತ್ತೆ?

ಭಾರತದ ಎರಡನೇ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮನೆಯಲ್ಲಿ ಮತ್ತೊಮ್ಮೆ ಮದುವೆಯ ಸಮಾರಂಭ ಶುರುವಾಗಿದೆ. ಅವರ ಕಿರಿಯ ಮಗ ಅನಂತ್ ಅಂಬಾನಿ ಶೀಘ್ರದಲ್ಲೇ ರಾಧಿಕಾ ಮರ್ಚೆಂಟ್ ಅವರನ್ನು ಮದುವೆಯಾಗಲಿದ್ದಾರೆ. ಕಳೆದ ತಿಂಗಳು ಡಿಸೆಂಬರ್ 29 ರಂದು ರಾಜಸ್ಥಾನದ ಶ್ರೀನಾಥಜಿ ದೇವಸ್ಥಾನದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇವರ ಮದುವೆ ಪೂರ್ವ ಕಾರ್ಯಕ್ರಮಗಳು ಶುರುವಾಗಿವೆ. ಮುಕೇಶ್ ಅಂಬಾನಿ ತಮ್ಮ ಹಿರಿಯ ಮಗ ಆಕಾಶ್ ಅಂಬಾನಿ ಮದುವೆಯಲ್ಲಿ ನೀರಿನಂತೆ ಹಣ ಖರ್ಚು ಮಾಡಿ ಸಖತ್‌ ಅದ್ಧೂರಿಯಾಗಿ ಮಾಡಿದ್ದರು.ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ಶ್ಲೋಕಾ ಮೆಹ್ತಾ ಜೊತೆ ಮಾರ್ಚ್ 9, 2019 ರಂದು ವಿವಾಹವಾದರು . ಈ ಮದುವೆ ದೇಶದ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದಾಗಿದೆ.

2 Min read
Author : Suvarna News
Published : Jan 19 2023, 05:10 PM IST
Share this Photo Gallery
  • FB
  • TW
  • Linkdin
  • Whatsapp
19

ರತನ್ ಟಾಟಾ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್, ನ್ಯೂಜಿಲೆಂಡ್ ಬೌಲರ್ ಶೇನ್ ಬಾಂಡ್, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ಶ್ರೀಲಂಕಾ ಬ್ಯಾಟ್ಸ್‌ಮನ್ ಮತ್ತು ಐಪಿಎಲ್ ಕೋಚ್ ಮಹೇಲಾ ಜಯವರ್ಧನೆ, ಗೂಗಲ್ ಸಿಇಒ ಸುಂದರ್ ಪಿಚೈ ಅವರು ಆಕಾಶ್ ಮತ್ತು ಶ್ಲೋಕಾ ಅವರ ವಿವಾಹದಲ್ಲಿ ಪಾಲ್ಗೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಇಷ್ಟೇ ಅಲ್ಲದೆ ಬಾಲಿವುಡ್‌ನ ಸೆಲೆಬ್ರೆಟಿಗಳು ಹಾಜರಾಗಿದ್ದರು .ಆಕಾಶ್-ಶ್ಲೋಕಾ ಮದುವೆಗೆ ಶಾರುಖ್ ಖಾನ್ ಪತ್ನಿ ಗೌರಿ ಜೊತೆ ಆಗಮಿಸಿದ್ದರು. ಮದುವೆಯಲ್ಲಿ ನೀತಾ ಅಂಬಾನಿ ಶಾರುಖ್ ಮತ್ತು ಗೌರಿ  ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಗೌರಿ-ಶಾರುಖ್ ನೃತ್ಯದ ಹಲವು ವಿಡಿಯೋಗಳು ಕೂಡ ವೈರಲ್ ಆಗಿದ್ದವು. 

 

39

ಆಕಾಶ್ ಅಂಬಾನಿ ಅವರ ಮದುವೆಯ ಬರಾತ್‌ ಬಗ್ಗೆ ಹೇಳುವುದೇ ಬೇಡ. ಇದರಲ್ಲಿ ಅನೇಕ ದೊಡ್ಡ ಬಾಲಿವುಡ್ ಖ್ಯಾತನಾಮರು ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಮೆರವಣಿಗೆಯಲ್ಲಿ ಸಿಂಗರ್‌ ಮೈಕಾ ಪ್ರದರ್ಶನ ನೀಡಿದರು. 
 

49

ಆಕಾಶ್ ಅಂಬಾನಿ ಅವರ ಮದುವೆಯ ಮೆರವಣಿಗೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿದ್ದವು .ಆಕಾಶ್-ಶ್ಲೋಕಾ ಮದುವೆಯಲ್ಲಿ ಶಾರುಖ್ ಖಾನ್ ಜೊತೆಗೆ ಕರಣ್ ಜೋಹರ್, ರಣಬೀರ್ ಕಪೂರ್ ಮತ್ತು ಮಿಕಾ ಸಿಂಗ್ ಕೂಡ ಕಾರ್ಯಕ್ರಮ ನೀಡಿದ್ದಾರೆ.

