Viral Video: ನೃತ್ಯ ಮಾಡಿದ ಬಾಲಕಿಯ ತಲೆ ಮೇಲೆ ಸೊಂಡಿಲಿಟ್ಟು ಆಶೀರ್ವದಿಸಿದ ಆನೆ
ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿಗೆ ರಾಜ್ಯದ ದೇವಸ್ಥಾನವೊಂದರಲ್ಲಿ ನರ್ತಕಿಯೊಬ್ಬರಿಗೆ ಆನೆಯೊಂದು ಆಶೀರ್ವಾದ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಮಹೀಂದ್ರಾ ಗ್ರೂಪ್ ಅಧ್ಯಕ್ಷ, ಆನಂದ್ ಮಹೀಂದ್ರಾ ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ ಮತ್ತು ಅವರ ಟ್ವಿಟರ್ ಖಾತೆಯು ಅದಕ್ಕೆ ಪುರಾವೆಯಾಗಿದೆ. ಈ ಕೈಗಾರಿಕೋದ್ಯಮಿ ಸಾಮಾನ್ಯವಾಗಿ ಹಾಸ್ಯದ ಮತ್ತು ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇಂಥಾ ಪೋಸ್ಟ್‌ಗಳು ಯಾವುದೇ ಸಮಯದಲ್ಲಿ ಜನ ಮೆಚ್ಚುಗೆ ಪಡೆಯುತ್ತವೆ ಮತ್ತು ಸಾಮಾಜಿಕ ಜಾಲತಾಣದಲ್ಲಿ (Social media) ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಸದ್ಯ ಈ ಬಿಲಿಯನೇರ್ ರಾಜ್ಯದ ದೇವಸ್ಥಾನವೊಂದರಲ್ಲಿ ನರ್ತಕಿ (Dancer) ಬಾಲಕಿಯೊಬ್ಬಳಿಗೆ ಆನೆಯೊಂದು ಆಶೀರ್ವಾದ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಟ್ವಿಟರ್‌ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ, ಬಾಲಕಿ ದೇವಾಲಯದ (Temple) ಆವರಣದಲ್ಲಿ ಆನೆಯ ಮುಂದೆ ನೃತ್ಯ ಮಾಡುವುದನ್ನು ಕಾಣಬಹುದು. ಸಾಂಪ್ರದಾಯಿಕ ಉಡುಗೆಯಲ್ಲಿ, ನೃತ್ಯಗಾರ್ತಿ ಕೆಲವು ಸುಂದರವಾದ ಅಭಿವ್ಯಕ್ತಿಗಳನ್ನು ನೀಡುತ್ತಾ ನೃತ್ಯ ಮಾಡುತ್ತಾರೆ. ಈ ಸಂದರ್ಭದಲ್ಲಿ ಆನೆಯು ತನ್ನ ಸೊಂಡಿಲನ್ನು ಆಕೆಯ ತಲೆಯ ಮೇಲೆ ಇಟ್ಟು ಆರ್ಶೀವದಿಸುವುದನ್ನು ನೋಡಬಹುದು. ತರ ನರ್ತಕಿ ತನ್ನ ನೃತ್ಯವನ್ನ ಮುಂದುವರಿಸಿದಾಗ ಆನೆ ಆಶೀರ್ವದಿಸುವುದನ್ನು (Blessing) ಮುಂದುವರಿಸುತ್ತದೆ ಮತ್ತು ಆಕೆಗೆ ಶಹಬ್ಬಾಸ್ ಗಿರಿ ನೀಡುವ ಹಾಗೆ ತನ್ನ ತಲೆಯನ್ನು ಅಲ್ಲಾಡಿಸುತ್ತದೆ.
ವಾವ್ಹ್..ಅಲಕನಂದಾ ಮತ್ತು ಭಾಗೀರಥಿ ನದಿ ಸಂಗಮದ ಅದ್ಭುತ ಫೋಟೋ ವೈರಲ್
ವೀಡಿಯೊದ ಶೀರ್ಷಿಕೆಯಿಂದ ಕರ್ನಾಟಕದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಈ ವೀಡಿಯೋವನನ್ನು ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ. ಆನಂದ್ ಮಹೀಂದ್ರಾ ತಮ್ಮ ಟ್ವೀಟ್‌ನಲ್ಲಿ, 'ಕರ್ನಾಟಕದ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅದ್ಭುತ. ದೇವಸ್ಥಾನದ ಆನೆಯು ನಮಗೆಲ್ಲರಿಗೂ ಹೊಸ ವರ್ಷದ ಸಂತೋಷದ ಆಶೀರ್ವಾದವನ್ನು ನೀಡುತ್ತಿದೆ ಎಂದು ನಾನು ಭಾವಿಸುತ್ತೇನೆ' ಎಂದು ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ.
ನೆಟಿಜನ್‌ಗಳು ವೈರಲ್ ವೀಡಿಯೊಗೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಹಲವಾರು ಜನ ವಿಡಿಯೋವನ್ನು ಅದ್ಭುತ ಮತ್ತು ಮನಮೋಹಕ ಅಂತ ವರ್ಣಿಸಿದ್ದಾರೆ. ಅವರಲ್ಲಿ ಕೆಲವರು ಆನೆ ಮತ್ತು ಮನುಷ್ಯನ ಬಾಂಧವ್ಯ ತುಂಬಾ ಸುಂದರವಾಗಿದೆ ಎಂದು ಹೇಳಿದರೆ, ಇನ್ನು ಕೆಲವರು 'ಮನುಷ್ಯರಂತೆ' ಸನ್ನೆಗಳನ್ನು ಪ್ರದರ್ಶಿಸಲು ಪ್ರಾಣಿಗಳಿಗೆ ತರಬೇತಿ ನೀಡುವುದು ಸರಿಯಲ್ಲ ಎಂದು ಹೇಳಿದರು. ಆನೆಯ ಆಶೀರ್ವಾದ ಸೂಚಕವು ಮಾನವನಂತೆಯೇ ಇರುವಂತಿಲ್ಲ. ಪ್ರೀತಿಗಾಗಿ ಪ್ರಾಣಿ ಪ್ರವೃತ್ತಿ ಎಂದರೆ ತಬ್ಬಿಕೊಳ್ಳುವುದು ಮತ್ತು ನೆಕ್ಕುವುದು ಎಂದು ಬಳಕೆದಾರರು ಬರೆದಿದ್ದಾರೆ. 'ವೀಡಿಯೋವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್. ನನ್ನ ಸ್ಥಳೀಯ ವಿಷಯಕ್ಕೆ ಸಂಬಂಧಿಸಿದ ಅದ್ಭುತ ವಿಷಯವನ್ನು ನಾನು ಕಂಡುಕೊಂಡಾಗ ಯಾವಾಗಲೂ ಹೆಮ್ಮೆಪಡುತ್ತೇನೆ' ಎಂದು ಆನ್‌ಲೈನ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
10 ರೂಗೆ 150 ಕಿ.ಮೀ ಮೈಲೇಜ್, 6 ಜನರ ಪ್ರಯಾಣಸಿಬಲ್ಲ ಎಲೆಕ್ಟ್ರಿಕ್ ಬೈಕ್‌ಗೆ ಮನಸೋತ ಮಹೀಂದ್ರ!
'ಆನೆಗಳು ಅದೆಷ್ಟು ಸುಂದರವಾದ ಪ್ರಾಣಿಗಳೆಂದರೆ ಅವುಗಳನ್ನು ನೋಡುತ್ತಿದ್ದಂತೆಯೇ ಪೂಜಿಸುವ ಭಾವನೆ ಮನಸಲ್ಲಿ ಹುಟ್ಟುತ್ತದೆ,' ಅಂತ ಮತ್ತೊಬ್ಬರು ಮಾಡಿದ್ದಾರೆ. ಮತ್ತೊಬ್ಬರು, 'ದೇವಸ್ಥಾನಗಳ ಆನೆಗಳು ಬಹಳ ಅನುನಯದ ಪ್ರಾಣಿಗಳು, ಪ್ರತಿಯೊಬ್ಬರನ್ನು ಅವು ತಮ್ಮ ಸೊಂಡಿಲುನಿಂದ ಅತ್ಯಂತ ಸೌಮ್ಯವಾಗಿ ಆಶೀರ್ವದಿಸುತ್ತಿರುತ್ತವೆ,' ಅಂತ ಬರೆದಿದ್ದಾರೆ. 'ನಿಜವಾದ ಭಾರತೀಯ ಪರಂಪರೆ,' ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.