59

ಸ್ವತಃ ವರ ಆಕಾಶ್ ಅಂಬಾನಿ ರಣಬೀರ್ ಕಪೂರ್ ಜೊತೆ  ಡ್ಯಾನ್ಸ್ ಮಾಡಿದ್ದಾರೆ.ಮಗನ ಮದುವೆಯಲ್ಲಿ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಡ್ಯಾನ್ಸ್ ಮಾಡಿರುವುದು ಕಂಡುಬಂದಿದೆ. 

69

ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ 'ರಾಧೆ ಕೃಷ್ಣ' ಥೀಮ್‌ನಲ್ಲಿ ಮದುವೆಯಾಗಿದ್ದಾರೆ. ಕಾರ್ಡ್‌ಗಳಿಂದ ಹಿಡಿದು ಮನೆಯ ಅಲಂಕಾರಗಳವರೆಗೆ, ಕೃಷ್ಣ  ಮತ್ತು ರಾಧೆಯ ಮೇಲಿನ ಅವನ ಪ್ರೀತಿಯ ಝಲಕ್ ಇತ್ತು.

79

ಆಕಾಶ್ ಮದುವೆಯಲ್ಲಿ ಕೇವಲ ಹೂವಿನ ಅಲಂಕಾರಕ್ಕೆ ಅಂಬಾನಿ ಕುಟುಂಬ ಕೋಟಿ ಕೋಟಿ ಖರ್ಚು ಮಾಡಿತ್ತು. ನವಿಲು, ಉಯ್ಯಾಲೆಗಳು ಮತ್ತು ಕೃಷ್ಣನ ವಿಗ್ರಹವನ್ನು ಸಹ ಹೂವಿನಿಂದ ಮಾಡಲಾಗಿತ್ತು. ಬಾಲಿವುಡ್ ಹೊರತುಪಡಿಸಿ, ಕ್ರೀಡೆ, ವ್ಯಾಪಾರ ಮತ್ತು ರಾಜಕೀಯದ ಸೆಲೆಬ್ರಿಟಿಗಳು ದಂಪತಿಗಳು ಮದುವೆಯಲ್ಲಿ ಭಾಗವಹಿಸಿದ್ದರು.

89

ಮದುವೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಮಗಳು ಆರಾಧ್ಯ ಮತ್ತು ಪತಿ ಅಭಿಷೇಕ್ ಬಚ್ಚನ್ ಜೊತೆ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ, ಐಶ್ವರ್ಯಾ ನೇರಳೆ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು, ಅಭಿಷೇಕ್ ಡಿಸೈನರ್ ಶೇರ್ವಾನಿಯಲ್ಲಿ ಕಾಣಿಸಿಕೊಂಡರೆ, ಆರಾಧ್ಯ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡಳು.

99

ಅಷ್ಟೇ ಅಲ್ಲ ಮಗಳು ಇಶಾ ಮದುವೆಗೂ ಮುಕೇಶ್ ಅಂಬಾನಿ ಅದ್ದೂರಿಯಾಗಿ ಹಣ ಖರ್ಚು ಮಾಡಿದ್ದರು. ಇಶಾ ಅಂಬಾನಿ ಪಿರಾಮಲ್ ಗ್ರೂಪ್ ಮಾಲೀಕ ಅಜಯ್ ಪಿರಾಮಲ್ ಅವರ ಪುತ್ರ ಆನಂದ್ ಅವರನ್ನು  ಡಿಸೆಂಬರ್ 12, 2018 ರಂದು 7 ವಿವಾಹವಾಗಿದ್ದಾರೆ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Suvarna News
ಮುಕೇಶ್ ಅಂಬಾನಿ
ಆಕಾಶ್ ಅಂಬಾನಿ
ಅನಂತ್ ಅಂಬಾನಿ
ಮದುವೆ

Latest Videos
Recommended Stories
Recommended image1
Gold Jewellery: ಚಿನ್ನ ಖರೀದಿಸಲು ಈಗ ಲಕ್ಷಗಟ್ಟಲೆ ಹಣ ಬೇಕಿಲ್ಲ: ಹೀಗೆ ಪ್ಲಾನ್ ಮಾಡಿದ್ರೆ ಸಾಕು!
Recommended image2
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?
Recommended image3
ಒಂದೇ ತಿಂಗಳಲ್ಲಿ ಲಕ್ಷ ಸಂಬಳದ ಕೆಲಸದಿಂದ ವಜಾಗೊಂಡ ಆಘಾತ, ತಿಂಗಳಲ್ಲಿ 6 ಆ್ಯಪ್ ಮಾಡಿ ಪುಟಿದೆದ್ದ 21ರ ಐಐಟಿ ಯುವಕ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved